ನಿಮಗೆ-ಯಾರೂ-ತಿಳಿಸದ-ಸಾಮಾನ್ಯ-ಹೆರಿಗೆಯ-೫-ಅಂಶಗಳು

ನಿಮಗೆ ಆಶ್ಚರ್ಯವಾಗಬಹುದು, ಯಾಕೆ ನಾನು ಈ ವಿಷಯವನ್ನು ಓದಬೇಕೆಂದು. ಹೆರಿಗೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಘಟನೆಗಳನ್ನು ಸ್ತ್ರೀರೋಗತಜ್ಞರು, ನೆರೆಹೊರೆಯವರು ವಿವರಿಸುತ್ತಾರೆ, ಇನ್ನೇನು ವಿಶೇಷತೆ ಇರಲು ಸಾಧ್ಯ ಎಂದು ನೀವು ಊಹಿಸಿಕೊಂಡರೆ ಅದು ಸರಿ ಆದರೆ ಅವರು ಕೆಲವು ಅಂಶಗಳನ್ನು ಹೇಳಲು ಮರೆತಿರುತ್ತಾರೆ. ಅವರ ಹೇಳಿಕೆಗಳನ್ನು ಆಲಿಸಿರುವ ನೀವು ನಿಮ್ಮದೇ ಆದ ತಯಾರಿಗಳನ್ನು ಮಾಡಿಕೊಂಡಿರುವಿರಿ, ಆದರೆ ಜನರು ಹೆರಿಗೆ ಕೊಠಡಿಯಲ್ಲಿ ಸಂಭವಿಸಬಹುದಾದ ಕೆಲವು ಅನೀರೀಕ್ಷಿತ ಘಟನೆಗಳ ಬಗ್ಗೆ ತಿಳಿಸಲು ಮರೆತಿರುತ್ತಾರೆ. ಅಂತಹ ವಿಷಯಗಳ ಬಗ್ಗೆ ವಿವರಣೆ ಇಲ್ಲಿದೆ.

೧. ನೀವು ಅಂದುಕೊಂಡಂತೆ ಯೋಜನೆಗಳು ಆಗದಿರುವುದು

ನೀವು ಹೆರಿಗೆ ಸಂದರ್ಭದಲ್ಲಿ ನಿಮ್ಮದೇ ಆದ ಪೂರ್ವ ಯೋಜನೆಗಳೊಂದಿಗೆ ಮಗು ಜನನದ ನಿರೀಕ್ಷೆಯಲ್ಲಿರುವಿರಿ. ಮತ್ತು ನಿಮ್ಮ ಯೋಜನೆಯಂತೆ ಹೆರಿಗೆಯಾಗಬಹುದೆಂದು  ಮಗುವಿನ ಜನನಕ್ಕಾಗಿ ಕಾಯುತ್ತಿರುವಿರಿ. ಆ ಸಮಯ ಬಂದಾಗ ನೀವು ಪುಸ್ತಕದಲ್ಲಿ ಓದಿರುವಂತೆ ಅಥವಾ ಆಲಿಸಿರುವಂತೆ  ನೀವು ಬಳಸಲೇ ಬೇಕಾದ  ಎಣ್ಣೆಯನ್ನು ನೋಡಲು ನೀವು ಮರೆಯುವಿರಿ ಅಥವಾ ನೀವು ಅದನ್ನು ನೋಡುವಷ್ಟರಲ್ಲಿ ಪ್ರಸವ ಕೆಲಸ ಮುಗಿಸಲು ಪ್ರಸೂತಿ ಮಾಡುವವರು ಸಿದ್ಧರಿರುತ್ತಾರೆ. ಅಲ್ಲಿ ಏನಾಗಬಹುದು ಎಂಬ ಕಲ್ಪನೆಯನ್ನೂ  ನಿಮ್ಮಿಂದ ಊಹೆ ಮಾಡಿಕೊಳ್ಳಲು ಆಗುವುದಿಲ್ಲ,ಆ ಸಮಯದಲ್ಲಿ ವೈದ್ಯರು ಅಲಭ್ಯವಾಗಿರಬಹುದು ಅಥವಾ ನೀವು ಬಯಸಿದಂತಹ  ಕೊಠಡಿಗಳು ನಿಮಗೆ ಸಿಗದಿರಬಹುದು.

೨. ತಿನಿಸುಗಳನ್ನು ಸೇವಿಸದೆ ಇರಬೇಕಾಗಬಹುದು

ಕೆಲವು ಸಂದರ್ಭಗಳಲ್ಲಿ ಸಿಸೇರಿಯನ್ ಮಾಡಬೇಕಾದ ಪರಿಸ್ಥಿತಿ  ನಿರ್ಮಾಣವಾಗುವುದರಿಂದ ಮಹಿಳೆಯರಿಗೆ ಆಹಾರ ಸೇವನೆ ಮಾಡಲು ಅನುಮತಿ ನೀಡುವುದಿಲ್ಲ, ಇಂತಹ ಸಮಯದಲ್ಲಿ ಅವರು ದ್ರವರೂಪದ  ಪದಾರ್ಥಗಳಿಗೆ ತಮ್ಮನ್ನು ತಾವೆ ಸೀಮಿತಗೊಳಿಸಿಕೊಳ್ಳಬೇಕಾಗುತ್ತದೆ. ಅಕ್ಕಪಕ್ಕದಲ್ಲಿ ಆಹಾರ ಸೇವನೆ ಮಾಡುವವರನ್ನು ನೋಡಿ ತಮಗೆ ಹಸಿವಾದರೂ ಅವರು ಏನನ್ನು ಸೇವಿಸುವಂತಿಲ್ಲ.

೩. ನಿಮ್ಮ ಖಾಸಗಿ ಅಂಗದ ಮೇಲೆ  ಹಲವು ಕೈಗಳ ಆಗಮನವನ್ನು ನಿರೀಕ್ಷಿಸಿ

ಆಸ್ಪತ್ರೆಯಲ್ಲಿ, ನೀವು ಎಷ್ಟು ದುರ್ಬಲರಾಗಿದ್ದೀರಿ ಎಂದು ಪರೀಕ್ಷಿಸಲು ನಿಮ್ಮ ಸುತ್ತಲೂ ಅನೇಕ ದಾದಿಯರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಮಗುವನ್ನು ಹೊರ ಜಗತ್ತಿಗೆ ಪರಿಚಯಿಸಲು  ಸುಲಭಮಾಡುವ ಹಲವು ಕೈಗಳು ನಿಮ್ಮನ್ನು ಮುಟ್ಟಿದರೂ  ನೀವು ಆಶ್ಚರ್ಯಪಡಬೇಕಾಗಿಲ್ಲ.

೪. ತಳ್ಳುವಿಕೆಯ ಅಭಾವ

ಸಾಮಾನ್ಯವಾಗಿ  ತಳ್ಳುವಿಕೆಯ ಬಗ್ಗೆ ಅರಿವಿದ್ದರೂ ಕೂಡ ಹೆರಿಗೆಯ ಸಮಯದಲ್ಲಿ ಇದರ ಪ್ರಾಮುಖ್ಯತೆಯ  ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿಲ್ಲ, ಇದಕ್ಕೆ ಮುಖ್ಯ ಕಾರಣ ದೂರದರ್ಶನಗಳಲ್ಲಿ ಪ್ರಸಾರವಾಗುವಂತಹ ತಪ್ಪು ಮಾಹಿತಿಗಳು. ಕೆಲವೊಮ್ಮೆ ಹೆರಿಗೆಯು ಮೂರು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುವ ಸಂದರ್ಭದಲ್ಲಿ ಸುಮಾರು ಹತ್ತಕ್ಕೂ ಹೆಚ್ಚಿನ ಬಾರಿ ತಳ್ಳಬೇಕಗುತ್ತದೆ.

೫. ಮುಜುಗರವಾಗಬಹುದು

ಮುಜುಗರ, ಈ ವಿಷಯದ ಬಗ್ಗೆ ಹೇಳುವುದಾದರೆ, ನೈಜವಾಗಿ ಸಂಭವಿಸುವ ಮತ್ತು ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಸಿಗುವ ಅಂಶ, ಮಗುವು ಹೊರಬರುವ ಸಂದರ್ಭದಲ್ಲಿ ನಿಮಗೆ ತಳ್ಳಿದಂತಾಗುತ್ತದೆ ಅದರಿಂದ ವಿಚಲಿತಗೊಳ್ಳದೆ, ಮಗು ಹೊರಬರಲು ಸುಲಭವಾಗುವಂತೆ ದೀರ್ಘ ಉಸಿರಾಟ ನೆಡೆಸುತ್ತಿರುವುದು ಒಳ್ಳೆಯದು ಇಂತಹ ಸಂದರ್ಭದಲ್ಲಿ ಮಕ್ಕಳ ವೈದ್ಯರು, ದಾದಿಯರ ಜೊತೆಗೆ ನೀವು ಹೇಗೆ ರಕ್ಷಣೆ ತೆಗೆದುಕೊಳ್ಳುತ್ತೀರಾ ಎಂಬುದು ಮುಖ್ಯವಾಗುತ್ತದೆ.

ಅದೇನೆಯಿದ್ದರೂ, ಈ ಕಷ್ಟಕರವಾದ ಸಂಗತಿಗಳ ಹೊರತಾಗಿಯೂ ನೀವು ಹೆರಿಗೆಯ ಸಮಯ ಬಂದಾಗ ಮಗುವಿನ ಜನನಕ್ಕಾಗಿ ಮುನ್ನಡೆಯಬೇಕು. ಜೀವನದಲ್ಲಿ ಏನೇ ಅಡಚಣೆ, ತೊಂದರೆಗಳು ಎದುರಾದರು ಮಗುವಿನ ಸಂಪೂರ್ಣ ಜೀವಿತಾವಧಿಯ ಎದುರಿಸುವ, ಜೊತೆಗಿರುವ ಕ್ಷಣಗಳು  ನಿಮ್ಮದು. ಅದೇನೇ ಕಷ್ಟ ಅಡಚಣೆಗಳಿದ್ದರೂ ಮಗು ಜನನದ ಅಮೂಲ್ಯ ಕ್ಷಣಗಳು ತಾಯಿಯ ಎಲ್ಲ ನೋವುಗಳನ್ನು ಮರೆಸುತ್ತದೆ. ಇನ್ನು ಮುಂದೆ ಮಗುವಿನ ಖುಷಿಯ ಕ್ಷಣಗಳನ್ನು ಕಾಣುವುದು ಮಾತ್ರ ಆಕೆಯ ಕನಸಾಗಿರುತ್ತದೆ.

Leave a Reply

%d bloggers like this: