ganda-maadida-atyanta-sihiyaada-kelasa-hanchikonda-7-hendatiyaru-1

ಒಂದು ವಿಷಯ ನಾವೆಲ್ಲಾ ಹುಡುಗೀರು ಇಷ್ಟ ಪಡುವುದೆಂದರೆ ಅದು ಸರ್ಪ್ರೈಸ್ ಗಳು. ಹಾಗಂದರೆ ಅದು ಕೇವಲ ಹೂವುಗಳು, ಚಾಕಲೇಟ್ ಗಳು, ದೈಹಿಕ ಅಥವಾ ಭೌತಿಕ ಉಡುಗೊರೆ ತಂದು ಕೊಡುವುದಲ್ಲ. ನಾನ್ ಹೇಳ್ತಿರೋದು ಏನು ಅಂದರೆ, ನಮ್ಮನ್ನು ನೀವು ಸಣ್ಣ ಕಾರ್ಯಗಳಲ್ಲಿಯೇ ಅನಿರೀಕ್ಷಿತ ಕರುಣೆ ಹಾಗು ಪ್ರೀತಿ ತೋರಿಸಿ ಗೆಲ್ಲಬಹುದು ಎಂದು.

ಈ ಚಿಕ್ಕ ಚಿಕ್ಕ ಕೆಲಸಗಳೇ ನಮ್ಮನ್ನು ಒಬ್ಬರು ತುಂಬಾ ಪ್ರೀತಿಸುವವರು ಹಾಗು ನಮ್ಮ ಮೇಲೆ ಕರುಣೆ ತೋರುವವರು ಇದ್ದಾರೆ ಎಂಬ ಭಾವನೆಯನ್ನು ದ್ವಿಗುಣಗೊಳಿಸುತ್ತವೆ. ಇವುಗಳು ನಮ್ಮ ಗಂಡಂದಿರು ಕೇವಲ ತಿಂದು,ಮಲಗಿ, ವಿಶ್ರಾಂತಿ ತಗಳ್ಳೋರಲ್ಲ, ಅವರು ನಮ್ಮ ಪ್ರೀತಿಯನ್ನು ಗೌರವಿಸುತ್ತಾರೆ ಹಾಗು ನಮ್ಮನ್ನು ಖುಷಿಯಾಗಿ ಇಡಲು ಪ್ರಯತ್ನಿಸುತ್ತಿರುತ್ತಾರೆ ಎಂದು ತೋರಿಸುತ್ತದೆ.

ಹೀಗಿದ್ದೂ, ಎಲ್ಲರ ಪರಿಸ್ಥಿತಿಯೂ ಒಂದೇ ರೀತಿ ಇರೋದಿಲ್ಲ. ಹಾಗಾಗಿ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ.

ತಮ್ಮ ಪತಿಯು ತಮಗೆ ಅನಿರೀಕ್ಷಿತವಾಗಿ ಮಾಡಿದ ಒಂದು ಅತ್ಯಂತ ಸಿಹಿಯಾದ ಕೆಲಸದ ಬಗ್ಗೆ ಇಲ್ಲಿ  ೭ ಹೆಂಡತಿಯರು ಮಾತಾಡಿದ್ದಾರೆ :

೧. ಚಹಾ,ಚರ್ಚೆ ಹಾಗು ಮಂಚದ ಮೇಲೆಯೇ ಊಟ

“ಆ ಒಂದು ದಿನ ನನಗೆ ತುಂಬಾನೇ ಹುಷಾರಿಲ್ಲದ ಹಾಗೆ ಆಗಿತ್ತು. ಹಾಗಾಗಿ ನಾನು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಉಳಿದುಕೊಂಡೆ. ನನಗೆ ಇಡೀ ದಿನ ಯಾವುದೇ ಕೆಲಸ ಮಾಡಲಿಕ್ಕೆ ಶಕ್ತಿ ಇರಲಿಲ್ಲ. ಪಾತ್ರೆ ತೊಳೆಯಲಿಕ್ಕೆ ಆಗ್ಲಿ, ವಾಶಿಂಗ್ ಮಷೀನ್ ಗೆ ಬಟ್ಟೆ ತುಂಬಲು ಆಗ್ಲಿ ಅಥವ ಅಡುಗೆ ಮಾಡಲು ಆಗಲಿ ನನ್ನ ಕೈಯಲ್ಲಿ ಆಗಲೇ ಇಲ್ಲ. ನಂತರ ನನ್ನ ಮನೆಯವರು ಆಫೀಸ್ ನಿಂದ ವಾಪಸ್ ಬಂದರು ಹಾಗು ತುಂಬಾನೇ ಸುಸ್ತು ಆಗಿದ್ದರು. ಆ ಸಮಯಕ್ಕೆ ನಾನು ಸ್ವಲ್ಪ ಸುಧಾರಿಸಿಕೊಂಡಿದ್ದೆ, ಹಾಗಾಗಿ ನಾನೆಯೇ ಇಬ್ಬರಿಗೂ ಟೀ ಮಾಡಿ ತರೋಣ ಅನ್ಕೊಂಡೆ.

ನಾನು ಮುಖ ತೊಳೆದುಕೊಂಡು ಫ್ರೆಶ್ ಆಗಿ ಬರೋ ಅಷ್ಟರಲ್ಲಿ ಟೇಬಲ್ ಮೇಲೆ ಟೀ ಆಗಲೇ ರೆಡಿ ಇತ್ತು ಹಾಗು ನನ್ನ ಪತಿ ಮಕ್ಕಳ ಜೊತೆಗೆ ಅಡುಗೆ ಮನೆಯಲ್ಲಿ ಇದ್ದರು. ಒಲೆ ಮೇಲೆ ಏನು ಬೇಯುತಿತ್ತು, ನನ್ನ ಪತಿಯೂ ನಾನು ಮಧ್ಯಾನ ಊಟ ಮಾಡಿದ್ದ ತಟ್ಟೆಯನ್ನು ತೊಳೆಯುತ್ತಿದ್ದರು, ಅದಕ್ಕೆ ಸಾಥ್ ಕೊಡಲು ನನ್ನ ಮಕ್ಕಳನ್ನು ಕರೆದುಕೊಂಡಿದ್ದರು. ಅವರು ಇನ್ನು ತಮ್ಮ ಕಾಲಿನ ಸಾಕ್ಸ್ ಕೂಡ ಬಿಚ್ಚಿರಲಿಲ್ಲ ಹಾಗು ಕೊರಳಲ್ಲಿ ಟೈ ಹಾಗೆಯೇ ಇತ್ತು. ನಾನು ಅಡುಗೆ ಮನೆಗೆ ಬಂದಿದ್ದು ನೋಡಿದೊಡನೆ ಅವರ ಮುಖ ಅರಳಿತು. ನಾನು ಎಷ್ಟು ಕೇಳಿಕೊಂಡರು ನನಗೆ ಆ ದಿನ ಕೆಲಸ ಮಾಡಲು ಬಿಡಲೇ ಇಲ್ಲ.

ನಂತರ ಅಡುಗೆ ಮಾಡಿಕೊಂಡು, ಊಟ ತೆಗೆದುಕೊಂಡು ಮಕ್ಕಳೊಂದಿಗೆ ನಮ್ಮ ಬೆಡ್ರೂಮ್ ಗೆ ಬಂದರು. ಅಲ್ಲೇ ನಮ್ಮ ಕುಟುಂಬದ ಒಂದು ಸಣ್ಣ ಪಿಕ್ನಿಕ್ ಥರ ಆಗೋಯ್ತು”

  • ರಂಜಿನಿ
೨. ಆ ದಿನದ ಚಾಲಕ

“ಆ ಇಡೀ ವಾರವೇ ದರಿದ್ರವಾಗಿತ್ತು! ನನ್ನ ಕೈ ಉಳುಕಿತ್ತು ಹಾಗು ಮಾಡಲು ತುಂಬಾ ಕೆಲಸಗಳು ಇದ್ದವು. ಅದೇ ವಾರವೇ ನಮ್ಮ ಅಮ್ಮ ನಮ್ಮ ಮನೆಗೆ ಬಂದಿದ್ದು ಹಾಗು ಮರುದಿನವೇ ಹುಷಾರಿಲ್ಲದಂತೆ ಆಗಿ ಮಲಗಿದ್ದು. ಹಾಗಾಗಿ ಯಾರಾದರು ನಮ್ಮ ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು ಹಾಗು ನನ್ನನ್ನು ಕೆಲಸದ ಜಾಗಕ್ಕೆ ಬಿಡಬೇಕಿತ್ತು. ಆಗ ಚಾಲಕನ ಕೆಲಸ ಕೈಗೆತ್ತಿಕೊಂಡವರು ನನ್ನ ಮುದ್ದು ಗಂಡ.

ಪ್ರತಿದಿನ ಮುಂಜಾನೆ ನಮ್ಮ ಮಗಳು ಶಾಲೆಗೆ ಹೋಗಿದೊಡನೆ, ಅವರು ನನ್ನನ್ನು ಕೆಲಸದ ಜಾಗಕ್ಕೆ ಕರೆದೊಯ್ಯುತ್ತಿದ್ದರು ಹಾಗು ಯಾವಾಗೆಲ್ಲಾ ನಮ್ಮ ಅಮ್ಮ ಆಸ್ಪತ್ರೆಗೆ ಹೋಗಬೇಕಿತ್ತೋ ಅವಾಗೆಲ್ಲ ನಮ್ಮಿಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ತಂದು ಬಿಡುತ್ತಿದ್ದರು”.

  • ಸೀಮಾ
೩. ನನ್ನದೇ ಸ್ವಂತ ಸೂಪರ್ ಮ್ಯಾನ್ !

“ನಾವು ಇಷ್ಟ ಪಡದೇ ಇದ್ದರೂ ಪದೇ ಪದೇ ಮಾಡುವ ಒಂದು ಕೆಲಸ ಎಂದರೆ ಅದು ಯಾರದ್ದೋ ವಿಷಯವಾಗಿ ನಮ್ಮ ಅಪ್ಪ ಅಮ್ಮ ಜೊತೆಗೆ ಅಥವಾ ಸಂಬಂಧಿಕರ ಜೊತೆಗೆ ಜಗಳ ಆಡುವುದು. ಈ ಒಂದು ದಿನ, ನನ್ನ ನಾದಿನಿಯ ಮನೆಯಲ್ಲಿ ನಮ್ಮ ಪತಿಯ ಮನೆಯವರೆಲ್ಲರು ಯಾವುದೋ ಒಂದು ಸಂದರ್ಭಕ್ಕೆಂದು ಸೇರಿದ್ದರು. ನಾನು ಅವರೆಲ್ಲರನ್ನೂ ಮುಂಚೆಯೇ ಭೇಟಿ ಆಗಿದ್ದೆ ಆದರೆ ಅದರಲ್ಲಿ ಒಬ್ಬರಾದ ನನ್ನ ಪತಿಯ ಚಿಕ್ಕಮ್ಮ ನನ್ನೊಟ್ಟಿಗೆ ಸರಿಯಾಗಿ ಮಾತಾಡಲಿಲ್ಲ.

ನನ್ನ ಪತಿಯು ಆಕೆಯ ಮಾತಿಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಯಾವಾಗಲು ಹೇಳುತ್ತಿದ್ದರು. ಆದರೆ ಆ ದಿನ ಅವಳು ಮಾತುಗಳು ಹದ್ದು ಮೀರಿದ್ದವು. ನಾನು ಇನ್ನೂ ಏನಾದರು ಹೇಳುವ ಮುಂಚೆಯೇ ನನ್ನ ಪತಿಯು ಆಕೆಯನ್ನು ಬದಿಗೆ ಕರೆದುಕೊಂಡು ಹೋಗಿ ಆಕೆ ಮಾತಾಡಿದ ರೀತಿಯ ಬಗ್ಗೆ ಪ್ರಶ್ನಿಸಿದರು. ನನಗೆ ನಿಜವಾಗಲು ತುಂಬಾ ಆಶ್ಚರ್ಯವಾಯಿತು. ಏಕೆಂದರೆ, ನಾನು ಅಂತವುಗಳನ್ನೆಲ್ಲ ತಲೆಗೆ ಹಾಕೊಳ್ಳುವುದಿಲ್ಲ ಅಂತ ನನ್ನ ಗಂಡನಿಗೂ ತಿಳಿದಿತ್ತು ಆದರೆ ನಾನು ಇನ್ನೊಮ್ಮೆ ಅಂತ ಪರಿಸ್ಥಿತಿ ಎದುರಿಸಬಾರದೆಂದು ಅವರು ತಮಗೆ ತಾವೇ ಅಂತ ಕಠಿಣ ಪರಿಸ್ಥಿತಿ ತಂದುಕೊಳ್ಳುವ ನಿರ್ಧಾರ ಮಾಡಿಬಿಟ್ಟರು”.

  • ನಳಿನಿ
೪. ಮನೆಗೆ ಇನ್ನೊಬ್ಬ ಸದಸ್ಯ

“ಕಳೆದ ಬಾರಿ ವ್ಯಾಲೆಂಟೈನ್ ಡೇ ಗೆ ನನ್ನ ಗಂಡ ನನ್ನನ್ನು ಎಲ್ಲಿಗೆ ಎಂದು ಹೇಳದೆ ಹೊರಗಡೆ ಕರೆದುಕೊಂಡು ಹೋಗಿದ್ದರು. ನನಗೆ ನಾಯಿ ಅಂದರೆ ಪಂಚಪ್ರಾಣ! ನನಗೆ ಅವುಗಳನ್ನು ಕಂಡರೆ ಚಿಕ್ಕ ವಯಸ್ಸಿನಿಂದಲೂ ತುಂಬಾ ಪ್ರೀತಿ. ಅವರು ಯಾವಾಗ ಗಾಡಿಯನ್ನು ನಾಯಿಗಳ ವಸತಿ ಕಡೆಗೆ ತಿರುಗಿಸಿದರೋ, ನನಗೆ ಮೈಯೆಲ್ಲಾ ರೋಮಾಂಚನವಾಯಿತು!

ಮನೆಗೆ ಹೋಗುವ ಮುನ್ನ, ನನ್ನ ಪತಿಯು ನಾವೊಂದು ನಾಯಿಯನ್ನು ದತ್ತು ತೆಗೆದುಕೊಂಡಿರುವುದಾಗಿ ಹಾಗು ಅದು ಸ್ವಲ್ಪ ದೊಡ್ಡದಿದ್ದರೂ ತುಂಬಾ ಮುದ್ದಾಗಿ ಇದೆ ಎಂದು ಹೇಳಿದರು. ನಾವು ಆ ವಸತಿಯಲ್ಲಿ ೨ ಘಂಟೆಗಳು ಆತವದಿಸಿದ್ದು ಅದೇ ನಾಯಿ. ನಾವು ಮನೆಗೆ ಹೋಗಿದೊಡನೆ ನಮ್ಮ ಮಗನು ನಾಯಿಯನ್ನು ನೋಡಿ ಕುಪ್ಪಳಿಸಿದ. ಅದರ ಮೇಲೆ ಅವನಿಗೆ ಮೊದಲ ನೋಟದಲ್ಲೇ ಪ್ರೀತಿಯಾಯಿತು. ಪ್ರತಿ ವರ್ಷ ವ್ಯಾಲೆಂಟೈನ್ ಡೇ ಚೆನ್ನಾಗಿಯೇ ಇತ್ತು. ಆದರೆ, ಆ ದಿನದಂದು ನಾನು ಹಾಗು ನನ್ನ ಪತಿಯು ಏನಾದರು ಒಟ್ಟಿಗೆ ಪ್ರಣಯದ ಕೆಲಸಗಳು ಮಾಡುವುದು ಅಭ್ಯಾಸವಾಗಿತ್ತು. ಆದರೆ ಈ ದಿನ ನನ್ನ ಮಗನನ್ನು ಅಷ್ಟೊಂದು ಖುಷಿಯಾಗಿ ನೋಡಿ ನನ್ನ ಮನಸ್ಸೆಲ್ಲಾ ನೀರಾಯಿತು”

  • ಸೊನಾಲಿ
೫. ನಂಬರ್ ೧ ಅಪ್ಪ

ನಾನು ಮನೆಯಲ್ಲೇ ಇರುವ ತಾಯಿ. ಹೀಗಾಗಿ ನಾನು ನನ್ನ ಹೆಚ್ಚಿನ ಸಮಯ ನನ್ನ ಮಕ್ಕಳೊಂದಿಗೆ ಮನೆಯಲ್ಲೇ ಕಳೆಯುತ್ತೇನೆ. ಒಂದು ವಿಷಯ ನನಗೆ ಬಹಳ ನಿಖರವಾಗಿ ಗೊತ್ತಿರುವುದು ಅಂದರೆ ಅದು ನನ್ನ ಮಕ್ಕಳು ಅವರ ಅಪ್ಪ ಎಂದರೆ ಆರಾಧಿಸುತ್ತಾರೆ. ಯಾಕ್ ಮಾಡಬಾರದು ಹೇಳಿ? ಅವರು ಅಂತ ಒಳ್ಳೆ ಮನುಷ್ಯ. ಒಂದೆರೆಡು ವರ್ಷಗಳ ಹಿಂದೆ, ಮಕ್ಕಳಿಬ್ಬರೂ ಇನ್ನು ಸ್ವಲ್ಪ ಚಿಕ್ಕವರಿದ್ದಾಗ, ನನ್ನ ಪತಿಯು ಸಣ್ಣ ಮಟ್ಟದ ಖಿನ್ನತೆಯಿಂದ ಬಳಲುತ್ತಿದ್ದರು. ನಾವು ಅವರಿಗೆ ಸರಿಯಾದ ಚಿಕಿತ್ಸೆ ದೊರಕುವಂತೆ ನೋಡಿಕೊಂಡೆವು ಹಾಗು ಅವರು ತಮ್ಮ ಸಮಸ್ಯೆ ಮಕ್ಕಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಂಡರು.

ಮನಸ್ಸಿನ ಒತ್ತಡ ಕಮ್ಮಿ ಮಾಡಿಕೊಳ್ಳಲು ಅವರು ಮಕ್ಕಳೊಡನೆ ಸಮಯ ಖರ್ಚು ಮಾಡುತ್ತಿದ್ದರು. ಇದಕ್ಕಾಗಿ ಅವರು ಕೆಲಸಕ್ಕೆ ಸ್ವಲ್ಪ ತಡವಾಗಿ ಹೋಗಿ ಅಲ್ಲಿಂದ ಸ್ವಲ್ಪ ಬೇಗನೆ ವಾಪಸ್ ಆಗುತ್ತಿದ್ದರು. ಆ ಸಮಯದಲ್ಲಿ ಅವರನ್ನು ಯಾರೇ ನೋಡಿದರು, ಈ ಮನುಷ್ಯನೇ ಜಗತ್ತಿನ ಅತ್ಯಂತ ಖುಷಿಯಾಗಿರುವ ತಂದೆ ಎಂದು ಹೇಳುತ್ತಿದ್ದರು”.

  • ರೋಸ್
೬. ಮಸಾಜ್ ಗುರು!

“ನನಗೆ ತುಂಬಾನೇ ಇಷ್ಟವಾದ ಒಂದು ವಿಷಯ ಅಂದರೆ ಅದು ಬೆನ್ನಿನ ಮಸಾಜ್. ನಾನು ನನ್ನ ಗಂಡನನ್ನು ಇಷ್ಟಪಡಲು ಇರುವ ಅನೇಕ ಕಾರಣಗಳಲ್ಲಿ ಒಂದು ಎಂದರೆ ಅದು ಅವರು ದಿನ ರಾತ್ರಿ ನನಗೆ ಬೆನ್ನಿಗೆ ಮಸಾಜ್ ಮಾಡುವುದು. ನಾವು ಪ್ರವಾಸದಲ್ಲಿ ಇದ್ದರೂ, ಮನೆಗೆ ಸಂಬಂದಿಕರು ಬಂದಿದ್ದರೂ ಅವರು ನಂಗೆ ಮಸಾಜ್ ಮಾಡುವುದು ಮರೆಯುವುದಿಲ್ಲ.

ನಾವು ಈಗಷ್ಟೇ ತಾನೇ ಜಗಳವಾದಿದ್ದರು ಅವರು ಮತ್ತೆ ಕೂಡಲೇ ಬಂದು ನನಗೆ ಬೆನ್ನಿನ ಮಸಾಜ್ ಮಾಡುವರು. ಅವರು ನನ್ನ ಮೇಲೆ ಅಷ್ಟೊಂದು ಸಿಟ್ಟಾಗಿದ್ದರು ಮಸಾಜ್ ಮಾಡುವಾಗ ಅವರು ನನಗೆ ನೋವಾಗದಂತೆ ತೋರುವ ಕಾಳಜಿ, ಅವರು ನನ್ನ ಒಳಿತಿಗೆ ಹಾಗು ಸಂತೋಷಕ್ಕೆ ಎಷ್ಟೊಂದು ಬೆಲೆ ಕೊಡುತ್ತಾರೆ ಎನ್ನುವುದು ತೋರಿಸುತ್ತದೆ”.

  • ನೀತಿ
೭. ನಿಶಾಚರಿ ಹಕ್ಕಿಗಳು

ನನ್ನ ಅಭಿಪ್ರಾಯದ ಪ್ರಕಾರ, ಸಂವಹನ ಅಂದರೆ ಕಮ್ಯುನಿಕೇಷನ್ ಅನ್ನುವುದು ಯಾವುದೇ ಸಂಬಂಧದ ಆಧಾರಸ್ತಂಬ. ನಾನು ಯಾರಿಗಾದರು ಹತ್ತಿರವಾದೊಡನೆ, ಏನೇನೋ ವಿಷಯಗಳು ಬಗ್ಗೆ ಮಾತಾಡುತ್ತಲೇ ಇರುತ್ತೇನೆ. ಕೆಲವೊಂದು ರಾತ್ರಿಗಳು ನನ್ನ ಪತಿಯು ಕೆಲಸದಿಂದ ದಣಿದು ತಡವಾಗಿ ಬಂದಿದ್ದರೂ, ಊಟದ ನಂತರ ಮಂಚದ ಮೇಲೆ ನನ್ನೊಂದಿಗೆ ಕುಳಿತು, ನನ್ನ ದಿನ ಹೇಗಿತ್ತು ಎಂದು ಕೇಳಿ ಮಾತಾಡಲು ಪ್ರಚೋದಿಸುವರು. ಅಲ್ಲದೆ, ನಾನು ಮಾತಾಡಬೇಕೆಂದಿದ್ದ ನೂರು ವಿಷಯಗಳನ್ನು ಯಾವುದೇ ಬೇಸರವಿಲ್ಲದೆ ಕೇಳಿಸಿಕೊಳ್ಳುತ್ತಾರೆ.

ಕೆಲವೊಂದು ಬಾರಿ ಈ ಚರ್ಚೆಗಳು ಕೆಲಸಕ್ಕೆ ಸಂಬಂಧ ಪಟ್ಟಿರುತ್ತವೆ ಹಾಗು ಅವರು ನಾನು ಮುಂದೆ ಏನು ಮಾಡಬೇಕೆಂದು ಸಲಹೆ ನೀಡುತ್ತಾರೆ. ಕೆಲವೊಂದು ಬಾರಿ ಈ ಚರ್ಚೆಗಳು ನಾನು ಎಂತಹ ಒಳ್ಳೆ ತಾಯಿ ಹಾಗು ನಮ್ಮ ಮಗು ನನ್ನನ್ನು ಎಷ್ಟು ಇಷ್ಟ ಪಡುತ್ತಾಳೆ ಎಂದು ಅವರು ನಂಗೆ ಹೇಳುವುದು ಆಗಿರುತ್ತವೆ. ಕೆಲವೊಂದು ಬಾರಿ ಈ ಚರ್ಚೆಗಳು ನಾವು ಎಲ್ಲಿಗೋ ಪ್ರಯಾಣ ಮಾಡಬೇಕು ಎಂದಿರುವ ಕನಿಸಿನ ಬಗ್ಗೆ ಆಗಿರುತ್ತವೆ. ಅವರು ಎಷ್ಟೇ ಸುಸ್ತಾಗಿರಲಿ, ಅವರು ರಾತ್ರಿಯೆಲ್ಲ ನನ್ನೊಂದಿಗೆ ಕುಳಿತು ಮಾತಾಡುತ್ತಾರೆ.

ಇದು ನನಗೆ ಕಾಲೇಜ್ ದಿನಗಳ ಸಂಬಂಧ ಹೇಗೆ ಇರುತ್ತದೆಯೋ ಅಂತದ್ದೇ ಭಾವನೆ ನೀಡುತ್ತದೆ. ನೀವಿಬ್ಬರು ಒಬ್ಬರಿಗೊಬ್ಬರು ಖಾಸಾ ಗೆಳೆಯರು ಹಾಗು ಒಬ್ಬರಿಗೊಬ್ಬರು ಅತಿಹೆಚ್ಚು ಪ್ರಾಮುಖ್ಯ ಕೊಡುತ್ತೀರಿ. ಇದು ಮದುವೆ ಅನ್ನೋದನ್ನ ಏನೋ ಎಲ್ಲಾ ಮುಗಿದಿದೆ ಅನ್ನುವಂತೆ ಮಾಡುವುದನ್ನು ನಿಲ್ಲಿಸುತ್ತೆ.

  • ಅಶ್ವಿನಿ

Leave a Reply

%d bloggers like this: