10-pranayada-nadegalu-hudugi-bayasuvudu

ಬಹುತೇಕ ಹೆಣ್ಣುಮಕ್ಕಳಿಗೆ, ಪ್ರಣಯ ಎಂದರೆ ಕೇವಲ ದುಬಾರಿ ಪ್ರವಾಸ, ಭೋಜನ ಅಥವಾ ಉಡುಗೊರೆಗಳು ಅಲ್ಲ. ಅದು ಅವರ ಗಂಡಂದಿರು ಅವರನ್ನ ಪ್ರತಿದಿನ ಹೇಗೆ ನಡೆಸಿಕೊಳ್ಳುತ್ತಾರೆ ಎಂದು. ಗಂಡಂದಿರು ದೈನಂದಿನ ಕಾರ್ಯಗಳಲ್ಲಿ ಅವರಿಗೆ ತೋರುವ ಮಮತೆ ಹಾಗು ಗೌರವ ಅವರಲ್ಲಿ ತಮ್ಮನ್ನು ಪ್ರೀತಿಸಿ ಪೋಷಿಸುವರು ಇದ್ದಾರೆ ಎಂಬ ಭಾವನೆ ಉಂಟು ಮಾಡುತ್ತದೆ. ಸಂಭಾವಿತನಾಗಿ ಇರುವುದು ಕೇವಲ ಪುಸ್ತಕದಲ್ಲಿ ಮಾತ್ರ ಒಳ್ಳೆಯದು ಅಂದುಕೊಳ್ಳಬೇಡಿ, ಈ ಮೃದು ಸ್ವಭಾವವೇ ಪ್ರತಿಯೊಂದು ಹುಡುಗಿ ತನ್ನ ಪತಿಯಲ್ಲಿ ಬಯಸುವುದು ! ಇಲ್ಲಿವೆ ಪ್ರತಿಯೊಂದು ಹುಡುಗಿ ತನ್ನ ಪತಿಯಿಂದ ಬಯಸುವ ೧೦ ಪ್ರಣಯದ ನಡೆಗಳು- 

೧.ಅನಿರೀಕ್ಷಿತ ಚುಂಬನಗಳು

ಪ್ರೀತಿ ತೋರ್ಪಡಿಸಲು ಇರುವ ಅತ್ಯುತ್ತಮ ದಾರಿ ಎಂದರೆ ಅದೇ ಮುತ್ತುಗಳು ನೀಡುವುದು! ಬೀಳ್ಕೊಡುಗೆಯ ಮುನ್ನದ ಮುತ್ತುಗಳು, ಮಲಗುವ ಮುನ್ನ ಶುಭಾರಾತ್ರಿಯೊಂದಿಗಿನ ಮುತ್ತುಗಳು ಕಡ್ಡಾಯವಾಗಿ ಇರಲೇಬೇಕು. ಹಾಗೂ, ನಿಮ್ಮ ಸ್ನೇಹಿತರೊಂದಿಗೆ ಅಥವಾ ಬಳಗದವರೊಂದಿಗೆ ಇರುವಾಗ ಹಣೆಯ ಮೇಲೆ ಅಥವಾ ಕೆನ್ನೆಯ ಮೇಲೆ ನೀಡುವ ಆ ಕಳ್ಳ ಮುತ್ತುಗಳು ಅಂತೂ ಇನ್ನೂ ಆರಾಧನೀಯ.

೨.ಸಾರ್ವಜನಿಕವಾಗಿ ಅವಳನ್ನು ಅಪ್ಪಿಕೊಳ್ಳುವುದು

ಸಾರ್ವಜನಿಕವಾಗಿ ಅಪ್ಪಿಕೊಂಡರೆ ಅಥವಾ ಕೇವಲ ಕೈ ಹಿಡಿದು ನಡೆದರೆ  ನಿಮ್ಮ  ಪತ್ನಿಯಲ್ಲಿ ಒಂದು ಸುರಕ್ಷಿತ ಭಾವನೆ ಮೂಡಿಸುವುದಲ್ಲದೆ, ಪ್ರೀತಿ-ಪೋಷಣೆಗೆ ತಾನು ಅರ್ಹಳು ಎಂಬ ಭಾವನೆ ಮೂಡಿಸುತ್ತದೆ. ಅದಲ್ಲದೆ, ಇದು ಪತಿಯು ತನ್ನ ಬಗ್ಗೆ ಯಾವುದೇ ಸಂಕೋಚವಿಲ್ಲವೆಂಬ ಹಾಗು ತನ್ನ ಪ್ರೀತಿಯನ್ನು ಪ್ರದರ್ಶಿಸುವುದಕ್ಕೆ ಹೆದರುವುದಿಲ್ಲವೆಂಬ ಸೂಚನೆ ನೀಡುತ್ತದೆ.

೩. ಮನೆಕೆಳಸಗಲ್ಲಿ ಸಹಾಯಹಸ್ತ ನೀಡುವುದು

ನೀವು ಕೆಲಸಕ್ಕೆ ಹೋಗುತ್ತಿದ್ದರು, ಮನೆಕೆಳಸಗಳನ್ನು ನಿಭಾಯಿಸುವ ಜವಾಬ್ದಾರಿ ಕೇವಲ ಯಾರೋ ಒಬ್ಬರದ್ದು ಅಲ್ಲ ಎಂದು ಪತಿಯು ತಿಳಿದರೆ ಅದಕ್ಕಿಂತ ಖುಷಿ ಸಂಗತಿ ಪತ್ನಿಗೆ ಇನ್ನೊಂದಿಲ್ಲ. ಇದು ಹುಡುಗಿಗೆ ತನ್ನ ಪತಿಯು ತನ್ನ ಬಗ್ಗೆ ಎಷ್ಟು ಕಾಳಜಿವಹಿಸುತ್ತಾರೆ ಎಂಬುದನ್ನು ನಿರೂಪಿಸುತ್ತದೆ. ಮನೆಕೆಲಸದ ಎಲ್ಲಾ ಹೊರೆಯನ್ನ ತನ್ನ ಮೇಲೆ ಹಾಕಿಲ್ಲವೆಂದು ಸೂಚಿಸುತ್ತದೆ. ಅದು,ತರಕಾರಿ ಖರೀದಿಯಲ್ಲೇ ಆಗಿರಬಹುದು ಅಥವಾ ಹೊದಿಕೆಗಳನ್ನು ಮಡಿಚಿ, ಹಾಸಿಗೆ ಸರಿ ಮಾಡುವುದೇ ಆಗಿರಬಹುದು, ತನ್ನ ಸಂಗಾತಿಯ ಸಹಾಯ ಇದ್ದರೆ ಅದ್ಭುತ ಎನಿಸುತ್ತದೆ.

೪. ಅವಳ ಅಭಿಪ್ರಾಯಕ್ಕೆ ಬೆಲೆ ಕೊಡುವುದು

ನಿಮ್ಮ ಪತಿಯು ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ,ಅವು ಚಿಕ್ಕದೆ ಇರಲಿ ಅಥವಾ ದೊಡ್ಡದೇ ಇರಲಿ, ನಿಮ್ಮ ಅಭಿಪ್ರಾಯ ಕೇಳುವುದಲ್ಲದೆ, ಅವುಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಅದು ತುಂಬಾ ಖುಷಿಯ ವಿಷಯ. ಇದರಿಂದ ಪತ್ನಿಯು ತನ್ನ ಪತಿಯ ಅವಿಭಾಜ್ಯ ಅಂಗವಾಗಿದ್ದು, ಆತನ ಪ್ರತಿ ವಿಷಯಗಳಲ್ಲಿ ತನ್ನ ಭಾಗವಹಿಸುವಿಕೆ ಇದೆ ಎಂಬದನ್ನು ಅವಳಿಗೆ ಅರ್ಥ ಮಾಡಿಸುತ್ತದೆ. ಇದು ಕೂಡ ಒಂದು ಹುಡುಗಿಗೆ ತನ್ನ ಅಭಿಪ್ರಾಯಕ್ಕೆ ಬೆಲೆ ಇದೆ ಎಂದು ಹೇಳಿಕೊಡುತ್ತದೆ, ಇದು ಒಂದು ರೋಮಾಂಚನೀಯವಲ್ಲದೆ ಮತ್ತೇನು ? ಅಲ್ಲವೇ !

೫. ಅವಳಿಗೆ ಚಳಿಯಾದಾಗ ನಿಮ್ಮ ಜಾಕೆಟ್ ನೀಡುವುದು

ಇದು ಖಂಡಿತ ಸಾರ್ವಕಾಲಿಕ ಹಾಗು ಅತ್ಯತ್ಕೃಷ್ಟ. ಆದರೆ ಬಹಳಷ್ಟು ಹುಡುಗರು ಮದುವೆ ಆದ ಮೇಲೆ ಇದನ್ನು ಮಾಡುವುದು ನಿಲ್ಲಿಸಿಬಿಡುತ್ತಾರೆ. ನಿಮ್ಮ ಹುಡುಗಿ ಬೆಚ್ಚನೆ ಇರಬೇಕೆಂದು,ಇದನ್ನು ಮಾಡುವುದು ಒಂದು ಸಿಹಿಯಾದ ನಡೆಯೆಂದು ಪತಿಯರು ಯಾವಾಗಲು ನೆನಪಿಡಬೇಕು.

೬. ಅವಳ ಮಾತಿಗೆ ಕಿವಿಗೊಡುವುದು

ಇದು ಅವಳಿಗೆ ತಾನು ಕೇವಲ ಅರ್ಥಹೀನ ಮಾತುಗಳಲ್ಲಿ ತೊಡಗಿಕೊಂಡಿಲ್ಲವೆಂದು, ತನ್ನ ಮಾತಿಗೆ ಪತಿಯು ಗಮನ ನೀಡುತ್ತಿರುವನು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಅದು ಕಚೇರಿ ಕೆಲಸದ ಬಗೆಗಿನ ಗೊಣಗಾಟವೇ ಇರಬಹುದು ಅಥವಾ ಗೆಳೆಯರ ಬಗೆಗಿನ ಹಾಸ್ಯದ ಕಥೆಯೇ ಇರಬಹುದು. ನಿಮ್ಮ ಪತಿಯು ಅದನ್ನು ಗಮನವಿಟ್ಟು ಆಲಿಸಿ ಹಾಗು ಮುಂದೊಮ್ಮೆ ಅದನ್ನು ಮತ್ತೆ ನೀವು ಪ್ರಸ್ತಾಪಿಸಿದಾಗ ಅದನ್ನು ಅವರು ಆಗಲೂ ನೆನಪಿನಲ್ಲಿ ಇಟ್ಟುಕೊಂಡಿರುವುದು ನೋಡಿದಾಗ ಮನಸಿಗೆ ಮುದ ಸಿಗುತ್ತದೆ.

೭.ಅವಳು ಇಷ್ಟಪಡುವ ವಸ್ತುಗಳನ್ನು ತಂದುಕೊಡುವುದು

ಇವು ದುಬಾರಿ ವಸ್ತುಗಳೇ ಆಗಿರಬೇಕು ಎಂದೇನಿಲ್ಲ, ಅವಳು ನಿರೀಕ್ಷಿಸದೆ ಇದ್ದಾಗ ಅವಳಿಗೆ ಇಷ್ಟವಾಗುವ ಚಾಕಲೇಟ್ ಅಥವಾ ಐಸ್ ಕ್ರೀಂ ತಂದುಕೊಟ್ಟರೆ ಅದಕ್ಕಿಂತ ಹೆಚ್ಚು ಏನು ಬೇಕಾಗಿಲ್ಲ! ಪತ್ರ ಬರೆಯುವುದು, ಹೂವುಗಳನ್ನ ತಂದುಕೊಡುವುದು ಕೂಡ ರೋಮಾಂಚನೀಯ.

೮.ರಜೆ ತೆಗೆದುಕೊಳ್ಳುವುದು

ಕೆಲಸದಿಂದ ಎಂದಾದರು ಒಂದು ದಿನ ರಜೆ ತೆಗೆದುಕೊಂಡು, ಆ ದಿನ ಪತ್ನಿಯೊಂದಿಗೆ ಒಳ್ಳೆ ಸಮಯ ಕಳೆದರೆ, ಅದು ಪತಿಯು ತನ್ನ ಪತ್ನಿಯನ್ನು ಎಷ್ಟು ಪ್ರೀತಿಸುವನೆಂದು ಹಾಗು ತನ್ನನ್ನು ಬಿಟ್ಟು ಇರುವುದಿಲ್ಲ ಎಂಬುವುದನ್ನು ಹೇಳುವ ಅತ್ಯುತ್ತಮ ನಡೆ.

೯. ಅನಾರೋಗ್ಯದ ವೇಳೆ ಕಾಳಜಿ ತೋರುವುದು 

ಪತಿಯ ಕಾಳಜಿ ಸ್ಪಷ್ಟವಾದ ಕಾರಣಗಳಿಗೆ ಶಮನಿಸುವ ಪರಿಣಾಮ ಹೊಂದಿರುತ್ತದೆ. ನಿಮ್ಮ ಪತಿಗೆ ನಿಮ್ಮ ಬಗ್ಗೆ ಅತೀವ ಕಾಳಜಿ ಇದೆ ಎನ್ನುವ ಸಂಗತಿಯೇ ಮನಸ್ಸಿಗೆ ಹಿತ ನೀಡುತ್ತದೆ. ನಿಮ್ಮ ಪತಿಯು ನೀವು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ  ಗುಣಮುಖಳಾಗಿ, ಮತ್ತೆ ಎಂದಿನಂತೆ ಅವರೊಂದಿಗೆ ನಗು ನಗುತ್ತಾ ಇರುವುದು ಬಯಸಿತ್ತಾದ್ದಾರೆಂದು ಇದು ತೋರಿಸುತ್ತದೆ.

೧೦. ಪ್ರತಿದಿನ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು

ಹೌದು! ಹೌದು! ಹೌದು! ಈ ವಿಷಯವನ್ನಂತೂ ಯಾವ ಪತಿಯು ಮರೆಯುವಂತೆಯೇ ಇಲ್ಲ. ಇದು ತುಂಬಾ ರೋಮಾಂಚನಕಾರಿ ಅಲ್ಲದೆ ಎಂತಹ ಕೆಟ್ಟ ದಿನವನ್ನು ಕೂಡಾ ಒಳ್ಳೆಯ ದಿನವನ್ನಾಗಿ,ಒಳ್ಳೆಯ ದಿನವನ್ನು ಅತ್ಯುತ್ತಮ ದಿನವನ್ನಾಗಿ ಮಾರ್ಪಡಿಸುವ ಶಕ್ತಿ ಹೊಂದಿದೆ! ಅಲ್ಲದೆ, ಎಲ್ಲ್ಲಾ ಜಗಳಗಳನ್ನು ಕೊನೆಗೊಳಿಸುವ ಸಾಮರ್ಥ್ಯ ಇದೆ.

Leave a Reply

%d bloggers like this: