patiyinda-appanavarege-kaanuva-10-badalaavanegalu

ನಿಮ್ಮ ಬಾಳ ಸಂಗಾತಿಯು ಹೇಗೆ ನಿಮ್ಮ ಮಗುವಿನ ತಂದೆ ಪಾತ್ರವನ್ನು ಸರಿಯಾಗಿ ನಿಭಾಯಿಸುತ್ತಾನೆ, ಎಂಬ ವಿಷಯಕ್ಕೆ ಒಬ್ಬ ತಾಯಿಯಾಗಿ ನಿಮಗೆ ಭಯ ಪಡುವ ಸಾಧ್ಯತೆ ಇದೆ. ಹೆದರಬೇಡಿ, ತನ್ನ ಈ ಪಾತ್ರಕ್ಕೆ ನಿಮ್ಮ ಜೀವದ ಗೆಳೆಯನು ಎಷ್ಟು ಸುಲಭವಾಗಿ/ಸಲೀಸಾಗಿ ಹೊಂದುಕೊಳ್ಳುತ್ತಾನೆ ಎಂಬುದನ್ನು ನೋಡಿ ನೀವು ಆಶ್ಚರ್ಯ ಪಡುವಿರಿ. ನಿಮ್ಮ ಪತಿ ಮೊದಲ ಬಾರಿಗೆ ತನ್ನ ತಂದೆಯ ಪಾತ್ರವನ್ನು ಅನುಭವಿಸಲು ಪ್ರಾರಂಭಿಸಿದಾಗ ನೀವು ಸುಮ್ಮನೆ ನಿಮ್ಮ ಪೋಷಕತ್ವವನ್ನು ನೆಮ್ಮದಿಯಿಂದ ಅನುಭವಿಸಿ ಮತ್ತು ಪ್ರಶಂಸಿಸಿ. ಮಗು ಆಗಮಿಸಿದಾಗ ಖಂಡಿತವಾಗಿಯೂ ನಿಮ್ಮ ಪತಿಯಲ್ಲಿ ಕಾಣಿಸಿಕೊಳ್ಳುವ ಕೆಲವು ಧನಾತ್ಮಕ ರೂಪಾಂತರಗಳು ಇಲ್ಲಿವೆ.

೧. ಪತಿಯ ಸಾಮರ್ಥ್ಯದಲ್ಲಿ ಗಮನಿಸಬಹುದಾದಂತಹ ವೃಧ್ದಿ

ತಂದೆಯಾಗಿ ಕಾರ್ಯ ನಿರ್ವಹಿಸುವುದು ತಮಾಷೆಯ ಮಾತಲ್ಲ, ಹೆಚ್ಹಿನ ತಂದೆಯರು ಇದನ್ನು ಸಂಪೂರ್ಣವಾಗಿ ನಿರ್ವಹಿಸಲು ಬಯಸುತ್ತಾರೆ. ಮತ್ತು  ತಂದೆ ಎಂಬ ಪದಕ್ಕೆ ಸಂಪೂರ್ಣ ಜೀವ ತುಂಬುವ ಕೆಲಸವನ್ನು ಮಾಡುತ್ತಾರೆ. ತನ್ನ ಪುಟ್ಟ ಕಂದಮ್ಮನನ್ನು ಜೋಪಾನವಾಗಿರಿಸಿಕೊಳ್ಳುವುದು, ಹಣಕಾಸಿನ ಜವಾಬ್ದಾರಿಗಳನ್ನು ನೋಡಿಕೊಳ್ಳುವುದು, ಇವೆಲ್ಲವೂ ಮನುಷ್ಯನನ್ನು ಒಬ್ಬ ಒಳ್ಳೆಯ ಜವಾಬ್ದಾರಿಯುತ ತಂದೆಯಾಗಲು ಸ್ವಯಂಚಾಲಿತವಾಗಿ ಸಿದ್ದಮಾಡುತ್ತವೆ. ಆತನು ಮೊದಲು ತೊಂದರೆಗೆ ಒಳಗಾದಂತೆ ಕಂಡರೂ, ಕ್ರಮೇಣ ಅವನು ಅದಕ್ಕೆ ಹೊಂದಿಕೊಂಡು, ನಿಮ್ಮ ಮಗುವಿನ ರಕ್ಷಣೆ ಮಾಡುವುದು, ಮಗುವಿಗೆ ಆಹಾರ ತಿನ್ನಿಸುವುದು, ಉಡುಪು ಧರಿಸುವುದು, ಜಳಕ ಮಾಡಿಸುವುದು ಮತ್ತು ಮಗುವಿನ ಅಗತ್ಯಗಳನ್ನು ಪೂರೈಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ.

೨.ಭವಿಷ್ಯಕ್ಕಾಗಿ ಕೆಲವೊಂದನ್ನು ಪಕ್ಕಕ್ಕೆ/ಬದಿಗೆ ಸರಿಸುವುದು ಮತ್ತು ಶೇಕರಿಸುವುದು

ಜನರು ತಮ್ಮ ಭವಿಷ್ಯದ ಬಗ್ಗೆ ಒಳನೋಟವನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ.ಇದೆಲ್ಲಾ ತಂದೆಯಾಗಿ ತಮ್ಮ ಹೊಸ ಪಾತ್ರವನ್ನು ಅನುಭವಿಸುವ ಕಾರಣದಿಂದ. ಅನೇಕ ಜನರು ತಮ್ಮ ಮನೆಗೆ ಸೇರ್ಪಡೆಯಾದ ಹೊಸ ಸದಸ್ಯನಿಗಾಗಿ ಒಳನೋಟವುಳ್ಳ ಆರ್ಥಿಕ ಯೋಜನೆಯ ಅಗತ್ಯವಿದೆಯೆಂದು ಭಾವಿಸುತ್ತಾರೆ. ಮತ್ತು ಖಂಡಿತವಾಗಿಯೂ ಇದು ಕುಳಿತು ಯೋಚಿಸುವ ವಿಷಯವಾಗಿದ್ದು, ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಮೊತ್ತವನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಕಲ್ಪಿಸುತ್ತಾರೆ. ಅವರು ಅಗತ್ಯಕ್ಕೆ ತಕ್ಕಂತೆ ಬುದ್ದಿವಂತಿಕೆಯಿಂದ ಖರ್ಚು ಮಾಡಲು ಪ್ರಾರಂಭಿಸುತ್ತಾರೆ.

೩. ಅವರು ನಿಮ್ಮನ್ನು ಹೆಚ್ಚು ಗೌರವದಿಂದ ಕಾಣಲು ಪ್ರಾರಂಭಿಸುತ್ತಾರೆ

ತಮ್ಮ ಮಗುವನ್ನು ಪಡೆಯಲು ಮಹಿಳೆಯು ಅನುಭವಿಸುವ ಸಿಹಿ ಕಷ್ಟಗಳು ಏನೆಂದು ಅರಿತುಕೊಳ್ಳುವ ಪುರುಷರು, ತಮ್ಮ ಸಂಗಾತಿಯನ್ನು ಆರಾಧಿಸಲು ಪ್ರಾರಂಭಿಸುತ್ತಾರೆ. ಮತ್ತು ಅಂದಿನಿಂದ ಅವರು ಅಪ್ಪ ಎಂದು ಕರೆಸಿಕೊಳ್ಳುವ ಮುನ್ನ ತಮ್ಮ ಅರ್ಧಾಂಗಿಗೆ ಒಳ್ಳೆ ಜೋತೆಗಾರನಾಗಿ, ಅವರ ಅಗತ್ಯಗಳನ್ನು ಪೂರೈಸಲು ಪ್ರಾರಂಭಿಸುತ್ತಾರೆ. ಅವರು ತಮ್ಮ ಮಡದಿ ಮತ್ತು ಮಗುವಿನ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಆದ್ದರಿಂದ ಅವರ ಆವರಿಸಿಕೊಂಡಿರುವಿಕೆಯನ್ನು ಪ್ರಶಂಸಿಸಿ. 

೪. ಗಂಡಂದಿರು ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯಲು ಪ್ರಾರಂಭಿಸುತ್ತಾರೆ

ಹೆಚ್ಚಿನ ಪುರುಷರು ತಮ್ಮ ಕೆಲಸಕ್ಕೆ ಹೋಗುವಾಗ ಅಥವಾ ಅವರ ಮಡದಿ ಮತ್ತು ಮಗು ಇಲ್ಲದೆ ಹೊರಗಡೆ ಹೋಗಲು ತುಂಬಾ ವಿಷಾಧಿಸುತ್ತಾರೆ. ಮತ್ತು ಮಗುವಿನ ಆಗಮನದ ನಂತರ ಅವರು ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಾರೆ. ಅವರ ಬೇಡಿಕೆಗಳು ಬದಲಾಗುತ್ತವೆ, ಅವರು ಮಗುವಿಗೆ ಒಳ್ಳೆ ತಂದೆಯಾಗಿ ಮತ್ತು ನಿಮಗೆ  ಅತ್ಯುತ್ತಮ ಸಂಗಾತಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಅದನ್ನು ಅರಿತುಕೊಂಡು ಅವರನ್ನು ಪ್ರಶಂಸಿಸುವುದು ಅವರಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ.

೫. ನಿಮ್ಮ ಸಹಾಯಕ್ಕಾಗಿ ನಿಂತಿರುತ್ತಾರೆ

ಗಂಡಂದಿರು ತ್ವರಿತವಾಗಿ, ತಮ್ಮ ಮಗುವಿನ ಉಡುಪು ಬದಲಾಯಿಸುವುದು, ಜಳಕ ಮಾಡಿಸುವುದು ಮುಂತಾದ ಕೆಲಸಗಳನ್ನು ಪುಸಲಾಯಿಸದೆ, ಮುಂದೂಡದೆ ಮಾಡುತ್ತಾರೆ. ತಮ್ಮ ಮಕ್ಕಳ ಎಲ್ಲಾ ಕೆಲಸಗಳನ್ನು ಹಂಚಿಕೊಳ್ಳಲು ಅವರು ಉತ್ಸಾಹದಿಂದ ಕೂಡಿರುತ್ತಾರೆ. ನೀವು ವಿಶ್ರಾಂತಿ ತಗೆದುಕೊಳ್ಳುವಾಗ, ನಿಮ್ಮ ಪತಿಯು, ಮಗುವಿನ ಉಡುಪು ಬದಲಿಸುವುದು, ನಿದ್ರೆ ಬಂದಾಗ ಮಲಗಿಸುವುದು, ಮುಂತಾದ ಕೆಲಸಗಳನ್ನು ಮಾಡುತ್ತಾರೆ. ಇದು ನಿಮ್ಮ ಪತಿ ಅವರ ತಂದೆಯ ಪಾತ್ರವನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದು ಅರ್ಥಮಾಡಿಸುತ್ತದೆ.

೬. ಹೊಸ ಸ್ನೇಹಿತರ ಗುಂಪು

ನೀವು ಮೊದಲ ಬಾರಿಗೆ ಪೋಷಕರಾದಾಗ, ನಿಮ್ಮಂತೆ ಇರುವ ಪೋಷಕರ ಸಂಪೂರ್ಣ ಹೊಸ ಸಾಮಾಜಿಕ ಜಾಲವನ್ನು ಅನ್ನು ರಚಿಸಿಕೊಳ್ಳುತ್ತಿರಿ. ನಿಮ್ಮ ವಿಷಯಗಳನ್ನು ಇತರ ಪೋಷಕರೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತಿರಿ, ಅವರೊಂದಿಗೆ ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುತ್ತ ಆಪ್ತ ಸ್ನೇಹಿತರಾಗುತ್ತಿರಿ. ಇದರೊಂದಿಗೆ ಮಗುವಿನ ಹಾಗುಹೊಗುಗಳು, ಪೋಷಣೆ, ಮುಂತಾದ ಗೊತ್ತು ಗೊತ್ತಿರದ ವಿಷಯಗಳನ್ನು ಹಂಚಿಕೊಳ್ಳುತ್ತ ಆಪ್ತರಾಗುತ್ತಿರಿ.

೭. ಪುರುಷರು ಸುರಕ್ಷತೆ ಮತ್ತು ಸೌಕರ್ಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ

ಹೆಂಡತಿ ಮತ್ತು ಮಗುವಿನ ಸುರಕ್ಷತೆ ಮತ್ತು ಯೋಗಕ್ಷೇಮ ಎಷ್ಟು ಮಹತ್ವದ್ದು ಎಂಬುದು ಅವರಿಗೆ ಅಪ್ಪಂದಿರು ಆದಾಗ ಮಾತ್ರ ನಿಜವಾಗಿಯೂ ಅರಿವಾಗುತ್ತದೆ. ನಿಮ್ಮ ಮಗು ತನ್ನ ಮೊದಲ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದಾಗ ಮನೆಯ ಸುತ್ತ(ಒಳಗೆ/ಒರಗೆ) ಯಾವುದೇ ಚೂಪಾದ ಮೂಲೆಗಳು ಅಥವಾ ಜಾರುವಂತಹ ಜಾಗ/ಮಹಡಿಗಳಿಲ್ಲವೆಂದು ಖಚಿತಪಡಿಸಿಕೊಳ್ಳಲು ಅವರು ಕೆಲಸ ಮಾಡುತ್ತಾರೆ. ಇವು ನಿಮ್ಮ ಮುದ್ದು ಕಂದಮ್ಮಗಳ ಸುರಕ್ಷತೆ ಮತ್ತು ಸಂತೋಷವನ್ನು ಖಾತರಿಪಡಿಸಿಕೊಳ್ಳಲು ಅವರು ಆರೈಕೆ ಮಾಡುವ ಕೆಲವು ಸ್ಪಷ್ಟವಾದ ಸಂಗತಿಗಳು ಮಾತ್ರ.

೮.ಪೋಷಣೆಯನ್ನು ಜೊತೆಯಲ್ಲಿ ನಿರ್ವಹಿಸಿ

ನೀವು ಮತ್ತು ನಿಮ್ಮ ಪತಿ ಈಗ ಪೋಷಕರಾಗಿ ತಿರುವು ಪಡೆದಿರುವಿರಿ, ಮತ್ತು ನಿಮ್ಮ ಕಟ್ಟುಪಾಡುಗಳ ಪೋಷಣೆಯನ್ನು ಜೊತೆಯಾಗಿ ಪ್ರಾರಂಭಿಸಿ. ನಿಮ್ಮ ವ್ಯಕ್ತಿ, ಮೊದಲಿಗೆ ಅಷ್ಟೇನೂ ಸಮ್ಮತಿಸದಿದ್ದರೂ, ಪೋಷಕರಾಗಿ ತನ್ನ ಕರ್ತವ್ಯಗಳನ್ನು ಮಾಡಲು ಪ್ರಯತ್ನಿಸುವುದರಲ್ಲಿ ಯಾವುದೇ ಅನುಮಾನವಿಲ್ಲದೆ ಹೆಚ್ಚು ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಸಂಬಂಧ ಹೆಚ್ಚುವರಿಯಾಗಿ ಬೆಳವಣಿಗೆಯಾಗುತ್ತದೆ, ನೀವಿಬ್ಬರು ಒಂದೇ ಎಂದು ನಿಮ್ಮನ್ನು ಒಗ್ಗೂಡಿಸುವುದು, ನಂಬಲರ್ಹ ಮತ್ತು ಆರಾಧಿಸುವ ವೈವಾಹಿಕ ಸಂಬಂಧಕ್ಕೆ ನಿಜವಾದ ಅಗತ್ಯವಾದ ಅಡಿಪಾಯವನ್ನು ನಿಮಗೆ ಒದಗಿಸುವುದು.

೯. ನಿಮ್ಮ ಮಗುವಿನೊಂದಿಗೆ ಆಟವಾಡುತ್ತಾರೆ

ಹೆಚ್ಚಿನ ತಂದೆಯಂದಿರು ತಮ್ಮ ಮಕ್ಕಳೊಡನೆ ಕಾಲಕಳೆಯಲು ಬಯಸುತ್ತಾರೆ, ಮತ್ತು ತಮ್ಮ ದಿನದ ಸಮಯದಲ್ಲಿ ಮಗುವಿನೊಂದಿಗೆ ಆಡಲು ಎಂದೇ ಸ್ವಲ್ಪ ಸಮಯವನ್ನು ಮಿಸಲಿಡುತ್ತಾರೆ. ಪ್ರತಿದಿನ ಕಾಲಕಳೆಯುವ ಆ ವಿಶೇಷ ಕ್ಷಣಗಳಿಂದ ಮಗು ಮತ್ತು ಅವರ ನಡುವೆ ಬಂಧವು ಹೆಚ್ಚುತ್ತದೆ. ನಿಮ್ಮ ಅಮೂಲ್ಯವಾದ ಕಂದಮ್ಮ ಬೆಳೆದಂತೆ ಈ ಅವಧಿಗಳು ಆಶಾದಾಯಕವಾಗಿ ಹೆಚ್ಚಾಗುತ್ತವೆ.

೧೦. ಮಗುವಿನೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾರೆ

ಕೆಲವು ಅಪ್ಪಂದಿರು, ಆರಂಭದಲ್ಲಿ ಅವರನ್ನು ಪೋಷಿಸಲು ಮನಸ್ಸಿಲ್ಲ ಎಂಬಂತೆ ಕಂಡರೂ, ಕ್ರಮೇಣ ಅವರು ಮಗುವನ್ನು ಮಾತನಾಡಲು ಪ್ರಾರಂಭಿಸುವರು, ಮತ್ತು ಇದು ಅನುಮಾನವಿಲ್ಲದೆ ಪೋಷಕತ್ವದ ಒಂದು ಸಕಾರಾತ್ಮಕ ಸೂಚನೆಯಾಗಿದೆ, ಮತ್ತು ಮಗುವು ತನ್ನ ತಂದೆಗೆ ಹತ್ತಿರವಾಗಲು ಇದು ಕಾರಣವಾಗುತ್ತದೆ. ದೀರ್ಘಕಾಲದ ನಂತರ ಪರಸ್ಪರ ಮುಖವನ್ನು ನೋಡಿಕೊಂಡಾಗ ಮಗು, ತಂದೆ ಮತ್ತು ತಾಯಿಯ ಮುಖದಲ್ಲಿ ಕಾಣುವ ಹೊಳಪು ಅವರ ಬಾಂಧವ್ಯವನ್ನು ತೋರಿಸುತ್ತದೆ.

Leave a Reply

%d bloggers like this: