nimma-jeevana-sulabha-maadalu-7-paakavidhaanagalu

ಬಹುತೇಕ ತಾಯಂದಿರಿಗೆ ಹಾಗು ತಾಯಿ ಆಗುವವರಿಗೆ ಕಾಡುವ ದೊಡ್ಡ ಪ್ರಶ್ನೆ ಎಂದರೆ ಅದು ಮಗು ಎದೆಹಾಲು ಬಿಟ್ಟು ಇನ್ನಿತರೆ ಪದಾರ್ಥಗಳನ್ನು ಸೇವಿಸಲು ಶುರುಮಾಡಿದೊಡನೆ, ಮಗುವಿಗೆ ಏನು ಆಹಾರ ನೀಡುವುದು ಎಂದು. ಇದರೊಂದಿಗೆ ಉದ್ಭವವಾಗುವ ಪ್ರಶ್ನೆಗಳು ಎಂದರೆ ಅದು ಮಕ್ಕಳಿಗೆಂದೇ ಇರುವ ಆಹಾರ ಉತ್ಪನ್ನಗಳ ಬೆಲೆ ಏನು, ಅವು ಯಾವ ಸಾಮಗ್ರಿಗಳಿಂದ ಮಾಡಿರುತ್ತಾರೆ, ಅವುಗಳು ಮಗುವಿಗೆ ಹಾನಿ ಮಾಡುವಂತ ರಾಸಾಯನಿಕ ಪದಾರ್ಥಗಳು ಇದೆಯಾ ಎಂದು. ನಿಮಗೆ ಸಹಾಯವಾಗಲಿ ಎಂದೇ ನಾವು ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು, ಜಾಸ್ತಿ ಖರ್ಚಿಲ್ಲದೆ ಹಾಗು ಸಮಯ ತೆಗೆದುಕೊಳ್ಳದೆ ಮಾಡಬಹುದಾದ ರುಚಿಯಾದ ಮಕ್ಕಳ ಆಹಾರ ಪದಾರ್ಥಗಳ ಬಗ್ಗೆ ವಿವರಿಸುತ್ತೇವೆ. ಹಾಗು ನೀವೇ ನಿಮ್ಮ ಕೈಯಾರೆ ಮಾಡುವುದರಿಂದ, ಅದರಲ್ಲಿ ಏನು ಬೇರೆಸಿರುತ್ತಾರೆ ಎಂಬ ಚಿಂತೆ ಮಾಡಬೇಕಿಲ್ಲ.

ಮೊದಲನೆಯದಾಗಿ ನಿಮ್ಮ ಮಗುವಿಗೆ ಏನು ಕೊಡಬಾರದೆಂದು ಹೇಳುತ್ತೇವೆ. ಕೆಲವೊಂದು ಪದಾರ್ಥಗಳು ನಿಮ್ಮ ಮಗುವಿಗೆ ಮೈನೂರತೆ ಉಂಟು ಮಾಡುತ್ತವೆ. ಅವುಗಳ ಪಟ್ಟಿ ಇಲ್ಲಿದೆ :

೧. ಮೊಟ್ಟೆ

೨.ಮೀನು

೩.ಚಿಪ್ಪುಮೀನು

೪.ಸೋಯಾ

೫.ಗೋಧಿ

೬.ಇತರೆ ಬೀಜಗಳು

ನೈಸರ್ಗಿಕ ಪದಾರ್ಥಗಳನ್ನು ನಿಮ್ಮ ಮಗುವಿನ ಆಹಾರದಲ್ಲಿ ಉಪಯೋಗಿಸುವುದು ಒಳ್ಳೆಯದು. ಅವುಗಳೆಂದರೆ ಬಹುತೇಕ ಹಣ್ಣುಗಳು, ಕೆಲವು ತರಕಾರಿಗಳು (ಆಲೂಗಡ್ಡೆ, ಗೆಣೆಸು, ಸೌತೆಕಾಯಿ ಹಾಗು ಇತರೆ).

ಇಲ್ಲಿದೆ ಭಾರತೀಯ ತಾಯಂದಿರು ಮನೆಯಲ್ಲೇ ಮಾಡಬಹುದಾದ ಮಕ್ಕಳ ಆಹಾರ ಪದಾರ್ಥಗಳು. ೪-೬ ತಿಂಗಳ ಮಕ್ಕಳಿಗೆ :

೧. ಹಾಲು-ತೆಕ್ಕೆಗೋಧಿ(oats) ಗಂಜಿ

ಇದನ್ನು ಮಾಡಲು ನಿಮಗೆ ಬೇಕಾಗಿರುವುದು ೧/೪ ಕಪ್ ನಷ್ಟು ನೈಸರ್ಗಿಕ ತೆಕ್ಕೆಗೋಧಿ/ಓಟ್ಸ್, ಮುಕ್ಕಾಲು ಕಪ್ ನಷ್ಟು ನೀರು ಹಾಗು ಪುಡಿಹಾಲು. ೪-೬ ತಿಂಗಳ ಮಕ್ಕಳಿಗೆ ಸರಿಯಾಗಿ ಸೋಸಿದ ತೆಕ್ಕೆಗೋಧಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಹಾಗು ಸಣ್ಣ ಉರಿಯ ಮೇಲೆ ಚೆನ್ನಾಗಿ ಬಿಸಿ ಮಾಡಿ. ಹೀಗೆ ಬಿಸಿ ಮಾಡಿದ ಮಿಶ್ರಣಕ್ಕೆ ಹಾಲನ್ನು ಬೆರೆಸಿ ಮಕ್ಕಳಿಗೆ ನೀಡಿ.

೨. ಬಟಾಣಿ ಗೊಜ್ಜು

ಇದನ್ನು ಮಾಡಲು ಬೇಕಾಗಿರುವುದು ೩ ಲೋಟದಷ್ಟು ಹಸಿ ಬಟಾಣಿಗಳು ಹಾಗು ಎರೆದು ಚಮಚದಷ್ಟು ತಣ್ಣನೆ ನೀರು. ಶೀತಲಿಕರಿಸಿದ ಬತಾನಿಗಳನ್ನು ಮೊದಲು ೨ ನಿಮಿಷ ಬೇಯಿಸಿ ಹಾಗು ನಂತರ ಅದಕ್ಕೆ ನೀರನ್ನು ಬೆರೆಸಿ ಅದು ಮೃದು ಆಗುವವರೆಗು ಚೆನ್ನಾಗಿ ಕಲಿಸಿ.

೩. ಜೆಜ್ಜಿದ ಬಾಳೆಹಣ್ಣು

ಇದು ತಾಯರಿಸುವುದು ಎಲ್ಲದಿಕ್ಕಿಂತ ಸುಲಭ. ನೀವು ಮಾಡಬೇಕಾಗಿರುವುದು ಕೇವಲ ೩ ಬಾಳೆಹಣ್ಣುಗಳನ್ನು ನೀರಿನಲ್ಲಿ ತೊಳೆದು, ಅವುಗಳ ಸಿಪ್ಪೆ ಸುಲಿದು, ಅವುಗಳನ್ನು ತುಂಡರಿಸಿ ಚೆನ್ನಾಗಿ ಜೆಜ್ಜುವುದು. ಇದನ್ನು ನೀವು ಕೈಯಲ್ಲಿ ಬೇಕಾದರೂ ಮಾಡಬಹುದು ಅಥವಾ ಮಿಕ್ಸ್ಚರ್ ಅಲ್ಲಿ ಆದರೂ ಮಾಡಬಹುದು. ೪-೬ ತಿಂಗಳ ಮಕ್ಕಳಿಗೆ ತುಂಬಾ ತೆಳುವಾದ ಆಹಾರ ಬೇಕಾಗಿರುವುದರಿಂದ ನೀವು ಮಿಕ್ಸರ್ ಅಲ್ಲಿ ಮಾಡುವುದು ಒಳ್ಳೆಯದು.

೪. ಕ್ಯಾರಟ್ ಗೊಜ್ಜು

ಇದನ್ನು ಮಾಡಲು ನೀವು ಮೊದಲು ಕ್ಯಾರಟ್ ಗಳನ್ನು ಚೆನ್ನಾಗಿ ತೊಳೆದು ಅದರ ಮೇಲಿನ ಒರಟು ಎಳೆಯನ್ನು ಸುಲಿಯಿರಿ.  ನಂತರ ಅವುಗಳನ್ನು ಕುಕ್ಕರ್ ಅಲ್ಲಿ ಅಥವಾ ಪಾತ್ರೆಯಲ್ಲಿ ನೀರಿನೊಂದಿಗೆ ೩೦ ನಿಮಿಷಗಳ ಕಾಲ ಬೇಯಿಸಿ. ಅವುಗಳು ಚೆನ್ನಾಗಿ ಹದಗೊಂಡಾಗ, ಮಿಕ್ಸರ್ ಗೆ ಹಾಕಿ ಇನ್ನು ತೆಳ್ಳನೆ ಅಥವಾ ಎಷ್ಟು ಬೇಕೋ ಅಷ್ಟು ನಿಖರವಾಗುವಂತೆ ಮಾಡಿ. ಯಾವಾಗಲು ನೆನಪಿಡಿ ೬ ತಿಂಗಳುಗಳಿಗಿಂತ ಚಿಕ್ಕ ಮಕ್ಕಳಿಗೆ ಆಹಾರ ತುಂಬಾನೇ ತೆಳುವಾಗಿರಬೇಕು.

೫. ಜೆಜ್ಜಿದ ಅವಕಾಡೋ

ಜೆಜ್ಜಿದ ಬಾಳೆಹಣ್ಣು ಮಾಡುವಂತೆ, ಇಲ್ಲಿಯೂ ನೀವು ಅವಕಾಡೋಗಳನ್ನೂ ತೊಳೆದು, ಅವುಗಳ ಬೀಜ ತೆಗೆದು, ಅವುಗಳ ಸಿಪ್ಪೆ ಸುಲಿದು, ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಬೇಕು. ಸ್ವಲ್ಪ ದೊಡ್ಡ ಮಕ್ಕಳು ಅಂದರೆ ೧೦-೧೨ ತಿಂಗಳ ಮಕ್ಕಳಿಗೆ ಅವಕಾಡೋಗಳನ್ನ ಕೈಯಲ್ಲೇ ಜೆಜ್ಜಿ ಸ್ವಲ್ಪ ಕುರುಕಲು ಥರ ಇದ್ದರೂ ಕೊಡಬಹುದು.ಆದರೆ ೪-೬ ತಿಂಗಳ ಮಕ್ಕಳಿಗೆ ಕಡ್ಡಾಯವಾಗಿ ಮಿಕ್ಸರ್ ಅಲ್ಲಿ ಮಾಡಿ.

೬. ಗೆಣೆಸು

ಗೆಣೆಸು ನಿಮ್ಮ ಮಗುವಿಗೆ ಕೇವಲ ರುಚಿಕರ ಅಲ್ಲದೆ, ಇದು ತುಂಬಾ ಪೋಷಕಾಂಶಗಳನ್ನು ಹೊಂದಿರುತ್ತದೆ. ನೀವು ಮಾಡಬೇಕಾದ ಮೊದಲ ಕೆಲಸ ಅಂದರೆ ಅದು ಗೆಣೆಸಿನ ಮೇಲಿರುವ ಮಣ್ಣನ್ನು ಚೆನ್ನಾಗಿ ತೊಳೆಯುವುದು. ಇದಾದ ಮೇಲೆ ಅದನ್ನು ಸುಲಿಯಿರಿ. ನಂತರ ಅದನ್ನು ಕಾಯುತ್ತಿರುವ ನೀರಿನಲ್ಲಿ ಚೆನ್ನಾಗಿ ಮೆತ್ತಗಾಗುವವರೆಗು ಕುದಿಸಿ. ನಂತರ ನೀರನ್ನೆಲ್ಲ ಸೋಸಿ. ನಂತರ ಇದನ್ನು ಮಿಕ್ಸರ್ ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

೭. ಸೇಬಿನ ಗೊಜ್ಜು

ಇದು ಬೇಗನೆ ಮಾಡಬಹುದು ಹಾಗು ತಿನ್ನಲು ಸಹಾ ತುಂಬಾ ರುಚಿಕರ (ನಿಮ್ಮ ಮಗುವಿಗೂ ಹಾಗು ನಿಮಗೂ). ಮೊದಲು ಸೇಬನ್ನು ನಾಲ್ಕು ಭಾಗವಾಗಿ ಕತ್ತರಿಸಿ ಮಧ್ಯದ ಭಾಗವನ್ನು ತೆಗೆದುಹಾಕಿ. ನಂತರ ಇದನ್ನು ಒಂದು ಪಾತ್ರೆ ಅಲ್ಲಿ ನೀರಿನೊಂದಿಗೆ ಇಟ್ಟು ಅದರ ಮೇಲೆ ಒಂದು ಪಾತ್ರೆಯಿಂದ ಮುಚ್ಚಿ ೧೦-೧೫ ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ಅದು ಚೆನ್ನಾಗಿ ಬೆಂದ ನಂತರ ಸಿಪ್ಪೆಯನ್ನು ಸುಲಿದು ಉಳಿದ ಹಣ್ಣಿನ ಭಾಗವನ್ನು ಮಿಕ್ಸರ್ ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಫ್ರಿಡ್ಜ್ ಅಲ್ಲಿ ಇತ್ತು ಶೇಖರಿಸಬಹುದು.

ಒಂದು ವರ್ಷದ ಆಸುಪಾಸಿನ ಮಕ್ಕಳಿಗೆ ನೀವು ಸಿಹಿ ಮೆಕ್ಕೆಜೋಳದ ಕಾಳಿನ ರಸಂ, ತರಕಾರಿ-ಜವೆಗೋಧಿ (barley)ಯ ರಸಂ ಹಾಗು ಇನ್ನಿತರೆ ಆಹಾರಗಳನ್ನು ಕೊಡಬಹುದು ಆದರೆ ಏನು ಕೊಟ್ಟರು ಅದು ತಿಳಿಯಾಗಿ ಇರುವಂತೆ ನೋಡಿಕೊಳ್ಳಿ. ಅದಲ್ಲದೆ, ಒಂದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಹಣ್ಣಿನ ಅಥವ ತರಕಾರಿಯ ಗೊಜ್ಜನ್ನು ಕೊಡುವಾಗ ತುಂಬಾ ತಿಳಿಯಾಗಿ ಇರದಿದ್ದದರು ಪರವಾಗಿಲ್ಲ. ಆಹಾರದಲ್ಲಿ ಸ್ವಲ್ಪ ಗಂಟುಗಳು ಇದ್ದರೂ ನಿಮ್ಮ ಮಗು ದವಡೆಯಿಂದ ಅಗಿಯಬಹುದು.

Leave a Reply

%d bloggers like this: