garbhaavastheyalli-sevisabekaada-7-hechhu-poushtikaamshavulla-aahaara-padaarthagalu

ನೀವು ಊಟ ಮಾಡುವಾಗ ಈ ಸಮಯದಲ್ಲಿ ನಾನು ಏನು ಸೇವಿಸಬೇಕು ಎಂದು ತಲೆಕೆಡಿಸಿಕೊಳ್ಳುವುದು ಸಾಮಾನ್ಯ. ನಿಮ್ಮ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿಗೆ ಬೇಕಾಗಿರುವ ಎಲ್ಲಾ ಪೌಷ್ಟಿಕಾಂಶಗಳನ್ನು ಒದಗಿಸಲು ಗರ್ಭಾವಸ್ಥೆಯಲ್ಲಿ ಆಹಾರ ಸೇವನೆಯ ಪೂರ್ವ ಯೋಜನೆ ಮಾಡಿಕೊಳ್ಳುವುದು ಉತ್ತಮ. ೯ ವಾರಗಳ ನಂತರ ಶಿಶುವಿನಲ್ಲಿ ರುಚಿ ಸವಿಯುವ ಅಂಶಗಳು ಬೆಳೆಯಲು ಪ್ರಾರಂಭಿಸುತ್ತವೆ. ನೀವು ತಿನ್ನುವ ಆಹಾರವನ್ನು ಶಿಶುಗಳು ರುಚಿ ನೋಡುತ್ತವೆ. ಈ ಸಮಯದಲ್ಲಿ ನಿಮಗೆ ಮತ್ತು ಬೆಳೆಯುತ್ತಿರುವ ನಿಮ್ಮ ಮಗುವಿಗೆ ಪೌಷ್ಟಿಕಾಂಶವುಳ್ಳ ಆಹಾರದ ಅಗತ್ಯವಿದೆ.

೧. ಮೊಟ್ಟೆ

ಮೊಟ್ಟೆಗಳಲ್ಲಿ ಕೋಲೀನ್ ಅಂಶ ಹೆಚ್ಚಿರುತ್ತದೆ, ಇದು ಮಗುವಿನ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ನರ ಕೊಳವೆಯ(neural tube) ಯಾವುದೇ ದೋಷಗಳನ್ನು ತಡೆಯುತ್ತದೆ. ಮೊಟ್ಟೆಗಳು ಹೆಚ್ಚು ಪ್ರೋಟಿನ್ ಗಳ ಉತ್ತಮ ಮೂಲವಾಗಿದೆ. ಗಣನೀಯವಾಗಿ ಬೆಳೆಯುವ ಶಿಶುಗಳ ಜೀವಕೋಶಗಳು ಪ್ರೋಟಿನ್ ಗಳಿಂದ ಮಾಡಲ್ಪಟ್ಟಿವೆ. ಇದು ನಿಮಗೂ ಅವಶ್ಯಕವಾಗಿದೆ.

೨.ಬೀನ್ಸ್(ಹುರುಳಿ ಕಾಳುಗಳು)

ಎಲ್ಲಾ ತರಕಾರಿಗಳಿಗಿಂತಲೂ ಹುರುಳಿಕಾಯಿಯಲ್ಲಿ ಹೆಚ್ಚು ಪ್ರೋಟಿನ್ ಇದೆ, ಮತ್ತು ಇದು ಫೈಬರ್ ಅಂಶವನ್ನು ತನ್ನಲ್ಲಿರಿಸಿಕೊಂಡಿದೆ. ಫೈಬರ್ ಅಂಶವುಳ್ಳ ಆಹಾರ ಪದಾರ್ಥಗಳು ಹೆಚ್ಚು ಪೌಷ್ಟಿಕಾಂಶವನ್ನು ಒಳಗೊಂಡಿರುತ್ತವೆ. ಬೀನ್ಸ್ ಕಬ್ಬಿಣ, ಫೋಲೇಟ್, ಕ್ಯಾಲ್ಸಿಯಂ ಮತ್ತು ಸತುಗಳ ಉತ್ತಮ ಮೂಲವಾಗಿದೆ. ಇದರಲ್ಲಿ ವಿವಿಧ ಬಗೆಯನ್ನು ಕಾಣಬಹುದು, ಅವು, ಹಲಸಂದೆ ಕಾಳು, ಕಡ್ಲೆ ಕಾಳು ಇತ್ಯಾದಿಗಳು. ಗರ್ಭಾವಸ್ಥೆಯು ಮಲಬದ್ಧತೆ ಮತ್ತು ಹೆಮೊರೊಯ್ಯಿಡ್ಸ್ ಅಪಾಯಕ್ಕೆ ಕಾರಣವಾಗಬಹುದು ಮತ್ತು ಫೈಬರ್ ಈ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

೩. ಗ್ರೀಕ್ ಮೊಸರು

ಗ್ರೀಕ್ ಮೊಸರು ಸಾಮಾನ್ಯ ಮೊಸರಿನ ಎರಡರಷ್ಟಿರುತ್ತದೆ. ಇದರಲ್ಲಿ ಕ್ಯಾಲ್ಸಿಯಮ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇದು ಗರ್ಭಿಣಿಯರಿಗೆ ಬೇಕಾಗಿರುವ ಆಹಾರ ಪದಾರ್ಥವಾಗುತ್ತದೆ.

೪. ಹಸಿರು ತರಕಾರಿಗಳು ಮತ್ತು ಸೊಪ್ಪುಗಳು

ಪಾಲಕ ಸೊಪ್ಪು, ಮಸ್ಸೋಪ್ಪುಗಳು ವಿಟಮಿನ್ ಎ, ಸಿ ಮತ್ತು ಕೆ ಸಹಿತ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿವೆ. ಇವನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ, ಮತ್ತು ಆರೋಗ್ಯಕ್ಕೂ ಒಳ್ಳೆಯದು.

೫. ಹಣ್ಣು ಮತ್ತು ತರಕಾರಿಗಳು

ಸೇಬುಗಳು, ಬಾಳೆಹಣ್ಣುಗಳು ಮತ್ತು ದಾಳಿಂಬೆಗಳಂತಹ ಸಾಕಷ್ಟು ವರ್ಣರಂಜಿತ ಹಣ್ಣುಗಳನ್ನು ತಿನ್ನುವುದರಿಂದ ನೀವು ಮತ್ತು ನಿಮ್ಮ ಮಗು ಇಬ್ಬರೂ ವಿವಿಧ ಪೋಷಕಾಂಶಗಳನ್ನು ಪಡೆಯುತ್ತೀರಿ. ಗರ್ಭದಲ್ಲಿ ಮಗುವಿಗೆ ನಿಮ್ಮ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಒದಗಿಸುವುದನ್ನು ವೈದ್ಯರು ಸಹ ಸಲಹಿಸುತ್ತಾರೆ, ಮತ್ತು ಗರ್ಭದಲ್ಲಿ ಇದನ್ನು ನೀಡುವುದರಿಂದ ಮಗು ಜನನದ ನಂತರವೂ ಅದನ್ನು ಸೇವಿಸುವುದನ್ನು ಮುಂದುವರೆಸುತ್ತದೆ.

೬. ಬೆಣ್ಣೆ

ಬೆಣ್ಣೆ ವಿಟಮಿನ್ ಗಳಾದ ಎ, ಡಿ, ಕೆ ಮತ್ತು ಇ ಹಾಗೂ ಸತು, ತಾಮ್ರ, ಸೆಲೆನಿಯಮ್ ಮತ್ತು ಕ್ರೋಮಿಯಂ ಮುಂತಾದ ಅಗತ್ಯ ಪೌಷ್ಟಿಕಾಂಶಗಳ, ಒಂದು ಉತ್ತಮ ಮೂಲವಾಗಿದೆ. ಶಿಶುವಿನ ಮೆದುಳು ಬೆಳೆವಣಿಗೆಗೆ ಅಗತ್ಯವಿರುವ ಒಮೇಗಾ-೩ ಕೊಬ್ಬಿನಾಮ್ಲಗಳು ಇದರಲ್ಲಿವೆ.

೭. ಎಲ್ಲಾ ತರಹದ ಧಾನ್ಯಗಳು

ಗರ್ಭಾವಸ್ಥೆಯಲ್ಲಿ ಧಾನ್ಯಗಳ ಸೇವನೆಯು ಮುಖ್ಯವಾಗಿದ್ದು, ಅವುಗಳಲ್ಲಿ ಫೈಬರ್ ಮತ್ತು ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಅವುಗಳೆಂದರೆ ವಿಟಮಿನ್ ಇ, ಸೆಲೆನಿಯಮ್ ಮತ್ತು ಫೈಟೋನ್ಯೂಟ್ರಿಯೆಂಟ್ಸ್ ಗಳು(ಜೀವಕೋಶಗಳನ್ನು ರಕ್ಷಿಸುವ ಸಸ್ಯ ಸಂಯುಕ್ತಗಳು). ವಿವಿಧ ಬಗೆಯ ಧಾನ್ಯಗಳನ್ನು ಸೇವಿಸಲು ಯಾವುದೇ ಮುಜುಗರ ಅಥವಾ ಅಸಹ್ಯ ಪಡಬೇಡಿ ಇದು ನಿಮ್ಮ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದರ ಜೊತೆಗೆ ಸೇವಿಸಬೇಕಾದ ಇತರೆ ಆಹಾರ ಪದಾರ್ಥಗಳೆಂದರೆ, ಆಕ್ರೋಡು(ವಾಲ್ನಟ್), ಸಾಲ್ಮನ್, ಸಿಹಿ ಗೆಣಸು, ಎಳನೀರು, ಮತ್ತು ಪ್ರೋಬಿಒಟಿಕ್ ಆಹಾರಗಳು. ಪೌಷ್ಠಿಕತಜ್ಞರನ್ನು ಬೇಟಿ ಮಾಡಿ ಸಲಹೆ ಪಡೆಸು ಹೆಚ್ಚು ಪೌಷ್ಠಿಕಯುಳ್ಳ ಆಹಾರ ಸೇವನೆ ಮಾಡುವುದು ನಿಮಗೆ ಮತ್ತು ನಿಮ್ಮ ಮಗುವಿಗೆ ಒಳ್ಳೆಯದು.

Leave a Reply

%d bloggers like this: