herige-nantarada-ee-7-amshagalu-streerogatagnyara-bheti-maadalu-soochane-1

ನಿಮ್ಮ ಮಗುವು ಕೊನೆಗೂ ಭೂಮಿಗೆ ಕಾಲಿಟ್ಟಿದ್ದು, ನೀವು ಈಗ ನಿರಾಳಗೊಂಡು ನಿಮ್ಮ ಇಚ್ಚೆಯಂತೆ ಮಾಡಬಹುದು ಎಂದು ಯೋಚನೆ ಮಾಡುತ್ತಿರಬಹುದು. ಆದರೆ ನೆನಪಿಡಿ, ನಿಮ್ಮ ದೇಹ, ನಿಮ್ಮ ಮನಸ್ಸು ಎಲ್ಲವೂ ಹೊಸ ಬದಲಾವಣೆಗಳಿಗೆ ಇನ್ನೂ ಒಗ್ಗಿಕೊಳ್ಳುವ ಕಾರ್ಯದಲ್ಲಿದೆ. ಏನಾದರು ಗೋಚರಿಸುವಂತ ಅಹಿತಕರ ಅಂಶಗಳು ಕಂಡಲ್ಲಿ, ಕೂಡಲೇ ವೈದ್ಯರ ಬಳಿ ಮಾತಾಡಿ, ಅವರ ಸಲಹೆ ಪಡೆಯಿರಿ.

೧. ತೀವ್ರವಾದ ಜ್ವರ

ನೂರು ಡಿಗ್ರಿಗಳವರೆಗೆ ಜ್ವರವಿದ್ದು, ಅದು ತುಂಬಾ ನೋವು ಹಾಗು ನಡುಕವುದನ್ನು ಉಂಟು ಮಾಡುತ್ತಿದ್ದರೆ, ಅದು ನಿಮಗೆ ಸೋಂಕು ತಾಗಿರುವುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಇದಕ್ಕೆ ಕಾರಣವೆಂದರೆ ಸಿಸೇರಿಯನ್ ನ  ಗಾಯ ಸರಿಯಾಗಿ ಮಾಸದ್ದು. ಯೋನಿಯ ಸೋಂಕು, ಗುದನಾಳದ ಸೋಂಕು ಅಥವಾ ಮೂಲಾಧಾರದಲ್ಲಿನ ಸೋಂಕು ಅಥವಾ ಮೂತ್ರನಾಳದ ಸೋಂಕು ಮೇಲಿನ ಸ್ಥಿತಿಗೆ ಕಾರಣವಾಗಬಹುದು. ಮೂತ್ರನಾಳದ ಸೋಂಕು ತಾಗಿದ್ದರೆ, ನೀವು ಮೂತ್ರ ವಿಸರ್ಜನೆ ಮಾಡುವಾಗ ನಿಮಗೆ ನೋವು ಉಂಟಾಗಬಹುದು. ಈ ಸೋಂಕುಗಳು ತುಂಬಾ ಬೇಗನೆ ಹರಡಬಲ್ಲವು. ಆದರಿಂದ ಇವುಗಳ ಮೇಲೆ ಯಾವಾಗಲು ಒಂದು ಕಣ್ಣು ಇಟ್ಟಿರಬೇಕು. ಇಂತಹ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ, ಕೂಡಲೇ ಹೆರಿಗೆ ವೈದ್ಯರ ಬಳಿ ತೆರಳಿ.

೨. ಉಸಿರಾಟದ ತೊಂದರೆ

ನೀವು ಮೆಟ್ಟಿಲು ಹತ್ತುವಾಗ ಅಥವಾ ದೈಹಿಕ ಶ್ರಮವುಳ್ಳ ಕೆಲಸ ಮಾಡಿದಾಗ ಉಸಿರಾಟದ ತೊಂದರೆ ಅನುಭವಿಸಿದರೆ, ಅದು ಸಾಮಾನ್ಯ. ಆದರೆ ನೀವು ಕೆಲಸ ಮಾಡಿ ವಿಶ್ರಾಂತಿಸಿದ ಮೇಲೆಯೂ ಉಸಿರಾಟದ ತೊಂದರೆ ಆದಲ್ಲಿ ಅಥವಾ ಆಗೊಮ್ಮೆ ಈಗೊಮ್ಮೆ ನಿಮಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ಅದು ಶ್ವಾಸಕೋಶದ ಧಮನಿಬಂಧನೆ ಸೂಚಿಸುತ್ತದೆ. ಅಂದರೆ ನಿಮ್ಮ ಶ್ವಾಸಕೋಶದಲ್ಲಿನ ರಕ್ತ ನಾಳಗಳು ಹೆಪ್ಪುಗಟ್ಟಿವೆ ಎಂದರ್ಥ.ಇದರಿಂದ ನಿಮಗೆ ಉಸಿರಾಟದ ತೊಂದರೆ ಆಗುತ್ತಿದೆ. ಹಾಗಾಗಿ, ನೀವು ಇದನ್ನು ಅನುಭವಿಸಲು ಶುರು ಮಾಡಿದೊಡನೆ ವೈದ್ಯರ ಬಳಿ ಧಾವಿಸಿ.

೩. ಎದೆಬಿಗಿತ

ಎದೆ ಬಿಗಿದಂತೆ ಆಗುವುದು ಅಥವ ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು ಕೂಡ ಈ ಮೇಲೆ ಹೇಳಿರುವ ಶ್ವಾಸಕೋಶ ಧಮನಿಬಂಧನೆಯ ಲಕ್ಷಣಗಳು. ಈ ಎದೆನೋವು ನಿಮ್ಮ ಹೆರಿಗೆ ಬೇನೆಯಿಂದ ಸಹ ಆಗಿರಬಹುದು. ಆದರೂ, ನೀವು ಉಸಿರಾಟದಲ್ಲಿ ತೊಂದರೆ ಅನುಭವಿಸಿದರೆ ಅಥವಾ ನೀವು ಕೆಮ್ಮಿದಾಗ ರಕ್ತದ ಕಲೆಗಳು ಕಾಣಿಸಿಕೊಂಡರೆ, ವೈದ್ಯರಿಗೆ ಕರೆ ಮಾಡಲು ಅಥವಾ ವೈದ್ಯರನ್ನು ಭೇಟಿ ಮಾಡಲು ಹಿಂಜರಿಯಬೇಡಿ.

೪. ತಲೆನೋವು

ತಲೆನೋವು ನಿಮಗೆ ಹೆರಿಗೆ ಸಮಯದಲ್ಲಿ ನೀಡಿದ ಎಪಿಡ್ಯುರಲ್ ನ ಕಾರಣದಿಂದ ಇರಬಹುದು. ಹಾಗಾಗಿಯೂ, ನೀವು ಅತಿಯಾದ ತಲೆಬೇನೆ ಅನುಭವಿಸಿದ್ದಲ್ಲಿ, ಕೂಡಲೇ ವೈದ್ಯರನ್ನು ಸಂಪರ್ಕಿಸಿ. ನೀವು ತಲೆನೋವಿನೊಂದಿಗೆ ವಾಕರಿಕೆ, ವಾಂತಿಯಾಗುವುದು, ತಲೆತಿರುಗುವಿಕೆ ಅಥವಾ ಮಂದ ದೃಷ್ಟಿ ಎದುರಿಸುತ್ತಿದ್ದರೆ, ಅದು ಬಸಿರುನಂಜಿನ ಸೂಚನೆ ಆಗಿರಬಹುದು. ಹಾಗಿದ್ದಲ್ಲಿ, ಕೂಡಲೇ ವೈದ್ಯರನ್ನು ಭೇಟಿ ಮಾಡಿ.

೫. ತೀವ್ರ ರಕ್ತಸ್ರಾವ

ಹೆರಿಗೆಯ ನಂತರ, ಯೋನಿಯಿಂದ ರಕ್ತಸ್ರಾವ ಆಗುವುದು ಸಾಮಾನ್ಯ. ಆದರೆ, ಆಗಬೇಕಿದ್ದಕ್ಕಿಂತ ಜಾಸ್ತಿ ರಕ್ತಸ್ರಾವ ಆದಲ್ಲಿ, ಅದು ಪ್ರಸಾವನಂತರದ ರಕ್ತಸ್ರಾವ ಆಗಿರುತ್ತದೆ. ಎಷ್ಟು ರಕ್ತ ಕಳೆದುಕೊಂಡಿರೆಂದು ತಿಳಿಯಲು ಸುಲಭ ವಿಧಾನ ಎಂದರೆ ಅದು ನಿಮ್ಮ ಪ್ಯಾಡ್ ಆ ರಕ್ತವನ್ನು ಒಂದು ಘಂಟೆಯಲ್ಲೇ ಹೀರುತ್ತಿಲ್ಲವಾ ಎಂದು ನೋಡುವುದು ಹಾಗು ಹೊರಬಂದ ರಕ್ತವು ತುಂಬಾ ಗಟ್ಟಿಯಾಗಿದ್ದು ಹೆಪ್ಪುಗಟ್ಟಿದಂತೆ ಕಂಡರೆ ಕೂಡಲೇ  ಸ್ತ್ರೀರೋಗತಜ್ಞರ ಬಳಿ ತೆರಳಿ.

೬. ಕಾಲಿನ ಹಿಂಭಾಗದಲ್ಲಿ ನೋವು

ಬಹಳಷ್ಟು ಮಹಿಳೆಯರು ಇದು ಕೇವಲ ತೂಕ ಹೆಚ್ಚಿದರಿಂದ ಆಗುವುದು ಎಂದು ಸುಮ್ಮನಾಗುವರು. ಆದರೆ, ಈ ನೋವು ಕಾಣಿಸಿಕೊಳ್ಳುವುದು ಮುಂದುವರೆದರೆ, ಆ ಭಾಗ ಕೆಂಪಾದರೆ , ಅದು ಮುಟ್ಟಿದಾಗ ನಿಮಗೆ ನೋವಾದರೆ, ಅದು ಆಳ ನಾಡಿಗಳ ಘನೀಭವನ (Deep Vein Thrombosis)  ವನ್ನು ಸೂಚಿಸುತ್ತದೆ. ಇದರಿಂದ ನಿಮ್ಮ ಕಾಲುಗಳು ಊದಿಕೊಳ್ಳಬಹುದು ಹಾಗು ನಿಮ್ಮ ಕಾಲಿನ ಹಿಂಭಾಗವು ಭಾರವಾದಂತೆ ಭಾಸವಾಗಬಹುದು.

೭. ಆತಂಕ ಹಾಗು ತಳಮಳ 

ಒಂದು ಹೊಸ ಜೀವವನ್ನು ಭೂಮಿಗೆ ತರುವುದು ಸುಲಭದ ಮಾತಲ್ಲ. ಇದು ನಿಮ್ಮ ಮೇಲೆ ಕೇವಲ ದೈಹಿಕವಾಗಿ ಅಲ್ಲದೆ, ಮಾನಸಿಕವಾಗಿಯೂ ಗಾಢ ಪರಿಣಾಮಗಳನ್ನು ಬೀರುತ್ತದೆ. ನಿಮ್ಮ ಭಾವನೆಗಳನ್ನು ಬದಲಿಸಬಹುದು. ಕೆಲವು ಮಹಿಳೆಯರು ನಿದ್ರಾಹೀನತೆ , ತಲ್ಲಣಗೊಳ್ಳುವುದು, ತಳಮಳಗೊಳ್ಳುವುದು, ಗೊಂದಲಕ್ಕೆ ಒಳಗಾಗುವುದು, ಭ್ರಮೆಗೆ ಶರಣಾಗುವುದು ಅನುಭವಿಸುತ್ತಾರೆ. ಇಲ್ಲಿರುವ ಯಾವುದಾದರು ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡಲ್ಲಿ ಅದು ಪ್ರಸಾವನಂತರದ ಬುದ್ಧಿವಿಕಲ್ಪದ ಲಕ್ಷಣಗಳು ಆಗಿರಬಹುದು. ಇದಕ್ಕೆ ವೈದ್ಯಕೀಯ ತಪಾಸಣೆ ತುಂಬಾ ಅವಶ್ಯಕ. ಹಾಗಾಗಿ ನೀವು ಕೂಡಲೇ ಹರಿಗೆವೈದ್ಯರನ್ನು ಭೇಟಿಯಾಗಿ ನಿಮ್ಮ ಸ್ಥಿತಿಯನ್ನು ವಿವರಿಸಿ. ಆಗ ಅವರು ನಿಮ್ಮನ್ನು ಒಳ್ಳೆಯ ಮನರೋಗತಜ್ಞರೊಂದಿಗೆ ಸಂಪರ್ಕ ಮಾಡಿಸಿ, ನಿಮ್ಮ ಭಾವನೆಗಳನ್ನು ನಿಯಂತ್ರಿಸುವಂತೆ ಮಾಡಲು ಸಹಾಯ ಮಾಡುತ್ತಾರೆ.

Leave a Reply

%d bloggers like this: