Maneyalle-herige-neevu-tiliyabekaada-vishayagalu

 

 

ಒಂಭತ್ತು ತಿಂಗಳ ಗರ್ಭಧಾರಣೆಯೆಂಬ ಕಲ್ಲಿನ ಗುಡ್ಡದ ಶೃಂಗಕ್ಕೆ ಕಠಿಣ ಚಾರಣದ ನಂತರ, ಗುರಿ ತಲುಪಲು ದಾಟುವುದಕ್ಕೆ ಉಳಿಯುವುದು ಹೆರಿಗೆಯೆಂಬ ಕಣಿವೆ. ಬೆಂಗಳೂರಿನ ಹವಾಮಾನದಂತೆ, ನಿಖರವಾದ ಹೆರಿಗೆ ದಿನಾಂಕ ಯಾರು ಸರಿಯಾಗಿ ಊಹಿಸಲು ಆಗುವುದಿಲ್ಲ. ವೈದ್ಯರು ಹೇಳುವ ದಿನಾಂಕ ಕರಾರುವಾಕ್ಕಾಗಿ ಇರುವುದಿಲ್ಲ. ಹಾಗಾಗಿ ಹೆರಿಗೆ ತುಂಬಾ ಸಲೀಸಾಗಿ ಆಗುವುದೆಂಬ ಹುಸಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ.

ಏತನ್ಮಧ್ಯೆ ನಿಮ್ಮ ಮಗು ತಾನು ಈ ಭೂಮಿಗೆ ಕಾಲು ಇಡಬೇಕೆಂದು ನಿಶ್ಚಯಿಸಿಕೊಂಡು ಹೊರಬರಲು ನಿಮಗೆ ತಾಕೀತು ನೀಡಿತು ಎಂದಾಗ, ಅಂದರೆ ನಿಮಗೆ ಮನೆಯಲ್ಲೇ ಹೆರಿಗೆ ನೋವು ಕಾಣಿಸಿಕೊಂಡಲ್ಲಿ, ಇಲ್ಲಿ ನಾವು ವಿವರಿಸಿದಂತೆ ಮಾಡಿ :

೧. ನಿಮಗೆ ಮನೆಯಲ್ಲೇ ಹೆರಿಗೆ ಮಾಡಲು ಇಚ್ಚೆ ಇಲ್ಲದಿದ್ದಲ್ಲಿ ಆಸ್ಪತ್ರೆಗೆ ಕರೆ ಮಾಡಿ. ಆಸ್ಪತ್ರೆ ಸಿಬ್ಬಂದಿ ಧಾವಿಸುವವರೆಗು ಇಲ್ಲಿ ಪ್ರಸ್ತಾಪಿಸಿರುವ ಎರಡನೆ ಕ್ರಮವನ್ನು ಪಾಲಿಸುತ್ತಿರಿ. ನಿಮ್ಮ ಕೈಗಳನ್ನು ನಿರ್ಮಲೀಕಾರಕ ವಸ್ತುವಿನಿಂದ ತೊಳೆದುಕೊಳ್ಳುವುದು ಮರೆಯಬೇಡಿ. ಹಾಗಯೇ ನಿಮ್ಮ ಪತಿ, ಪೋಷಕರು, ಅತ್ತೆ-ಮಾವ ಅಥವಾ ಯಾರೇ ನಿಮ್ಮ ಸಹಾಯಕ್ಕೆ ಕೂಡಲೇ ದವಡಾಯಿಸುವುವವರನ್ನು ಕರೆಯಿರಿ.

೨. ಒಗೆದ ಶುಚಿಯಾಗಿರುವ ಹೊದಿಕೆಗಳು, ಚೌಕಗಳು ಹಾಗು ಒರೆಸುವ ಬಟ್ಟೆಗಳನ್ನು ಕೂಡಿಸಿಕೊಳ್ಳಿ. ಅವು ಸಿಗದಿದ್ದಲ್ಲಿ ನೀವು ಧರಿಸುವ ಬಟ್ಟೆಗಳು ಆದರೂ ಪರವಾಗಿಲ್ಲ. ತಲೆದಿಂಬನ್ನು ನಿಮ್ಮ ಬೆನ್ನ ಅಡಿಗೆ ಮೃದು ಮೆತ್ತೆಯಂತೆ ಇರಿಸಿಕೊಳ್ಳಿ. ನೀವು ಮಲಗಿಕೊಳ್ಳುವ ಜಾಗವನ್ನು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಿತಕರವಾಗಿ ಮಾಡಿಕೊಳ್ಳಿ.

೩. ನಿಮಗೆ ಹೇಗೆ ಸರಿ ಹೊಂದುತ್ತೋ ಆ ರೀತಿಯಲ್ಲಿ ವರಗಿಕೊಳ್ಳಿ. ಅಂಗಾತ ಮಲಗಿಕೊಂಡು ನಿಮ್ಮ ಬೆನ್ನನ್ನು ಸ್ವಲ್ಪ ಮೇಲೆ ಮಾಡಿದ್ದಲ್ಲಿ , ನಿಮ್ಮ ಮಗುವಿನ ತಲೆ ಹೊರಬಂದಿದೆಯಾ ಎಂದ ನೋಡಿಕೊಳ್ಳಬಹುದು. ನಿಮಗೆ ಅತೀವ ಒತ್ತಡ ಕಂಡುಬಂದಲ್ಲಿ ನಿಲ್ಲಲು ಮಾತ್ರ ಮುಂದಾಗಬೇಡಿ. ಹಾಗೆ ಮಾಡಿದಲ್ಲಿಯೇ ಆದಲ್ಲಿ, ನೀವು ನಿಮ್ಮ ಮಗುವನ್ನು ಎತ್ತರದಿಂದ  ನೆಲಕ್ಕೆ ಹೊರದೂಡುವ ಅಪಾಯ ಇರುತ್ತದೆ. ಇದರಿಂದ ನಿಮ್ಮ ಮಗುವಿನ ತಲೆಗೆ ಹೊಡೆತ ಬೀಳಬಹುದು.

೪. ನಿಮಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಮಾಧಾನದಿಂದ ಇರಿ. ಇದು ಹೇಳುವುದು ಸುಲಭ ಆದರೆ ಮಾಡುವುದು ಕಷ್ಟ, ಆದರೂ ನಿಮ್ಮ ಹೆರಿಗೆ ಸುರಿಕ್ಷಿತವಾಗಿ ಆಗಲು ಮಾಡುವಂತೆ ಇರುವ ದಾರಿ ಇದೊಂದೇ. ಇದರೊಂದರಿಂದಲೇ ನೀವು ನಿಮ್ಮ ಹೆರಿಗೆ ಕಾರ್ಯದಲ್ಲಿ ಮುನ್ನುಗ್ಗಲು ಸಹಾಯವಾಗುವುದು.

೫. ನಿಮಗೆ ಅತೀವ ಒತ್ತಡ ಭಾಸವಾಗುವವರೆಗು, ನೀವಾಗಿ ನೀವೆಯೇ ಮಗುವನ್ನು ಹೊರತಳ್ಳಲು ಮುಂದಾಗಬೇಡಿ. ಹಾಗೆ ಮಾಡುವುದರಿಂದ ನೀವು ಘಾಸಿಗೆ ಒಳಗಾಗಬಹುದು. ಹೊರತಳ್ಳುವ ಕಾರ್ಯದ ಪ್ರತಿ ೫ ಕ್ಷಣಗಳಿಗೆ ಒಮ್ಮೆ ದೀರ್ಘ ಉಸಿರು ತೆಗೆದುಕೊಳ್ಳಿ.

೬. ನಿಮ್ಮ  ಸಂಕೋಚನಗಳಲ್ಲಿ ನಿರ್ದಿಷ್ಟತೆ ಇರಲಿ. ಅದು ಜಾಸ್ತಿ ಆದಲ್ಲಿ ನೀವು ಆಸ್ಪತ್ರೆಗೆ ಧಾವಿಸಬೇಕಾಗಿ ಬರುತ್ತದೆ. ೧೦ ನಿಮಿಷಗಳ ಕಾಲಾಂತರದಲ್ಲಿ ಸಂಕೋಚನಗಳು ಆಗುತ್ತಿದ್ದಲ್ಲಿ ಅದು ಸಾಮಾನ್ಯ, ಆದರೆ ಕೇವಲ ೫ ನಿಮಷಗಳ ಕಾಲಾಂತರದೊಂದಿಗೆ ೬೦ ಕ್ಷಣಗಳ ಕಾಲಾವಧಿಯ ಸಂಕೋಚನಗಳು ಆಗುತ್ತಿದ್ದಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ.

೭. ನಿಮ್ಮ ಮಗುವಿನ ತಲೆ ಹೊರತಳ್ಳುವ ಸಮಯದಲ್ಲಿ ಮಗುವಿನ ಹೊಕ್ಕಳು ಬಳ್ಳಿ ಮಗುವಿನ ಕುತ್ತಿಗೆಗೆ ಸುತ್ತಿಕೊಂಡಲ್ಲಿ, ನೀವು ಅಥವಾ ನಿಮ್ಮ ಸಹಾಯಕರು ಯಾರೇ ಆದರೂ ಮಗುವನ್ನು ಎಳೆಯುವುದನ್ನು ಮಾಡದಿರುವುದು ಅತ್ಯಂತ ಮುಖ್ಯವಾದುದು. ಮೆಲ್ಲನೆ ಆ ಬಳ್ಳಿಯನ್ನು ನಿಮ್ಮ ಮಗು ಹೊರಬುರುತಿರುವಂತೆ ಸಡಿಲಗೊಳಿಸುತ್ತಾ ಹೋಗಿ. ನಿವಾಗಿಯೇ ಬಳ್ಳಿಯನ್ನು ಕತ್ತರಿಸಲು ಮುಂದಾಗಬೇಡಿ, ಆಸ್ಪತ್ರೆ ಸಿಬ್ಬಂದಿ ಸಹಾಯಕ್ಕೆ ಬರುವವರೆಗು ಕಾಯಿರಿ.

೮. ನಿಮ್ಮ ಮಗುವಿನ ತಲೆ ಮಾತ್ರ ಹೊರಬಂದಿದ್ದು ಅದರ ಉಳಿದ ದೇಹ ಒಳಗಡೆಯೇ ಸಿಲುಕಿಕೊಂಡಲ್ಲಿ, ಅದನ್ನು ಹೊರತಳ್ಳಲು ನಿಮ್ಮ ಹೊಟ್ಟೆಯ ಮೇಲೆ ತುಂಬಾ ಒತ್ತಡ ಹೇರಬೇಡಿ ಅಥವಾ ಉಜ್ಜಬೇಡಿ. ದೀರ್ಘ ಉಸಿರು ತೆಗೆದುಕೊಳ್ಳುತ್ತಾ ಮಗುವನ್ನು ದೂಡಲು ಪ್ರಯತ್ನಿಸಿ. ಎಳೆಯುವುದಕ್ಕೆ ಮಾತ್ರ ಮುಂದಾಗದಿರಿ. ನಿಮ್ಮ ಮಗುವಿನ ತಲೆ ಸಂಪೂರ್ಣವಾಗಿ ಹೊರಬರುವವರೆಗೂ ನಿಮ್ಮ ಮಗುವನ್ನು ಮುಟ್ಟದಿರಿ. ನಿಮ್ಮ ಮಗುವಿನ ಬೆನ್ನು ಅಥವಾ ಪೃಷ್ಠ ಹೊರಬರುವಾಗ ಊದಿಕೊಂಡಂತೆ ಕಂಡರೆ ಮುಟ್ಟಲು ಹೋಗದಿರಿ.

೯. ನಿಮ್ಮ ಮಗು ಸಂಪೂರ್ಣವಾಗಿ ಹೊರಬಂದ ಮೇಲೆ ಅದನ್ನು ನಿಮ್ಮ ಹೊಟ್ಟೆಯೇ ಮೇಲೋ ಅಥವಾ ಎದೆಯ ಮೇಲೆ ತಂದುಕೊಲ್ಲೊಳು ಪ್ರಯತ್ನಿಸಿ. ಒಂದು ವೇಳೆ ಕರಳು ಬಳ್ಳಿ ಅಷ್ಟು ಉದ್ದವಿಲ್ಲದಿದ್ದಲ್ಲಿ,ನಿಮ್ಮ ಸ್ತನಗಳಲ್ಲಿ ಹಾಲೂಡಿಕೆಯನ್ನು ಉದ್ರೇಕಿಸಿ. ಇದು ಕರಳು ಬಳ್ಳಿಯನ್ನು ತಾನಾಗಿಯೇ ಕಡಿತಗೊಳ್ಳುವಂತೆ ಮಾಡುತ್ತದೆ.

೧೦. ಹೊದಿಕೆಗಳು, ಚೌಕಗಳ ಸಹಾಯದೊಂದಿಗೆ ನಿಮ್ಮ ಮಗುವನ್ನು ಬೆಚ್ಚಗೆ ಇಡಿ. ಸಹಾಯ ಸಿಬ್ಬಂದಿಗಳು ಬರುವವರೆಗೂ ನಿಮ್ಮ ಮಗುವನ್ನು ಬೆಚ್ಚಗೆ ಹಾಗು ಶುಚಿಯಾಗಿ ಇಡಿ.

೧೧. ನಿಮ್ಮ ಮಗು ಉಸಿರಾಡುತ್ತಿದೆಯಾ ಎಂದು ನೋಡಿ. ನಿಮ್ಮ ಮಗುವಿನ ಮೂಗಲ್ಲಿ ಲೋಳೆ ಅಥವಾ ಬೇರೆ ಏನಾದರು ದ್ರವ್ಯ ಪದಾರ್ಥಗಳು ಇದ್ದಲ್ಲಿ ಅದನ್ನು ಹೊರತೆಗಿಯಿರಿ. ನಿಮ್ಮ ಬೆರಳುಗಳಿಂದ ಅಥವಾ ಕ್ರಿಮಿಶುದ್ಧೀಕರಿಸಿದ ಬಟ್ಟೆಯಿಂದ ಮೂಗನ್ನ ಒರಸಿ. ಹೀಗೆ ಮಾಡಿದ ಮೇಲೆಯೂ ಮಗು ಉಸಿರಾಡದಿದ್ದಲ್ಲಿ ಮಗುವಿನ ಬೆನ್ನನ್ನು ಜೋರಾಗಿ ಉಜ್ಜಿ.

೧೨. ಗರ್ಭಚೀಲವನ್ನು ಹೊರಹಾಕಲು ತಯಾರಿ ಮಾಡಿಕೊಳ್ಳಿ. ನಿಮ್ಮ ಹೊಕ್ಕಳು ಕೆಳಗೆ ಹೊಟ್ಟೆಯ ಮೇಲೆ ಜೋರಾಗಿ ಉಜ್ಜಿಕೊಳ್ಳಿ. ನಿಮ್ಮ ಯೋನಿಯ ಮುಂದೆ ಬಟ್ಟಲು ಇಟ್ಟುಕೊಂಡು, ನಿಮ್ಮ ಗರ್ಭಚೀಲವನ್ನು ಹೊರತಳ್ಳಲು ಪ್ರಯತ್ನಿಸಿ. ಸ್ವಲ್ಪ ರಕ್ತಸ್ರಾವ ಆಗಬಹುದು, ಆದರೆ ವಿಚಲಿತರಾಗಬೇಡಿ. ಅದು ಸಾಮಾನ್ಯ.

ಇವುಗಳನ್ನು ಸಿದ್ಧವಾಗಿರಿಸಿಕೊಳ್ಳಲು ಮರೆಯದಿರಿ :

೧. ಸಹಾಯ ಸಿಬ್ಬಂದಿಗಳು ಆಗಮಿಸಲು ನಿಮ್ಮ ಮನೆಬಾಗಿಲು ತೆರೆದಿಡಿ. ನಿಮ್ಮ ನೆರೆಯವರನ್ನು ಆಗಲಿ ಅಥವಾ ಸೂಲಗಿತ್ತಿಯನ್ನು ಆಗಲಿ ಸಹಾಯಕ್ಕೆ ಕರೆಯಿರಿ.

೨. ಒಂದು ಬಟ್ಟಲಿನ ತುಂಬ ಬಿಸಿ ನೀರು.

೩. ಕ್ರಿಮಿಶುದ್ಧೀಕರಿಸಿರುವ ಚೌಕ, ಬಟ್ಟೆಗಳು ಹಾಗು ಒಂದು ಕೋಣೆ.

೪. ಕೋಣೆಯಲ್ಲಿ ಬೆಚ್ಚನೆ ತಾಪಮಾನ ಕಾಯ್ದುಕೊಳ್ಳಿ.   

Leave a Reply

%d bloggers like this: