garbhiniyadaga-mattu-nantaravu-atyuttama-kesharasige-8-upaayagalu

ಧೃಡವಾದ, ಉದ್ದನೆಯ, ರೇಷ್ಮೆಯಂತ ಕೂದಲಗಳು ಎಲ್ಲಾ ಹುಡುಗಿಯರ ಕನಸು ಅಲ್ಲವೆ?! ನಿಮ್ಮ ಗರ್ಭಧಾರಣೆಯು ನಿಮ್ಮ ಈ ಕನಸಿಗೆ ಅಡ್ಡಿ ಮಾಡುವುದು ಎಂದ ಭಾವಿಸಿದ್ದೀರಾ? ಖಂಡಿತ ಇಲ್ಲ ! ನಾವು ನಿಮಗೆ ಸುಂದರವಾದ ಕೂದಲುಗಳ ಗುಟ್ಟುಗಳನ್ನು ಹೇಳುವ ಮುನ್ನ ನೀವು ಒಂದು ವಿಷಯ ತಿಳಿದುಕೊಂಡಿರಬೇಕು. ಅದು ಏನೆಂದರೆ, ನಿಮ್ಮ ಕೂದಲುಗಳಿಗೆ ೩ ಹಂತಗಳು ಇರುತ್ತವೆ : ಬೆಳೆಯುವ ಹಂತ, ವಿಶ್ರಮಿಸುವ ಹಂತ ಹಾಗು ಉದುರುವ ಹಂತ.

ಈ ಹಂತಗಳಲ್ಲಿ ನೀವು ಸಾಮಾನ್ಯವಾಗಿ ಪ್ರತಿದಿನ ೧೦೦ ಕೂದಲಗಳನ್ನು ಉದುರಿಸಿಕೊಳ್ಳುತ್ತೀರಿ. ಆದರೆ ನೀವು ಗರ್ಭಿಣಿಯಾದಾಗ ಕೆಲವು ಬದಲಾವಣೆಗಳು ಆಗುತ್ತವೆ. ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಹಾರ್ಮೋನ್ ಗಳು ನಿಮ್ಮ ಕೂದಲುಗಳು ಚಕ್ರದಲ್ಲಿ ಏರುಪೇರು ಉಂಟು ಮಾಡುತ್ತವೆ. ನೀವು ಗರ್ಭವತಿಯಾಗಿದ್ದಾಗ, ನಿಮ್ಮ ಕೂದಲುಗಳು ಬೆಳೆಯಬಹುದು ಅಥವಾ ಹಾಗೆಯೇ ಇರಬಹುದು, ಆದರೆ ಉದುರುವುದಿಲ್ಲ. ಇದು ನಿಮ್ಮ ಕೂದಲನ್ನು ಎಂದಿಗಿಂತ ದಪ್ಪವಾಗಿ, ಉದ್ದವಾಗಿ ಕಾಣುವಂತೆ ಮಾಡುತ್ತದೆ.

ಆದರೆ, ಪ್ರಸವದ ನಂತರ, ಅಂದರೆ ಮಗುವಾದ ೩-೬ ತಿಂಗಳುಗಳ ನಂತರ ನೀವು ತುಂಬಾನೇ ಕೂದಲುಗಳನ್ನು ಕಳೆದುಕೊಳ್ಳುವಿರಿ. ಕೂದಲುದುರುವಿಕೆ ಅತಿ ಹೆಚ್ಚಿಗಿಂತ ಅತಿ ಕಡಿಮೆ ವರೆಗೂ ಆಗಬಹುದು. ಇದು ಸಾಮಾನ್ಯ ಹಾಗು ತಾತ್ಕಾಲಿಕ. ಮಗುವಾದ ನಂತರ ನಿಮ್ಮ ಹಾರ್ಮೋನ್ ಗಳ ಗತಿಯಲ್ಲಿನ ದಿಢೀರ್ ಇಳಿಕೆ ಇದಕ್ಕೆ ಕಾರಣವಾಗುತ್ತದೆ. ಈ ಹಂತ ದಾಟಿದ ಮೇಲೆ ನಿಮ್ಮ ಕೂದಲು ಮೊದಲಿನಂತೆ, ಅಂದರೆ ಗರ್ಭವತಿ ಆಗುವು ಮುಂಚೆ ಹೇಗೆ ಬೆಳೆಯುತಿತ್ತೋ ಹಾಗೆಯೇ ಬೆಳೆಯುತ್ತವೆ.

ನಿಮ್ಮ ಕೂದಲಗಳು ಹೇಗೆ ವಿಧವಿಧವಾಗಿ ವರ್ತಿಸುತ್ತವೆ ಎಂಬುದು ನಿಮಗೆ ಈಗ ತಿಳಿದಿರುವುದರಿಂದ, ನಿಮ್ಮ ಗರ್ಭಧಾರಣೆ ಹಾಗು ಅದರ ನಂತರದ ಸಮಯದಲ್ಲಿ ನಿಮ್ಮ ಕೂದಲುಗಳನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಈಗ ನಾವು ಹೇಳುತ್ತೇವೆ :

೧. ನಿಮ್ಮ ಕೂದಲು ಯಾವ ರೀತಿಯದ್ದು ಎಂದು ತಿಳಿದುಕೊಳ್ಳಿ

ನಿಮ್ಮ ನೈಸರ್ಗಿಕ ಕೂದಲುಗಳು ಗರ್ಭಧಾರಣೆ ಸಮಯದ ವೇಳೆ ಹಾಗು ಅದರ ನಂತರದಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತವೆ. ನೀವು ನಿಮ್ಮ ಕೂದಲಿಗೆ ಯಾವುದು ಸೂಕ್ತವೆನಿಸುತ್ತದೆಯೋ ಅಂತಹ ಉತ್ಪನ್ನಗಳನ್ನು ಬಳಸಬೇಕು. ಹಾಗಾಗಿ ನಿಮ್ಮ ಕೂದಲುಗಳ ಸ್ಥಿತಿ ತಾತ್ಕಾಲಿಕವಾಗಿ ಬದಲಾದರೆ,ಅದಕ್ಕೆ ಸೂಕ್ತವಾಗಿ ಸಾಂದರ್ಭಿಕವಾಗಿ ಉತ್ಪನ್ನಗಳನ್ನು ಬದಲಾಯಿಸಬೇಕು. ನಿಮ್ಮ ಕೂದಲುಗಳಿಗೆ ಸರಿ ಹೊಂದುವಂತ ಉತ್ಪನ್ನಗಳನ್ನು ಬಳಸಿದರೆ, ಅದು ನಿಮ್ಮ ಕೂದಲಿನ ಪೋಷಣೆಯಲ್ಲಿ ಸಹಾಯಕಾರಿ ಆಗುತ್ತೆ. ಇದರಿಂದ ನಿಮ್ಮ ಕೂದಲುಗಳು ಒಣಗುವುದು ಅಥವಾ ಹಾಳಾಗುವುದು ತಪ್ಪುತ್ತದೆ. ನಿಮಗೆ ಯಾವುದು ಸರಿ ಹೊಂದುತ್ತದೆ ಎಂದು ತಿಳಿದೇ ಇದ್ದರೆ, ನಿಮ್ಮ ಕೇಶ ತಜ್ಞರನ್ನು ಕೇಳಿ ತಿಳಿದುಕೊಳ್ಳಿ. ಇದು ನಿಮ್ಮ ಕೂದಲುಗಳನ್ನ ಮೊದಲಿನಂತೆ ಮಾಡಿ ನೀವು ಪುನಃ ನೀವು ಬಳಸುತ್ತಿದ್ದ ಹಳೆಯ ಉತ್ಪನ್ನಗಳಿಗೆ ವಾಪಸ್ಸಾಗುವಂತೆ ಮಾಡುತ್ತವೆ.

೨. ರಾಸಾಯನಿಕಗಳಿಗೆ ಕಡ್ಡಾಯವಾಗಿ ಇಲ್ಲ ಎಂದು ಹೇಳಿ

ರಾಸಾಯನಿಕ ವಸ್ತುಗಳಿಂದ ದೂರ ಇರಿ. ನಿಮ್ಮ ಕೂದಲುಗಳು ಬದಲಾಗುತ್ತಿದ್ದು,ಅವುಗಳು ಉದುರಲು ಶುರು ಆಗಿವೆ, ಹಾಗಾಗಿ ಈಗಾಗಲೇ ಇರುವ ತೊಂದರೆಗಳೊಂದಿಗೆ ರಾಸಾಯನಿಕಗಳನ್ನು ಬಳಸಿ ಮತ್ತಷ್ಟು ತಲೆನೋವನ್ನು ತಂದುಕೊಳ್ಳಬೇಡಿ. ನಿಜ ಹೇಳಬೇಕಂದರೆ, ಬಹಳಷ್ಟು ಸ್ತ್ರೀರೋಗತಜ್ಞರು ನೀವು ಗರ್ಭಿಣಿಯಾದಾಗ ನಿಮ್ಮ ಕೂದಲಿಗೆ ಬಣ್ಣ ಹಚ್ಚುವುದನ್ನು ನಿಲ್ಲಿಸಲು ಹೇಳುತ್ತಾರೆ. ಕಾರಣ, ಅವುಗಳಿಂದ ನೀವು ತುತ್ತಾಗಲಿರುವ ಅನೇಕ ರಾಸಾಯನಿಕಗಳಿಗೆ. ಗರ್ಭಧಾರಣೆಯ ನಂತರವೂ ವೈದ್ಯರು ಇದನ್ನೇ ಹೇಳುತ್ತಾರೆ. ಕಾರಣ, ಆಗಲೇ ಶಕ್ತಿ ಕಳೆದುಕೊಂಡ ನಿಮ್ಮ ಕೂದಲನ್ನು ರಾಸಾಯನಿಕಗಳು ಮತ್ತಷ್ಟು ಹಾಳು ಮಾಡಿ ಉದುರುವಂತೆ ಮಾಡುತ್ತವೆ. ಇದರಿಂದಲೇ ನೀವು ನಿಮ್ಮ ಕೂದಲಿಗೆ ಬಣ್ಣ ಹಚ್ಚಲು, ಗರ್ಭಧಾರಣೆಯ ನಂತರ ಕನಿಷ್ಠ ಪಕ್ಷ ೬ ತಿಂಗಳಾದರೂ ಕಾಯುವುದು ಸೂಕ್ತ. ಹಾಗು ಯಾವಾಗಲು ಉತ್ಪನ್ನಗಳನ್ನು ಖರೀದಿಸುವಾಗ, ಅವುಗಳ ಮೇಲಿನ ಲೇಬಲ್ ಗಳನ್ನೂ ಓದಿ. ಏಕೆಂದರೆ ಅವುಗಳು ದುಷ್ಪರಿಣಾಮ ಉಂಟುಮಾಡಬಲ್ಲ ರಾಸಾಯನಿಕಗಳನ್ನು ಹೊಂದಿರುತ್ತವೆ. ಅದಕ್ಕೆ, ಎಚ್ಚರ! ಯಾವಾಗಲು ಲೇಬಲ್ ಓದಿ !

೩. ಸರಿಯಾದ ಆಹಾರ ಪದ್ಧತಿ ಹಾಗು ಅಗತ್ಯ ಪೂರಕಗಳು ಮುಖ್ಯ

ಇದು ಬಹುಶಃ ನೀವು ಗರ್ಭಿಣಿಯಾದಿಗಿನಿಂದ ನಿಮ್ಮ ಅಪ್ಪ-ಅಮ್ಮ, ಅತ್ತೆ-ಮಾವ, ಚಿಕಪ್ಪ-ಚಿಕ್ಕಮ್ಮ ಹಾಗು ಎಲ್ಲರು ನಿಮಗೆ ಹೇಳೇ ಹೇಳಿರುತ್ತಾರೆ. ಆದರೆ ಆಕರ್ಷಕ ಕೂದಲುಗಳು ಬೇಕೆಂದರೆ ಅದಕ್ಕೆ ನೀವು ಒಂದು ಬೆಲೆ ಕಟ್ಟ ಬೇಕಾಗುತ್ತದೆ. ಅದು ಏನೆಂದರೆ, ನಿಮ್ಮ ಮನಸ್ಸಿಗೆ ತೋಚಿದನ್ನೆಲ್ಲಾ ತಿನ್ನುವುದನ್ನು ಬಿಡುವುದು. ನೀವು ತಿನ್ನುವುದರ ಬಗ್ಗೆ ಗಮನವಿಟ್ಟರೆ ಹಾಗು ನಿಮ್ಮ ಆಹಾರ ಪದ್ಧತಿ ಎಲ್ಲ ಪೋಷಕಾಂಶಗಳನ್ನು ಹೊಂದಿದಿದ್ದರೆ, ಅದು ನಿಮ್ಮ ಕೂದಲುಗಳ ಪೋಷಣೆಯಲ್ಲಿ ಸಹಾಯಕಾರಿ ಆಗುತ್ತವೆ. ತರಾವರಿ ಹಣ್ಣುಗಳು, ತರಕಾರಿಗಳು, ಮೊಟ್ಟೆ, ಎಳ್ಳು, ಮೊಸರು/ಕೆನೆ, ಕಾಲುಗಳು, ಬಾದಾಮಿ, ಅವಕಾಡೋಗಳು, ತಾಜಾ ಮಾಂಸ ಅಥವಾ ಮೀನು ನಿಮ್ಮ ಆಹಾರದಲ್ಲಿ ಇರಲಿ. ಹಾಗು, ನಿಮ್ಮ ಆಹಾರದಲ್ಲಿ ಅಗತ್ಯ ಪೂರಕಗಳು ಇವೆಯ ಎಂದು ನೋಡಿಕೊಳ್ಳಿ. ವಿಟಮಿನ್ E, ವಿಟಮಿನ್ C, B-ವಿಟಮಿನ್ಸ್, ಸತು(Zinc), ಬಯೊಟಿನ್ ಹಾಗು ಒಮೇಗಾ-೩,ಮೇದಮ್ಲ, ಒಮೇಗಾ-೬ ಮೇದಮ್ಲ ಹಾಗು ಒಮೇಗಾ-೯  ಮೇದಮ್ಲ ಅಂತಹ ಮೇದಾಮ್ಲಗಳು(ಫ್ಯಾಟಿ ಆಸಿಡ್ ಗಳು) ನಿಮ್ಮ ಕೂದಲಿನ ಬೆಳವಣಿಗೆ ಹಾಗು ಪೋಷಣೆಗೆ ತುಂಬಾನೇ ಅಗತ್ಯ.

೪. ಟೆನ್ಶನ್ ಗೆ ಗೋಲಿ ಹೊಡೀರಿ

ತಾಯಂದಿರ ಇದಂತೂ ನಿಜ. ನೀವು ನಿಮ್ಮ ಮೇಲೆ ನೀವೇ ಒತ್ತಡ ಹೇರಿಕೊಂಡರೆ ನಿಮ್ಮ ಕೂದಲು ಉದುರುವುದು ಹೆಚ್ಚುತ್ತದೆ. ಸೋಶೋಧನೆಗಳ ಪ್ರಕಾರ, ಕೂದಲು ಉದುರುವುದಕ್ಕೆ ಒತ್ತಡವು ಮುಖ್ಯ ಕಾರಣಗಳಲ್ಲಿ ಒಂದು. ನೀವು ಗರ್ಭಿಣಿ ಆಗಿದ್ದರು ಅಥವಾ ಇಲ್ಲದಿದ್ದರೂ. ಹಾಗಾಗಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಆರಾಮಾಗಿ ಇರಲು ಪ್ರಯತ್ನಿಸಿ. ತಾಯಿ ಆದ ಕಾರಣದಿಂದ ಬರುವ ಹಲವು ಒತ್ತಡಗಳನ್ನು ಎದುರಿಸಲು ನೀವು ಧ್ಯಾನ ಅಥವಾ ಯೋಗವನ್ನು ಮಾಡಬಹುದು. ಹೀಗಾಗಿ, ನೀವು ಎಂದು ಕೂಡ ಮಸಾಜ್ ಮಾಡುವುದು ಬಿದುವಂತೆಯೇ ಇಲ್ಲ. ಮಸಾಜ್ ನಿಮ್ಮ ನರಗಳನ್ನು ಆರಾಮಾಗಿಸುತ್ತದೆ ಹಾಗು ವಿಶ್ರಾಂತಿ ನೀಡುತ್ತದೆ. ಹೌದು ಒತ್ತಡಗಳು ಇರುತ್ತವೆ, ಅದು ಸಹಜ. ಆದರೆ ಅವುಗಳನ್ನು ನಿಯಂತ್ರಿಸುವುದು ನಿಮ್ಮ ಕೈಯಲ್ಲಿದೆ. ಹಾಗಾಗಿ ನಿಮ್ಮ ಒಳಿತಿಗೆ ಮುಖ್ಯವಾಗಿ ನಿಮ್ಮ ಕೂದಲಿನ ಒಳಿತಿಗೆ ಎಲ್ಲ ಚಿಂತೆಗಳನ್ನು ಬಿಟ್ಟ ಆರಾಮಾಗಿರಿ!

೫. ಅತಿಯಾಗಿ ಶಾಂಪೂ ಬಳಸುವುದು ಹಾಗು ಕೂದಲಿನೊಂದಿಗೆ ಆಟವಾಡುವುದು

ನಿಮ್ಮ ಕೂದಲು ಸಾಧಾರಣ ಇಂದ ಹೆಚ್ಚು ಆರೋಗ್ಯಕರವಾಗಿ, ಅಲ್ಲಿಂದ ತೀವ್ರ ಉದುರುವಿಕೆಯನ್ನು ಕಂಡು, ಅನಂತರ ಮತ್ತೆ ಮೊದಲಿನ ಸಾಧಾರಣ ಸ್ಥಿತಿಗೆ ಬರುತ್ತವೆ. ಒಂದು ನೆನಪಲ್ಲಿಡಿ, ನಿಮ್ಮ ಕೂದಲಿಗೆ ಎಲ್ಲಾ ವಿಧದ ನೈಸರ್ಗಿಕ ತೈಲಗಳು ಅಗತ್ಯ. ಹೀಗಾಗಿ ಮೊದಲು ನಿಮ್ಮ ಶಾಂಪೂ ಬಾಟಲಿಯನ್ನು ದೂರವಿಡಿ. ವಾರದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಶಂಪೂವಿನಲ್ಲಿ ಸ್ನಾನ ಮಾಡಿದರೆ, ಅದು ಒಳಿತಿಗಿಂತ ಕೆಟ್ಟದು ಮಾಡುವ ಸಾಧ್ಯತೆ ಹೆಚ್ಚು. ಈ ಶಾಂಪೂಗಳು ನಿಮ್ಮ ತಲೆಯಲ್ಲಿರುವ ಅಗತ್ಯ ನೈಸರ್ಗಿಕ  ತೈಲಗಳನ್ನು ಹೋಗಲಾಡಿಸುತ್ತವೆ, ಇದರಿಂದ ನಿಮ್ಮ ಕೂದಲು ಉದುರುವುದು ಹೆಚ್ಚಾಗುತ್ತದೆ. ಹಾಗು ನಿಮ್ಮ ಕೂದಲಿನೊಂದಿಗೆ ಹೆಚ್ಚು ಆಟವಾಡ ಬೇಡಿ ಹಾಗು ನಿಮ್ಮ ಕೇಶಶೈಲಿಯನ್ನು ಪದೇ ಪದೇ ಬದಲಾಯಿಸಬೇಡಿ. ನಿಮ್ಮ ಕೂದಲು ನಿಮಗೆ ಮಗುವಾದ ೬ ತಿಂಗಳ ನಂತರ ಮತ್ತೆ ಮೊದಲಿನ ಸ್ಥಿತಿಗೆ ಬರುವುದು, ಆಗ ಕೂಡ ಅತಿಯಾಗದೆ ಮಾಡಿ, ಏಕೆಂದರೆ ಇದು ಸಾಮಾನ್ಯವಾಗಿ ಯಾವ ಕಾಲದಲ್ಲಿ ಮಾಡಿದರೂ ಕೂದಲಿಗೆ ಒಳ್ಳೆಯದಲ್ಲ.

೬. ಮೆಂತ್ಯ, ಮೊಸರು ಹಾಗು ಎಣ್ಣೆಗಳ ಅಪೂರ್ವ ಸಮ್ಮಿಲನ

ಮೆಂತ್ಯ,ಮೊಸರು ಹಾಗು ಬಾದಾಮಿ, ಆಲಿವ್, ಹರಳೆಣ್ಣೆ ಹಾಗು ತೆಂಗಿನ ಎಣ್ಣೆಯಂತಹ ಎಣ್ಣೆಗಳು ನಿಮ್ಮ ಕೂದಲಿಗೆ ಜಾದೊವನ್ನೇ ಮಾದುತ್ತವೆ. ಇವುಗಳು ನಿಮ್ಮ ಕೂದಲನ್ನು ಕೇವಲ ತೇವಾಂಶದಿಂದ ಕೂಡಿರುವಂತೆ ಮಾಡುತ್ತವೆ ಅಲ್ಲದೆ ಕೂದಲಿನ ಪೋಷಣೆಯೂ ಮಾಡುತ್ತವೆ. ಇವುಗಳು ನಿಮ್ಮ ಕೂದಲನ್ನು ಆರೋಗ್ಯಕರವಾಗಿ, ರೇಷ್ಮೆಯಂತೆ ಮೃದು ಮಾಡುವುದಲ್ಲದೆ ಕೆಲವೊಮ್ಮೆ ಒಟ್ಟು ಆಗುವುದನ್ನು ಕೂಡ ನಿಲ್ಲಿಸುತ್ತವೆ. ಇವುಗಳು ಮಾರುಕಟ್ಟೆಯಲ್ಲಿ ಸಲೀಸಾಗಿ ಸಿಗುವುದಲ್ಲದೆ, ಕೂದಲಿನ ತೊಂದರೆಗಳಿಗೆ ಉಪಶಮನ ನೀಡುತ್ತವೆ. ಮೆಂತ್ಯ ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಮಾಡಲು ಹಾಗು ಒಟ್ಟು ನಿವಾರಣೆ ಮಾಡಲು ಇವುಗಳು ತುಂಬಾ ಉಪಕಾರಿ. ಮೊಸರು ಒಂದು ಅದ್ಭುತ ನೈಸರ್ಗಿಕ ಕಂಡೀಶನರ್ ಆಗಿದ್ದು, ಇದು ಕೂದಲುದುರುವಿಕೆ ಅನ್ನು ನಿಲ್ಲಿಸುತ್ತದೆ. ಇದಲ್ಲದೇ ತಲೆಗೆ ಎಣ್ಣೆ ಹಚ್ಚಿಕೋ ಅಂತ ಅಮ್ಮ ಸಣ್ಣ ವಯಸ್ಸಿಂದ ನಮ್ಮ ಹಿಂದೆ ಅಲಿಯುತ್ತಿದ್ದರು, ಈಗ ಅದರ ಉಪಯೋಗ ತಿಳಿದ ನಂತರ ಆದರೂ ಅದನ್ನು ಪ್ರಯತ್ನಿಸಿ.

೭. ಜಾಗರೂಕತೆ ಇರಲಿ , ಹ್ಯಾಂಡಲ್ ವಿತ್ ಕೇರ್!

ನಿಮ್ಮ  ಕೂದಲುಗಳನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಿ. ಎಳೆಯುವುದು ಅಥವಾ ಜಗ್ಗುವುದು ಮಾಡಬೇಡಿ. ಇದು ಕೂದಲು ತುಂಡಾಗುವಂತೆ ಮಾಡುತ್ತವೆ. ನಿಮ್ಮ ಕೂದಲು ಬಾಚುವಾಗ ದೊಡ್ಡ ಹಲ್ಲಿನ ಬಾಚಣಿಕೆಯಿಂದ ಬಾಚಿಕೊಳ್ಳಿ. ದಿನದಲ್ಲಿ ಕೇವಲ ಎರೆಡು ಬಾರಿ ನಿಮ್ಮ ಕೂದಲುಗಳನ್ನು ಬಾಚಿ, ಅದಕ್ಕಿಂತ ಹೆಚ್ಚು ಬೇಡ. ಅತಿಯಾಗಿ ಬಾಚುವುದು ನಿಮ್ಮ ಕೂದಲುಗಳು ಶಕ್ತಿ ಕಳೆದುಕೊಳ್ಳುವಂತೆ ಮಾಡುತ್ತದೆ ಹಾಗು ಅವುಗಳು ಉದುರಲು ಸಹಾಯ ಮಾಡುತ್ತದೆ. ನೀವು ಹೆಚ್ಚು ದುಡ್ಡು ಕೊಟ್ಟರೂ, ಒಳ್ಳೆಯ ಬಾಚಣಿಕೆ ಖರೀದಿಸಿ. ಅಗ್ಗದ ಬಾಚಣಿಕೆಗಳು ನಿಮ್ಮ ಕೂದಲಿಗೆ ಹಾನಿ ಮಾಡಬಹುದು ಹಾಗು ಸೀಳುತುದಿ ಆಗುವುದು ಹೆಚ್ಚಿಸುತ್ತದೆ. ಹಾಗು, ನಿಮ್ಮ ಕೂದಲು ವದ್ದೆಯಾಗಿದ್ದಾಗ ಅವುಗಳು ಒಣಗಿದಾಗ ಆಗುವುದಕ್ಕಿಂತ ಹೆಚ್ಚು ನಿಶಕ್ತರಾಗಿರುತ್ತವೆ. ಈ ಸಮಯದಲ್ಲಿ ನೀವು ಕೂದಲನ್ನು ಬಾಚಿದರೆ ಅವು ತೀವ್ರವಾಗಿ ಉದುರುತ್ತವೆ.

೮. ತುಂಡರಿಸಬೇಡಿ, ಕೇವಲ ಟ್ರಿಮ್ ಮಾಡಿ !

ಗರ್ಭಧಾರಣೆಯು ನಿಮ್ಮ ನೆಚ್ಚಿನ ಕೇಶ ಶೈಲಿ ಹೊಂದಲು ಅಡ್ಡಿ ಬರಲು ಬಿಡಬೇಡಿ. ನಿಮ್ಮ ಕೂದಲು ಬಹಳಷ್ಟು ಬದಲಾವಣೆಗಳನ್ನು ಕಾಣುತ್ತದೆ, ಈ ಸಮಯದಲ್ಲಿ ನೀವು ಬೇಸತ್ತು, ಕುಪಿತಗೊಂಡು ನಿಮ್ಮ ಅಷ್ಟೂ ಕೂದಲುಗಳನ್ನು ಕತ್ತರಿಸದಿರಿ. ಅವುಗಳನ್ನು ಸ್ವಲ್ಪವೇ ಟ್ರಿಮ್ ಮಾಡಿ. ಆಗಾಗ ನಿಮ್ಮ ಕೂದಲುಗಳನ್ನು ಟ್ರಿಮ್ ಮಾಡಿಸುತ್ತಿದ್ದರೆ, ನಿಮ್ಮ ಕೂದಲಿಗೂ ಒಳ್ಳೆಯದು. ಇದು ನಿಮ್ಮ ಕೂದಲುಗಳನ್ನು ಆರೋಗ್ಯಕರವಾಗಿ ಇದುವುದಲ್ಲದೆ, ಸೀಳು ತುದಿಗಳನ್ನು ಕಮ್ಮಿ ಮಾಡುತ್ತದೆ. ಟ್ರಿಮ್ ಮಾಡಿಸುವುದು ನಿಮ್ಮ ಕೂದಲನ್ನು ವೇಗವಾಗಿ ಬೆಳೆಯುವಂತೆ ಮಾಡುತ್ತದೆ. ಹಾಗಾಗಿ ನೆಚ್ಚಿನ ತಾಯಂದಿರೆ, ಟ್ರಿಮ್ ಮಾಡಿಸುವುದು ನಿಮ್ಮ ಕೂದಲಿಗೆ ಒಳ್ಳೆಯದು.    

Leave a Reply

%d bloggers like this: