herige-nantarada-nanna-modala-sambhoga-1

ತಾಯಿಯಾಗಲಿರುವ ಪ್ರತಿಯೊಂದು ಹುಡುಗಿ ಮನಸ್ಸಲ್ಲಿ ಕಾಡುವ ಪ್ರಶ್ನೆ ಎಂದರೆ ಅದು ಹೆರಿಗೆಯ ನಂತರ ತನ್ನ ಲೈಂಗಿಕ ಜೀವನ ಹೇಗಿರುತ್ತದೆ ಎಂದು, ಅದರಲ್ಲೂ ಹೆರಿಗೆ ನಂತರದ ತನ್ನ ಮೊದಲ ಮಿಲನಕ್ರಿಯೆ ಹೇಗಿರುತ್ತದೆ ಎಂದು. ಸುಖ ಸಿಗಲಿದೆಯೋ, ನೋವಾಗಲಿದೆಯೋ ಅಥವ ಏನೂ ಅನಿಸುವುದೇ ಇಲ್ಲವೋ ಅನ್ನೋ ಪ್ರಶ್ನೆಗಳು ಕಾಡುತಲಿರುತ್ತವೆ.

ತಮ್ಮ ಕಂದಮ್ಮಗಳ ಜನನದ ನಂತರ ನಡೆಸಿದ ಮಿಲನಕ್ರಿಯೆಯ ಬಗ್ಗೆ ತಾಯಂದಿರು ಬಿಚ್ಚಿಟ್ಟ ಗುಟ್ಟುಗಳು ಇಲ್ಲಿವೆ :

೧. “ಆತುರ ಉಲ್ಬಣವಾಯಿತು”

“ವೈದ್ಯರು ನಮಗೆ ಖಡಾಖಂಡಿತವಾಗಿ ಹೇಳಿದ್ದರು,ಮೂರು ತಿಂಗಳವರೆಗೆ ಏನು ಮಾಡುವಂತೆ ಇಲ್ಲ ಎಂದು.ಆದರೆ ವಿಷಯ ಏನಪ್ಪಾ ಅಂದರೆ ನನ್ನ ಪತಿ ನೋಡಲು ತುಂಬಾ ಮೋಹಕವಾಗಿ ಇದಾರೆ, ಹಾಗಾಗಿ ಅವರನ್ನ ನೋಡಿದಾಗಲೆಲ್ಲ ನಾನು ಉದ್ರೇಕಕ್ಕೆ ಒಳಗಾಗುತ್ತೇನೆ.ಹಾಗಾಗಿ, ರಾತ್ರಿ ಇಬ್ಬರು ಒಟ್ಟಿಗೆ ಸುಮ್ಮನೆ ಮಲಗಲು ಆಗಲೇ ಇಲ್ಲ.ಹಾಗು ಹೀಗೂ ಹೇಗೋ ಎರಡೂವರೆ ವಾರಗಳು ತಡೆದುಕೊಂದೆವು, ಆದರೆ ಒಂದು ರಾತ್ರಿ ಮಾತ್ರ ತಡೆಯಲಾರಾದೆ ಆ ಕ್ರಿಯೆ ನಡೆಸಿಯೇ ಬಿಟ್ಟೆವು.ಇದೆಲ್ಲ ಎಷ್ಟು ಬೇಗ ಆಯಿತೆಂದರೆ, ಅದು ಶುರು ಆಗಿ ಮುಗಿದದ್ದೇ ನಮಗೆ ತಿಳಿಯಲಿಲ್ಲ.ಏನು ನೆಡಿತಾ ಇದೆ ಎಂದು ಗಮನವಿರಲಿಲ್ಲ.ನಂಗೊತ್ತು ನಾವು ವೈದ್ಯರ ಮಾತು ಕೇಳಬೇಕು ಅಂತ,ಆದರೆ ನಾವು ಆ ದಿನ ಮಾಡಿದರ ಬಗ್ಗೆ ಬೇಸರ ಅಂತೂ ಏನು ಇಲ್ಲ”.

-ಸುಹಾನ , ೨೬

೨. “ಅದು ಕೇವಲ ನೋವಲ್ಲ”

“ಬೇಜಾರಿನ ವಿಷಯ ಏನಪ್ಪಾ ಅಂದರೆ, ನಾವು ತುಂಬಾ ದಿನ ಕಾದೆವು, ಎಲ್ಲಾ ಸರಿ ಹೋಗಲು ಸಮಯ ನೀಡಿದೆವು.ಏನೇನು ಕ್ರಮ ಕೈಗೊಳ್ಳ ಬೇಕಿತ್ತೋ ಎಲ್ಲವನ್ನು ನೋಡಿಕೊಂಡೆವು, ಆದರೂ ಅಂದುಕೊಂಡಂತೆ ಆ ದಿನ ನಡೆಯಲಿಲ್ಲ. ಆ ದಿನ ಕ್ರಿಯೆಯಲ್ಲಿ ತೊಡಗಿಕೊಂಡ ಮೇಲೆ ತುಂಬಾನೇ ನೋವಾಯಿತು.ಕೇವಲ ನೋವಾಯಿತು ಅಂದರೆ ಅದು ಸಮಂಜಸವಲ್ಲ. ಕೆಳಗಿನ ಭಾಗದಲ್ಲಿ ಆ ದಿನ ಮೊದಲೇ ನೋವಿದ್ದು, ಸಂಭೋಗ ಮಾಡಿದಾಗ ಕ್ರೂರ ನೋವಾಯಿತು.ಎಷ್ಟು ನೋವು ಎಂದರೆ ನಾವು ಅರ್ಧದಲ್ಲೇ ನಿಲ್ಲಿಸ ಬೇಕಾಯಿತು. ಆ ರಾತ್ರಿಯನ್ನ ನಾನು ಎಂದಿಗೂ ಮರೆಯೋಲ್ಲ. ಈಗಲೂ ಆ ಕ್ಷಣ ನೆನಪಾದರೆ ಮೈಯಲ್ಲಿ ನಡುಕ ಉಂಟಾಗುತ್ತದೆ. ಅದಾಗಿ ಈಗ ೨ ವರ್ಷಗಳು ಕಳೆದಿದ್ದು, ಈಗ ಯಾವ ನೋವು ಕಾಣಿಸಿಕೊಳ್ಳುವುದಿಲ್ಲ”.

-ಪ್ರೀತಿ , ೨೫

೩. “ಚೆನ್ನಾಗೇನೋ ಇತ್ತು, ಆದ್ರೆ ಅಂದುಕೊಂಡಷ್ಟು ಅಲ್ಲ”

“ಹೌದು, ಮೊದಲು ಮಜವಾಗಿ ಚೆನ್ನಾಗಿಯೇ ಇತ್ತು, ಆದರೆ ಸ್ವಲ್ಪ ಕ್ಷಣಗಳ ನಂತರ ಅದೆಲ್ಲ ಕುಗ್ಗಿತು.ಇದಕ್ಕೆ ನನ್ನ ಬಳಿ ಯಾವುದೇ ವಿವರಣೆ ಇಲ್ಲ. ತಪ್ಪು ತಿಳಿಯಬೇಡಿ, ಅದು ಚೆನ್ನಾಗಿಯೇ ಇತ್ತು, ಆದರೆ ನಾನು ಭಾವಿಸಿದಷ್ಟು ಚೆನ್ನಾಗಿ ಏನಿರಲಿಲ್ಲ”.

-ರಮ್ಯ ಎಂ ಟಿ, ೨೩

೪. “ಒಂದು ಮೋಜಿನ ಬೇಸಿಗೆಯ ಮಧ್ಯಾನ ”

“ನಾವು ನಮ್ಮ ಪುಟ್ಟ ಮಗಳ ಹಾರೈಕೆಯಲ್ಲಿ ಎಷ್ಟೊಂದು ತೊಡಗಿಸಿಕೊಂಡಿದ್ದೆವು ಎಂದರೆ, ಅದೊಂದು ಬೇಸಿಗೆಯ ದಿನದ ಮಧ್ಯಾನದ ವರೆಗೂ ನಮಗೆ ಈ ಕಾರ್ಯದ ಬಗ್ಗೆ ಗಮನವೇ ಇರಲಿಲ್ಲ. ನಿಜ ಹೇಳ್ಬೇಕಂದ್ರೆ ನಾವು ಇಲ್ಲಿಯವರೆಗೂ ನಡೆಸಿದ ಮಿಲನಕ್ರಿಯೆಗಳಲ್ಲಿ ಅತಿ ಹೆಚ್ಚು ಇಷ್ಟ ಆಗಿದ್ದು ಆ ಮಧ್ಯಾನ ನಡೆಸಿದ್ದು. ಸಂಭೋಗ ಕ್ರಿಯೆ ನಡೆಸಿಯೇ ಎಷ್ಟೋ ದಿನಗಳು ಆಗಿದ್ದರಿಂದ, ಅದು ಮತ್ತೆ ನಮಗೆ ಮೊದಲ ಬಾರಿ ಮಾಡಿದಂತೆ ಅನಿಸಿತು. ನನಗೆ ಯಾವುದೇ ರೀತಿ ತೊಂದರೆ ಆಗದೆ, ಒತ್ತಾಯ ಮಾಡದೆ, ಅವರು ಮೃದುವಾಗಿ, ಮೆಲ್ಲನೆ ಸಂಭೋಗ ಕಾರ್ಯ ನಡೆಸಿದರು ”.

-ಲಕ್ಷ್ಮಿ , ೨೯

೫.”ನಂಬಲು ಆಗದಷ್ಟು ಅದ್ಭುತವಾಗಿತ್ತು”

“ವಿಷಯ ಏನಪ್ಪಾ ಅಂದರೆ ನಾವು ಅವಾಗ ಕೇವಲ ಒಂದೇ ಕೋಣೆ ಇರುವ ಮನೆಯಲ್ಲಿ ವಾಸವಿದ್ದೆವು. ನಾವು ಮೂರು ಜನ ಇರೋದಕ್ಕೆ ಅಷ್ಟು ಸಾಕಾಗಿತ್ತು, ಆದರೆ ಒಂದು ದಿನ ಗ್ರಹಗಳೆಲ್ಲ ಕೂಡಿ ಬಂದಾಗ, ಒಂಥರಾ ಮುಜುಗರ ಶುರುವಾಯಿತು. ಹೆರಿಗೆ ನಂತರ ಮೊದಲ ಬಾರಿಗೆ ನಾವು ಒಬ್ಬರನ್ನೊಬ್ಬರು ಮುಟ್ಟಿಕೊಳ್ಳುತ್ತಿರುವಾಗ, ಮಗುವಿನ ಜೋರು ಅಳುವಿನಿಂದ, ನಾಚಿಕೆಗೊಂದು ಅರ್ಧದಲ್ಲೇ ನಿಲ್ಲಿಸ ಬೇಕಾಯಿತು.ಆಮೇಲಿಂದ ನಾವು ಇನ್ಮುಂದೆ ಅದನ್ನು ಮಾಡಲೇ ಬೇಕೆಂದರೆ, ನಾವು ಇಬ್ಬರು ಮಾತ್ರ ಇದ್ದಾಗ ಮಾಡಬೇಕೆಂದು.ಅವಾಗ ನನ್ನ ಉಳಿಸೋದಕ್ಕೆ ಬಂದವರೇ ನಮ್ಮ ಅಮ್ಮ.ನಮ್ಮಮ್ಮ ನಮ್ಮ ಮಗುವನ್ನು ಒಂದು ರಾತ್ರಿ ತಮ್ಮ ಮನೆಗೆ ಕರೆದೊಯ್ದರು.ಆಗ ಸಿಕ್ಕಿದು ನಮಗೆ ಏಕಾಂತ.೧೦೦% ಖಚಿತವಾಗಿ ಹೇಳುತ್ತೇನೆ, ನಾವು ಸೇರಿದ ದಿನಗಳಲ್ಲಿ, ಅದು ಮಾತ್ರ ಅವಿಸ್ಮರಣೀಯ”.

 -ರೋಸ್,೩೦

೬.”ಅಲ್ಲಿಗೆ ಗಾಜಿನ ಚೂರು ತುರುಕಿದಂತೆ”

“ಮೊದಲು ನಾವು ಏನೇನು ಮಾಡಬೇಕು ಎಂದು ನಿರ್ಧರಿಸಿದ್ದೆವು.ಸುಘಂದಿತ ದ್ರವ್ಯ ಉಳ್ಳ ಮೊಂಬತ್ತಿಗಳನ್ನು ಹಚ್ಚಿದ್ದೆವು, ನನ್ನ ನಾರುಡುಪನ್ನು ಆಯ್ಕೆ ಮಾಡಿದ್ದೆವು, ಗರಿಗರಿ ಹೊದಿಕೆಗಳನ್ನು ಹಾಸಿದ್ದೆವು, ಕೋಣೆಯನ್ನು ಬೆಚ್ಚನೆ,ಮಂದ ಬೆಳಕಿನಲ್ಲಿ ಇರಿಸಿದ್ದೆವು.ಎಲ್ಲಾ ಸರಿಯಾಗಿ ಅಂದುಕೊಂಡಂತೆಯೇ ನಡೆಯುತ್ತಿತ್ತು, ಆದರೆ ಶುರುವಿನಲ್ಲಿ ನನಗೆ ಸ್ವಲ್ಪ ನೋವು ಕಾಣಿಸಿತು.ವಿಷ್ಯ ಏನಪ್ಪಾ ಅಂದರೆ ನನ್ನ ಪತಿ ಈ ಭೂಮಿಯ ಮೇಲಿನ ಅತ್ಯಂತ ಮೃದುಮನಸ್ಸಿನ ವ್ಯಕ್ತಿ.ಅವನಿಗೆ ನನ್ನನ್ನು ಒತ್ತಾಯಪಡಿಸಲು ಇಷ್ಟವಿರಲಿಲ್ಲ, ಆದರೆ ನನಗೆ ಮಾಡಿಯೇ ತೀರುವುದಿತ್ತು.ಹಾಗಾಗಿ ನಾವು ಮುಂದುವರೆಸಿದೆವು, ಆದರೆ ತಪ್ಪಾಗಿದ್ದೇ ಇಲ್ಲಿ.ನನಗೆ ಆ ಭಾಗದ ಒಳಗೆ ಗಾಜಿನ ಚೂರು ತುರುಕಿದಂತೆ ಭಾಸವಾಯಿತು.ನನಗೆ ಎಷ್ಟು ನೋವಾಯಿತು ಎಂದರೆ,ನಾನು ಅಳುವುದಿಕ್ಕೆ ಶುರು ಮಾಡ್ಬಿಟ್ಟೆ.ಆಗ ನಾವಿಬ್ಬರು ಕಾರ್ಯವನ್ನು ನಿಲ್ಲಿಸಿ ಕೆಳಗೆ ನೋಡಿದರೆ, ಒಗೆದ ಹೊದಿಕೆಯ ಮೇಲೆ ರಕ್ತದ ಕಲೆಯಾಗಿತ್ತು. ನನಗೆ ಏನು ಮಾಡಬೇಕೆಂದು ತಿಳಿಯದೆ, ನಾಚಿಕೆಯಲ್ಲಿ ಕೋಣೆಯಿಂದ ಎದ್ದು ಆಚೆ ಓಡಿಹೋದೆ. ಆದರೆ ನನ್ನ ಗಂಡನಿಗೆ ಏನು ಮಾಡಬೇಕೆಂದು ಸರಿಯಾಗಿ ತಿಳಿದಿತ್ತು. ನನಗೆ ಮುಂದೆ ನೆನಪಿರುವುದು ಎಂದರೆ, ಹಾಲ್ ನಲ್ಲಿ ಸೋಫಾ ಮೇಲೆ ಕುಳಿತ ನನಗೆ ಅವರು ಟೀ ತೆಗೆದುಕೊಂಡು ಬಂದದ್ದು. ಇಡೀ ರಾತ್ರಿ ೪ ಜನ ಕುಳಿಯಬಹುದಾದ ಸೋಫಾ ಮೇಲೆ ಇಬ್ಬರು ಮುದ್ದಾಡುತ್ತ ಕಾಲ ಕಳೆದೆವು”.

-ನಿರ್ಮಲ ಎಲ್,೨೨

೭. “ನಾವು ಮತ್ತೆ ಮೊಲಗಳಾಗಿದ್ದೇವೆ, ಮನೆಯಲ್ಲ ಜಿಗಿಯುತ್ತ , ತುಂಟಾಟ ಆಡುತ್ತ ”

“ನೀವು ಅರ್ಥ ಮಾಡಿಕೋಬೇಕು ನಾವು ಬೇಗನೆ ಮದುವೆಯಾದ ಬಿಸಿಯಲ್ಲಿದ್ದ ಎರಡು ಪ್ರೇಮಪಕ್ಷಿಗಳು ಅಂತ. ಹಾಗಾಗಿ ನಮಗೆ ತುಂಬಾನೇ ಉತ್ಸಾಹ ಮತ್ತು ಶಕ್ತಿ ಇತ್ತು. ಇದರಿಂದ ಕೇವಲ ಒಮ್ಮೆ ಅಲ್ಲದೆ, ಹಲವು ಬಾರಿ ಕ್ರಿಯೆಗಳಲ್ಲಿ ದಿನ ಕಳೆಯುತ್ತಿದೆವು.ಅದೊಂದು ಭಾನುವಾರ, ನಮ್ಮ ಮಗ ಅವನ ಅಜ್ಜಿಯ ಮನೆಗೆ ಹೋಗಿದ್ದ. ಹಾಗಾಗಿ ಇಡೀ ಮನೆ ನಮ್ಮ ವಶವಾಗಿತ್ತು. ಮೊದಲಿಗೆ ಎಲ್ಲರಂತೆ ಬೆಡ್ರೂಮ್ ನಲ್ಲೆ ನಾವು ಶುರು ಮಾಡಿ, ನಂತರ ಎಲ್ಲಾ ಕೋಣೆಗಳಲ್ಲಿ ಮುಂದುವರೆಸಿದವು. ಆ ಮೋಜಿನ ದಿನಗಳು ಮರುಕಳಿಸಿದಂತೆ ಆಯಿತು. ನಾವು ಮತ್ತೆ ಮೊಲಗಳಾದೆವು, ಮನೆಯಲ್ಲಾ ಜಿಗಿಯುತ್ತಾ, ತುಂಟಾಟ ಆಡುತ್ತಾ. ನನಗೆ ಇಷ್ಟೊಂದು ಉತ್ಸಾಹ ಎಂದಿಗೂ ಆಗಿರಲಿಲ್ಲ”.

-ಕಾವೇರಿ ಎಚ್,೨೨

Leave a Reply

%d bloggers like this: