10-muddu-jodiya-chittaaragalu

೧. ರೋಮಾಂಚಕ ಮಳೆಗಳು

ನೀವು ಪ್ರೀತಿಯಲ್ಲಿ ಬಿದ್ದಾಗ, ಮಳೆಗಿಂತ ಹೆಚ್ಚು ರೋಮಾಂಚನೀಯ ಆಗಿರುವುದು ಬೇರಾವುದು ಇಲ್ಲ. ಮಳೆಯಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಇದ್ದರೆ, ಅಷ್ಟೇ ಸಾಕು. ಸ್ವರ್ಗಕ್ಕೆ ಮೂರೇ ಗೇಣು! ನೀವು ಮತ್ತು ನಿಮ್ಮ ಸಂಗಾತಿ ಜೊತೆಯಲ್ಲಿ ಕುಳಿತು ಕೇವಲ ಮಳೆ ನೋಡುವುದೇ ಆಗಲಿ ಅಥವಾ ಕೈ ಹಿಡಿದು ಮಳೆ ನೋಡುತ್ತಾ ಚಹಾ ಸೇವಿಸುದೆ ಆಗಲಿ. ಮಳೆಗೆ ಎಲ್ಲವನ್ನೂ ರೋಮಂಚಕವಾಗಿ ಮಾಡುವ ಜಾದೂ ಶಕ್ತಿ ಇದೆ!

೨. ಅಪ್ಪುಗೆಗಳು

ಅಪ್ಪುಗೆಗಳು ಯಾವಾಗಲು ಚೆಂದ, ಆದರೆ ಸಂಗಾತಿಯ ಬಿಗಿಯಾದ ಅಪ್ಪುಗೆ ನಮ್ಮ ಮನಸ್ಥಿತಿಯನ್ನೇ ಬದಲಾಯಿಸುವ ಶಕ್ತಿ ಹೊಂದಿರುತ್ತದೆ. ಯಾವುದೇ ದೊಡ್ಡ ಜಗಳ ರಾಜಿ ಮಾಡುವುದೇ ಇರಲಿ ಅಥವಾ ಒಬ್ಬರನ್ನು ಒಬ್ಬರು ಸಮಾಧಾನ ಮಾಡಲೇ ಇರಲಿ, ಅಪ್ಪುಗೆಗಳು ಯಾವಾಗಲು ಕೆಲಸಕ್ಕೆ ಬರುತ್ತವೆ. ಅನುರಾಗ ಹಾಗು ಅನ್ಯೋನ್ಯತೆ ಈ ಒಂದು ಮುದಾದ ಕ್ಷಣದಿಂದ ತಮ್ಮ ಪ್ರಯಾಣವನ್ನು ಆರಂಭಿಸುತ್ತವೆ.

೩. ಮುದ್ದಾಡುವುದು

ಅಪ್ಪಿ ಮುದ್ದಾಡಲು ಯಾವುದೇ ನಿಗದಿತ ಸಂದರ್ಭ ಬೇಕಿಲ್ಲ, ಅದು ನೀವು ದಿನವೆಲ್ಲ ದುಡಿದು ಬಂದು ದಣಿವಾದಾಗಲೇ ಇರಲಿ ಅಥವಾ ನಿಮ್ಮ ಸಂಗಾತಿಯೊಡನೆ ಎಲ್ಲಾದರೂ ಚೆನಾಗಿ ಸುತ್ತಾಡಿ ಬಂದಾಗಲೇ ಇರಬಹುದು. ಹುಡುಗಿಗೆ, ಇದು ಅವಳ ಭಾವನೆಗಳನ್ನು ನಾಟಿದರೆ, ಹುಡುಗನಿಗೆ ತನ್ನ ರಕ್ಷಣಾ ಭಾವನೆಯೇ ಅವನ ಸಂಗಾತಿ.

೪. ಮುಪ್ಪಾಗದ ಪ್ರೀತಿ !

ಜೊತೆಯಲ್ಲಿ ಜೀವನದ ಪ್ರಯಾಣ ಸಾಗಿಸುವುದು, ಎಂದಿಗೂ ಅಳಿಯದಂತಹ ಪ್ರೀತಿಯನ್ನು ಹುಟ್ಟು ಹಾಕುತ್ತದೆ. ತಮ್ಮ ಇಳಿವಯಸ್ಸಿನಲ್ಲೂ ಕೈ ಕೈ ಹಿಡಿದು ವಾಯುವಿಹಾರಕ್ಕೆ ಬರುವ ವ್ರುದ್ದ ದಂಪತಿಗಳನ್ನ ನೋಡಿದರೆ ಸಾಕು, ಅವರೇ ಸಾಯದಂತಹ ಪ್ರೀತಿಯ ಸಂಕೇತ! ಬಹುಕಾಲದ ಈ ಸಂಬಂಧದಲ್ಲಿ ಇರುವ ಕಾಳಜಿ ಹಾಗು ಬದ್ದತೆ ನಮ್ಮನ್ನೆಲ್ಲ ಕರಗಿಸುವಂತದ್ದು ಹಾಗು ಅವರ ನಡುವಿನ ಆ ದೃಢವಾದ ಪ್ರೀತಿಯೇ ಅವರನ್ನು ಅಷ್ಟು ಗಟ್ಟಿಯಾಗಿ ಇಟ್ಟಿರುವುದು.

೫. ಸಿನಿಮಾ ರಾತ್ರಿ

ಯಾವುದೋ ಕೈಗೆ ಸಿಕ್ಕ ಬಟ್ಟೆ ಹಾಕಿಕೊಂಡು, ಕೈಯಲ್ಲಿ ಕುರುಕಲು ತಿಂಡಿ ಹಿಡಿದುಕೊಂಡು ನಿಮ್ಮ ಸಂಗಾತಿಯೊಡನೆ ಸೋಫಾ ಮೇಲೆ ಕುಳಿತು ರಾತ್ರಿಯೆಲ್ಲಾ ಸಿನಿಮಾ ನೋಡುವುದು! ಅಬ್ಬಾ ಇದಕ್ಕಿಂತ ಇನ್ನೇನು ಬೇಕು? ಪ್ರತಿಯೊಂದು ದೆವ್ವದ ಚಿತ್ರವೂ ನಿಮ್ಮಲ್ಲಿರುವ ಆ ಕಾಳಜಿಯುಳ್ಳ ರಕ್ಷಕನನ್ನು ಹೊರತಂದರೆ, ಲವ್ ಸ್ಟೋರಿ ಉಳ್ಳಂತಹ ಚಿತ್ರಗಳಂತೂ ಎಲ್ಲವು ನಿಮ್ಮದೇ ಕಥೆ ಅನಿಸುತ್ತವೆ ಅಲ್ವ ?! ಆ ಸಿನಿಮಾದ ಕೊನೆಯಲ್ಲಿ ಬರುವ ಸಿನಿಮೀಯ ರೀತಿಯ ಸುಖಾಂತ್ಯವೇ ನಿಮ್ಮ ನಿಜ ಜೀವನ ಎಂದು ಅರಿತಾಗ ಎಷ್ಟು ಉಲ್ಲಾಸ !

೬. ಸುಂದರ ಮುಂಜಾನೆಗಳು

ನಿಮ್ಮ ಸಂಗಾತಿಯೊಂದಿಗೆ ಬಿಸಿ ಬಿಸಿ ಕಾಫಿ ಹಾಗು ಅದರ ಜೊತೆಗೆ ಬಿಸಿ ಬಿಸಿ ಚರ್ಚೆ, ನಮ್ಮ ಮುಂಜಾನೆ ಚೆನ್ನಾಗಿ ಇರಲು ಇಷ್ಟು ಸಾಕು. ಅದು ಒಂದು ದಣಿಯುವಂತಹ ವಾರದ ಶುರುವೇ ಆಗಿರಬಹುದು, ಆದರೆ ನಿಮ್ಮ ಸಂಗಾತಿಯೊಂದಿಗಿನ ಶುರುವೇ ನಿಮಗೆ ಎಂತಹ ವಾರಕ್ಕಾದರೂ ಉತ್ಸಾಹ ತುಂಬಿ ಬಿಡುತ್ತದೆ. ನಿಮ್ಮ ದೈನಂದಿನ ಕಾರ್ಯಗಳನ್ನು ಸುಲಭವಾಗಿ ಮಾಡಲು ಅದು ಶಕ್ತಿ ನೀಡುತ್ತದೆ. ನಿಮಗೆ ಅಂತಹ ಕಠಿಣ ವಾರವನ್ನು ಕಳೆಯಲಿಕ್ಕು ಬೆಂಬಲ ನೀಡುತ್ತದೆ.

೭. ಮಂಪರಿನ ರಾತ್ರಿಗಳು

ಬೆಂಕಿಯ ಕಾವು, ಸುತ್ತಲು ಕತ್ತಲು, ಬದಿಯಲ್ಲಿ ನಿಮ್ಮ ಸಂಗಾತಿ. ಹೊರಗಡೆ ಮಳೆ ಬರುತಿರಲು, ನೀವಿಬ್ಬರೇ ಬೆಚ್ಚನೆ ಹೊದಿಕೆ ಹೊತ್ತು ಸುಮ್ಮನೆ ಕುಳಿತಿರುವಿರಿ. ಯಾವುದೋ ಮರೆತು ಹೋದ ಕಥೆಯೊಂದನ್ನು ಪುನಃ ಹೇಳುವಿರಿ ಅಥವಾ ನಿಮ್ಮ ಭವಿಷ್ಯದ ಚಿತ್ರಣವನ್ನು ಬಿಡಿಸುತ್ತೀರಿ. ಇಂತಹ ಅಮೋಘ ರಾತ್ರಿಯಂದು ಹೇಳಲು ಯಾವುದು ಉಳಿಸಿರುವುದಿಲ್ಲ!

೮. ಐಸ್ ಕ್ರೀಂ ಬೇಕ ಯಾರಿಗಾದ್ರು?

ಆಹಾ! ಇದು ಕೇವಲ ನಮ್ಮ ಹೊಟ್ಟೆ ತುಂಬಿಸುವುದಿಲ್ಲ, ನಮ್ಮ ಹೃದಯವು ತುಂಬಿ ಬರುವಂತೆ ಮಾಡುತ್ತವೆ. ನಿಮ್ಮ ಪತ್ನಿಯು ರುತುಸ್ರಾವದ ಸಮಯದಿಂದ ಉದ್ವಿಗ್ನಗೊಂಡಿರಬಹುದು ಅಥವಾ ನೀವು ತಡವಾಗಿ ಮನೆಗೆ ಬಂದಿದ್ದಕ್ಕೆ ಪೂಸಿ ಹೊಡೆಯಲು ಇರಬಹುದು, ಜೊತೆಯಲ್ಲಿ ಕೂತು ಐಸ್ ಕ್ರೀಂ ತಿನ್ನುವುದು ಎಲ್ಲವನ್ನು ಬಗೆಹರಿಸುತ್ತದೆ. ಮನೆ ಮನೆ ಮಾತಾಡುವುದು ಅಥವಾ ಗುಟ್ಟು ಹಂಚಿಕೊಳ್ಳುವುದೇ ಆಗಲಿ, ಅದು ಕೂಡ ಇಬ್ಬರಲ್ಲಿ ಒಬ್ಬರೇ ಆಗಿರಲಿ, ನಿಮ್ಮ ನೆಚ್ಚಿನ ಐಸ್ ಕ್ರೀಂ ಎಲ್ಲವನ್ನು ರುಚಿಗೊಳಿಸುತ್ತದೆ.

೯. ಬೇಷರತ್ತಾದ ಕಾಳಜಿ

ಖುಷಿಯಲ್ಲೂ,ನೋವಿನಲ್ಲೂ, ಆರೋಗ್ಯದಲ್ಲೂ, ಅನಾರೋಗ್ಯದಲ್ಲೂ ಸದಾಕಾಲ ನಿಮ್ಮ ಸಂಗಾತಿ ನಿಮ್ಮೊಡನೆಯೇ ಇರುತ್ತಾರೆ. ಇದು ನಮಗೆ ನಾವಾಗಿಯೇ ಮಾಡುವ ಶಪಥ. ಅದು ಏನೆಂದರೆ ಯಾವ ಸಮಯದಲ್ಲೂ ನನ್ನನ್ನು ಪ್ರೀತಿಸುವವರ ಕೈ ಬಿಡಬಾರದು ಎಂದು. ಔಷಧಿಗಳು ಹಾಗು ಹೊದಿಕೆಗಳು ದೈಹಿಕವಾಗಿ ನಿಮಗೆ ಸ್ವಲ್ಪ ಮಟ್ಟಿಗೆ ಆರಾಮ ನೀಡಬಹುದು ಆದರೆ ನಿಮ್ಮ ಪ್ರೀತಿ ಪಾತ್ರರು ನೀಡುವ ಪ್ರೀತಿಯು ಸಂಪೂರ್ಣವಾಗಿ ವಾಸಿ ಮಾಡುತ್ತದೆ.

೧೦. ಕೆಲಸಗಳಲ್ಲಿ ಕೈಗೂಡಿಸುವುದು

ಚಿಕ್ಕ ಚಿಕ್ಕ ವಿಷಯಗಳಾದಂತಹ ಮಾರ್ಕೆಟಿನಲ್ಲಿ ಒಟ್ಟಿಗೆ ಖರೀದಿ ಮಾಡುವುದು, ಒಟ್ಟಿಗೆ ಅಡುಗೆ ಮಾಡುವುದು, ಒಟ್ಟಿಗೆ ಮನೆಗೆಲಸ ಮಾಡುವುದು ತುಂಬಾನೇ ಆರಾಧನೀಯ. ಇದು ನೀವು ನಿಮ್ಮ ಸಂಗಾತಿಯೊಂದಿಗೆ ಮಾಡಬೇಕಾದ ಜೀವನ ಪ್ರಯಾಣವನ್ನು ನಿರ್ಮಿಸುತ್ತದೆ. ಈ ಪ್ರಯಾಣವೇ ತಲುಪುವ ಗುರಿಗಿಂತ ಹೆಚ್ಚು ಮಜವಾಗಿರುತ್ತದೆ.

Leave a Reply

%d bloggers like this: