nimma-maguvinondige-uttama-bandhavya-hondalu-7-upaayagalu

ತಾಯಿ ಮಗುವಿನ ಸಂಬಂಧ ಭರಿಸಲಾಗದ ಸಂಬಂಧ. ಈ ಸಂಬಂಧ ಕೆಲವರಿಗೆ ಅವರ ಮಗುವಿನ ಭಾವಚಿತ್ರವನ್ನು ಮೊದಲ ಬಾರಿ ಡಾಕ್ಟರ್ ಬಳಿಯಿರುವ ಮಾನಿಟರ್ ಮೇಲೆ ನೋಡಿದೊಡನೆ ಕುಡಿಯೊಡೆಯುತ್ತದೆ. ಇನ್ನೂ ಕೆಲವರಿಗೆ ಈ ಬಾಂಧವ್ಯ ಬೆಳೆಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದು ಸಹಜ ಕೂಡ. ವಾಸ್ತವತೆಯಲ್ಲಿ ಕನಿಷ್ಟಪಕ್ಷ ಶೇಕಡಾ ೨೦ರಷ್ಟು ಪೋಷಕರು ಈ ಬಾಂಧವ್ಯ ಬೆಳೆಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಅದೆಲ್ಲವೂ ಇರಲಿ, ಈ ಬಾಂಧವ್ಯ ವೃದ್ಧಿಸಿಕೊಳ್ಳಲು ಅನೇಕ ದಾರಿಗಳಿವೆ. ಅವುಗಳನ್ನು ಈ ಲೇಖನದಲ್ಲಿ ಮುಂದೆ ಕಾಣಬಹುದು. ಶುರು ಮಾಡೋಣವೆ?

೧. ಇದೆಲ್ಲವೂ ಚರ್ಮ-ಚರ್ಮದ ಸ್ಪರ್ಶದ ಸಮ್ಮಿಲನ

ಮಗುವಿನೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಒಂದು ಒಳ್ಳೆಯ ದಾರಿ ಅಂದರೆ ಅದು ಸ್ಪರ್ಶ. ನಿಮಗೆ ಸಾಧ್ಯವಾದಾಗಲೆಲ್ಲ ನಿಮ್ಮ ಮಗುವನ್ನು ನಿಮ್ಮ ಮಡಿಲಿನಲ್ಲಿ ಕೂರಿಸಿಕೊಳ್ಳಿ ಅಥವ ನೀವು ಅವರೊಂದಿಗೆ ಆಟ ಆಡುವಾಗ ಅವರ ಕೈಗಳನ್ನು ಹಿಡಿದುಕೊಳ್ಳಿ. ನಿಮ್ಮ ಮಗುವನ್ನು ಸದಾ ಅಪ್ಪಿಕೊಳ್ಳಿ, ನಿಮ್ಮ ಎದೆಗೆ ಹತ್ತಿರವಾಗಿ ಒರಗಿಸಿಕೊಳ್ಳಿ. ಮೈ ತಾಗಿದಾಗ ಉಂಟಾಗುವ ಬೆಚ್ಚನೆ ಭಾವ ಈ ಬಾಂಧವ್ಯ ಬೆಳೆಸಲು ಸುಗುಮ ಮಾಡುತ್ತದೆ.

೨. ನಿಮ್ಮ ಮಗುವಿನ ಬಗ್ಗೆ ತಿಳಿದುಕೊಳ್ಳಿ

ಇದನ್ನು ಮಾಡಲಿಕ್ಕೆ ಇರುವ ಒಂದೇ ಒಂದು ದಾರಿ ಎಂದರೆ ಅದು ಪ್ರತಿಕ್ಷಣವೂ ನಿಮ್ಮ ಮಗುವಿನ ಮೇಲೆ ಗಮನ ಇಡುವುದು. ನಿಮಗೆ ಸಾಧ್ಯವಾದಾಗಲೆಲ್ಲ ನಿಮ್ಮ ಮಗುವಿನ ಮೇಲೆ ಒಂದು ಕಣ್ಣಿಡಿ ಹಾಗು ಮಗುವಿನ ಮುಖಭಾವವಗಳನ್ನ ಗಮನಿಸಿ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಅವರೊಡನೆ ಕಾಲ ಕಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮಗುವಿನ ಪ್ರತಿ ಚಲನೆಯ ಬಗ್ಗೆ ನಿಮಗೆ ತಿಳಿಯುತ್ತದೆ ಹಾಗು ನಿಮ್ಮ ಮಗುವಿಗೆ ಹಸಿವು ಅಥವ ನಿದ್ದೆ ಬಂದಲ್ಲಿ ನೀವು ಬೇಗನೆ ಕಂಡುಹಿಡಿಯಬಹುದು.

೩. ಮಾತಾಡಿ, ಮಾತಾಡಿ ಹಾಗು ಮಾತಾಡಿ

ಮಗುವಿನ ಜೊತೆ ಉತ್ತಮ ಬಾಂಧವ್ಯ ಹೊಂದಲು ಪ್ರತಿ ಪೋಷಕರು ಇದನ್ನು ಮಾಡಬೇಕು. ಮಾತಾಡಿ! ಶಬ್ದದ ತಾಕತ್ತು ತುಂಬಾ ಹೆಚ್ಚು. ಮಕ್ಕಳು ತಾಯಿಯ ಉದರದಲ್ಲಿ ಇರುವಾಗಲೇ, ತಮ್ಮ ತಂದೆ ತಾಯಿ ಆಡುವ ಮಾತುಗಳನ್ನು ಕೇಳಿಸಿಕೊಂಡು ಬಾಂಧವ್ಯ ಬೆಳೆಸಿಕೊಂಡಿರುತ್ತವೆ. ಹಾಗಾಗಿ ಏನು ಅರ್ಥವಿಲ್ಲದಿದ್ದರೂ ನಿಮ್ಮ ಮಗುವಿನೊಂದಿಗೆ ಮಾತಾಡುತ್ತಲೇ ಇರಿ. ಅವರಿಗೆ ನೀವು ಪುಸ್ತಕ ಓದಿದರೆ ಅವರಿಗೆ ಏನು ಅರ್ಥವಾಗದೆ ಇರಬಹುದು. ಆದರೆ ನಿಮ್ಮ ಧ್ವನಿಯು ಅವರನ್ನ ಶಾಂತಗೊಳಿಸುತ್ತದೆ.

೪. ವಿಶೇಷ ವಾಡಿಕೆಯನ್ನು ಅಳವಡಿಸಿಕೊಳ್ಳಿ

ಅವರನ್ನು ಸಮಾಧಾನ ಪಡಿಸಲು ಒಂದು ವಿಶೇಷವಾದ ರೀತಿಯನ್ನು ಅಳವಡಿಸಿಕೊಳ್ಳಿ. ಅವರ ತೊಟ್ಟಿಲನ್ನು ಒಂದು ರೀತಿಯಲ್ಲಿ ಅಲುಗಾಡಿಸಿ ಅಥವಾ ಒಂದು ರೀತಿಯಲ್ಲಿ ತೂಗಿ. ಅವರು ಈ ವಾಡಿಕೆಯನ್ನ ಗುರುತಿಸವರು ಹಾಗು ಅದು ನೀವೇ ಎಂದು ಮಕ್ಕಳಿಗೆ ತಿಳಿಯುತ್ತದೆ. ತಿನ್ನುವುದಕ್ಕೆ ಅಥವಾ ಮಲಗುವುದಕ್ಕೆ ಏನಾದರು ಹೊಸ ಪದಗಳನ್ನ ಹುಟ್ಟು ಹಾಕಿ. ಏಕೆಂದರೆ ನಿಮ್ಮ ಮಗುವು ಆ ಶಬ್ದಗಳನ್ನು ಗುರುತಿಸುವರು ಹಾಗು ನೀವು ಏನು ಹೇಳಲು ಬಯಸುತ್ತಿರುವಿರಿ ಎಂದು ಅರ್ಥ ಮಾಡಿಕೊಳ್ಳುವವರು.

೫. ನಿಮ್ಮ ಮಗುವಿಗೆ ಹಾಡು ಹೇಳಿ

ಬಹಳಷ್ಟು ಪೋಷಕರು ಇದನ್ನು ಮಾಡುವುದಿಲ್ಲ. ಹಾಡು ಹೇಳುವುದರಿಂದ ಮಗುವಿಗೆ ನೆಮ್ಮದಿ ಉಂಟಾಗುತ್ತದೆ. ಹಾಗಾಗಿ ಯಾವುದೋ ನರ್ಸರಿ ಪದ್ಯವಿರಲಿ ಅಥವಾ ಇನ್ಯಾವುದೋ ಸಿನಿಮಾದ ಹಾಡೇ ಇರಲಿ, ಒಟ್ಟಿನಲ್ಲಿ ಹಾಡಿ. ನೀವು ಯಾವ ಹಾಡು ಆಯ್ಕೆ ಮಾಡುತ್ತೀರ ಎಂಬುದು ಪ್ರಶ್ನೆಯೇ ಅಲ್ಲ, ಹಾಗು ನೀವು ಇದನ್ನು ನಂಬಲೇಬೇಕು, ನಿಮ್ಮ ಧ್ವನಿ ಕೂಡ ಇಲ್ಲಿ ಪ್ರಶ್ನೆಯೇ ಆಗಲ್ಲ. ನೀವು ಕೆಟ್ಟದಾಗಿ ಬಾತ್ರೂಮ್ ನಲ್ಲಿ ಹಾಡುವ ಗಾಯಕಿಯೇ ಇರಬಹುದು, ಆದರೆ ನಿಮ್ಮ ಮಗುವಿಗೆ ಅದು ಇಷ್ಟವಾಗುತ್ತದೆ.

೬. ಮಗುವಿಗೆ ಮಸಾಜ್ ಮಾಡಿ

ತಿಳಿದು ಬಂದಿರುವ ಪ್ರಕಾರ, ಮಸಾಜ್ ಮಾಡುವುದನ್ನು ಕಲಿಯುವುದರಿಂದ ಮಕ್ಕಳೊಡನೆ ಬಾಂಧವ್ಯ ಬೆಳೆಸಿಕೊಳ್ಳಲು ತುಂಬಾನೇ ಉಪಕಾರಿ. ಇದಲ್ಲದೇ ಇದು ಮಕ್ಕಳಲ್ಲಿ ಕಾಣುವ ಅಕಾಲಿಕ ಒತ್ತಡುವನ್ನು ಕಮ್ಮಿ ಮಾಡುತ್ತದೆ. ಇಬ್ಬರ ಚರ್ಮ ಸ್ಪರ್ಶ ಮಾಡುವಂತೆ ಅವರೊಡನೆ ಒಡನಾಟ ಇರಲಿ. ಮಕ್ಕಳು ಮಸಾಜ್ ಅನ್ನು ಇಷ್ಟ ಪಡುವವರಾಗಿದ್ದು, ಅವರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಇದೊಂದು ಉತ್ತಮ ದಾರಿಯಾಗಿದೆ.

೭. ಯಾವಾಗಲು ಸನಿಹದಲ್ಲಿರಿ

ಯಾವಾಗಲು ನೀವು ಅವರ ಸನಿಹದಲ್ಲಿರಿ ಹಾಗು ತೊಟ್ಟಿಲನ್ನು ಯಾವಾಗಲು ನಿಮ್ಮ ಮಂಚದ ಬದಿಗೆ ಇರಿಸಿಕೊಳ್ಳಿ. ಬೇಕಾದಲ್ಲಿ, ನೀವು ನಿಮ್ಮ ಮಗುವನ್ನು ನಿಮ್ಮ ಪಕ್ಕದಲ್ಲಿಯೇ ಮಂಚದ ಮೇಲೆ ಮಲಗಿಸಿಕೊಳ್ಳಬಹುದು. ಅವಳು ನೆಲದ ಮೇಲೆ ಆಟವಾಡುತ್ತಿದ್ದರೆ, ಅವಳೊಡನೆ ಕೂತುಕೊಳ್ಳಿ. ಪೋಷಕರು ಹತ್ತಿರ ಇದ್ದಷ್ಟು ಮಕ್ಕಳಲ್ಲಿ ಸುರಕ್ಷಿತಾ ಮನೋಭಾವ ಹಾಗು ಭದ್ರತಾ ಮನೋಭಾವ ತರುತ್ತದೆ.

ಇವೆಲ್ಲಾ ದಾರಿಗಳು ಪ್ರಯತ್ನಿಸಿದ ನಂತರವೂ ನಿಮ್ಮ ಮಗುವಿನ ಹಾಗು ನಿಮ್ಮ ನಡುವೆ ಬಾಂಧವ್ಯ ಸುಧಾರಿಸಿದಿದ್ದರೆ, ಕೂಡಲೇ ನೀವು ಸ್ತ್ರೀರೋಗತಜ್ಞರನ್ನ ಭೇಟಿ ಮಾಡಿ ನಿಮ್ಮ ತೊಂದರೆಗಳನ್ನು ಅವರ ಬಳಿ ಹೇಳಿಕೊಳ್ಳಿ. ಅವರು ನಿಮಗೆ ಇದು ಮಾನಸಿಕ ತೊಂದರೆಯೂ ಅಥವಾ ವೈದ್ಯಕೀಯ ತೊಂದರೆಯೋ ಎಂದು ಹೇಳುತ್ತಾರೆ. ಅಲ್ಲದೆ, ಬೇಕಾಗಿರುವ ಸಲಹೆಗಳನ್ನು ಪೂರೈಸುತ್ತಾರೆ.   

Leave a Reply

%d bloggers like this: