nimma-modalane-traimaasikadalli-sevisabekaada-5-aarogyakara-aaharagalu

ನೀವು ಈಗ ತಾನೇ ಗರ್ಭತಾಳಿದ್ದರೆ, ನಿಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಲು ಇದು ಒಳ್ಳೆ ಸಮಯ. ನೀವುಆರೋಗ್ಯಕರ ಆಹಾರ ಸೇವನೆ  ಮಾಡುವುದು ಈ ಸಮಯದಲ್ಲಿ ತುಂಬಾ ಪ್ರಮುಖವಾದದ್ದು, ಮತ್ತು ಇದನ್ನು ಗರ್ಭಾವಸ್ತೆಯ ಅವಧಿ ಪೂರ್ತಿ ಕಾಪಾಡಿಕೊಳ್ಳುವುದು ನಿಮ್ಮ ಮತ್ತು ನಿಮ್ಮ ಶಿಶುವಿನ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

ಈ ಸಮಯದಲ್ಲಿ ನಿಜವಾಗಿಯೂ ನಿಮಗೆ ಆರೋಗ್ಯಕರ ಆಹಾರ ಸೇವನೆ ಮಾಡಬೇಕೆನಿಸಿದರೂ, ನಿಮ್ಮ ಬಯಕೆಗಳು ರುಚಿಯಾದ ಆಹಾರಗಳನ್ನು ಕೇಳಿಸುತ್ತವೆ. ಗರ್ಭಾವಸ್ತೆಯಲ್ಲಿ ಬಯಕೆಗಳು ಬರುವುದು ಸಹಜ, ಅದಕ್ಕೆ ದನ್ಯವಾದಗಳನ್ನು ಹೇಳಿ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ನಿಮಗೆ ಈ ೫ ಆರೋಗ್ಯಕರ ಮತ್ತು ರುಚಿಕರ ಆಹಾರಗಳನ್ನು ಸೇವಿಸಲು ಸಲಹೆ ನೀಡುತ್ತಿದ್ದೇವೆ.

೧. ಆಲೂಗಡ್ಡೆ ಮತ್ತು ಈರುಳ್ಳಿ ಸೂಪ್

ವಿಧಾನ:

೧.ಕುಕ್ಕರ್ ಅಲ್ಲಿ ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ

೨.ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ೧ ನಿಮಿಷ ಎಣ್ಣೆಯಲ್ಲಿ ಉರಿಯಿರಿ

೩.ಇದಕ್ಕೆ ಕತ್ತರಿಸಿದ ೨ ಆಲೂಗಡ್ಡೆಯನ್ನು ಹಾಕಿ ೧ ನಿಮಿಷ ಉರಿಯಿರಿ

೪.ಅದಕ್ಕೆ ೧ ೧/೨ ಬಟ್ಟಲು ನೀರು ಹಾಕಿ ಕುಕ್ಕರ್ ನಲ್ಲಿ ೩ ವಿಸ್ಹಲ್(ಸಿಟಿ) ಬರುವವರೆಗೆ ಬೇಯಿಸಿ

೫.ಬಿಸಿ ಆರಿದ ಮೇಲೆ, ಇದನ್ನು ಒಂದು ಜಾರಿನಲ್ಲಿ ಹಾಕಿ ದ್ರವ ರೂಪಕ್ಕೆ ಬರುವ ಹಾಗೆ ರುಬ್ಬಿಕೊಳ್ಳಿ

೬.ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಉಪ್ಪು, ಮೆಣಸು ಮತ್ತು ಅರ್ಧ ಬಟ್ಟಲು ನೀರು ಸೇರಿಸಿ

೭.ಅದನ್ನು ೨-೩ ನಿಮಿಷಗಳ ಕಾಲ ಬೇಯಿಸಿ

೮.ತುರಿದ ಕ್ಯಾರೆಟ್ ನಿಂದ ಅಲಂಕರಿಸಿ

ನಿಮ್ಮ ಸೂಪ್ ತಯಾರಾಗಿದೆ!

೨. ಮೊಳಕೆ ಕಾಳು, ಉಳ್ಳಾಗಡ್ಡಿ(ಎಳಸು ಈರುಳ್ಳಿ) ಮತ್ತು ಟಮೋಟ ಸಲಾಡ್

ವಿಧಾನ:

೧.ನೆನೆಸಿದ ಮೊಳಕೆಕಾಳುಗಳನ್ನು ನೀರಿನಲ್ಲಿ ಬೇಯಿಸಿ

೨.ಎರಡು ಈರುಳ್ಳಿ ಮತ್ತು ಎರಡು ಟಮೋಟವನ್ನು ಸಣ್ಣಗೆ ಕತ್ತರಿಸಿಕೊಳ್ಳಿ

೩.ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ

೪.ಇದಕ್ಕೆ ೨ ಚಮಚ ನಿಂಬೆ ರಸ, ಸ್ವಲ್ಪ ಉಪ್ಪು ಮತ್ತು ಮೆಣಸು ಪುಡಿಯನ್ನು ಸೇರಿಸಿ

೫.ಎಲ್ಲವನ್ನು ಚೆನ್ನಾಗಿ ಮಿಶ್ರಿಸಿ, ಸವಿಯಿರಿ

೩. ಹಸಿರುಬೇಳೆ ದೋಸೆ

ವಿಧಾನ:

೧.ಹಸಿರುಬೇಳೆ ಮತ್ತು ಅಕ್ಕಿಯನ್ನು ಕನಿಷ್ಠ ೩ ಗಂಟೆಗಳ ಕಾಲ ನೆನೆಸಿ, ನಂತರ ರುಬ್ಬಿಕೊಳ್ಳಿ

೨.ಸ್ವಲ್ಪ ನೀರನ್ನು ಹಾಕಿ ದೋಸೆ ಹಿಟ್ಟಿನ ಅದಕ್ಕೆ ರುಬ್ಬಿಕೊಳ್ಳಿ

೩.ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಿಸಿ

೪.ತವಾಕ್ಕೆ ಸ್ವಲ್ಪ ಎಣ್ಣೆ ಹಾಕಿ, ಹಿಟ್ಟನ್ನು ದೋಸೆ ತರ ತವಾದ ಮೇಲೆ ಹಾಕಿ

೫.ಎರಡು ಕಡೆ ಬೇಯಿಸಿ(ಕಂದು ಬಣ್ಣ ಬರುವವರೆಗೆ)

೬.ಚಟ್ನಿ ಅಥವಾ ಸಾಂಬಾರಿನ ಜೊತೆ ಸವಿಯಿರಿ.

೪.ಕೋಸುಗಡ್ಡೆ(ಬ್ರೋಕೋಲಿ) ಸೂಪ್

ವಿಧಾನ:

೧.ಒಂದು ಪಾತ್ರೆಗೆ ಎಣ್ಣೆ ಹಾಕಿ, ಅದು ಕಾದ ನಂತರ ೨ ಕತ್ತರಿಸಿದ ಈರುಳ್ಳಿಯನ್ನು ಚೆನ್ನಾಗಿ ಉರಿಯಿರಿ

೨.ಇದಕ್ಕೆ ಒಂದು ಬಟ್ಟಲು ಕೋಸುಗಡ್ಡೆ ಹಾಕಿ, ಮುಚ್ಚಳ ಮುಚ್ಚಿ ೩-೪ ನಿಮಿಷ ಬೇಯಿಸಿ

೩.ಚೆನ್ನಾಗಿ ಬೇಯಿಸಿದ ನಂತರ, ಅದನ್ನು ಒಲೆಯಿಂದ ಕೆಳಗಿಳಿಸಿ ಹಾರಲು ಬಿಡಿ

೪.ಅದು ಮೃದುವಾಗುವವರೆಗೆ ರುಬ್ಬಿಕೊಳ್ಳಿ

೫.ಮಿಶ್ರಣವನ್ನು ಪುನಃ ಅದೇ ಪಾತ್ರೆಗೆ ಹಾಕಿ

೬.ಮಿಶ್ರಣಕ್ಕೆ ಹಾಲು, ಉಪ್ಪು, ಮೆಣಸನ್ನು ಸೇರಿಸಿ ಚೆನ್ನಾಗಿ ಕದಡಿ(ಮಿಶ್ರಿಸಿ)

೭.೩-೪ ನಿಮಿಷ ಬೇಯಿಸಿ

ನಿಮ್ಮ ಸೂಪ್ ತಯಾರಾಗಿದೆ

೫.ಬಾಜ್ರಾ ಖಕ್ರಾ

ವಿಧಾನ:

೧.ಬಾಜ್ರಾ ಹಿಟ್ಟು(ಪುಡಿ), ಗೋಧಿ ಹಿಟ್ಟು(ಪುಡಿ), ಉಪ್ಪು, ಹಸಿರು ಮೆಣಸಿನಕಾಯಿ ಮತ್ತು ನೀರನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ

೨.ಸ್ವಲ್ಪ ನೀರು ಹಾಕಿಕೊಂಡು, ಚಪಾತಿ ಹಿಟ್ಟಿನ ತರ ಕಲಸಿಕೊಳ್ಳಿ

೩.ಕಲಸಿಕೊಂಡ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ಚಪಾತಿ ತರ ಒತ್ತಿಕೊಳ್ಳಿ

೪.ತವಾ ಅಥವಾ ರೊಟ್ಟಿಕಲ್ಲನ್ನು ಒಲೆಮಲೆ ಇಟ್ಟು ಎಣ್ಣೆ ಅಥವಾ ತುಪ್ಪ ಹಾಕಿ ರೊಟ್ಟಿ ತರ ಸುಟ್ಟಿಕೊಳ್ಳಿ

೫.ಉಪ್ಪಿನಕಾಯಿ ಜೊತೆ ತಿನ್ನಿರಿ

ಆರೋಗ್ಯಕರ ಮತ್ತು ರುಚಿಕರ ಆಹಾರ ಸೇವನೆಯನ್ನು ಆನಂದಿಸಿ.

Leave a Reply

%d bloggers like this: