shishu-garbhadalli-bikkalisuttideye

ಶಿಶುವು ಉಸಿರಾಡುವಾಗ, ಆಕಸ್ಮಿಕವಾಗಿ ಆಮ್ನಿಯೋಟಿಕ್ (ಗರ್ಭದ ಒಳಕವಚದಲ್ಲಿರುವ ದ್ರವ್ಯ) ದ್ರವವನ್ನು ಸೇವಿಸಿದರೆ, ಅಥವಾ ಈ ದ್ರವವನ್ನು ಕುಡಿಯುವುದು ಮಗುವಿಗೆ ಬಿಕ್ಕಳಿಕೆ ಬರಲು ಕಾರಣ ಎಂದು ಹೇಳುತ್ತಾರೆ. ಮಗುವಿನ ಶ್ವಾಸಕೋಶ ಮತ್ತು ಡಯಾಫ್ರಾಮ್(ವಪೆ) ಈ ದ್ರವವನ್ನು ಮಗು ನುಂಗಲು ಬಿಡದಂತೆ ತಡೆಯುತ್ತದೆ, ಇದರ ಪಲಿತಾಂಶ ಮಗುವಿಗೆ ಬಿಕ್ಕಳಿಕೆ ಬರುತ್ತದೆ.

ಹೌದು, ಶಿಶುಗಳ ಬಿಕ್ಕಳಿಕೆ ಸಾಮಾನ್ಯ. ಮಗು ಬಿಕ್ಕಳಿಸುತ್ತಿರುವುದು, ಶಿಶು ಬೆಳೆಯುತ್ತಿರುವುದರ ಚಿಹ್ನೆಯಾಗಿದೆ. ಅವು ಗರ್ಭದಲ್ಲಿ ಶಿಶುವಿನಲ್ಲಿ ಆಗುವ ಸ್ವಲ್ಪ ನಿರಂತರ ಚಳವಳಿಗಳು. ಅದು ಕೆಲವು ಸೆಕೆಂಡ್ ಗಳು ಆದ ನಂತರ ನಿಂತು ಹೋಗುತ್ತವೆ. ಕಡಿಮೆಯಾಗದಿದ್ದಲ್ಲಿ, ಅಥವಾ ನಿಂತಿಲ್ಲದಿದ್ದಲ್ಲಿ ವೈದ್ಯರನ್ನು ಬೇಟಿ ಮಾಡಿ. ಅಥವಾ ಅದು ನಿಮಗೆ ಗಂಭಿರವಾಗಿ ಕಂಡರೆ ತಕ್ಷಣವೇ ವೈದ್ಯರನ್ನು ಬೇಟಿ ಮಾಡುವುದು ಒಳಿತು. ಅಪರೂಪದ ಸಂದರ್ಭಗಳಲ್ಲಿ, ಶಿಶುಗಳ ವಿಕಸನವು ವರ್ಗಾವಣೆ ಮತ್ತು ಚಳುವಳಿಗಳು ಅಥವಾ ಸ್ಥಾನದಲ್ಲಿ ಸಂಪೂರ್ಣ ಬದಲಾವಣೆಯಾಗುವ ಸಾದ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಮಗುವು ಬಿಕ್ಕಿಳಿಸುವ ಅನುಭವವನ್ನು ನೀವು ಎರಡನೇ ಅಥವಾ ಮೂರನೇ ತ್ರೈಮಾಸಿಕದಿಂದ ಪ್ರಸವದ ತನಕ ಕಾಣಬಹುದು. ಇದುವರೆಗೂ ಇದರ ಬಗ್ಗೆ ಯಾವುದೇ ಗಂಭೀರ ತೊಂದರೆಗಳಾಗಿಲ್ಲ. ಶಿಶುಗಳು ಬಿಕ್ಕಳಿಕೆ ಶುರು ಮಾಡಿದ(೩-೫ಸೆಕೆಂಡ್) ತಕ್ಷಣವೇ ಅದನ್ನು ನಿಲ್ಲಿಸುತ್ತವೆ. ನಿಮ್ಮ ಶಿಶುವು ಬಿಕ್ಕಳಿಸುತ್ತಿದೆ ಎಂದು ಅನಿಸಿದರೆ ನಿಮ್ಮ ಉದರವನ್ನು ನಿಧಾನವಾಗಿ(ಮೃದುವಾಗಿ) ತಿಕ್ಕಿ, ಇದರಿಂದ ಮಗುವಿನ ಬಿಕ್ಕಳಿಕೆ ಶಮನಗೊಳ್ಳುವುದು. ಶಿಶುಗಳು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಬಿಕ್ಕಳಿಸುತ್ತವೆ. ಆದರೆ ಅನೇಕರು ಒಂದು ಬಾರಿ ಮಾತ್ರ ಅದನ್ನು ಅನುಭವಿಸುತ್ತಾರೆ(ಒಂದು ಬಾರಿ ಮಾತ್ರ ಬಿಕ್ಕಳಿಸದಂತೆ ಭಾಸವಾಗುತ್ತದೆ).

ನವಜಾತ ಶಿಶುಗಳಿಗೆ ಬಿಕ್ಕಳಿಕೆ ಬರುವುದು ಸರ್ವೇ ಸಾಮಾನ್ಯ. ನಿಮ್ಮ ಗರ್ಭಾವಸ್ತೆಯಲ್ಲಿ ಶಿಶುವು ಬಿಕ್ಕಳಿಸುವುದು ಕಂಡುಬಂದಿದ್ದರೆ, ಶಿಶುವು ಜನಿಸಿದ ನಂತರವೂ ಬಿಕ್ಕಳಿಸುವುದು ಸಾಮಾನ್ಯ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ಇದರಿಂದ ಯಾವುದೇ ತೊಂದರೆ ಇಲ್ಲ. ಆದ್ದರಿಂದ ನಿಮ್ಮ ಮಗುವಿನ ಆರೋಗ್ಯ ಬೆಳವಣಿಗೆ ಮತ್ತು ಪ್ರಗತಿಯನ್ನು ಆನಂದದಿಂದ ಅನುಭವಿಸಿ.

Leave a Reply

%d bloggers like this: