garbhiniyadaga-nimma-pathiyinda-bayasuva-elu-amshagalu-1

ಗರ್ಭಧಾರಣೆ  ಎನ್ನುವುದು ಬರೀ ಅಮ್ಮನ ಪಾತ್ರವಲ್ಲ, ತಾಯಿ ತನ್ನ  ಮಡಿಲಲ್ಲಿ ನವಮಾಸ ಇರಿಸಿಕೊಂಡಿದ್ದರೂ, ತಂದೆಯು  ತನ್ನದೇ ಆದ ಪಾತ್ರವನ್ನು ನಿಭಾಯಿಸುತ್ತಾನೆ. ಪತ್ನಿ ಗರ್ಭಧರಿಸಿದ ದಿನದಿಂದ ಪತಿಯ ಕರ್ತವ್ಯಗಳು ಹೆಚ್ಚುತ್ತವೆ. ಈ ಸಂದರ್ಭದಲ್ಲಿ ಪತಿಯು, ಗರ್ಭಿಣಿ ಪತ್ನಿಯನ್ನು ಬೆಂಬಲಿಸಿ ಅವಳಿಗೆ ಬೇಕಾದುದ್ದನ್ನು ನೀಡುವ ಉತ್ತಮ ಗೆಳೆಯನಾಗಬೇಕು. ಇದಕ್ಕೆ ಕೆಳಗಿನ ೭ ಅಂಶಗಳು ಸಹಾಯಕಾರಿಯಗಿವೆ.

೧. ಸಂಪೂರ್ಣ ಅರಿತುಕೊಳ್ಳಿ

ಗರ್ಭಧಾರಣೆ ದಿನದಿಂದ ಪತ್ನಿಯ ದೇಹದಲ್ಲಿ ಸಾವಿರಾರು ಹಾರ್ಮೋನುಗಳ ಬದಲಾವಣೆಗಳಾಗುತ್ತವೆ. ಇದರಿಂದ ಅವಳ ನಡುವಳಿಕೆ ಮತ್ತು ಮನಃಸ್ಥಿತಿಯಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಉದಾಹರಣೆಗೆ ಅವರ ನೆಚ್ಚಿನ ಆಹಾರ ಇಷ್ಟವಿಲ್ಲವಿರುವುದು, ನಿಮ್ಮ ಕೆಲವು ನೆಡವಳಿಕೆಗಳು ಆಕೆಗೆ ಈಗ ಇಷ್ಟವಾಗದಿರುವುದು  ಅಥವಾ ನಿಮ್ಮ ನೆಡವಳಿಕೆಯಲ್ಲಿ ಬದಲಾವಣೆಯನ್ನು ಬಯಸುತ್ತಾರೆ. ಇದನ್ನು ಅರಿತು ಆಕೆಯನ್ನು ಬೆಂಬಲಿಸಿ ಆಕೆಯ ಬಯಕೆಗಳನ್ನು ಇಡೇರಿಸಬೇಕು.

೨.ತಾಳ್ಮೆ

ಪತ್ನಿಯ ದೇಹದಲ್ಲಾಗುವ ಸಾವಿರಾರು ಹಾರ್ಮೋನುಗಳ ಬದಲಾವಣೆಗಳಿಂದ ಅವಳ ನಡುವಳಿಕೆ ಮತ್ತು ಮನಃಸ್ಥಿತಿಯಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಈ ಸಂದರ್ಭದಲ್ಲಿ ಆಕೆಗೆ ತನ್ನದೇ ಆದ ಕೆಲ ಬಯಕೆಗಳು ಬರುವುದು ಸಹಜ. ಅದನ್ನು ನಿಮ್ಮ ಬಳಿ ವ್ಯಕ್ತಪಡಿಸಿದಾಗ, ಕೋಪಗೊಳ್ಳದೆ ತಾಳ್ಮೆಯಿಂದ ಬಯಕೆಗಳನ್ನು ಪೂರ್ಣಗೊಳಿಸಿದರೆ ಅವಳ ದೇಹದಲ್ಲಿ ಮತ್ತು ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆಯಾಗುತ್ತವೆ ಮತ್ತು ಇಂತಹ ಬಯಕೆಗಳನ್ನು ನೀವು ಸ್ವಾಗತಿಸುವ ಮನೋಭಾವ ಹೊಂದಬೇಕು.

೩.ಜೊತೆಯಿರಿ

ಈ ಸಂದರ್ಭದಲ್ಲಿ ಆಕೆಯ ಸೌಂದರ್ಯ ಮತ್ತು ದೇಹದಲ್ಲಿ ವ್ಯತಿರಿಕ್ತ ಏರುಪೇರಾಗುವುದು ಸಾಮಾನ್ಯ. ಇದರಿಂದ ತಾನು ಮೊದಲಿನಂತೆ ಆಕರ್ಷಣೆಯಾಗಿಲ್ಲ ಮತ್ತು ತನ್ನ ಪತಿ ನನ್ನನ್ನು ಮೊದಲಿನಂತೆ ಪ್ರೀತಿಸುವುದಿಲ್ಲ ಎಂಬ ಮನೋಭಾವ ಆಕೆಯಲ್ಲಿ ಮೂಡಬಹುದು. ಆದ್ದರಿಂದ ಆಕೆಯ ಮನಸ್ಥಿತಿಯನ್ನು ಅರಿತು ಅವಳು ನನಗೆ ವಿಶೇಷ ಎಂಬಂತೆ ಆಕೆಯ ಜೊತೆಯಿರುವುದು ಮತ್ತು ಅವಳನ್ನು ಇಂದೆಂದು ಕಾಣದ ರೀತಿಯಲ್ಲಿ ಮುದ್ದಿಸುವುದು ಅವಳಲ್ಲಿ ಹೊಸ ಹುರುಪನ್ನು ಮೂಡಿಸುತ್ತದೆ.

೪.ನಿಕಟವಾಗಿರಿ

ಗರ್ಭಿಣಿ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಾಗುವ ಕಾರಣ ಅವರು ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಲು ಬಯಸುತ್ತಾರೆ ಮತ್ತು ಅದನ್ನು ಸಂತೃಪ್ತಿಗೊಳಿಸಲು ನಿಮ್ಮಿಂದ ಮಾತ್ರ ಸಾಧ್ಯ. ಆಕೆಯ ಅಗತ್ಯಗಳನ್ನು ಪೂರ್ಣಗೊಳಿಸಲು ಹಿಂಜರಿಯದೆ, ಆಕೆಯ ಸುಖಕರ ಜೀವನವನ್ನು ತೃಪ್ತಿದಾಯಕವಾಗಿರಿಸಿರಿ.

೫.ಪ್ರೋತ್ಸಾಹಿಸಿರಿ

ಇಂತಹ ಸಂದರ್ಭದಲ್ಲಿ ಅವರನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಕೆಲವು ಸಂದರ್ಭದಲ್ಲಿ ಅವರು ಮಾನಸಿಕ ಖಿನ್ನತೆಗೆ ಒಳಗಾಗುವುದು ಅಥವಾ ಋಣಾತ್ಮಕ ಚಿಂತನೆ ಮಾಡುವುದು ಹೆಚ್ಚಿರುತ್ತದೆ. ನಿಮ್ಮ ಪ್ರೇರೇಪಣೆಯ ಮಾತು ಅವರಿಗೆ ಸ್ಫೂರ್ತಿ ಮತ್ತು ಹೊಸ ಉತ್ಸಾಹವನ್ನು ನೀಡುತ್ತದೆ.

೬.ಚಾತುರ್ಯದಿಂದಿರಿ

ಮಹಿಳೆ ಗರ್ಭಿಣಿಯಾದಾಗ ಆಕೆಗೆ ಹಲವು ಋಣಾತ್ಮಕ ಆಲೋಚನೆಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಅವರ ಸಂಗಾತಿಯಾದ ನೀವು ಅವರ ಭಾವನೆಗಳನ್ನು ಗಮನಿಸಿ, ಅವರ ಜೊತೆಯಿದ್ದು ಅವರ ಋಣಾತ್ಮಕ ಆಲೋಚನೆಗಳನ್ನು ಗುರುತಿಸಿ ಅವರನ್ನು ಪ್ರೇರೇಪಿಸುವುದು  ಅಗತ್ಯ. ಉದಾಹರಣೆಗೆ  ಆಕೆಯ ಸಣ್ಣ ಪುಟ್ಟ ಕೆಲಸಗಳಲ್ಲಿ  ಕೈಜೋಡಿಸುವುದು , ಆಕೆಯನ್ನು  ನಿಯಮಿತವಾಗಿ ಸ್ತ್ರೀರೋಗತಜ್ಞರ ಬಳಿ ಕರೆದೊಯ್ಯುವುದು.

೭.ಆಸರೆಯಾಗಿರಿ

ಅವಳು ಒಂದು ಜೀವವನ್ನು ತನ್ನ ಉದರದೊಳಗಡೆ ಇರಿಸಿಕೊಂಡಿರುವವಳು. ಆಕೆಯ ಸಂಗಾತಿಯಾಗಿ ಅವಳ ಅಗತ್ಯಗಳನ್ನು ತಿಳಿದು ಅವಳನ್ನು ಪೋಷಿಸುವುದು ನಿಮ್ಮ ಕರ್ತವ್ಯ. ಅವಳು ಕೆಲಸ ಮಾಡುವಾಗ ಕೈ ಜೋಡಿಸುವುದು, ಅವಳ ಬಯಕೆಯನ್ನು ಈಡೇರಿಸುವುದು ಅಗತ್ಯ. ಅವಳು ಬೇರೆ ಸಂದರ್ಭಗಳಿಗಿಂತಲೂ ಗರ್ಭಾವಸ್ಥೆಯಲ್ಲಿ ನಿಮ್ಮ ಇರುವಿಕೆಯನ್ನು ಬಯಸುತ್ತಾಳೆ.

Leave a Reply

%d bloggers like this: