maduve-nantara-amma-joteyale-irabekittu-endenisuva-10-sandarbhagalu-1

ಅದು ಯಾಕೆ ನಾವು ತುಂಬಾ ಖುಶಿಪಡುತ್ತಿದ್ದೇವೆ ಎಂದೊಡನೆ ಏನಾದರು ನಡೆದು ಬೇಜಾರು ಆಗುವಂತೆ ಆಗಿಬಿಡುತ್ತದೆ? ಮದುವೆ  ಅನ್ನುವುದು ಒಂದು ಸುಮಧುರ ವಿಷಯ, ಆದರೆ ಅದರ ಹಿಂದೆ ಇರುವ ಮನೆ ಬಿಡಬೇಕಾಗಿ ಬರುವ ನೋವು ಯಾರಿಗೂ ಬೇಡ. ಅದರಲ್ಲಿಯೂ, ಅಮ್ಮನನ್ನು ಬಿಟ್ಟು ಬರುವುದೆಂದರೆ ಅನುಭವಿಸಲಾರದಂತ ನೋವು! ಬಹಳಷ್ಟು ಹುಡ್ಗೀರು ಒಪ್ಪುವ ಮಾತು ಏನೆಂದರೆ ಅದು ತಮ್ಮ ಅಮ್ಮನ ಪ್ರೀತಿಯ ನಿಜವಾದ ಬೆಲೆ ತಮಗೆ ಮದುವೆಯಾದ ಬಳಿಕ ತಿಳಿಯಿತೆಂದು.

ಇಲ್ಲಿವೆ ಹೇಳಿರುವ ಕೆಲವು ಸಂದರ್ಭಗಳಲ್ಲಿ ಅಂತೂ “ಛೆ!ನನ್ನ ಅಮ್ಮ ನನ್ನ ಜೊತೆ ಇರಬೇಕಿತ್ತು” ಎಂದೆನಿಸಲು ಮಾಡೇ ಮಾಡುತ್ತವೆ.

೧. ಅಯ್ಯೋ ಯಾರು ಗೊಣಗಾಡುವವರೇ ಇಲ್ಲಾ

 ಮನೆಯಲ್ಲಿ ಅಮ್ಮನದು ಗೊಣಗಾಟ ಇಲ್ಲದಿದ್ದರೆ ಏನೋ ಸರಿ ಇಲ್ಲದಂತೆ ಅನಿಸಿಬಿಡುತ್ತದೆ! ಅಮ್ಮ ಗೊಣಗುತ್ತಿದರೆ ಮನೆಯ ವಾತಾವರಣ ಬಿಕೋ ಎನ್ನುತ್ತದೆ. ಇದು ಎಷ್ಟರ ಮಟ್ಟಿಗೆ ಅಂದರೆ, ನೋಡನೋಡುತ್ತ ನೀವು ತಾಯಿ ಆದೊಡನೆ ನೀವು ಕೂಡ ಈ ಅಭ್ಯಾಸ ಕರಗತ ಮಾಡಿಕೊಂಡು ಬಿಡುತ್ತೀರಿ ! ಆದರೆ ಈ ಗೊಣಗಾಟ ಇಲ್ಲದಾಗಿ ಹೋದಾಗ ಅರಿವಾಗುತ್ತದೆ, ಅಮ್ಮ ಬೇಕೆಂದು ನಮ್ಮ ಮನಸ್ಸು ಎಷ್ಟು ಹಪಹಪಿಸುತ್ತಿದೆ ಎಂದು. ನೀವು ಮತ್ತೆ ಪದೇ ಪದೇ ಫೋನ್ ಬಳಸಿ ಅಥವಾ ಮನೆಗೆ ತಡವಾಗಿ ಬಂದು ಅಮ್ಮನಿಂದ ಬೈಯ್ಯಿಸಿಕೊಳ್ಳುವುದು ಬೇಕು ಅನಿಸುವುದು ಆಲ್ವಾ? !

೨. ನಿಮ್ಮನ್ನ ಸತ್ಕಾರ ಮಾಡುವವರು ಯಾರು?

 ಅಮ್ಮನ ಕೈರುಚಿ ಹೆಂಗೆ ಮರೆಯೋಕೆ ಆಗುತ್ತೆ ಅಲ್ವ? ಯಾವುದೇ ಸಂದರ್ಭದಲ್ಲೂ, ನೀವು ಏನು ಕೇಳಿದರೂ, ತಟ್ಟನೆ ನಿಮ್ಮ ಕಣ್ಣ ಮುಂದೆ ಹಾಜರಾಗುತಿತ್ತು. ಆಹಾ! ಏನ್ ರುಚಿ ! ನೀವು ನಿಮ್ಮ ಜೀವನವೆಲ್ಲ ಪ್ರತಿದಿನ ತಿನ್ನುವ ಊಟವನ್ನು ನೆನೆದರೂ, ಅದು ಅಮ್ಮನ ಕೈರುಚಿ ನೆನಪಿಸುತ್ತದೆ. ಈಗ ಹೋಗಿ ನಿಮ್ಮ ಕೈರುಚಿ ತೋರಿಸಿ !

೩. ತಡರಾತ್ರಿವರೆಗೂ ಗುಟ್ಟುಗಳನ್ನು ಹಂಚಿಕೊಳ್ಳುವುದು  

ನಮ್ಮ ಗುಟ್ಟುಗಳನ್ನು ಹಂಚಿಕೊಳ್ಳೋಕೆ ನಮ್ಮ ಸ್ನೇಹಿತರು ಇದ್ದಾರೆ ನಿಜ. ಆದರೆ, ಅಮ್ಮನ ಹತ್ತಿರ ಮಾತ್ರ ನೀವು ಏನಾದರ ಬಗ್ಗೆ ಆಗಲಿ, ಯಾರ ಬಗ್ಗೆ ಆಗಲಿ ಹಂಚಿಕೊಳ್ಳಬಹುದು. ನಿಮ್ಮ ಬಗ್ಗೆ ಇಂಚಿಂಚು ತಿಳಿದಿರುವವಳು ನಿಮ್ಮ ಅಮ್ಮ ಮಾತ್ರ. ಅವಳು ಕ್ಷಣಮಾತ್ರದಲ್ಲೇ ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಎಂದು ಹೇಳಿಬಿಡುತ್ತಾರೆ. ಈಗ ಅವಳು ನಿಮ್ಮಿಂದ ಬೇರೆಯಾಗಿದ್ದು, ಇವಾಗ ನಿಮಿಗೆ ಗೊತ್ತಾಗುತ್ತೆ ನೀವು ನಿಮ್ಮ ಅಮ್ಮನಲ್ಲಿ ಎಂತ ಒಳ್ಳೆ ಗುಟ್ಟು ಸಮಾಚಾರ ಮಾತಾಡುವ ಗೆಳತಿಯನ್ನು ಕಳೆದುಕೊಂಡಿರಿ ಎಂದು. ಹಾ, ನಮಗೆ ಗೊತ್ತು ನೀವು ಇವಾಗ ಆಕೆಯನ್ನು ಎಷ್ಟು ಕಳೆದುಕೊಳ್ಳುತಿದ್ದೀರ ಎಂದು!

೪. ಅಕ್ಕರೆಯ ಅಪ್ಪುಗೆಗಳು,ಮುತ್ತುಗಳು 

ಕೆಲವೊಂದು ಸಮಯ ನೀವು ತುಂಬಾ ಗಟ್ಟಿಯಾಗಿ ಇರುತ್ತೀರ, ಇನ್ನು ಕೆಲವು ಸಮಯದಲ್ಲಿ ಮಂಕಾಗುತ್ತೀರಾ. ಇಂತಹ ಸಮಯದಲ್ಲಿ ನಿಮಗೆ ಬೆಚ್ಚನೆಯ ಅಪ್ಪುಗೆ ನೀಡಿ ಸಾಂತ್ವಾನ ಹೇಳುವವರು ಯಾರಾದರು ಬೇಕು. ಇಂತಹ ಹಿತಕರ ಅಪ್ಪುಗೆ ಸಿಗುವುದು ಅಮ್ಮನಿಂದ ಮಾತ್ರವೇ. ನೀವು ಎಷ್ಟೇ ಬೆಳೆದು ದೊಡ್ಡವರಾದರು, ಅವಳ ಕಣ್ಣಿಗೆ ನೀವಿನ್ನು ಅವಳ ಪುಟ್ಟ ಮಗು. ನೀವು ಏನೇ ಹುಚ್ಚುಚ್ಚು ಮಾತಾಡಿದರು ಆಕೆ ಕೇಳುತ್ತಾಳೆ. ನೀವು ಅವಳನ್ನ ಎಷ್ಟು ಹಪಹಪಿಸುತ್ತಿದ್ದೀರಾ ಎಂದು ಗೊತ್ತು.

೫ . ನಿಮ್ಮ ಸ್ವಂತ ವೈದ್ಯೆ 

ನಿಮಗೆ ಇವಾಗ ಹುಷಾರಿಲ್ಲದೆ ಆಗಿದೆ, ಆದರೆ ನಿಮ್ಮ ಸದಾಕಾಲ ಸ್ವಂತ ವೈದ್ಯೆಯಾದ ನಿಮ್ಮ ಅಮ್ಮ ನಿಮ್ಮ ಜೊತೆಗಿಲ್ಲ. ನಿಮಗೆ ಮುಂಚೆ ಯಾವಾಗ ಚೆನ್ನಾಗಿ ಇಲ್ಲದಂತೆ ಆದರೂ, ನಿಮ್ಮ ತಾಯಿ ನಿಮ್ಮೊಡನೆ ಇರುತ್ತಿದರು. ನಿಮ್ಮನ್ನು ಹಾರೈಸಿ ನೀವು ನಿದ್ದೆಗೆ ಜಾರುವವರೆಗೂ ನಿಮ್ಮ ಪಕ್ಕದಲ್ಲಿಯೇ ಕುಳಿತು ನೋಡಿಕೊಳ್ಳುತ್ತಿದ್ದಳು. ಆದರೆ, ಇವಾಗ ನೀವೊಬ್ಬಳೆ. ಆಕೆ ಜೊತೆಗಿರಬೇಕಿತ್ತು .

೬. ನೀವು ಮುಂಚೆಯಂತೆ ಜೋರಲ್ಲ 

ನೀವು ಅಮ್ಮನ ಜೊತೆಯಿದ್ದಾಗ, ಮನೆಯಲೆಲ್ಲಾ ನಿಮ್ಮದೇ ಸದ್ದು. ನೀವು ಏನು ಬೇಕಾದರೂ ಧರಿಸಬಹುದಿತ್ತು, ಹೇಗೆ ಬೇಕಾದರೂ ಮಾತಾಡಬಹುದಿತ್ತು. ನಿಮ್ಮ ತಾಯಿ ನಿಮ್ಮನ್ನು ಎಂದಿಗೂ ನಿಮ್ಮ ಬಗ್ಗೆ ಕೆಟ್ಟದಾಗಿ ಭಾವಿಸುತ್ತಿರಲಿಲ್ಲ. ಆದರೆ ಈಗ ನೀವು ಮುಂಚಿನ ಥರ ಇರಲು ಆಗುವುದಿಲ್ಲ.

೭. ಆತುರದ ಶಾಪಿಂಗ್ ಅಥವಾ ಸಿನಿಮಾಗೆ ಹೋಗುವುದು 

ನೀವು ಮದುವೆ ಆದ ನಂತರ ನಿಮಗೆ ಹೊಸ ಜವಾಬ್ದಾರಿಗಳು ಸಿಕ್ಕಿವೆ, ಹೊಸ ಕುಟುಂಬ ಸಿಕ್ಕಿದೆ ಹಾಗು ಮುಖ್ಯವಾಗಿ ಹೊಸ ಜೀವನಶೈಲಿ ಸಿಕ್ಕಿದೆ. ಎಲ್ಲವೂ ನವೀನವಾಗಿದೆ, ಆದರೂ ನಿಮ್ಮ ಅಮ್ಮನ ಜೊತೆಗೆ ಖರೀದಿಗೆ ಅಂತ ಪೇಟೆ ಸುತ್ತುತ್ತಿದ್ದು, ಸಿನಿಮಾಗೆ ಹೋಗುತ್ತಿದ್ದು, ಇವೆಲ್ಲವೂ ಪದೇ ಪದೇ ಕಾಡುತ್ತವೆ. ಆಗ ಇವುನೆಲ್ಲಾ ಆರಾಮಾಗಿ ಕೊನೆ ಕ್ಷಣದಲ್ಲಿ ಯೋಜಿಸುತ್ತಿದ್ದೆವು, ಆದರೆ ಈಗ ಆ ಥರ ಮಾಡಲು ಸಾಧ್ಯವಿಲ್ಲ.

೮. ತಾವಾಗಿಯೇ ಎದ್ದೇಳುವುದು

 “ಎಷ್ಟೊತ್ತೆ ಮಲಗ್ತಿಯ? ಇಷ್ಟೊಂದು ಲೇಟ್ ಆಗಿ ಎದ್ದರೆ, ನಾಳೆ ದಿನ ನಿನ್ನ ಗಂಡನ ಮನೆಯವರು ನನಿಗೆ ಬೈತಾರೆ” ಅಂತ ಕೇಳುವುದೇ ನಮ್ಮ ದಿನನಿತ್ಯದ ಗಡಿಯಾರದ ಕೂಗು ಆಗಿತ್ತು. ಆದರೆ ಇವಾಗ ನಿಮ್ಮನ್ನು ಎಚ್ಚರಗೊಳಿಸುವುದು ಒಂದು ಬೇಸರದ ಗಡಿಯಾರ. ನೀವು ಈಗ ಮತ್ತೆ “ನಾನು ಇನ್ನೊಂದ್ ಸ್ವಲ್ಪ ಮಲ್ಕೊಳ್ತಿನಿ ಬಿಡಮ” ಅಂತ ಹೇಳುವ ಹಾಗೆ ಇಲ್ಲ.

೯. ಚಹಾ,ಅಮ್ಮ,ಬಿಸಿಬಿಸಿ ಚರ್ಚೆ

 ನೀವು ನಿಮ್ಮ ಅಮ್ಮನಿಗಾಗಿ ಎಷ್ಟು ಹಪಹಪಿಸುತ್ತಿದ್ದಿರಾ ಎಂದು ಗೊತ್ತಾಗುವುದು, ನಿಮ್ಮ ಈ ಹೊಸ ಕುಟುಂಬದೊಂದಿಗೆ ಕೂತು ಚಹಾ ಸವಿದಾಗ. ಅಮ್ಮನೊಂದಿಗೆ ಕೂತುಕೊಂಡು, ಅಮ್ಮ ಮಾಡಿದ ಚಹಾ ಸೇವಿಸುತ್ತ, ಅಮ್ಮನೊಂದಿಗೆ ಹರಟೆ ಹೊಡೆಯುತ್ತಿದ್ದ ಕ್ಷಣಗಳು ತುಂಬಾ ನೆನಪಾಗುತ್ತವೆ. ಚಹಾ ಮತ್ತೆಂದು ಆ ಹಳೆಯ ರುಚಿ ಕೊಡುವುದೇ ಇಲ್ಲ.

 ೧೦. ಈ ಡ್ರೆಸ್ ಹಾಕ್ಲ?

ಯಾವ ಬಟ್ಟೆ ಧರಿಸಬೇಕು, ಯಾವ ಬಟ್ಟೆ ಬಿಡಬೇಕು? ಇಂತಹ ಗೊಂದಲ ಉಂಟಾದಾಗಲೆಲ್ಲ ನಾವು ಮೊರೆ ಹೋಗುತ್ತಿದೆ ಅಮ್ಮನಿಗೆ. ನಿಖರವಾದ, ಸರಿಯಾದ ಅಭಿಪ್ರಾಯ ಅಮ್ಮ ಅಲ್ಲದೆ ಮತ್ತ್ಯಾರು ಕೊಟ್ಟಾರು ಅಲ್ಲವೇ?! ಆದರೆ ಇವಾಗ ನಿಮ್ಮ ಅಮ್ಮನ ಬಳಿ ಹೋಗಿ ನಿಮ್ಮ ಬಟ್ಟೆ ಹೇಗಿದೆ ಎಂದು ಕೇಳೋದಕ್ಕೆ ಆಗೋಲ್ಲ, ಯಾಕೆಂದರೆ ಆಕೆ ನಿಮ್ಮೊಡನೆ ಇಲ್ಲ.

 

Leave a Reply

%d bloggers like this: