kevala-bharateeya-taayandiru-maaduva-8-muddaada-kelasagalu

ಭಾರತೀಯ ಅಮ್ಮಂದಿರು ಜಗತ್ತಿನ್ನಲ್ಲೇ ವಿಶಿಷ್ಟವಾದ ಅಮ್ಮಂದಿರು! “ನನ್ನ ಮುದ್ದು ಕಂದ ಏನ್ ಬೇಕು ನಿಂಗೆ ಇವತ್ತು ತಿನ್ನೋದಕ್ಕೆ” ಅಂತ ಹೇಳುವವರು ಒಂದೇ ಕ್ಷಣದಲ್ಲಿ “ಏನ್ ಮಾಡಿದಿನೋ ಅದುನ್ನ ಸುಮ್ನೆ ತಿನ್ನು” ಅಂತ ಉಲ್ಟಾ ಹೊಡೆಯುವರು! ಇಂತಹ ಮುಗ್ಧ ಮನಸ್ಸಿನ ತಾಯಂದಿರು ಮಾಡುವ ಮುದ್ದಾದ ಪೀಡಿಸುವಂತಹ ೮ ಕೆಲಸಗಳು ಇಲ್ಲಿವೆ 

೧. “ತಲೆಗೆ ಎಣ್ಣೆ ಹಚ್ಚಲಾ? ! “

ನೀವು ಹುಡುಗ ಆಗಿರಲಿ ಅಥವಾ ಹುಡುಗಿ ಆಗಿರಲಿ, ನಿಮ್ಮ ಅಮ್ಮ ನಿಮ್ಮನ್ನು ಹಿಡಿದು ಕೂರಿಸಿ, ಸುರಿಯುವವರೆಗೂ ಎಣ್ಣೆ ಹಚ್ಚಿರುತ್ತಾರೆ ಹೌದು ತಾನೇ? ನಿಮಗೆ ಏನೇ ತೊಂದರೆ-ತೊಡಕುಗಳು ಇರಲಿ, ಅದಕ್ಕೆಲ್ಲಾ ಪರಿಹಾರ ಅಮ್ಮನ ಕೈಯಿಂದ ಒಂದು ಆಯಿಲ್ ಮಸಾಜ್! ನಿಮ್ಮ ಒಡೆದ ಹೃದಯನ್ನು ಕೂಡಿಸುತ್ತದೆ, ನಿಮ್ಮ ಹೊಟ್ಟೆ ನೋವನ್ನು ಶಮನ ಮಾಡುತ್ತದೆ ಹಾಗು ಅಮ್ಮ ಹೇಳುವ ಹಾಗೆ ನಿಮ್ಮ ಮಂಡಿಯವರೆಗೂ ಕೂದಲು ಬೆಳೆಯುವ ಹಾಗೆ ಮಾಡುತ್ತದೆ. ನಾವು ಎಷ್ಟೇ ಬೇಡವೆಂದರೂ ಒಮ್ಮೆ ನಮ್ಮನ್ನು ಎಳೆದು ತಂದು ಕೂರಿಸಿ, ಮಸಾಜ್ ಮಾಡುತ್ತಿದ್ದರೆ ಇನ್ನಷ್ಟು ಬೇಕು ಅನಿಸುತ್ತದೆ. ಅಮ್ಮನ ಬೆರಳಿನಿಂದ ನಿಮ್ಮ ಕೂದಲು ನಿವಾಳಿಸುತ್ತಿದರೆ ಅದರಲ್ಲಿ ಏನೋ ಜಾದು ಇರುತ್ತದೆ…ಇದು ನಮ್ಮ ಅಂತರಾಳವನ್ನು ಕೂಡ ಆರಾಮ ಮಾಡಿಸುತ್ತದೆ.

೨. “ಅಮ್ಮ” ಎನ್ನುವ ನಂಬರಿನಿಂದ ಕನಿಷ್ಠ ಪಕ್ಷ 27 ಮಿಸ್ ಕಾಲ್ ಗಳು

ಅಪ್ಪಿತಪ್ಪಿ ನಾವು ಎಲ್ಲೋ ಹೋಗಿದ್ದು, ಅಲ್ಲಿಂದ ವಾಪಸ್ ಬರಲಿಕ್ಕೆ ಯಾವುದೇ ಆಟೋ ಅಥವ ಬಸ್ ಸಿಗದೇ ಇದ್ದಾಗ, ಇಲ್ಲ ಅವುಗಳು ಸಿಕ್ಕು ನಂತರ ಟ್ರಾಫಿಕ್ ಅಲ್ಲಿ ಸಿಕ್ಕಿಹಾಕೊಂಡಾಗ, ಅಥವಾ ಆಟೋದವನು ರೇಡಿಯೋದಲ್ಲಿ ಹಾಡು ಕೇಳಿಸಿಕೊಂಡು ಮೆಲ್ಲನೆ ಗಾಡಿ ಚಲಿಸುತ್ತಿದ್ದರೆ ಅಥವಾ ಸರಿಯಾಗಿ ಹೇಳಬೇಕಂದರೆ ದಿನ ಆಗುವಂತ ತೊಂದರೆಗಳೇ! ಆದರೆ, ತಾಯಿ ಹೃದಯಕ್ಕೆ ತಡಿಯೋದಕ್ಕೆ ಆಗುವುದಿಲ್ಲ ನೋಡಿ, ಅದಕ್ಕೆ ಅವರು ನಿಮಿಷಕ್ಕೆ ಎರಡು ಬಾರಿಯಂತೆ ಒಂದು ಇಪ್ಪತ್ತು ಕರೆಗಳನ್ನ ಮಾಡಿರ್ತಾರೆ!  ಒಹ್ ಇನ್ನೊಂದು ಹೇಳೋದು ಮರೆತುಬಿಟ್ಟೆ, ನಿಮ್ಮ ಫೋನ್ ಏನಾದ್ರೂ ಸ್ವಿಚ್ ಆಫ್ ಆಗಿದ್ದಲ್ಲಿ ಅಥವಾ ನೆಟ್ವರ್ಕ್ ಸಿಗದೇ ಇರುವಂತೆ ಇದ್ದರೆ, ನಿಮ್ಮನ್ನ ದೇವರೇ ಕಾಪಾಡಬೇಕು ! ನೀವು ವಾಪಸ್ ಆದಮೇಲೆ, ನಿಮ್ಮ ದಿನ ಚೆನ್ನಾಗಿದ್ದರೆ ಅವಳು ಕೇವಲ ಸಿಟ್ಟಾಗಿ ಮುಖ ಗಂಟು ಇಟ್ಟುಕೊಂಡು ಬೈಯ್ಯಬಹುದು ಅಥವಾ ನಿಮ್ಮ ದಿನ ಸರಿ ಇರಲಿಲ್ಲ ಎಂದರೆ, ಅವಳು ಬಾಗಿಲಲ್ಲೇ ಕುಳಿತು ಕಣ್ಣು ವದ್ದೆ ಮಾಡಿಕೊಂಡು ನಿಮ್ಮ ದಾರಿ ಕಾಯುತ್ತಿರುತ್ತಾಳೆ. ಹಾ! ಇನ್ನೊಂದ್ ವಿಷ್ಯ, ನೀವು ತಡವಾಗಿ ಬಂದಿದ್ದಕ್ಕೆ ನೂರು ಕಾರಣಗಳು ಇರಬಹುದು, ಆದರೆ ಅಮ್ಮನ ಪ್ರಕಾರ ಯಾವ್ದೋ ಹುಡುಗನ ಜೊತೆ ಸುತ್ತಾಡಿರ್ತೀರ ಅಂತ.

೩. ಮೂಢನಂಬಿಕೆಗಳು

ಭಾರತೀಯ ಅಮ್ಮಂದಿಗಿಂತ ಹೆಚ್ಚು ಮತ್ತ್ಯಾರು ಮೂಢನಂಬಿಕೆಗಳನ್ನು ನಂಬುವುದಿಲ್ಲ ಅನಿಸುತ್ತೆ. ಅವಳ ಪ್ರಕಾರ ಹೊರಗಿನ ಇಡೀ ಪ್ರಪಂಚ ತನ್ನ ಮುದ್ದು ಕಂದಮ್ಮನಿಗೆ ಹಾನಿ ಮಾಡಲೇ ಕಾಯುತ್ತಿರುತ್ತದೆ. ರಾತ್ರಿ ಹೊತ್ತು ಉಗುರು ಕತ್ತರಿಸಬೇಡ, ಕಾಲುಗಳನ್ನು ಅಲುಗಾಡಿಸಬೇಡ, ಕಪ್ಪು ಬೆಕ್ಕು ನಿನ್ನ ಹಾದಿಗೆ ಅಡ್ಡವಾಗಿ ಹೋದರೆ ಅದು ದುರಾದ್ರಷ್ಟ..ಉಫ್!..ಇನ್ನೂ ಇವೆ. ಪ್ರತಿ ಬಾರಿ ನೀವು ಅವುಗಳ ಬಗ್ಗೆ ಪ್ರಶ್ನಿಸಿದಾಗ, ಅವಳು ಕೆಲವೊಮ್ಮೆ ಹೊಸ ಸಮರ್ಥನೆ ನೀಡಬಹುದು ಇಲ್ಲವಾದಲ್ಲಿ ಎಂದಿನಂತೆ “ನಾನ್ ಹೇಳ್ತಿದೀನಿ ತಾನೇ? ಅದಿಕ್ಕೆ ಮಾಡು” ಅನ್ನೋ ಉತ್ತರ ನೀಡುವಳು. ಹಂಗೆ ಹೇಳಿದ್ಮೇಲೆ ನಾವು ಸುಮ್ಮನೆ ಮಾಡಲೇ ಬೇಕು! ನೀವು ಚಿಕ್ಕವರಿದ್ದಾಗಿನ ನಿಮ್ಮ ಫೋಟೋಗಳನ್ನೂ ನೋಡಿದರೆ ನಿಮ್ಮ ಕಣ್ಣಿಗೆ ಯಾವಾಗಲು ಕಾಡಿಗೆ ಹಚ್ಚಿ, ದೃಷ್ಟಿ ಆಗಬಾರದೆಂದು ಇನ್ನೊಂದು ಕಾಡಿಗೆ ಬೊಟ್ಟನ್ನು ಕೆನ್ನೆಯ ಮೇಲೆ ನಿಮ್ಮ ಅಮ್ಮ ಇಟ್ಟಿರುವುದು ನೀವು ನೋಡಬಹುದು. ಈ ಕಣ್ಣಿನ ಕಾಡಿಗೆಯ ಸರಿಯಾಗಿ ಹೇಳಬೇಕಂದರೆ ಮಗುವಿನ ದೃಷ್ಟಿ ವೃದ್ಧಿಯಾಗಲಿ ಎಂದು ಹಚ್ಚುವುದು. ಆದರೆ, ಕಾಡಿಗೆಯು ನಿಮ್ಮ ಮೇಲೆ ಕಾಗೆ ಕಣ್ಣು, ಗೂಬೆ ಕಣ್ಣು, ನಾಯಿ ಕಣ್ಣು, ನರಿ ಕಣ್ಣು ಬೀಳದಂತೆ ಕಾಪಾಡುತ್ತೆ, ಆಲ್ವಾ?

೪. “ರಾತ್ರಿ ಮಾಡಿದ್ದು ಅಡುಗೆ ತಿನ್ಲಿಲ್ಲ ಅಂದ್ರೆ, ಬೆಳಿಗ್ಗೆ ತಿಂಡಿಗೆ ಅದೇ ಕೊಡ್ತೀನಿ”

ನೀವು ಮನೆಯಲ್ಲೇ ತಿನ್ನುವುದು ಬಿಟ್ಟು ಹೊರಗಡೆ ತಿಂದು ಬಂದರೆ ನಿಮಗೆ ದೊಡ್ಡ ಗಂಡಾಂತರವೇ ಕಾದಿರುತ್ತದೆ. ನಿಮ್ಮ ಅಮ್ಮನಿಗೆ ನೀವು ಮುಂಚೆಯೇ ಇದರ ಬಗ್ಗೆ ಹೇಳದಿರುವುದು ನಿಮ್ಮದೇ ಅತಿದೊಡ್ಡ ತಪ್ಪು. ಅವಳು ಆಗಲೇ ಅಡುಗೆ ಮಾಡಿದ್ದು, ನೀವು ಎಲ್ಲೋ  ಬೇರೇ ಕಡೆ ತಿಂದುಕೊಂಡು ಬಂದರೆ ಮುಗಿದೇ ಹೋಯಿತು! ಅವಳು ಅಷ್ಟೊಂದು ಪ್ರೀತಿಯಿಂದ ಮಾಡಿದ ಅಡುಗೆ ನೀವು ತಿನ್ಲಿಲ್ಲ ಅಂದ್ರೆ, ಬೆಳಗ್ಗೆ ನಿಮ್ಮ ತಟ್ಟೆಯಲ್ಲಿ ತಿಂಡಿಗೆ ಅದೇ ಇರುತ್ತದೆ. ಆದ್ರೆ, ಆಶ್ಚರ್ಯವಾಗಬೇಡಿ, ಏಕೆಂದರೆ ತಪ್ಪು ನಿಮ್ಮದೇ ಗೊತ್ತಾಯ್ತ?

೫. “ಊಟದ ಡಬ್ಬಿ ಎಲ್ಲಿ?!”

ಸ್ಕೂಲ್ ಇಂದ ನೀವು ಮನೆಗೆ ಮರಳಿದೊಡನೆ ಅಮ್ಮ ಕೇಳುವ ಮೊದಲ ಪ್ರಶ್ನೆ ಊಟದ ಡಬ್ಬಿ ಎಲ್ಲಿ? ನೀವೇನಾದರೂ ನಿಮ್ಮ ಶಾಲೆಯಲ್ಲೇ ಡಬ್ಬಿ ಮರೆತು ಬಂದಿದ್ದರೆ ಹಾಗು ನಿಮ್ಮ ಶಾಲೆ ನಿಮ್ಮ ಮನೆಗೆ ಸಮೀಪದಲ್ಲೇ ಇದ್ದರೆ ನಿಮ್ಮ ಅಮ್ಮ ನಿಮ್ಮನು ಅಲ್ಲಿಗೆಯೇ ಕರೆದುಕೊಂಡು ಹೋಗಿ ಹುಡುಕಲು ಹೇಳಿದರು ಹೇಳಿದಳು! ಅದರಲ್ಲಿ ಹಾಕಿ ಕಳಿಸಿದ ತಿಂಡಿ ಏನಾದರು ತಿನ್ನದೆ ಹಾಗೆ ಉಳಿದಿದ್ದರೆ, ನೀವು ಸತ್ತಿರಿ ಅಂತಾನೆ ! ವಾರದ ದಿನಗಳಲ್ಲಿ ನೀವು ಶಾಲೆಯಲ್ಲೇ ಡಬ್ಬ ಬಿಟ್ಟು ಬಂದಿದ್ದರೆ ಮತ್ತೆ ಅಲ್ಲಿಗೆ ಹೋಗಿ ಹುಡುಕುವಂತ ತಲೆನೋವು, ಅಕಸ್ಮಾತ್ ಏನಾದರು ನೀವು ವಾರಾಂತ್ಯದಲ್ಲಿ ಬಿಟ್ಟು ಬಂದರೆ, ೨ ದಿನಗಳ ಕಾಲ ನಿಮ್ಮ ಅಮ್ಮ ಊಟದ ಡಬ್ಬದ ಬಗ್ಗೆ ಮಾತನಾಡಿ ಗೊಣಗುವುದನ್ನು ಸಹಿಸಿಕೊಳ್ಳಬೇಕು. ಅಬ್ಬಬ್ಬಾ ಅಂದರೆ ಏನು, ಅದೊಂದು ಊಟದ ಡಬ್ಬ ಅಷ್ಟೇ ತಾನೇ? ಊಹುಂ! ನಿಮ್ಮ ಅಮ್ಮನಿಗೆ ಅಲ್ಲ !

೬. “ನೇಹಾ ನೋಡು ದಿನಕ್ಕೆ ೪ ಘಂಟೆ ಓದ್ತಾಳೆ, ನೀನು ಇದ್ದೀಯ’”

ನಾವೆಲ್ಲರೂ ಇದಕ್ಕೆ ಬಲಿಯಾಗಿದ್ದೇವೆ. ನಿಮ್ಮ ಅಮ್ಮ ಶಾಲೆಯಲ್ಲಿನ ಸಹಪಾಟಿ ಆಗಲಿ, ಪಕ್ಕದ ಮನೆ ಹುಡುಗಿಯಾಗಲಿ ಅಥವ ನಿಮ್ಮದೇ ವಯಸ್ಸಿನ ಮತ್ತ್ಯಾವುದೋ ಹುದುಗಿಯಾಗಿರಲಿ, ನಿಮ್ಮ ಅಮ್ಮ ಅವರೊಂದಿಗೆ ನಿಮ್ಮನ್ನು ಹೋಲಿಸಿರುತ್ತಾರೆ. ನಿಮ್ಮ ವ್ಯಕ್ತಿತ್ವವೇ ಬೇರೇ ಇರಬಹುದು ಹಾಗು ನಿಮ್ಮ ಪ್ರತಿಭೆಗಳು ಬೇರೆಯೇ ಇರಬಹುದು. ಆದರೆ ನಿಮಗೆ 89% ಬಂದು, ಪಕ್ಕದ ಮನೆಯವಳು 92% ತೆಗೆದಿದ್ದರೆ, ಉಳಿದದ್ದೆಲ್ಲಾ ಕೆಲಸಕ್ಕೆ ಬಾರದವು ಅಷ್ಟೇ. ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿ ಇರುವ ಎಲ್ಲಾ ಮಕ್ಕಳಿಗಿಂತ ನೀವು ಮುಂಚೂಣಿ ಅಲ್ಲಿ ಇರಬೇಕು ಅಷ್ಟೇ !

೭. “ಫೋನ್ ಯಾಕೆ ಸೈಲೆಂಟ್ ಮೋಡ್ ಅಲ್ಲಿ ಇಟ್ಟಿದಿಯ?”

ನಿಮ್ಮ ಫೋನ್ ಅನ್ನು ನೀವು ಎಂದಿಗೂ ಸೈಲೆಂಟ್ ಮೋಡ್ ಗೆ ಹಾಕುವಂತಿಲ್ಲ. ಏಕೆಂದರೆ ಇದು ಅಮ್ಮನ ನಿಯಮಗಳ ಪ್ರಕಾರ ಅಕ್ರಮ. ಸೈಲೆಂಟ್ ಆಗಿ ಇಟ್ಟುಕೊಳ್ಳೋ ಹಾಗಿದ್ರೆ, ನಿಂಗೆ ಫೋನ್ ಯಾಕೆ ಬೇಕಿತ್ತು?. ಅವರ ಪ್ರಕಾರ ನಿಮಗೆ ಫೋನ್ ಕೊಡಿಸುರುವುದು ಕೇವಲ ಅವರಿಗೆ ಕಾಲ್ ಮಾಡಿ ಮಾತಾಡಲು ಅಷ್ಟೇ. ಅದನ್ನೇ ನೀವು ಸೈಲೆಂಟ್ ಆಗಿ ಇಟ್ಟರೆ, ನಿಮ್ಮ ಅಮ್ಮ ನಮಗೆ ಕರೆ ಮಾಡಿ ನೂರಾರು ಪ್ರಶ್ನೆಗಳು ಕೇಳುವುದು ಹೇಗೆ ಹಾಗು ಬರಬೇಕಾದರೆ ತರಬೇಕಾದ ತರಕಾರಿಗಳ ಪಟ್ಟಿ ಹೇಳುವುದು ಹೇಗೆ ಆಲ್ವಾ?

೮. “ನಿನ್ ರೂಮು ಫಿಶ್ ಮಾರ್ಕೆಟ್ ಗಿಂತ ಕೆಟ್ಟದಾಗಿ ವಾಸನೆ ಹೊಡೆಯುತ್ತೆ”

ನಿಮ್ಮ ಅಮ್ಮ ಏನು ಕೇಳಲೆಂದು ನಿಮ್ಮ ರೂಮಿಗೆ ಬಂದಿರಬಹುದು, ಆದರೆ ಅದು ಹೇಗೋ ಮಾತು ನೀವು ನಿಮ್ಮ ರೂಮು ಎಷ್ಟು ಕೆಟ್ಟದಾಗಿ ಇಟ್ಟಿರುವುದರ ಕಡೆ ಹೋಗುತ್ತದೆ, ನಂತರ ನೋಡುನೋಡುತ್ತಿದ್ದಂತೆ ಅಮ್ಮ “ಹಿಂಗೆ ಇದ್ದರೆ, ನಿನ್ನ ಯಾರು ಮದ್ವೆ ಆಗಲ್ಲ” ಅನ್ನೋದಕ್ಕೆ ಹೋಗುತ್ತೆ. ಅಷ್ಟರಲ್ಲಿ ನೀವು ಆಗಲೇ ಒಂದು ಕಿವಿಯಲ್ಲಿ ಕೇಳಿಸಿಕೊಂಡು ಇನ್ನೊಂದು ಕಿವಿಯಿಂದ ಹೊರಗಡೆ ಬಿಡುತ್ತಿರುತ್ತೀರ. “ಬಿಡು ನಿನ್ ಹನೆಬರಹನೆ ಇಷ್ಟು..ಎಷ್ಟ್ ಹೇಳಿದ್ರು ವೇಸ್ಟ್” ಅಂತ ಬಾಗಿಲು ಎಳೆದುಕೊಂಡು ಹೊರಗೆ ಹೋಗುತ್ತಾಳೆ.

Leave a Reply

%d bloggers like this: