hanada-bele-thiliyalu-endhigu-neevu-chikkavaralla-1

“ದುಡ್ಡೇ ದೊಡ್ಡಪ್ಪ”, ಈ ಮಾತು ಎಲ್ಲರಿಗು ತಿಳಿದಿರುತ್ತದೆ. ಅದರಲ್ಲೂ ಈಗಿನ ಕಾಲದಲ್ಲಿ ದುಡ್ಡಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ನಾವೆಲ್ಲಾ ಬಂದಿದ್ದೇವೆ. ಆದರೆ ತುಂಬಾ ಜನಕ್ಕೆ ದುಡ್ಡಿನ ಮಹತ್ವ ತಿಳಿದೇ ಇಲ್ಲ. ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಹಣದ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲಾ ಸಮಯದಲ್ಲಿ ಗಣಿತದಲ್ಲಿ ಬರುವ ಉಳಿತಾಯ, ಸಾಲ ಮತ್ತು ಬಡ್ಡಿ ಇದರ ಬಗ್ಗೆ ಅವರಿಗೆ ಭೋಧನೆ ಮಾಡಿದರೆ ತಿಳಿಯಲು ಉತ್ಸಾಹ ಇರುವುದಿಲ್ಲ . ಆದುದರಿಂದ ಅವರಿಗೆ ಅದರ ಬಗ್ಗೆ ತಿಳಿಸಲು ನಾವು ಬ್ಯಾಂಕ್ ಗಳಿಗೆ ಹೋಗುವಾಗ ಅವರನ್ನೂ ನಮ್ಮ ಜೊತೆ ಕರೆದೊಯ್ದು ಅವರಲ್ಲಿ ಆಸಕ್ತಿ ಮೂಡಿಸಬೇಕು. ಅದಕ್ಕಿಂತ ಮೊದಲು ನಾವು ಅವರಿಗೆ ಹಣ ಎಂದರೇನು ಎಂದು ತಿಳಿಸಿರಬೇಕು.

ಆದುದರಿಂದ ಕೆಲವು ಚಟುವಟಿಕೆಗಳ ಮೂಲಕ ನಾವು ಮಕ್ಕಳಲ್ಲಿ ಹಣದ ಬಗ್ಗೆ ಅರಿವು ಮೂಡಿಸಬೇಕು.

ಈ ಕೆಳಗೆ ನಮೂದಿಸಿರುವ ಚಟುವಟಿಕೆಗಳು ಇದಕ್ಕೆ ಸಹಕರಿಸುತ್ತವೆ.

1. ಅಂಗಡಿಯ ಆಟ ಆಡುವುದು

ಈ ಆಟವು ಮಕ್ಕಳಲ್ಲಿ ಹಣವನ್ನು ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿಸಲು ಸಹಕಾರಿ ಆಗುತ್ತದೆ. ಈ ಆಟದಲ್ಲಿ ನೀವು ಮೂಲತಃ ಅಂಗಡಿಯವನಂತೆ ವರ್ತಿಸಿ ನಿಮ್ಮ ಮಗುವು ಗಿರಾಕಿಯಂತೆ ಆಗಿ ಆಟ ಆಡಬಹುದು. ಈ ಆಟವನ್ನು ನೀವು ನಿಮಗೆ ಬೇಕಾದ ಹಾಗೆ ಬಳಸಬಹುದು, ಸಾಲ ತೆಗೆದುಕೊಳ್ಳುವುದು, ಮತ್ತೆ ಕಂತು ಕಂತಾಗಿ ಮರುಪಾವತಿಸುವುದು ಅದರ ವಿನಿಮಯ ಈ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಬಹುದು. ಮಕ್ಕಳಿಗೆ ಕೃತಕ ಹಣವನ್ನು ಮಾಡಿಸಿ ಅದರ ಮೂಲಕ ನೀವು ಮನೆಯಲ್ಲಿ ಅವರೊಂದಿಗೆ ವ್ಯವಹರಿಸಿದರೆ ಅವರ ಆಸಕ್ತಿ ಇನ್ನೂ ಹೆಚ್ಚಾಗುತ್ತದೆ. ಈ ಚಟುವಟಿಕೆಯು ಮೂರರಿಂದ ನಾಲ್ಕು ವರ್ಷದ ಮಕ್ಕಳಿಗೆ ತುಂಬಾ ಉಪಯೋಗವಾಗುತ್ತದೆ.

2. ಮನೆಗೆಲಸ ಮಾಡಿ ಹಣಗಳಿಕೆ

ನೀವು ಮನೆಯಲ್ಲಿ ಅವರೊಂದಿಗೆ ಸಹಾಯ ಪಡೆದು ಯಾವುದಾದರೂ ಕೆಲಸ ಮಾಡಿಸಿದರೆ ಅವರಿಗೆ ಅದರ ಪ್ರತಿರೂಪವಾಗಿ ಹಣ ನೀಡಿ . ಈ ಮೂಲಕ ಅವರಿಗೆ ಹಣ ಗಳಿಸಲು ಎಷ್ಟು ಕಷ್ಟ ಪಡಬೇಕು ಎನ್ನುವುದರ ಮನವರಿಕೆ ಅಗುತ್ತದೆ. ಆದುದರಿಂದ ಅವರಿಗೆ ಹಣದ ಹಿಂದೆ ಇರುವ ಶ್ರಮದ ಅರಿವಾಗುತ್ತದೆ. ಇದು ಹಣದ ಮಹತ್ವ ತಿಳಿಯಲು ಮತ್ತು ಅದರ ಬಗ್ಗೆ ಇರುವ ಜವಾಬ್ದಾರಿಯನ್ನು ಹೆಚ್ಚಿಸಲು ಅನುವು ಮಾಡಿ ಕೊಡುತ್ತದೆ. ಈ ಚಟುವಟಿಕೆಯು ೭-೧೦ ವರ್ಷದ ಮಕ್ಕಳಿಗೆ ಅನ್ವಹಿಸುತ್ತದೆ ಏಕೆಂದರೆ ಈ ವಯಸ್ಸಿನಲ್ಲಿಯೇ ಅವರು ತಮ್ಮ ವಯಸ್ಸಿನ ಮಕ್ಕಳೊಂದಿಗೆ ಹೊರಗೆ ಹೊಗಿ ಹಣ ಖರ್ಚು ಮಾಡುವುದನ್ನು ಶುರು ಮಾಡುವುದು. ಈ ಪಾಠವನ್ನು ಅವರು ಜೀವನ ಪೂರ್ತಿ ಮರೆಯುವುದಿಲ್ಲ.

3. ಹಣ ಕೂಡಿಕೆ

“ನಾವು ಗಳಿಸಿದ ಹಣಕ್ಕಿಂತ ನಾವು ಕೂಡಿಟ್ಟ ಹಣವೇ ಜಾಸ್ತಿ ಉಪಾಯಕಾರಿ” ಎಂದು ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ದಾರೆ. ಹಣವನ್ನು ಎಲ್ಲರು ಸಂಪಾದಿಸುತ್ತಾರೆ ಆದರೆ ಕೆಲವರು ಮಾತ್ರ ಕೂಡಿಡುತ್ತಾರೆ. ಆದುದರಿಂದ ನೀವು ನಿಮ್ಮ ಮಕ್ಕಳಿಗೆ ಕೂಡಿಡುವ ಬಗ್ಗೆ ಹೇಳಿಕೊಡಬೇಕು. ಅವರಿಗೆ ಹಣ ಕೂಡಿಡಲು ಒಂದು ಪಿಗ್ಗಿ ಬ್ಯಾಂಕ್ ಕೊಡಿಸಬೇಕು. ಅವರು ಕೂಡಿಟ್ಟ ಪ್ರತಿ ಒಂದು ರುಪಾಯಿಗೂ ಅವರನ್ನು ಅಭಿನಂದಿಸಬೇಕು, ಇದು ಅವರಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ.ಬೇಕಾದರೆ ನೀವು ಅವರಿಗೆ ಪಿಗ್ಗಿ ಬ್ಯಾಂಕ್ ಗೆ ಬಣ್ಣ ಹಚ್ಚುವುದು ಅಥವ ತಾವೇ ಸ್ವತಃ ಮಣ್ಣಿನ ಪಿಗ್ಗಿ ಬ್ಯಾಂಕ್ ಮಾಡುವುದರ ಮೂಲಕ ಅವರ ಉತ್ಸಾಹವನ್ನು ಹೆಚ್ಚಿಸಬಹುದು. ಏಕೆಂದರೆ ಕೂಡಿಟ್ಟ ಪ್ರತಿಯೊಂದು ಪ್ರತಿಯು ಒಳ್ಳೆಯದ್ದೇ.

Leave a Reply

%d bloggers like this: