atteya-manege-kaalittodane-neevu-maadabekada-7-tyaagagalu-1

ತಾಯ್ತನ ಅನ್ನೋದು ಹೆಣ್ಣಿನ ಬಾಳಿನ ಒಂದು ಸುಮಧುರ ಘಟ್ಟ. ನಿಮಗೆ ಇವಾಗ ತಾನೇ ಮಗುವಾಗಿದೆ.ನಿಮ್ಮ ಮಗುವು ಆರೋಗ್ಯಾವಾಗಿ ಬೆಳೆಯುತ್ತಿದೆ.ಮತ್ತೇನು ಬೇಕು? ಎಲ್ಲವೂ ಹೇಗೆ ಬೇಕೋ ಹಾಗಿದೆ! ನಿಮ್ಮ ಹೊಸಜೀವನವು ನಿಮಗೆ ನೀಡಿರುವ ಅಥವಾ ನಿಮ್ಮ ಮೇಲೆ ಎರಗುವಂತೆ ಮಾಡಿದ ಬದಲಾವಣೆಗಳಿಗೆ ನೀವು ಹಾಗು ನಿಮ್ಮ ಪತಿ ಈಗ ತಾನೇ ಒಗ್ಗಿಕೊಳ್ಳುತ್ತಿದ್ದೀರ. ಆದರೆ ಒಂದು ಮಾತ್ರ ಸರಿ ಅನಿಸುತ್ತಿಲ್ಲ. ಅದುವೇ ನಿಮ್ಮ ಅತ್ತೆಯು ನೀವು ಮಾಡುವ ಎಲ್ಲಾ ಕೆಲಸಗಳಿಗೂ ಚಕಾರ ಎತ್ತುವುದು. “ನೋಡಮ್ಮ,ಅದು ಹಾಗೆ ಮಾಡೋದು ಸರಿ ಅಲ್ಲ” ,”ನಾನು ನಿನ್ ಥರ ಮಾಡ್ತಾ ಇರ್ಲಿಲ್ಲ” ಅಥವಾ “ನೀನು ನಿನ್ನ ನಾದಿನಿಯನ್ನ ನೋಡಿ ಯಾಕೆ ಕಲಿತುಕೊಳ್ಳಲ್ಲ?”, ಅಯ್ಯೋ ನಿಮ್ಮ ತಲೆಯೇ ಕೆಟ್ಟುಬಿಡುತ್ತದೆ. ನೀವು ನಿಮ್ಮ ಅತ್ತೆ ಮನೆಯಲ್ಲಿ ಎದುರಿಸುವಂತ ಕಠಿಣ ಪರಿಸ್ಥಿತಿಗಳು ಇಲ್ಲಿವೆ :

೧. ಸಂಘರ್ಷಗಳು

ಹೌದು ಅತ್ತೆಯು ವಯಸ್ಸಿನಲ್ಲಿ ಹಿರಿಯರು ಹಾಗು ಅವರ ಅನುಭವ ಕೂಡ ದೊಡ್ಡದು.ನೀವು ಅವರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತೀರಿ. ಆದರೂ, ಸದಾ ಕಾಲ ಗೊಣಗುತ್ತಾ, ನಿಮನ್ನು ಬೇರೆಯವರಿಗೆ ಹೋಲಿಸಿ ಹೀಯಾಳಿಸುತ್ತ ಇದ್ದರೆ, ಯಾರಿಗೆ ತಾನೇ ಇಷ್ಟವಾಗುತ್ತೆ ಹೇಳಿ. ಇದು ನಿಮಗೆ ಹುಚ್ಚು ಹಿಡಿಯುವಂತೆ ಮಾಡಿ, ಓಡಿ ಹೋಗಬೇಕು ಎನಿಸುವಂತೆ ಮಾಡಿಬಿಡುತ್ತದೆ.

೨. ಅಡಚಣೆಗಳು

ಇದು ಇನ್ನು ನಿಮ್ಮ ಮೊದಲ ಮಗುವಾಗಿದ್ದರೆ, ನಿಮ್ಮ ಅತ್ತೆ ಮಾವಂದಿರು ನಿಮ್ಮ ಎಲ್ಲಾ ಆಗು ಹೋಗುಗಳಲ್ಲಿ ಮೂಗು ತೂರಿಸುತ್ತಲೇ ಇರುತ್ತಾರೆ. ಅವರ ಪ್ರಕಾರ ಒಳ್ಳೆ ತಾಯಿ ಆಗಲಿಕ್ಕೆ ಕೇವಲ ಅನುಭವ ಒಂದಿದ್ದರೆ ಸಾಕು. ಹೌದು! ನೀವು ಇನ್ನು ಮೊದಲಬಾರಿಗೆ ತಾಯಿ ಆದಾಗ ತಪ್ಪುಗಳು ಮಾಡುವುದು ಸಹಜ. ಆದರೆ, ನೀವು ತಪ್ಪುಗಳಿಂದಲೇ ತಾನೇ ಕಲಿಯೋದು. ಅವರು ಹೇಳಿದಂತೆಯೇ ಮಾಡಬೇಕೆಂದು ಒತ್ತಾಯ ಮಾಡುವುದಾಗಲಿ ಅಥವ ನಿಮ್ಮ ಕೆಲಸ ಅವರಿಗೆ ಮಾಡಲು ಬಿಡುವಂತೆ ತಾಕೀತು ಮಾಡಿದರೆ, ಪರಿಸ್ಥಿತಿಯು ಇನ್ನಷ್ಟು ಬಿಗಡಾಯಿಸುತ್ತದೆ. ಇದಕ್ಕಾಗಿ ನಾವು ಹೇಳುವುದು ಏನಂದರೆ, ನೀವು ಹಾಗು ನಿಮ್ಮ ಅತ್ತೆ ಮಾವ ಕೂತು ಮಾತನಾಡಿ ಎಂದು. ಅವರ ಸಹಾಯ ತುಂಬಾ ಉಪಕಾರಿಯಾಗಿದ್ದು ನಿಮಗೆ ಬೇಕಾದಾಗ ತಾವೇ ಕೇಳಿ ಪಡೆಯುವಿರಿ ಎಂದು ಅವರಿಗೆ ತಿಳಿಸಿ. ಇದು ಅವರಿಗೆ ಪರೋಕ್ಷವಾಗಿ ಏನು ಹೇಳುತ್ತಿದ್ದೀರಿ ಎಂದು ಅರ್ಥೈಸುತ್ತದೆ.

೩. ಕೌಟುಂಬಿಕ ಮೌಲ್ಯಗಳು

ಪ್ರತಿಯೊಂದು ಕುಟುಂಬವು ಭಿನ್ನವಾಗಿ ಇರುತ್ತವೆ ಹಾಗು ಪ್ರತಿಯೊಂದು ಕುಟುಂಬಕ್ಕೂ ಅದರದ್ದೇ ಆದ ಮೌಲ್ಯಗಳು ಹಾಗು ಪದ್ದತಿಗಳು ಇರುತ್ತವೆ. ನೀವು ಬೆಳೆದು ಬಂದ ರೀತಿಯೇ ಒಂದಾಗಿರುತ್ತದೆ ಹಾಗು ನಿಮ್ಮ ಪತಿ ಬೆಳೆದು ಬಂದಿರುವ ರೀತಿಯೇ ಬೇರೆಯದ್ದಾಗಿರುತ್ತದೆ. ಇದೇನು ಸಂಘರ್ಷಗಳನ್ನು ಹುಟ್ಟು ಹಾಕದಿದ್ದರೂ, ಮನಸ್ತಾಪಗಳನ್ನಂತು ಹುಟ್ಟು ಹಾಕುತ್ತವೆ. ಉದಾಹರಣೆಗೆ, ನೀವು ಚಿಕ್ಕವರಿದ್ದಾಗ ನಿಮ್ಮ ಸುತ್ತಮುತ್ತಾ ನಿಮ್ಮ ಚಿಕ್ಕಪ್ಪ-ಚಿಕ್ಕಮ್ಮ , ದೊಡ್ಡಪ್ಪ-ದೊಡ್ಡಮ್ಮ  ಸದಾ ಇರುತ್ತಿರುವುದಿಲ್ಲ. ಆದರೆ ನಿಮ್ಮ ಅತ್ತೆ ಮನೆಯಲ್ಲಿ ಸಂಬಂಧಿಕರು ಅದು ತಮ್ಮದೇ ಮನೆಯಂತೆ ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸಬಹುದು ಹಾಗು ನಿಮ್ಮ ಮನೆಯಲ್ಲೇ ಸದಾಕಾಲ ಠಿಕಾಣಿ ಹೂಡಬಹುದು. ನಿಮ್ಮ ಅತ್ತೆಯು ಪ್ರತಿದಿನ ನಡೆದದ್ದೆಲ್ಲ ಅವರಿಗೆ ತಿಳಿಸುವಂತೆ ನಿಮಗೆ ತಾಕೀತು ಮಾಡಬಹುದು.

೪. ಗುಂಪುಗಾರಿಕೆ

ಇದು ನಾವೆಲ್ಲರೂ ಎದುರಿಸಿಯೇ ಇರುತ್ತೇವೆ. ನಮ್ಮ ಪತಿಯರು ನಮ್ಮ ಬೆಂಬಲಕ್ಕೆ ನಿಲ್ಲದೆ, ಅವರ ಅಮ್ಮ ಏನೇ ಹೇಳಿದರು ಕೋಲೆಬಸವನಂತೆ ತಲೆದೂಗುವುದು ನೋಡಿದಿವಿ. ನೋಡಿ, ನಿಜ ಹೇಳಬೇಕಂದರೆ ಎಲ್ಲಾ ಗಂಡಸರು ತಮ್ಮ ತಾಯಿಯ ಮುದ್ದಿನ ಮಕ್ಕಳು ಹಾಗು ಅವರಿಗೆ ತಾಯಿಯೇ ಅತಿಪ್ರಾಮುಖ್ಯ ವ್ಯಕ್ತಿ.ಹಾಗಾಗಿ ನೀವು ಏನು ಮಾಡಲು ಆಗುವುದಿಲ್ಲ. ನೀವು ಏನೇ ಮಾಡಿದರು, ಅದು ಅವರಿಗೆ ಅವರ ತಾಯಿ ಮಾಡಿದಂತೆ ಅನಿಸುವುದಿಲ್ಲ. ಕೆಲವೊಮ್ಮೆ ಇದು ಅವರು ನಿಮ್ಮನ್ನು ಅವರ ತಾಯಿಗೆ ಹೋಲಿಕೆ ಮಾಡಿ ಬಯ್ಯುವವರೆಗೂ ಹೋಗಬಹುದು. ಇದು ನಿಮಗೆ ನಿಮ್ಮ ಮೇಲೆ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿದರು, ಇದನ್ನು ನೀವು ತುಂಬಾ ಸಂಭಾವಿತರಾಗಿ ಬಗೆಹರಿಸಬೇಕು.

೫. ಖಾಸಗಿತನ

ಸದಾಕಾಲ ನಿಮ್ಮೊಡನೆ ನಿಮ್ಮ ಅತ್ತೆ ಮಾವ ಇದ್ದರೆ, ಅದು ನಿಮ್ಮ ಖಾಸಗಿತನಕ್ಕೆ ಪೆಟ್ಟು ಮಾಡುತ್ತದೆ. ಮೊದಲೇ ನಿಮಗೆ ಮಗುವಾದ ನಂತರ, ನಿಮ್ಮ ಗಂದನೊಂದಿಗೆ ಸಿಗುವ ಏಕಾಂತದ ಸಮಯವೇ ಕಮ್ಮಿ. ನೀವು ಹೇಗೋ ನಿಮ್ಮ ದಿನದ ಎಲ್ಲಾ ಕೆಲಸಗಳನ್ನು ಮಾಡಿಕೊಂಡು, ಹಾಗೂಹೀಗೂ ಸ್ವಲ್ಪ ಏಕಾಂತದ ಸಮಯ ಕಳೆಯುತ್ತಿರುತ್ತೀರಿ. ನೀವಿ ಇಷ್ಟೊಂದು ಹತಾಶರಾಗಿ ಪಡೆಯುವ ಸ್ವಲ್ಪ ಸಮಯದಲ್ಲೂ ಸಹಾ ನಿಮ್ಮ ಅತ್ತೆ ಮಾವ ನಿಮ್ಮ ಮಧ್ಯೆ ಬಂದರೆ, ಅದಕ್ಕಿಂತ ವಿಪರ್ಯಾಸ ಬೇರೊಂದು ಇಲ್ಲ. ಹೌದು ಬಾಯಿ ಮಾತಲ್ಲಿ ನಿಮಗೆ ಒಳ್ಳೆಯದಾಗುವುದು ಮಾತ್ರ ಅವರಿಗೆ ಬೇಕು ಅನ್ನುತ್ತಾರೆ, ಅದು ನಿಜವೂ ಕೂಡ, ಆದರೆ ತಾಂತ್ರಿಕವಾಗಿ ನೀವು ಇದರ ಬಗ್ಗೆ ಏನು ಮಾಡಲು ಆಗುವುದಿಲ್ಲ.

೬ . ಸದಾಕಾಲ ಹೋಲಿಕೆಗಳು

ನಿಮಗೆ ಒಂದು ನಾದಿನಿ ಇದ್ದು,ಅವಳಿಗೂ ಮಗುವಿದ್ದರೆ ಅಂತೂ ನಿಮ್ಮ ಪಾಡು ದೇವರೇ ಗತಿ! ನಿಮ್ಮ ಅತ್ತೆ ಮಾವ ನಿಮ್ಮನ್ನು ಪ್ರತಿಕ್ಷಣ,ಪ್ರತಿದಿನ ಅವಳೊಂದಿಗೆ ಹೋಲಿಕೆ ಮಾಡುತ್ತಾರೆ. ಅವರ ಪ್ರಕಾರ ಅವರ ಮಗಳಿಗೆ ತಾಯ್ತನ ಅನ್ನೋದು ಕರಗತ ಆಗಿಬಿಟ್ಟಿದೆ,ಜಗತ್ತಿನ ಶ್ರೇಷ್ಠ ತಾಯಿ ಅವಳು. ಆದರೆ,ನೀವು ಮಾತ್ರ ಮೊದಲ ಬಾರಿಗೆ ಮಗು ಹೆತ್ತ ಏನು ಅರಿಯದ ಗೊಂದಲಗಳ ತುಂಬಿಕೊಂಡ ತಾಯಿ ! ಸಣ್ಣ ಸಣ್ಣ ವಿಷಯಗಳಿಗೂ ಅವಳ ಬಳಿ ಸಲಹೆ ಪಡಿ ಎಂದು ನಿಮಗೆ ಕಾಟ ಕೊಡಬಹುದು. ಇದಕ್ಕೆ ಸರಿಯಾದ ಪರಿಹಾರ ಅಂದರೆ, ಏನು ಪ್ರತಿಕ್ರಿಯೆ ನೀಡದೆ ಇದ್ದುಬಿಡುವುದು. ನೀವು ಎದುರುಮಾತಡಿದರೆ, ನೀವೇ ಕೆಟ್ಟವರಾಗುತ್ತೀರಿ. ಇದು ಎಷ್ಟೇ ಕಷ್ಟ ಅನಿಸಿದರೂ, ನಿಮಗೆ ತಡಿಯಲು ಆಗುವುದೇ ಇಲ್ಲ ಅನಿಸಿದಿರೂ, ನೀವು ಈ ಸಮಯವನ್ನು ದಾಟುತ್ತೀರಿ. ಯಾವಾಗಲು ನಿಮ್ಮ ಅಭಿಪ್ರಾಯ ಹೇಳಲು ಹಿಂಜರಿಯಬೇಡಿ ಹಾಗು ಹೇಳಿದ್ದನ್ನೆಲ್ಲ ಮರುಯೋಚಿಸದೆ ಮಾಡುವಂತೆ ಆಗಬೇಡಿ.

Leave a Reply

%d bloggers like this: