ammandiriginta-appandiru-chennagi-maaduva-7-kelasagalu-1

ಪೋಷಣೆ ಎಂದರೆ ಅಲ್ಲಿ ಎಲ್ಲರಿಗೂ ಕಾಣುವುದೇ ಅಮ್ಮ. ಊಟ ಮಾಡಿಸುವುದು, ಓದಿಸುವುದು, ಬಟ್ಟೆ ಹಾಕಿಸುವುದು, ಶಾಲೆಗೇ ಶಿಕ್ಷಕರೊಡನೆ ಮಾತಾಡಲು ಬರುವುದು, ವೈದ್ಯರ ಬಳಿ ಕರೆದುಕೊಂಡು ಹೋಗುವುದು. ಆದರೆ, ಮಗುವಿನ ಪೋಷಣೆಯಲ್ಲಿ ತಂದೆಯ ಕೊಡುಗೆಯನ್ನು ಅಲ್ಲಗಳೆಯುವಂತೆ ಇಲ್ಲ. ಅಮ್ಮನು ಗುಂಡಿಯಾಗಿದ್ದರೆ, ಅಪ್ಪನು ಅದನ್ನು ಹಿಡಿದಿಟ್ಟಿರುವ ದಾರದಂತೆ.ಹೀಗಿರುವಾಗ ಎಷ್ಟೋ ಸಮಯದಲ್ಲಿ ತಾಯಿಗಿಂತ ತಂದೆಯ ಪಾತ್ರವೇ ಹಿರಿದಾಗಿರುತ್ತದೆ.

೧. ಕೂಸುಮರಿ ಮಾಡುವುದು  

ಸವಾರಿ ಮಾಡೋದಕ್ಕೆ ಅತ್ಯಂತ ಆರಮಾಕರಿ ವಾಹನ ಅಂದರೆ ಅದು ತಂದೆಯ ಭುಜ. ಮಗುವಿಗೆ ಸುಸ್ತಾಗಿದೆಯಾ? ಪರವಾಗಿಲ್ಲ, ವಿಶ್ರಾಂತಿ ಮಾಡೋಕೆ ಅಪ್ಪನ ಭುಜ ಇದೆ. ಮಗುವಿಗೆ ನಿದ್ದೆ ಬಂದಿದೆಯಾ? ಪರವಾಗಿಲ್ಲ! ಮಗು ಮಲಗಲಿಕ್ಕೆ ಅಪ್ಪನ ಭುಜಕ್ಕಿಂತ ಹಿತಕರವಾದ ಬೆಡ್ ಯಾವುದಿದೆ? !  ಒಹ್ ಮೃಗಾಲಯಕ್ಕೆ ಹೋದಾಗ ಮಗುವಿಗೆ ಹುಲಿ ಕಾಣುತ್ತಿಲ್ಲವಾ? ಪರವಾಗಿಲ್ಲ ! ಅಪ್ಪನ ಭುಜದ ಮೇಲೆ ಏರಿದರೆ ಎಲ್ಲಾ ಗೋಚರ ! ಮಗುವು ಒಂದು ಖುಷಿಯ ಸವಾರಿ ಮಾಡಬೇಕೆ? ಅಪ್ಪ ಆಡಿಸುವ ಉಪ್ಪುಮೂಟೆ ಹೊರುವ ಆಟಕ್ಕಿಂತ ಬೇರೇ ಬೇಕೆ? ಥ್ಯಾಂಕ್ಸ್ ಅಪ್ಪಾ !

೨. ಆಟ ಆಡುವುದು 

ಯಾರು ಇಲ್ಲ! ಯಾರು ಇಲ್ಲ! (ಅತಿ ಉತ್ಸಾಹ ತೋರುವ ಯಾವುದೋ ಒಂದು ಸಂಬಂಧಿ ಬಿಟ್ಟು) ನಿಮ್ಮ ಮುದ್ದು ಮಗುವಿನೊಂದಿಗೆ ಆಟ ಆಡುವುದರಲ್ಲಿ ಅಪ್ಪನನ್ನು ಮೀರಿಸುವವರು. ಅಪ್ಪಂದಿರು ಮಕ್ಕಳನ್ನು ಖುಷಿ ಪಡಿಸಲೆಂದೇ ತಯಾರಿಗುರತ್ತಾರೆ. ಮನೆಯೇ ಇರಲಿ, ಮೈದಾನವೇ ಇರಲಿ ಅಥವಾ ಯಾವುದೇ ಮೋಜಿನ ತಾಣವೇ ಇರಲಿ, ನಿಮ್ಮ ಮಗುವನ್ನು ಖ್ಸುಹಿ ಪಡಿಸುವದರಲ್ಲಿ ಅವರು ಹಿಂದೆ ಬೀಳುವುದೇ ಇಲ್ಲ. ಅವರು ಅದರಲ್ಲಿ ಎಷ್ಟು ಮಗ್ನರಾಗಿರುತ್ತಾರೆ ಎಂದರೆ, ಅವರ ಒಳಗಿನ ಒಂದು ಮಗು ಕೂಡ ಕುಣಿದು ಕುಪ್ಪಳಿಸುತ್ತಿರುತ್ತದೆ.

೩. ಹೋಂ ವರ್ಕ್ ಮಾಡಿಸುವುದು  

ನಾವು ಚಿಕ್ಕವರಿದ್ದಾಗ ನಮ್ಮ ಹೋಂ ವರ್ಕ್ ಮಾಡಿಸಲು ಅಮ್ಮ ಎಷ್ಟು ಗೋಗರೆದು ಪರದಾಡಿದರು ನಾವು ಜಾರಿಕೊಳ್ಳೋದಕ್ಕೆ ಪ್ರಯತ್ನಿಸುತ್ತಿದೆವು ಎಂಬುದು ನೆನಪಿದೆ. ಆದರೆ ಅಪ್ಪ ಒಮ್ಮೆ ಮನೆಗೆ ಬಂದೊಡನೆ, ನಾವು ಓಡಿ ಹೋಗಿ ಟೇಬಲ್ ನ ಮುಂದೆ ಕುಳಿತು ನಮ್ಮ ಕೆಲಸವನ್ನು ಮುಗಿಸಿ ಬಿಡುತ್ತಿದೆವು. ಹಾಗು ನಮಗೆ ಶಾಲೆಯಲ್ಲಿ ಮಾಡಿದ ಪಾಠ ಯಾವುದಾದರು ಅರ್ಥವಾಗಿರಲಿಲ್ಲ ಎಂದರೆ, ಅಪ್ಪ ಎಷ್ಟೇ ದಣಿದಿರಲಿ, ನಮ್ಮನ್ನು ಕೂರಿಸಿಕೊಂಡು ಅರ್ಥ ಮಾಡಿಸುತ್ತಿದ್ದರು.

೪. ದ್ರುಷ್ಟಿಗೊಂಬೆ ಆಗಿ  

ಮನೆಗೆ ಅಪ್ಪನೇ ದ್ರುಷ್ಟಿಗೊಂಬೆ. ತಪ್ಪು ತಿಳಿಬೇಡಿ! ನಾನು ಒಳ್ಳೆಯ ಅರ್ಥದಲ್ಲೇ ಹೇಳಿದ್ದು. ಇದನ್ನು ನೆನೆಸಿಕೊಳ್ಳಿ, ಅಮ್ಮ ಮಗುವಿಗೆ ಶಾಲೆಗೆ ಸಮಯವಾಗುತ್ತೆಂದು, ಬೇಗನೆ ಮಂಚದಿಂದ ಎದ್ದು ಬಂದು ಹಲ್ಲು ಉಜ್ಜುವಂತೆ ಒಂದು ನೂರು ಬಾರಿ ಬಡಿದುಕೊಂಡರು ಏನು ಉಪಯೋಗವಗಿರಲ್ಲ. ಅದೇ, ಅಪ್ಪ ಕೋಣೆಗೆ ಬಂದೊಡನೆ, ಎಲ್ಲಿಲ್ಲದ ವೇಗದಲ್ಲಿ ಮಗು ಮಂಚದಿಂದ ಎದ್ದು ಶೌಚಾಲಯದ ಕಡೆ ಓಡಿ ಹೋಗುತ್ತದೆ.ಹೆಂಗೆ ಅಂದುಕೊಂಡಿರ? ಅಪ್ಪಂದಿರ ತಾಕತ್ತೇ ಅದು !ಒಂದು ಕಡೆ ಪಾಪ ಅಮ್ಮ ಎಷ್ಟು ಗೋಗರೆದು ಮಾಡಿದರು ಆಗದ ಕೆಲಸ, ಅಪ್ಪಂದಿರಲ್ಲಿರುವ ಆ ಮಾಂತ್ರಿಕ ಶಕ್ತಿ ಒಂದು ಪದವೂ ಆಡದೆ ,ಎಲ್ಲ ಕೆಲಸ ಮಾಡಿಸುತ್ತದೆ!

೫. ತಿನ್ನುವಾಗ/ಮಲಗುವಾಗ

 ಅಮ್ಮಂದಿರ, ಇಲ್ಲಿ ಕೇಳಿಸಿಕೊಳ್ಳಿ, ನಿಮ್ಮ ಮನೆಯಲ್ಲಿ ನಿಮಗೆ ಅತ್ಯುತ್ತಮ ಬಾಣಸಿಗ ಎಂಬ ಪಟ ಸಿಕ್ಕಿರಬಹುದು, ಆದರೆ ಅತ್ಯುತ್ತಮ ಉಣಿಸಿಗ ಪಟ್ಟ ಮಾತ್ರ ಅಪ್ಪಂದಿರಿಗೆ ಮೀಸಲು. ಮಗು ಚಪಾತಿ ಜೊತೆ ಸೋರೇಕಾಯಿ ಪಲ್ಯ ತಿನ್ನಲ್ಲವೆಂದು ಹಠ ಹಿಡಿದಿದೆಯಾ? ಹಾಗಾದ್ರೆ ಆ ವಿಷಯವನ್ನ ಅಪ್ಪಂದಿರಿಗೆ ಬಿಟ್ಟು ಬಿಡಿ. ಅಪ್ಪಂದಿರು ಊಟವನ್ನು ಮಗು ಖಾಲಿ ಮಾಡುವ ಹಾಗೆ ಮಾದದಷ್ಟೇ ಅಲ್ಲದೆ ನೀವು ಅದ್ರುಷ್ಟವಂತರಾಗಿದ್ದರೆ, ಇನ್ನು ಜಾಸ್ತಿ ಕೇಳುವಂತೆ ಮಾಡುತ್ತಾರೆ. ಆಮೇಲೆ ಅಪ್ಪಂದಿರಿಗೆ ಮಗುವನ್ನು ಹೇಗೆ ನಿದ್ದೆಗೆ ಕಳಿಸಬೇಕೆಂದು ಕೂಡ ಗೊತ್ತಿರುತ್ತದೆ. ಹೇಗೆ ಅಂದಿರಾ? ಅದೇ ಅವರ ರಹಸ್ಯ!

೬. ಕುರುಕಲು ತಿನ್ನಿಸಿ ಹಾಳು ಮಾಡುವುದು  

ಅಪ್ಪಂದಿರು ಬೇರೇ ಸಮಯದಲ್ಲಿ ಗಂಭಿರವಾಗಿ ಕಾಣಬಹುದು ಹಾಗು ಮಗುವಿನ ಆಹಾರದ ಬಗ್ಗೆ ಕಟ್ಟುನಿಟ್ಟು ಮಾಡಬಹುದು. ಆದರೆ, ನೀವು ಒಂದೆರೆಡು ದಿನ ಮನೆಯಲ್ಲಿ ಇಲ್ಲವೆಂದರೆ, ಮಗುವಿಗೆ ಬೆಳ್ಳಂಬೆಳಗ್ಗೆ ತಿಂಡಿಗೆ ಐಸ್ ಕ್ರೀಂ, ಮಧ್ಯಾನ ಊಟಕ್ಕೆ ಪಿಜ್ಜಾ, ರಾತ್ರಿ ಊಟಕ್ಕೆ ಬನ್ನು, ಬರ್ಗರ್ರು  ಕೊಡಿಸುವುದನ್ನು ಅಪ್ಪಂದಿರಿಂದ ಅಪೇಕ್ಷಿಸಲು ಮಾತ್ರ ಸಾಧ್ಯ!

೭. ವಿನಾಶಕನಾಗಿ 

ಭಾರತ ದೇಶದಲ್ಲಿ ವಾಸಿಸುವ ತಂದೆಯರ, ಮಾಡಲೇಬೇಕಾದ ಕರ್ತವ್ಯ ಇದು. ಅಮ್ಮ ಒಂದು ಜಿರಳೆ ನೋಡಿ ಕಿರುಚಿಕೊಂಡರೆ ಮನೆಯಲ್ಲಿರುವ ಮಕ್ಕಳು, ಮಾವ ಅತ್ತೆಯರು, ಅಕ್ಕ ಪಕ್ಕದವರೂ ಸಹ ಬೆಚ್ಚಿ ಬೀಳಬೇಕು. ಆದರೆ, ಅಪ್ಪ ಒಬ್ಬರನ್ನು ಬಿಟ್ಟು. ಅಪ್ಪ ಹೀರೋ ಥರ ಕೋಣೆಯೊಳಗೆ ಬಂದು, ಆ ಜಿರಳೆಯನ್ನು ಸರಾಗವಾಗಿ ಹಿಡಿದು ಸರಾಗವಾಗಿ ಆಚೆ ಎಸೆಯುತ್ತಾರೆ ! ಆಗ ಮತ್ತೊಮ್ಮೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ !

ಮಕ್ಕಳನ್ನು ಸಾಕುವುದು ಸಾಧಾರಣ ಸಾಧನೆ ಅಲ್ಲ ಹಾಗೂ ಅದರಲ್ಲಿ ತಂದೆಯರ ಪಾತ್ರ ಮೇಲೆ ಪ್ರಸ್ತಾಪಿಸಿದ ವಿಷಯಗಳಿಗಿಂತ ತುಂಬಾ ಮಿಗಿಲಾದದ್ದು. ವಾಸ್ತವದಲ್ಲಿ , ಈಗಿನ ಕಾಲದಲ್ಲಿ ಅಪ್ಪ ಮತ್ತು ಅಮ್ಮ ಆಗಾಗ ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಂಡು ಮಗುವಿನ ಪೋಷಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಅದಕ್ಕೆ ಹೇಳುವುದು “ದರ್ಬಾರು ಅಮ್ಮನದೇ ಇರಬಹುದು, ಆದರೆ ಸದ್ದು ಮಾಡುವುದು ಅಪ್ಪನೇ” ಎಂದು !

Leave a Reply

%d bloggers like this: