shreshta-taayiyaguva-bharadalli-naavellaru-maretubiduva-vishayagalu

ಬಾಲ್ಯದಲ್ಲಿ ಬೆಳೆಯುತ್ತ ನಮ್ಮ ಜಗತ್ತೆಲ್ಲಾ ಕೇವಲ ತಂದೆ ತಾಯಿಯರಿಂದ ಕೂಡಿರುತ್ತದೆ. ಹರೆಯಕ್ಕೆ ಕಾಲಿಟ್ಟೊಡನೆ ನನ್ನ ಜಗತ್ತು ಕೇವಲ ನನ್ನಿಂದ ಹಾಗು ಸ್ನೇಹಿತರಿಂದ ಕೂಡಿತ್ತು. ಮದುವೆಯ ನಂತರ ಪ್ರಾಮುಖ್ಯತೆಯನ್ನು ನನ್ನ ಗಂಡ ಪಡೆದುಕೊಂಡರು. ಆದರೆ, ತಾಯಿ ಆದ ನಂತರ ನನ್ನ ಪುಟ್ಟ ಕಂದಮ್ಮನೆ ನನ್ನ ಸರ್ವಸ್ವ! ನನ್ನ ಮಗುವಿನ ಖುಷಿಗೆ ಹಾಗು ಅದರ ಆರೋಗ್ಯಕರ ಬೆಳವಣಿಗೆಗೆ ನಾನು ಏನು ತ್ಯಾಗವಾದರೂ ಮಾಡಲು ಸಿದ್ಧನಿದ್ದೇನೆ.

ನಿಜ ಹೇಳ್ಬೇಕು ಅಂದ್ರೆ, ನಾವುಗಳು ನಮ್ಮ ಸಂಸಾರದ ವಿಷಯಗಳಲ್ಲಿ ಎಲ್ಲವನ್ನು ಮೀರಿ ನಿಂತು ಮನೆಯವರೆಲ್ಲರ ಒಳಿತಿಗಾಗಿ ಶ್ರಮಿಸುತ್ತೀವಿ. ಅದರಲ್ಲೂ ಮುಖ್ಯವಾಗಿ ನಮ್ಮ ಮಕ್ಕಳಿಗಾಗಿ. ತಾಯಿಯಾದ ಮೊದಲಿನಲ್ಲಿ ನಾವು ನಮ್ಮ ಮಕ್ಕಳ ಪೋಷಣೆಯಲ್ಲಿ ಎಷ್ಟು ತೊಡಗಿಕೊಂದಿರುತ್ತೇವೆ ಎಂದರೆ, ನಾವು ಒಂದು ಮುಖ್ಯವಾದ ವ್ಯಕ್ತಿಯ ಬಗ್ಗೆಯೇ ಮರೆತು ಬಿಟ್ಟಿರುತ್ತೀವಿ. ಅದು ಯಾರು ಗೊತ್ತ?….ಬೇರೇ ಯಾರು ಅಲ್ಲ “ನೀವೇ” ! ಹೌದು! ತಾಯಿಯಲ್ಲ, ಮಗಳಲ್ಲ, ಅಥವಾ ನೀವು ಪಡೆದಿರುವ ಪದವಿ ಅಲ್ಲ, ನೀವು ಹಾಗು ನೀವು ಮಾತ್ರ!

ಈ ವಾಸ್ತವತೆಯು ಅರಿತಾಗ ನನಗೆ ಘಾಸಿ ಆಯಿತು. ನಾನು ಚಿಕ್ಕ ಚಿಕ್ಕ ವಿಷಯಗಳಿಗೂ ಸಿಟ್ಟು ಮಾಡಿಕೊಳ್ಳುತ್ತಿದೆ ಹಾಗು ಎಲ್ಲದರಿಂದಲೂ ಇರಿಸುಮುರಿಸು ಉಂಟಾಗುತ್ತಿತ್ತು. ಪಾಪ, ನನ್ನ ಗಂಡ ಹಾಗು ನನ್ನ ಮಕ್ಕಳ ನನ್ನನ್ನ ಅದು ಹೇಗೋ ಸಹಿಸಿಕೊಳ್ಳುತ್ತಿದ್ದರು. ನಾನು ನನ್ನ ಆರೋಗ್ಯದ ಕಡೆ ಆಗಲಿ ಅಥವಾ ನನ್ನ ಬಾಹ್ಯ ಸೌಂದರ್ಯದ ಬಗೆ ಆಗಲಿ ಗಮನವೇ ವಹಿಸುತ್ತಿರಲಿಲ್ಲ. ಒಂದು ಕಾಲದಲ್ಲಿ ಕಾಂತಿಯುಕ್ತವಾಗಿ ಇದ್ದ ನನ್ನ ತ್ವಚೆಯು ಈಗ ಕಳೆಗುಂದಿತ್ತು. ಒಳ್ಳೆ ಶೀಷೆಯಂತೆ ಇದ್ದ ನನ್ನ ಆಕಾರವು ಈಗ ಚೌಕಾಕಾರ ಆಗಿದೆ. ನನ್ನ ರೇಷ್ಮೆಯಂತ ಕೂದಲು ಈಗ ಒಣಪೊರಕೆಯಂತೆ ಆಗಿದೆ.

ನಾನು ಇಷ್ಟಪಟ್ಟು ಮಾಡುತ್ತಿದಂತ ಕೆಲಸಗಳಾದ ಓದುವುದು, ಹಾಡುವುದು, ವಾಯುವಿಹಾರಕ್ಕೆ ಹೋಗುವುದು, ಅಡುಗೆ ಮಾಡುವುದು ಹೇಗಾಯಿತು ಅಂದರೆ, ನಾನು ದಿನರಾತ್ರಿ ಬೆನ್ನು ಹಾಗು ಮಂಡಿ ನೋವಿನೊಂದಿಗೆ ಮಲಗಬೇಕಿತ್ತು. ಇಲ್ಲವೆಂದರೆ, ಅವೆಲ್ಲ ಏನು ಮಾಡದೆ ದಿನ ಸಾಗಿಸಬೇಕಿತ್ತು. ಹರಡಿದ ಕೂದಲು, ದೊಗಲ ಪ್ಯಾಂಟ್, ಒಂದಳತೆ ದೊದದ್ದಾದ ಶರ್ಟ್ ಧರಿಸಿ ನನ್ನ ಕಾಂತಿಯುಕ್ತ ತ್ವಚ್ಹೆಯನ್ನು ಕಾಪದಿಕೊಳ್ಳುತ್ತಿದೆ, ಆದರೆ ಅದನ್ನೇ ನಾನು ಈಗ ಕಳೆಗುಂದಿದ ತ್ವಚೆ ಮರೆಮಾಚಲು ಧರಿಸುತ್ತೇನೆ. ನಿಜ ಹೇಳಬೇಕಂದರೆ ಇವೆಲ್ಲಾ ಅಂತಹ ವ್ಯತ್ಯಾಸ ಏನು ಮಾಡಲಿಲ್ಲ. ನನ್ನ ಮಗಳು ನಾನು ಹೇಗಿದ್ದರು ನನ್ನನ್ನು ಇಷ್ಟ ಪಡುತ್ತಿದ್ದಳು. ಆದರೆ ಯಾಕೋ ನನಗೇನೇ ಏನೋ ಸರಿಯಾಗಿಲ್ಲ ಎಂಬ ಭಾವನೆ ಕಾಡುತಿತ್ತು.

ನಾನು ಒಂದು ತಾಯಿಯಾಗಿ, ಒಬ್ಬ ಹೆಂಡತಿಯಾಗಿ ಖುಷಿಯಾಗಿಯೇ ಇದ್ದೆ. ಆದರೆ, ನಾನು ನಾನಾಗಿ ಖುಷಿಯಾಗಿ ಇರಲಿಲ್ಲ. ನನ್ನಲ್ಲಿ ಕೀಳು ಮನೋಭಾವನೆ ಮನೆ ಮಾಡಿಕೊಂಡಿತ್ತು. ಕಾರಣ, ನಾನು ನೋಡಲಿಕ್ಕೆ ಚೆನ್ನಾಗಿ ಕಾಣುತ್ತಿಲ್ಲ ಅಂತ ಅಲ್ಲ ಆದರೆ ನಾನು ನನ್ನ ಒಳಿತಿನ ಕಡೆಯೇ ಗಮನ ಹರಿಸುತ್ತಿಲ್ಲ ಎಂದು. ಹಾಗಾಗಿ, ನಾನು ಏನಾದರು ಮಾಡಲೇ ಬೇಕು ಅಂದುಕೊಂಡೆ. ಮೊದಲನೆಯದಾಗಿ, ನನ್ನ ದಿನಚರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡೆ. ಹಾಗು ನಾನು ಕಾಣುವ ರೀತಿ ಹಾಗು ನನ್ನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದೆ.

ಇದೆಲ್ಲಾ ನಮಗೆ ತಿಳಿದಿಲ್ಲ ಎಂದರ್ಥವಲ್ಲ. ಈ ವಿಷಯಗಳು ಎಲ್ಲ ತಾಯಂದಿರಿಗೂ ತಿಳಿದಿರುತ್ತೆ ಆದರೆ ತಾಯ್ತನದ ಕರ್ತವ್ಯ ಹಾಗು ತಾಯ್ತನದ ಅಪರಾಧಿ ಮನೋಭಾವ ಇವೆಲ್ಲವುಗಳನ್ನು ಬದಿಗೆ ಇಡುವಂತೆ ಮಾಡಿದವು. ತಾಯ್ತನದಿಂದ ಸ್ವಲ್ಪ ವಿರಾಮ ತೆಗೆದುಕೊಂಡರೆ, ಅದಕ್ಕೆ ಪಶ್ಚಾತ್ತಾಪ ಪಡುವುದು ಬೇಡ. ನಿಜ ಹೇಳಬೇಕಂದರೆ ನೀವು ಒಂದು ಒಳ್ಳೆಯ ತಾಯಿ ಆಗಲಿಕ್ಕೆ, ನಿಮ್ಮ ಕಡೆಯೂ ನೀವು ಗಮನಹರಿಸಬೇಕು. ನನ್ನ ತಾಯಿ ನನಗೆ ಯಾವಾಗಲು ಹೇಳುತ್ತಿದ್ದರು “ನೋಡು, ನೀನು ನಿನ್ನ ಬಗ್ಗೆಯೂ ಯೋಚಿಸದೆ ಇರುವಷ್ಟು ನಿಸ್ವಾರ್ಥಿ ಆಗಬೇಡ” ಎಂದು.

ಹಾಗಾಗಿ ನಿಮ್ಮ ತಾಯ್ತನದ ಅಪರಾಧಿ ಮನೋಭಾವ ಬಿಟ್ಟು ನಿಮ್ಮ ಕಡೆಯೂ ಗಮನಹರಿಸಿಕೊಳ್ಳಲು ಮುಂದಾಗಿ. ಇಲ್ಲಿ ನಾವು ಪ್ರಸ್ತಾಪಿಸಿರುವ ಅಂಶಗಳನ್ನು ಪಾಲಿಸಿದರೆ, ನಿಮ್ಮ ಒಳಿತಿಗಾಗಿ ಕೆಲಸ ಮಾಡುವುದು ನಿಮ್ಮ ತಾಯ್ತನದ ಕರ್ತವ್ಯಕ್ಕೆ ಅಡ್ಡಿ ಬರುವುದೇ ಇಲ್ಲ :

೧. ಆಹಾರ

ತಾಯಂದಿರಾಗಿ ನಾವು ತುಂಬಾ ನಿರ್ಲಕ್ಷ್ಯ ತೋರುವ ವಿಷಯವೇ ಇದು. ನಾನು ನನ್ನ ಮಗುವಿಗೆ ಉಣಿಸಲು ಗಂಟೆಗಟ್ಟಲೆ ಪರದದುತ್ತಿದ್ದೆ ಹಾಗು ನನಗೂ ಕೂಡ ಹಸಿವಾದ ಕಾರಣ ನನ್ನ ಮಗುವಿಗೆ ಬೇಗ ಬೇಗ ತಿನ್ನುವಂತೆ ಗದರುತ್ತಿದ್ದೆ. ಹೀಗಾಗಿ, ನಾನು ಮುಂಚೆಯೇ ಊಟ ಮಾಡಿಬಿಡುತ್ತಿದ್ದೆ. ಹೀಗೆ ಮಾಡುವದರಿಂದ ನಾನು ನನ್ನ ಮಗು ಮೇಲೆ ಕೂಗಾಡುವುದು ಕಮ್ಮಿ ಆಯಿತು ಹಾಗು ತಿನಿಸುವುದು ಅಷ್ಟೊಂದು ಆಯಸಕಾರಿ ಆಗಿರಲಿಲ್ಲ. ಇದರಿಂದ ಮನಸ್ಸಿನ ಶಾಂತಿ ಕದಡುತ್ತಿರಲಿಲ್ಲ. 

೨. ನನ್ನ ಸಮಯ 

ತಾಯಿಯಾದ ಮೇಲೆ ಮನೆಯಿಂದ ಹೊರಬರುವುದೇ ಕನಸಾಗಿ ಬಿಡುತ್ತದೆ, ಅದರಲ್ಲೂ ಮಕ್ಕಳು ತುಂಬ ಚಿಕ್ಕವರಿದ್ದಗಂತೂ ಮುಗಿದೇ ಹೋಯಿತು. ಹೀಗಾಗಿ ನಾನು ಅಂಗಡಿಯಿಂದ ಮನೆಗೆ ತರಿಸಿಕೊಲ್ಲುತ್ತಿದ್ದ ದಿನಸಿ ಹಾಗು ತರಕಾರಿಗಳನ್ನು, ನಾನೇ ಖುದ್ದು ಹೋಗಿ ತರುತ್ತಿದ್ದೆ. ನಾನು ಹೊರಗೆ ಹೋಗಿ ನನಗಾಗಿಯೇ ಎಂದು ಕನಿಷ್ಟಪಕ್ಷ ಒಂದು ೧೫ ನಿಮಿಷಗಳನ್ನಾದರೂ ಮೀಸಲಿಟ್ಟುಕೊಂಡಿದ್ದೆ. ನನ್ನಲ್ಲಿ ಉತ್ಸಾಹ ಮರುಕಳಿಸಿಲಿಕ್ಕೆ ಅಷ್ಟೇ ಸಾಕಾಗಿತ್ತು.

೩. ಯೋಗ

ಯೋಗಕ್ಕೆ ಹೆಣ್ಣಿನ ಮನಸ್ಸು ಹಾಗು ದೇಹದ ಮೇಲೆ ಅಪಾರವಾದ ಒಳ್ಳೆ ಪರಿಣಾಮಗಳನ್ನು ಬೀರುವಂತ ಶಕ್ತಿಯಿದೆ. ಅದರಲ್ಲೂ ನೀವು ಗರ್ಭಧಾರಣೆ ಅಂತ ಕಷ್ಟಕರ ಸಮಯವನ್ನು ಕಳೆದಿರುವಾಗ. ನಾನು ಗರ್ಭಿಣಿ ಆಗಿದ್ದಾಗ, ಅತೀವ ವಾತ ನೋವನ್ನು ಅನುಭವಿಸಿದೆ. ಮಗುವಾದ ಮೇಲು ಕೂಡ ನೋವು ಆಗಾಗ ಕಾನಿಸಿಕೊಳ್ಳುತಿತ್ತು. ನಾನು ತುಂಬಾ ಕಟ್ಟುನಿಟ್ಟಾಗಿ ಪ್ರತಿದಿನ ಯೋಗ ತರಬೇತಿಗಳಿಗೆ ಹೋಗುತ್ತಿದ್ದೆ. ಈಗಲೂ ಅದನ್ನು ಮುಂದುವರೆಸುತ್ತಿದ್ದೇನೆ. ಈ ಕಾರಣಕ್ಕೆ ನನ್ನ ಮನಸ್ಸು ಹಾಗು ನನ್ನ ದೇಹ ನನಗೆ ಅಭಾರಿ ಆಗಿವೆ. ಏನಾದರು ಕಾರಣಕ್ಕೆ ನಾನು ಹೋಗದೆ ಇದ್ದರೆ, ಕಡೆ ಪಕ್ಷ ಮನೆಯಲ್ಲೇ ಸೂರ್ಯನಮಸ್ಕಾರ ಮಾಡುತ್ತೇನೆ. ಇನ್ನೂ ಒಳ್ಳೆ ವಿಷಯ ಏನಪ ಅಂದರೆ, ನಾನು ಇದನ್ನು ಮನೆಯಲ್ಲಿ ಮಾಡುವಾಗ ನನ್ನ ಮಗು ಕೂಡ ಅದನ್ನು ನೋಡಿ ಕಲಿಯಲು ಯತ್ನಿಸುತ್ತದೆ.

೪. ತ್ವಚೆ

ನನಗೆ ಮಗುವಾದ ನಂತರ ನಾನು ತುಂಬಾ ಹೆಚ್ಚಾಗಿ ನಿರ್ಲಕ್ಷಿಸಿದ್ದು ಅಂದರೆ ಅದು ತ್ವಚೆಯನ್ನು. ನಮ್ಮಲ್ಲಿ ಬಹಳಷ್ಟು ಜನ ಹೀಗೆ ಮಾಡವುದು.ನಿಜ ತಾನೇ? ! ನಾನು ಗರ್ಭಿಣಿಯಾದಾಗ ನನ್ನ ಉದರದ ಮೇಲೆ ಹಿಗ್ಗಿದ ಗುರುತುಗಳು ಆಗಬಾರದು ಎಂದು ಅದರರ ಮೇಲೆ ಬಾಡಿ ಬಟರ್ (Body butter) ಸವರುತ್ತಿದ್ದೆ. ಇದು ಅದ್ಬುತ ಕಾರ್ಯವನ್ನು ಮಾಡಿತು. ಆದರೆ ಮಗುವಾದ ನಂತರ ನನಗೆ “ಹೊಸ ಮಗು” ಗಾಳಿ ಬೀಸಿ ನಾನು ಅದನ್ನ ಮಾಡುವುದೇ ಬಿಟ್ಟೆ. ನನ್ನ ತ್ವಚೆಯು ತುಂಬಾ ಒಣಗಿ, ಒಡೆಯುತ್ತಿತ್ತು. ನಿಮ್ಮ ತ್ವಚೆಯು ಬಿಗಿಯಾಗಲು ಹಾಗು ಕಾಂತಿಯುಕ್ತವಾಗಿರಲು ಮಸಾಜ್ ಆಯಿಲ್ ಬಳಸುವುದು ಅತಿ ಅವಶ್ಯಕ. ನನ್ನ ತೊಟ್ಟುಗಳ ಬಗ್ಗೆ ಅಂತೂ ಮಾತನಾಡುವ ಹಾಗೆಯೇ ಇಲ್ಲ! ಅವು ಯಾವಾಗಲು ನೋಯುತ್ತಿದ್ದವು ಹಾಗು ನನಗೆ ಇನ್ನೊಂದು ಬಾರಿ ಮಗುವಿಗೆ ಉಣಿಸಬಾರದೆಂದು ಅನಿಸಿಬಿಡುತಿತ್ತು. ಇದರಿಂದಾಗಿಯೇ ನಾವು ಯಾವಾಗಲು ತೊಟ್ಟುಗಳ ಪೋಷಣೆಯ ಬೆಣ್ಣೆ (Nipple care better) ಯನ್ನು ಉಪಯೋಗಿಸಬೇಕು. ಇವುಗಳು ನಿಮ್ಮ ತೊಟ್ಟುಗಳನ್ನು ಹಿತವಾಗಿಸುವು ಹಾಗು ಅದನ್ನು ಇನ್ನೊಮ್ಮೆ ಉಣಿಸಿಲಿಕ್ಕೆ ತಯಾರು ಮಾಡುತ್ತವೆ.

ಯಾವಾಗಲು ಒಂದು ನೆನಪಿಡಿ, ನಿಮ್ಮ ಮಗುವಿಗೆ ನೀವು ಯಾವಾಗಲು ಬೇಕು ಹಾಗು ನಿಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಲು ನೀವು ಸದಾ ಚೆನ್ನಾಗಿ ಇರಬೇಕು.

#ಹಿಮಾಲಯ_ಪೋಷಣೆ

ಹೆಚ್ಚಿನ ಮಾಹಿತಿಗೆ ನಮ್ಮನ್ನು ನಿರೀಕ್ಷಿಸುತ್ತಿರಿ….

Leave a Reply

%d bloggers like this: