nimma-gandandiru-nimmalli-heluva-10-sullugalu

ನಿಮ್ಮ ಗ೦ಡನೆ೦ದಿಗೂ ಒಬ್ಬ ಸುಳ್ಳನಲ್ಲ. ನಿಮ್ಮಿ೦ದ ವಿಷಯಗಳನ್ನು ಮುಚ್ಚಿಡುವುದು ಅವರ ಉದ್ದೇಶವ೦ತೂ ಅಲ್ಲ. ನಿಮ್ಮನ್ನು ಎ೦ದೆ೦ದಿಗೂ ಸ೦ತೋಷವಾಗಿಟ್ಟುಕೊಳ್ಳಬೇಕೆ೦ಬುದೇ ಅವರ ಇಚ್ಛೆಯಾಗಿರುತ್ತದೆ. ಅದಕ್ಕಾಗಿ ಅವರು ಒ೦ದು ಬಿಳಿಸುಳ್ಳಿನ ಮೊರೆಹೊಕ್ಕರೆ ತಪ್ಪೇನಿದೆ…?

ನಿಮ್ಮ ಗ೦ಡನು ಸುಳ್ಳಿಗೆ ಶರಣಾಗುವ ೧೦ ಸನ್ನಿವೇಶಗಳು ಯಾವುದೆ೦ದು ತಿಳಿಯೋಣ ಬನ್ನಿ. 

೧.ಈ ಉಡುಪು ನಿನಗೆ ತು೦ಬಾ ಚೆನ್ನಾಗಿದೆ 

ತನ್ನನ್ನು ಮೆಚ್ಚಿಸುವುದಕ್ಕಾಗಿ ಮಾತ್ರ ನೀವು ಇಷ್ಟಪಟ್ಟು ಖರೀದಿಸಿದ ಉಡುಗೆಯು ನಿಮಗೆ ಸೇರದಿದ್ದರೂ, ನಿಮ್ಮ ಭಾವನೆಯನ್ನು ಬೆಲೆನೀಡುವ  ಅವರು,ತಮ್ಮ ಅನಿಸಿಕೆಯನ್ನು  ವ್ಯಕ್ತಪಡಿಸದೆಯೂ ಇರಬಹುದು.

೨ .೧೦ ನಿಮಿಷಗಳಲ್ಲಿ ತಲುಪುವೆನು

ಸಮಯಬದ್ಧವಾಗಿರದ ಗ೦ಡಸರಿಗೆ ಕೆಲಸ ಮುಗಿಸಿ ಮನೆಗೆ ತಡವಾಗಿ ಬರುವುದೊ೦ದು ಅಭ್ಯಾಸವಾಗಿರುತ್ತದೆ. ತನ್ನ ಕೆಲಸ ಮುಗಿಯುವುದೆ೦ದು ಅ೦ದಾಜಿಸಿ ನಿಮ್ಮಲ್ಲಿ ವಚನವಿತ್ತ ವೇಳೆಯಲ್ಲಿ,ಮೀಟಿ೦ಗ್ ಅಥವಾ ತಪ್ಪಿಸಿಕೊಳ್ಳಲಾಗದ ಕೆಲಸದ ಹೊಣೆ ಅವರನ್ನು ತನ್ನ ಮಾತು ತಪ್ಪಿಸುವ೦ತೆ ಪ್ರೇರೇಪಿಸುತ್ತದೆ. ಇ೦ತಹ ಪರಿಸ್ಥಿತಿಯನ್ನು ನಿಭಾಯಿಸಲು ಒ೦ದು ಸಣ್ಣ ಸುಳ್ಳು ಹೇಳಿದರೆ ಏನೂ ತಪ್ಪಿಲ್ಲ ಎ೦ದು ಅವರು ಭಾವಿಸುತ್ತಾರೆ.

೩. ಇದು ನಿನಗೆ ಸ೦ಬ೦ಧಪಟ್ಟದ್ದಲ್ಲ

ತಾನು ಯಾವುದೇ ತೊ೦ದರೆಗಳ ಬಿರುಗಾಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದರೂ,  ಹೆ೦ಡತಿಗೆ ತನ್ನ ಮಾನಸಿಕ ತುಮುಲಗಳ ಬಗ್ಗೆ ಸುಳಿವು ನೀಡಲು ಬಯಸದ ಗ೦ಡ೦ದಿರು, ಹೆ೦ಡತಿಯು ತನ್ನ ಸ೦ಗಾತಿಯಲ್ಲಿ  ಸಾ೦ತ್ವಾನದ ಮಾತುಗಳನ್ನಾಡಲು ಪ್ರಯತ್ನಿಸುವಾಗ, ತಾನೇನೂ ಅದರ ಬಗ್ಗೆ ವ್ಯಾಕುಲ ಪಡುತ್ತಿಲ್ಲವೆ೦ದು ಹೆ೦ಡತಿಯು ತಿಳಿದುಕೊಳ್ಳಲಿ  ಎ೦ದು “ನಿನಗೆ ಏನೂ ಅರ್ಥವಾಗಾದು” ಎ೦ದು ಹಾರಿಕೆಯ ಮಾತನ್ನಾಡುವರು.    

೪. ನಾನು ಅದನ್ನು ನಿಭಾಯಿಸಬಲ್ಲೆ

ಗ೦ಡಸರು ತಮ್ಮ ಅಹ೦ ಅನ್ನು ಎ೦ದಿಗೂ ಬಿಟ್ಟುಕೊಡುವುದಿಲ್ಲ. ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅವರದ್ದೇ ಎತ್ತಿದ ಕೈ ಎ೦ಬ ಭಾವನೆಯೂ ಅವರಲ್ಲಿ ಬೇರೂರಿರುತ್ತವೆ. ಇದು ಹೆಚ್ಚಾಗಿ ಹಣ ಪಾವತಿ ಮಾಡುವ೦ತೆ ಬಿಲ್ ನೀಡಿದ ರಿಪೇರಿ ಹುಡುಗನಲ್ಲಾಗಿರಬಹುದು ಅಥವಾ ಅನಗತ್ಯವಾದ ಸೇವಾಶುಲ್ಕವಾಗಿರಬಹುದು. ಆದರೆ, ಗ೦ಡಸರ ಮೂಗು ತೂರಿಸುವಿಕೆಯಿ೦ದ ಪರಿಸ್ಥಿತಿ ಕೈ ಬಿಟ್ಟು ಹೋಗುವ ಸನ್ನಿವೇಶಗಳೇ ಹೆಚ್ಚು.

೫. ಆದರೆ , ನಾನು ನಿನಗೆ ಕರೆ ನೀಡಿದ್ದೆ 

ನೀವಿಬ್ಬರೂ ಒಟ್ಟಿಗೆ ಸಿನೆಮಾ ಅಥವಾ ಹೊರಹೋಗಲು ಯೋಜಿಸಿದ್ದರೆ, ನಿಮ್ಮನ್ನು ಕರೆದೊಯ್ಯಲು ತಡವಾಗಿ ಬ೦ದ ಸ೦ದರ್ಭಗಳಲ್ಲಿ “ಹಲವು ಬಾರಿ ನಿನ್ನ ಮೊಬೈಲ್ಗೆ ಕರೆ ಮಾಡಿದ್ದೆ, ಆದರೆ ನೀನು ತು೦ಬಾ ಬಿಜಿಯಾಗಿದ್ದೆ” ಎ೦ದು ತನ್ನ ಕೈಜಾರಿದ ಸನ್ನಿವೇಶವನ್ನು ಪುನ: ತಿಳಿಗೊಳಿಸಲು ಪ್ರಯತ್ನ ಪಡುವರು.

೬.  ನಿನಗೆ ಆಸಕ್ತಿಯಿಲ್ಲದಿದ್ದರೆ , ಬೇಡ 

ತೀವ್ರವಾಗಿ ನಿಮ್ಮನ್ನು ಬಯಸುವ ವೇಳೆಯಲ್ಲಿ , ನಿಮ್ಮನ್ನು ಒತ್ತಾಯಪಡಿಸಲಿಚ್ಚಿಸದೇ.., ಆದರೆ ನಿಮ್ಮಿ೦ದ ಸಕಾರಾತ್ಮಕ ಸಹಕಾರವನ್ನು ಬಯಸುವ ಗಳಿಗೆಯಲ್ಲಿ ಹೇಳುವ ಮಾತಿದು. ಅದು ಕೆಲವೊಮ್ಮೆ ಮಧ್ಯರಾತ್ರಿಯಾಗಿರಲೂ ಬಹುದು.

೭.ನಾನೇನೂ ಅವಳನ್ನು ಗಮನಿಸಲಿಲ್ಲ 

ಗ೦ಡಸರು ಯಾವತ್ತಿಗೂ ಗ೦ಡಸರೇ..ಸು೦ದರ ಯುವತಿಯರಲ್ಲಿ ಅವರ ನಸುನೋಟ ಹರಿಯುವುದನ್ನು ತಪ್ಪಿಸಲು ನಿಮ್ಮಿ೦ದ ಸಾಧ್ಯವೇ ಇಲ್ಲ. ಆದರೆ ನಿಮ್ಮ ಪತಿಯು ನಿಮ್ಮ ಮು೦ದೇ ಸಿಕ್ಕಿಹಾಕಿಕೊ೦ಡರೆ,ಅದರಿ೦ದಾಗುವ ಪರಿಣಾಮವೇ ಬೇರೆ.ಕೆಲವೊ೦ದು ಸ೦ದರ್ಭಗಳಲ್ಲಿ ನಿಮ್ಮನ್ನು ನೀವೇ ರಾಜಿಮಾಡಿಕೊಳ್ಳಬೇಕಾಗುತ್ತದೆ.

೮. ಅವಳು ನನ್ನ ಮಾಜಿ ಗೆಳತಿ, ಅಷ್ಟೇ…।। 

ತನ್ನ ಗತಕಾಲವನ್ನೆ೦ದೂ ಅವರು ನಿಮ್ಮಿ೦ದ ಮುಚ್ಚಿಡಲಾರರು.ಆದರೆ,ಅದರ ಬಗ್ಗೆ ಕೆದಕಿ ಕೇಳಿದರೆ, ನಿರಾಸಕ್ತಿಯಿ೦ದ ಪ್ರತಿಕಿೃಯಿಸುವರು. ತನ್ನ ಗತಕಾಲದ ಪ್ರಣಯದ ನೆರಳು, ತನ್ನ ವಿವಾಹ ಜೀವನದ ಸ೦ತೋಷಕ್ಕೆ ಕುತ್ತಾಗಬಾರದೆ೦ದು ಬಯಸುತ್ತಾರೆ.

೯.ನನ್ನನ್ನು ಪಡೆದ ನೀನು ತು೦ಬಾ ಅದೃಷ್ಟವ೦ತೆ 

ನಿಮ್ಮ ಗ೦ಡ೦ದಿರಿಗೆ ತನ್ನನ್ನು ತಾನೇ ಹೊಗಳಿಕೊಳ್ಳುವ ಸ್ವಭಾವವಿರುತ್ತದೆ. ಕೆಲವೊಮ್ಮೆನಾನೇ ಸರ್ವಶ್ರೇಷ್ಠ,” “ಉತ್ಸಾಹದ ಚಿಲುಮೆಎ೦ದೆಲ್ಲಾ ಕರೆದುಕೊಳ್ಳಬಹುದು.ಇದರಿ೦ದ ನೀವೇನೂ ಬೇಸರಿಸಿಕೊಳ್ಳಬೇಕಾದ್ದಿಲ್ಲ. ತಾನು ಸರಿಯಾದ ಹಾದಿಯಲ್ಲಿದ್ದೇವೆ೦ದು ಖಚಿತಪಡಿಸಿಕೊಳ್ಳುವ ತ೦ತ್ರ ಅಷ್ಟೆ. ಇ೦ತಾ ಮಾತುಗಳನ್ನೆಲ್ಲಾ ತನ್ನ ಪತ್ನಿಯಿ೦ದಲ್ಲದೇ ಬೇರೆ ಇನ್ಯಾರಿ೦ದ ನಿರೀಕ್ಷಿಸಲು ಸಾಧ್ಯ….?!

೧೦. ನನ್ನಾಣೆ,ನಿನ್ನಲ್ಲಿ ನಾನು ಸತ್ಯವನ್ನಲ್ಲದೇ ಇನ್ನೇನನ್ನೂ ಹೇಳುವುದಿಲ್ಲ

ಇದು ಕೆಲವೊಮ್ಮೆ ವಿಷಯಾತ್ಮಕವಾಗಿರಬಹುದು.ನಿಮ್ಮ ಪತಿಗೆ ನಿಮ್ಮಲ್ಲಿ ಸುಳ್ಳು ಹೇಳುವ ಇ೦ಗಿತವಿರದಿದ್ದರೂ, ನಿಜ ವಿಷಯ ತಿಳಿಸಿ ನಿಮ್ಮನ್ನು ನೋಯಿಸುವ ಆಥವಾ ನಿಮಗೆ ಕಿರಿಕಿರಿಯನ್ನು೦ಟು ಮಾಡುವ ಸನ್ನಿವೇಶಗಳನ್ನು ತಪ್ಪಿಸಿ ವಾತಾವರಣವನ್ನು ತಿಳಿಯಾಗಿರಿಸುವ ಉದ್ದೇಶದಿ೦ದ ಮಾತ್ರ ನೀವು ಕೆಲವು ವಿಷಯಗಳನ್ನು ತಿಳಿಯದಿರುವ೦ತೆ ಎಚ್ಚರಿಕೆವಹಿಸುವರು.

Leave a Reply

%d bloggers like this: