ನಿಮ್ಮ-ಮಗುವಿಗೆ-ನಿದ್ದೆ-ಮಾಡುವುದು-ಹೇಳಿಕೊಡುವಾಗ-ಮಾಡಬಾರದ-೭-ಕೆಲಸಗಳು-

೧.  ನಿದ್ದೆಗೆ ನಿಗದಿತ ಸಮಯ ಇರಿಸದೆ ಇರುವುದು

ನಿಮ್ಮ ಮಗುವನ್ನು ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿಸಿದರೆ, ಪ್ರತಿದಿನ ಆ ಸಮಯಕ್ಕೆ ಮಗುವಿಗೆ ಸ್ವಾಭಾವಿಕವಾಗಿ ನಿದ್ದೆ ಬರುತ್ತದೆ. ಇದನ್ನು ಪ್ರತಿದಿನ ಪೋಷಕರು ಪಾಲಿಸಬೇಕು. ಇದು ಕೇವಲ ನಿಮ್ಮ ಮಗುವಿಗೆ ನಿದ್ದೆ ಮಾಡುವುದನ್ನು ಹೇಳಿಕೊಡುವುದಲ್ಲದೆ, ಅದರ ಜೀವನ ಪರ್ಯಂತ ಈ ಸಮಯ ನಿದ್ದೆಗೆಂದು ನಿಯತವಾಗುತ್ತದೆ.

೨. ನಿದ್ದೆ ತರಿಸಲು ಚಲನೆಯನ್ನು ಉಪಯೋಗಿಸುವುದು

ಚಲನೆಯು ನಮ್ಮಲ್ಲಿ ಸ್ವಾಭಾವಿಕವಾಗಿ ನಿದ್ದೆಯನ್ನು ತರಿಸುತ್ತದೆ. ಹಾಗಾಗಿಯೇ ನಾವು ಕಾರಿನಲ್ಲಿ ಚಲಿಸುವಾಗ ಅಥವಾ ವಿಮಾನದಲ್ಲಿ ಸಂಚರಿಸುವಾಗ ನಮಗೆ ನಿದ್ದೆ ಬರುವುದು. ಆದರೆ ಮಗುವಿಗೆ ಬೇಕಾಗಿರುವ ಆಳವಾದ ನಿದ್ರೆ ಇದಲ್ಲ. ನೀವು ಇದನ್ನು ಮಾಡುವುದರಿಂದ ಮುಂದೆ ನಿಮ್ಮ ಮಗು ಆಳವಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ ಹಾಗು ತುಸು ಕದಡಿದರು ಎಚ್ಚರವಾಗುವಂತೆ ಆಗುತ್ತದೆ. ಅಕಸ್ಮಾತ್  ನಿಮ್ಮ ಮಗು ಮಲಗುವುದಕ್ಕೆ ತುಂಬಾ ಹಠ ಮಾಡಿದರೆ,  ನಿದ್ದೆ ಬರುವಂತೆ ಮಾಡಲು ಚಲನೆಯನ್ನು ಬಳಸಿ, ಆದರೆ ಮಗುವನ್ನು ಬೆಡ್ ನ ಮೇಲೆ ಅಥವಾ ತೊಡೆ ಮೇಲೆ ಮಲಗಿಸಿಕೊಂಡು ನಿದ್ರೆಗೆ ಜಾರಿಸಿ.

೩. ತುಂಬಾ ತಡವಾಗಿ ಮಲಗಲು ಬಿಡುವುದು

ತಿಂಗಳಲ್ಲಿ ಒಮ್ಮೆ ಅಥವಾ ಎರಡು ಬಾರಿ ನಿಮ್ಮ ಮಗುವನ್ನು ತಡವಾಗಿ ಮಲಗಿಸದರೆ ಪರವಾಗಿಲ್ಲ, ಆದರೆ ಅದೇ ಅಭ್ಯಾಸವಾಗಬಾರದು. ಇದನ್ನು ಅವರು ತಮ್ಮ ಜೀವನದ ಪರ್ಯಂತ ಪಾಲಿಸಿಕೊಂಡು ಹೋಗುವ ಸಾಧ್ಯತೆ ಹೆಚ್ಚು. ಇದು ಕೇವಲ ಅವರಲ್ಲಿ ಆಯಾಸ ಉಂಟು ಮಾಡುವುದಲ್ಲದೆ, ಅವರಲ್ಲಿ ತಾಮಸ ಮಾಡುತ್ತದೆ. ಕನಿಷ್ಠ ೧೦ ಘಂಟೆಗಳ ನಿದ್ದೆ ತುಂಬಾ ಅವಶ್ಯಕ.

೪. ನಿದ್ರೆ ಕಡಡಿಸುವಂತ ವಾತಾವರಣ

ಮಗು ಮಲಗುವ ಜಾಗ ಮಗುವಿಗೆ ಉತ್ತೇಜನ ನೀಡುವಂತೆ ಇದ್ದರೆ, ಮಗುವಿಗೆ ನಿದ್ರೆಗೆ ಜಾರುವುದು ಕಷ್ಟವಾಗುತ್ತದೆ. ಶಬ್ದ ಮಾಡುವ ಆಟಿಕೆಗಳು, ಮಿತುಕುತ್ತಿರುವ ಬೆಳಕು ಅಥವಾ ಚಲಿಸುವ ಆಟಿಕೆಗಳು ಇದ್ದಾರೆ, ಅವುಗಳು ಮಗುವಿನ ಗಮನ ಆಟದ ಕಡೆ ಸೆಳೆದು ನಿದ್ರೆಯನ್ನು ಹಾಳು ಮಾಡುತ್ತವೆ.

೫. ಸೂಕ್ತವಲ್ಲದ ಕೋಣೆ ಸ್ತಿಥಿ

ಮಕ್ಕಳು ಕತ್ತಲಿಗೆ ಹೆದುರುತ್ತವೆ ಎಂದು ಹಾಗು ಅವುಗಳನ್ನು ಮಲಗಿಸಲು ಮಂದ ಬೆಳಕಾದರೂ ಇರಬೇಕೆಂದು ನಾವು ಅಂದುಕೊಂಡಿದ್ದೀವೆ. ಆದರೆ ವಾಸ್ತವದಲ್ಲಿ ಮಗು ಮಲಗಲು ಕತ್ತಲೆಯಿಂದ ಕೂಡಿದ ತಂಪು ಕೋಣೆ ಸೂಕ್ತ. ಹೀಗೆ ಮಾಡಿದರೆ ಮುಂದೆ ಮಗುವಿಗೆ ಕತ್ತಲಿನ ಭಯ ಇರುವುದಿಲ್ಲ ಹಾಗು ಕೋಣೆಯನ್ನು ಕಟ್ಟಲು ಮಾಡಿದ ತಕ್ಷಣ ಅವರು ನಿದ್ರೆಗೆ ಜಾರುತ್ತಾರೆ.

೬. ಅವರ ಅಳುವಿಗೆ ಮನಸೋಲುವುದು

ಮಕ್ಕಳು ತಮ್ಮ ಬೇಡಿಕೆಗಳನ್ನು ಈಡೇರೆಸಿಕೊಳ್ಳಲು ಅಳು ಎಂಬ ಅಸ್ತ್ರವನ್ನು ಉಪಯೋಗಿಸುತ್ತಾರೆ.ಅವರ ಕಣ್ಣೀರಿಗೆ ನೀವು ಮರಳಾಗದೆ, ನೀವು ನಿಷ್ಟೂರತೆಯಿಂದ ನಿಯಮಗಳನ್ನು ರೂಪಿಸದ್ದಲ್ಲಿ ನೀವು ಮಗುವಿಗೆ ನಿದ್ದೆ ಮಾಡುವುದನ್ನು ಕಲಿಸುವದರಲ್ಲಿ ಸಫಲಕಾರಿ ಆಗುತ್ತೀರಿ. ಇದು ಮಕ್ಕಳ ತಂತ್ರಗಳಿಗೆ ಒಲಿಯದಿರುವದಕ್ಕೆ ಉಪಯುಕ್ತ, ಏಕೆಂದರೆ ಹೀಗೆ ಮಾಡದಿದ್ದಲ್ಲಿ ಅತಿಯಾದ ಮುದ್ದಿನಿಂದ ಅವರು ಶಿಸ್ತಿಲ್ಲದೆ ಹಾಳಾಗುವರು.

೭. ಪದೇ ಪದೇ ಬಂದು ನೋಡುವುದು

ಇದು ತುಂಬಾ ಮುಗ್ಧವೆನಿಸಬಹುದು, ಇದು ಮುಗ್ಧವೇ. ಆದರೆ, ಇದು ನಿಮ್ಮ ಮಗುವನ್ನು ಎಚ್ಚರಿಸಬಹುದು ಹಾಗು ಅದರ ನಿಯತವಾಗಿ ಆಗಬೇಕಿದ್ದ ನಿದ್ದೆ ಹಾಳಾಗಬಹುದು. ನೀವು ಇದನ್ನು ಮಾಡುತ್ತಲೇ ಇದ್ದಾರೆ, ನಿಮ್ಮ ಮಗುವಿಗೆ ಮುಂದೆ ದೈನಂದಿನವಾಗಿ ಕದಡಿದ ನಿದ್ರೆ ಅನುಭವಿಸಬೇಕಾಗುತ್ತದೆ. ಇದು ಅವರಿಗೆ ದಿನವೆಲ್ಲ ಆಯಾಸವನ್ನು ಉಂಟು ಮಾಡಿ ಅವರ ಉತ್ಪನ್ನತೆಯನ್ನು ಕ್ಷೀಣಿಸುತ್ತದೆ. ಅವರನ್ನು ಆಗಾಗ ನೋಡಿ ಬರುವುದು ಒಳ್ಳೆಯದೇ, ಆದರೆ ನೀವು ಯಾವದೇ ಶಬ್ದ ಅಥವಾ ನಿದ್ದೆ ಕದಡುವ ಇನ್ನಿತರ ಚಲನೆಗಳ ಬಗ್ಗೆ ಹುಷಾರಾಗಿರಿ.

Leave a Reply

%d bloggers like this: