ನಮಗೆ ತಿಳಿದಿದೆ ಈ ಗರ್ಭಧಾರಣೆಯ ಅವಧಿಯು ಎಷ್ಟೊಂದು ಏರಿಳಿತಗಳಿಂದ ಕೂಡಿರುತ್ತದೆ ಎಂದು. ಗರ್ಭಧಾರಣೆಯ ಬಗ್ಗೆ ಓದುವುದು, ಎಲ್ಲಾ ಔಷಧಿಗಳು ಹಾಗು ಮಾಡಬೇಕಾದ ಕೆಲಸಗಳ ನಿಗಾವಹಿಸುವುದ ಹಾಗು ಎಲ್ಲಾ ಸುಗುಮವಾಗಳು ನೀವು ತೆಗೆದುಕೊಳ್ಳಬೇಕಿರುವ ಮುಂಜಾಗ್ರತ ಕ್ರಮಗಳು. ಹಾಗಿದ್ದೂ,ನೀವು ಗರ್ಭಿಣಿಯಾದಾಗ ಎದುರಾಗುವ ಕೆಲವೊಂದು ಪರಿಸ್ತಿಥಿಗಳು ಹಾಗು ತೊಡಕುಗಳನ್ನು ನಿಭಾಯಿಸಲು ನೀವು ಅದರ ಬಗ್ಗೆ ತಿಳಿದಿರಬೇಕಾಗುತ್ತದೆ.
೧. ಅತೀವ ವಾಕರಿಕೆ ಹಾಗು ವಾಂತಿ ಮಾಡುವುದು
ವಾಕರಿಕೆ ಹಾಗು ವಾಂತಿ ಮಾಡುವುದು ಗರ್ಭಿಣಿಯಾದಾಗ ಅನುಭವಿಸುವುದು ಸಹಜ. ಆದರೆ,ಇವು ಅತಿಯಾದಲ್ಲಿ ಕೆಲವು ತೊಂದರೆಗಳನ್ನು ಹುಟ್ಟು ಹಾಕುತ್ತವೆ. ಇದು ನಿಮಗೆ ಊಟ ಮಾಡದಂತೆ ಹಾಗು ನೀರು ಕುಡಿಯದಂತೆ ಮಾಡುವುದು. ಇದರಿಂದ ನಿಮಗೆ ನಿರ್ಜಲೀಕರಣ ಉಂಟಾಗಬಹುದು ಹಾಗು ನಿಮ್ಮ ಗರ್ಭಕ್ಕೆ ಹೊಡೆತ ಬೀಳಬಹುದು. ನಿರ್ಜಲೀಕರಣವಾಗುವುದು ಅಥವಾ ಊಟ ಮಾಡದೆ ಇರುವುದು ನಿಮ್ಮ ಮಗುವಿಗೆ ಬಹಳ ಅಪಾಯಕಾರಿ.ಹೀಗಾಗಿ, ನೀವು ಇದನ್ನು ಎದುರಿಸುತ್ತಿದ್ದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ.
೨. ಬಸಿರುನಂಜು
ಅತಿಯಾದ ತಲೆನೋವು, ಹೊಟ್ಟೆ ಬೇನೆ ಹಾಗು ದೃಷ್ಟಿ ಕುಗ್ಗುವಿಕೆ ಈ ಬಸಿರುನಂಜಿನ ಮುಖ್ಯ ಲಕ್ಷಣಗಳು. ಇದೊಂದು ತುಂಬಾ ಗಂಭೀರವಾದ ಪರಿಸ್ಥಿತಿ ಆಗಿದ್ದು, ಇದು ಗರ್ಭಧಾರಣೆಯ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಮಾರಣಾಂತಿಕವಾದದ್ದು. ಇದು ನಿಮ್ಮ ರಕ್ತದೊತ್ತಡವನ್ನು ಗಗನಕ್ಕೇರಿಸುತ್ತದೆ ಹಾಗು ನಿಮ್ಮ ಮೂತ್ರದಲ್ಲಿ ತುಂಬಾನೇ ಹೆಚ್ಚು ಪೋಷಕಾಂಶಗಳು ಹೊರಹೋಗುತ್ತವೆ, ಇದು ಸಾಮಾನ್ಯವಾಗಿ ಗರ್ಭಧಾರಣೆಯ ೨೦ನೆ ವಾರದಿಂದ ಕಾಣುತ್ತದೆ.
೩. ನಿಮ್ಮ ನೀರಿನ ಚೀಲ ಒಡೆಯುತ್ತದೆ
ನೀವು ನಿಮ್ಮ ಪಾಡಿಗೆ ಎಂದಿನಂತೆ ಮನೆಕೆಲಸ ಮಾಡುತ್ತಿರುತ್ತೀರಿ, ಆಗ ತಕ್ಷಣ ನಿಮ್ಮ ಕಾಲುಗಳ ನಡುವೆ ನೀರು ರಭಸವಾಗಿ ಹರಿದು ಬರುತ್ತವೆ.ಇದು ಗರ್ಭಿಣಿಯಾದಾಗ ಸಾಮಾನ್ಯವಾಗಿ ನಿಮ್ಮ ಮೂತ್ರಕೋಶ(bladder)ದ ಮೇಲೆ ಬೀಳುತ್ತಿರುವ ಅತಿಯಾದ ಒತ್ತಡದಿಂದ ಇರಬಹುದು ಅಥವ ನಿಮ್ಮ ನೀರಿನ ಚೀಲ ಒಡೆದುದರಿಂದ ಆಗಿರಬಹುದು. ನೀವು ಅದು ಕೇವಲ ಮೂತ್ರವೋ ಅಥವಾ ಯಾವುದಾದರೂ ಪದರವು ಹರಿದಿದೆಯೋ ಎಂದು ಅನುಮಾನ ಪಡುತ್ತಿದ್ದಲ್ಲಿ, ನಿಮ್ಮ ಮೂತ್ರಕೋಶವನ್ನು ಸಂಪೂರ್ಣ ಖಾಲಿ ಮಾಡಿ, ಅದಾದ ಮೇಲೆಯೂ ಸೋರಿಕೆಯಾಗುತ್ತಿದೆಯಾ ಎಂದು ನೋಡಿ. ಅದು ಆಗುತ್ತಿದರೆ ನಿಮ್ಮ ನೀರಿನ ಚೀಲ ಹರಿದಿದೆ ಎಂದು.
೪. ಗರ್ಭಧಾರಣೆಯ ಮಧುಮೇಹ
ಗರ್ಭಿಣಿಯಾದಾಗ, ನಿಮ್ಮ ದೇಹದಲ್ಲಿ ಆಗುವ ಹಾರ್ಮೋನ್ ಗಳ ಏರಿಳಿತಗಳಿಂದ ನಿಮಗೆ ಮಧುಮೇಹ ಉಂಟಾಗಬಹುದು. ಈ ಗರ್ಭಧಾರಣೆಯ ಮಧುಮೇಹವು ನಿಮಗೆ ತೊದಕುಗೊಳನ್ನು ದ್ವಿಗುಣಗೊಳಿಸುತ್ತವೆ. ನಿಮಗೆ ಇದು ಆಗಿದೆ ಎಂದು ತಿಳಿದೊಡನೆ ನಿಮ್ಮನ್ನು ವೈದ್ಯರು ಅಥವಾ ಸೂಲಗಿತ್ತಿಯರು ಹೆರಿಗೆ ಆಗುವವರೆಗೂ ನೋಡಿಕೊಳ್ಳುತ್ತಾರೆ. ಆದರೆ, ಈ ಗರ್ಭಧಾರಣೆಯ ಮಧುಮೇಹದಿಂದ ಬಳಲುತ್ತಿದ್ದ ಎಷ್ಟೊಂದು ಹೆಣ್ಣು ಮಕ್ಕಳಿಗೆ ಯಾವುದೇ ತೊಂದರೆ ಇಲ್ಲದೆ ಹೆರಿಗೆಯಾಗಿದೆ. ಸೂಕ್ತ ಸಮಯದಲ್ಲಿ ಸರಿಯಾದ ವೈದ್ಯಕೀಯ ರಕ್ಷಣೆ ನೀಡಿದರೆ, ಎಲ್ಲಾ ಸರಿ ಹೋಗುವುದು.
೫. ಸಂಕೋಚನಗಳು
ನಿಮಗೆ ಹೆರಿಗೆಯ ಮುನ್ನ ಕಾಡುವಂತ ನೋವೆಂದರೆ ಅದು ಅವಾಗವಾಗ ಕಾಣಿಸಿಕೊಳ್ಳುವ ಸಂಕೋಚನಗಳ(contractions) ನೋವು. ಇನ್ನೇನು ಹೆರಿಗೆಯ ಆಗಿಬಿಡುತ್ತದೆ ಎನ್ನುವಂತ ನೋವು ಇದಾಗಿದ್ದು, ನಿಮ್ಮನ್ನು ದಾರಿ ತಪ್ಪಿಸುತ್ತದೆ. ನಕಲಿ ಸಂಕೋಚನಗಳು ತೀವ್ರತೆಯಲ್ಲಿ ಹೆಚ್ಚುತ್ತಾ ಹೋಗುವುದಿಲ್ಲ ಹಾಗು ಅವುಗಳು ತುಂಬಾನೇ ಅನಿರೀಕ್ಷಿತವಾಗಿ ಇರುತ್ತವೆ. ಇವುಗಳು ಕಾಣಿಸಿಕೊಂಡ ಒಂದು ಘಂಟೆಯ ನಂತರ ಅಥವಾ ಮತ್ತೆ ಪುನರ್ಜಲೀಕರಣ ಮಾಡಿದಾಗ ಮಾಯವಾಗಬಹುದು. ನಿಮ್ಮ ಗರ್ಭಧಾರಣೆಯ ಮೂರನೇ ತ್ರಿಮಾಸಿಕದಲ್ಲಿ ನಿಮಗೆ ಇವು ಕಾನಿಸಿಕೊಂದಲ್ಲಿ, ಕೂಡಲೇ ವೈದ್ಯರನ್ನು ಸಂಪರ್ಕಿಸಿ.
೬. ಅತಿಯಾದ ರಕ್ತದೊತ್ತಡ
ರಕ್ತದೊತ್ತಡ ಯಾವಾಗ ಹೆಚುತ್ತದೆ ಅಂದರೆ ಅದು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತ ಕೊಂಡೊಯ್ಯುವ ಅಪಧಮಿನಿಗಳು (arteries) ಸಂಕೋಚನಕ್ಕೆ ಒಳಗಾದಾಗ. ಇದು ನಿಮ್ಮ ಮಗುವಿಗೆ ಮಾರಣಂತಿಕವಾಗಬಹುದು, ಏಕೆಂದರೆ ಇದು ನಿಮ್ಮ ಗರ್ಭಕ್ಕೆ ಹೋಗಬೇಕಾದ ರಕ್ತವನ್ನು ತಡೆಯುತ್ತದೆ ಹಾಗು ನಿಮ್ಮ ಮಗುವಿನ ಅಪಧಮನಿಗಳು ಈ ಒತ್ತಡ ಸಹಿಸಲು ಆಗದಿರುವ ಕಾರಣ ಇದು ಇನ್ನು ಹೆಚ್ಚು ತೊಡಕುಗಳನ್ನು ಹುಟ್ಟು ಹಾಕಬಹುದು.
೭. ರಕ್ತಸ್ರಾವ
ನಿಮ್ಮ ಗರ್ಭಧಾರಣೆಯ ಮೊದಲ ತ್ರಿಮಾಸಿಕದಲ್ಲಿ ಆಗುವ ರಕ್ತಸ್ರಾವದ ಮುಖ್ಯಕಾರಣ ಎಂದರೆ ಅದು ಅಪಸ್ಥಾನೀಯ(ectopic) ಗರ್ಭಧಾರಣೆ, ಸುಲಭವಾಗಿ ಹೇಳುವುದಾದರೆ ಗರ್ಭಪಾತ. ಇದು ಏಕೆ ಆಗುತ್ತದೆ ಎಂದರೆ ಫಲವತ್ತಾದ ಅಂಡು (egg) ಸರಿಯಾಗಿ ನಿಮ್ಮ ಗರ್ಭಕೋಶದಲ್ಲಿ ನೆಲೆಯೂರದೆ ಮತ್ತೆಲ್ಲೋ ನೆಲೆಯೂರಿರುತ್ತದೆ. ಇದು ನಿಮ್ಮಲ್ಲಿ ಹುಸಿ ಆಸೆಯನ್ನು ಹುಟ್ಟು ಹಾಕುತ್ತದೆ. ಗರ್ಭಧಾರಣೆಯ ಯಾವುದೇ ಸಮಯದಲ್ಲೂ ರಕ್ತಸ್ರಾವ ಆದರೂ, ಕೂಡಲೇ ವೈದ್ಯರ ಬಳಿ ಭೇಟಿ ನೀಡುವುದು ಅಗತ್ಯವಾಗಿರುತ್ತದೆ.