ಯಾಕೆ-ನನಗೆ-ಯಾವಾಗಲು-ಸುಸ್ತಾಗಿರುತ್ತೆ

ಪ್ರತಿ ಬಾರಿ ನೀವು “ಅಯ್ಯೋ ಸಾಕಾಯ್ತಪ ನನಿಗೆ” ಎಂದು ಹೇಳಿದಕ್ಕೆ ಯಾರಾದರು ೧ ರುಪಾಯಿ ದುಡ್ಡು ಕೊಡುವಂತೆ ಇದ್ದರೆ, ಇಷ್ಟೊತ್ತಿಗೆ ಆಗಲೇ ನೀವು ಏನು ಮಾಡದೆ ಲಕ್ಷ ದುಡ್ಡು ಸಂಪಾದಿಸಬಹುದಿತ್ತು ಆಲ್ವಾ? ಆಯಾಸ ಅನ್ನುವುದು ಗರ್ಭಧಾರಣೆಯ ಸಮಯದಲ್ಲಿ ಸಹಜ. ಹಾಗಿದ್ದೂ, ಇದು ತುಂಬಾ ಸಲ ಸಂಭವಿಸುತ್ತಾ ಇದ್ದರೆ, ಇದು ದೇಹದಲ್ಲಿ ಮತ್ತಷ್ಟು ತೊಂದರೆಗಳನ್ನು ಹುಟ್ಟು ಹಾಕುತ್ತವೆ. ಅದರಲ್ಲೂ ಸಣ್ಣ ವಯಸ್ಸಿನ ಹೆಂಗಸರಲ್ಲಿ ಇದು ಹೆಚ್ಚು.

ಸುಸ್ತಾಗುವುದು ಎಷ್ಟೊಂದು ಹೇರಳವಾಗಿದೆ ಎಂದರೆ, ಅದರ ಬಗ್ಗೆ ಈಗ ಯಾರಾದರು ಮಾತಾಡುವುದಾಗಲಿ ಅಥವಾ ಅದರ ಮೂಲ ಕಾರಣ ತಿಳಿದುಕೊಳ್ಳಲು ಆಗಲಿ ಯೋಚಿಸುತ್ತಲೇ ಇಲ್ಲ. ಇದಕ್ಕೆ ಕಾರಣ ಶಾರೀರಿಕ ಕಾರಣಗಳು ಆಗಿರಬಹುದು ಅಥವ ಮಾನಸಿಕ ಕಾರಣಗಳು ಆಗಿರಬಹುದು, ಆದರೆ ಹೆಚ್ಚಿನ ಬಾರಿ ಇವೆರೆಡರ ಸಂಯೋಜನೆಯಿಂದ ಸ್ಥಿರವಾದ ಆಯಾಸ ಉಂಟಾಗುತ್ತದೆ. ಸುಸ್ತಾಗುವುದು ಕೇವಲ ಯಾವುದಾದರು ಅಸ್ವಸ್ತತೆಯ ಲಕ್ಷಣ ಇರಬಹುದು, ಆದರೆ ಇದು ದೇಹದಲ್ಲಿ ಏನೋ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ.

ಸಣ್ಣ ವಯಸ್ಸಿನ್ನ ಹಾಗು ಮಧ್ಯ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಕಾಡುವ ಆಯಾಸಕ್ಕೆ ಹಿರಿದಾದ ಕಾರಣಗಳು ಎಂದರೆ ರಕ್ತಹೀನತೆ ಹಾಗು ಥೈರಾಯಿಡ್. ದೇಹದಲ್ಲಿನ ಕೆಂಪು ರಕ್ತ ಕಣಗಳು ಕ್ಷೀಣಿಸಿದರೆ, ಅದು ನಿಮ್ಮನ್ನು ದುರ್ಬಲವಾಗಿ ಮಾಡುತ್ತದೆ ಹಾಗು ಉಸಿರಾಟದ ತೊಂದರೆ ನೀಡುತ್ತದೆ. ಸಮಾಂತರದಲ್ಲಿ, ಥೈರಾಯಿಡ್ ಕೂಡ ಸುಸ್ತು ಉಂಟು ಮಾಡುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮಧುಮೇಹ ಅಂದರೆ ಡಯಾಬಿಟಿಸ್ ಕೂಡ ಆಯಾಸ ಉಂಟು ಮಾಡುತ್ತದೆ. ಹೀಗಾಗಿ ಸಕ್ಕರೆ ಹೆಚ್ಚು ಇರುವ ಪದಾರ್ಥಗಳನ್ನು ನಮ್ಮ ಆಹಾರ ಪಟ್ಟಿಯಿಂದ ಕೈಬಿಡಬೇಕು.

ಇದರೊಂದಿಗೆ, ಹಾರ್ಮೋನ್ ಗಳಲ್ಲಿನ ಏರುಪೇರು, ಒತ್ತಡ ಹಾಗು ಜಡ ಹಿಡಿದಿರುವ ಜೀವನಶೈಲಿ ಜೊತೆಗೂಡುವುದರಿಂದ, ಆಯಾಸ ಉಂಟಾಗಲೇ ಬೇಕು. ನಿದ್ದೆಯ ಕೊರತೆ ಕೂಡ ಆಯಾಸ ಉಂಟು ಮಾಡುತ್ತದೆ. ಸಣ್ಣ ವಯಸ್ಸಿನ ಹೆಣ್ಣುಮಕ್ಕಳು ಒಂದು ರಾತ್ರಿ ನಿದ್ದೆ ಬಿಟ್ಟರೆ ತೊಂದರೆ ಇಲ್ಲ ಆದರೆ ಅದು ಪದೇ ಪದೇ ಆದಲ್ಲಿ, ಇದು ದಿನವೆಲ್ಲಾ ಆಯಾಸ ಹಾಗು ತಾಮಸ ಉಂಟು ಮಾಡುತ್ತದೆ. ನಿರ್ಜಲೀಕರಣ ಹಾಗು ಕೆಲಸ ಮಾಡದೆ ಇರುವುದು ಕೂಡ ಸುಸ್ತಿಗೆ ಕಾರಣ ಆಗುತ್ತವೆ.

ಮಾನಸಿಕವಾಗಿ, ಆಯಸವು ವಿಧವಾದ ಒತ್ತಡದ ಅಥವ ಜೀವನಶೈಲಿಯ ಅಸ್ವಸ್ಥತೆಗಳ ಲಕ್ಷಣವಾಗಿರುತ್ತದೆ. ನಮ್ಮ ದೇಶದಲ್ಲಿ ಶೇಕಡಾ ೫೦ರಷ್ಟು ಜನರು ಭಾವನಾತ್ಮಕ ಒತ್ತಡಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಮಹಿಳೆಯರು. ಆತಂಕ ಹಾಗು ನರಗಳ ಅಸ್ವಸ್ಥತೆ ಕೂಡ ಆಯಾಸದ ಮುಖ್ಯ ಕಾರಣಗಳು. ಆಯಾಸ ಎನ್ನುವುದು ಖಿನ್ನತೆ, ಬೈಪೋಲಾರ್ ಅಸ್ವಸ್ಥತೆ ಹಾಗು ಇತರೆ ಮಾನಸಿಕೆ ಕಾಯಿಲೆಗಳ ದೊಡ್ಡ ಭಾಗವಾಗಿದ್ದು, ಮುಂದೆ ಇದು ಮಾನಸಿಕ ಸ್ಥಿರತೆಯಲ್ಲಿ ಕೊಚ ಏರುಪೇರಾದರೂ, ದೇಹಕ್ಕೆ ಹಾನಿಯಾಗುವಂತ ಸಾಧ್ಯತೆ ಇರುತ್ತದೆ. ಬಹಳಷ್ಟು ಖಿನ್ನತೆಯ ಪ್ರಕರಣಗಳು ಗುರುತಿಸದೇ ಉಳಿದುಬಿಡುವುದರಿಂದ, ಆಯಾಸ ಅನ್ನುವುದು ಬಹಳಷ್ಟು ಮಂದಿಯಲ್ಲಿ ದೀರ್ಘ ಸಮಯದ ಕಾಯಿಲೆ ಆಗಿ ಉಳಿದುಬಿಡುತ್ತದೆ.

ಇನ್ನೊಂದು ಸಾಮಾನ್ಯ, ಆದರೆ ಬಹುತೇಕ ಸಲ ನಿರ್ಲಕ್ಷಗೊಂಡ ಕಾರಣ ಎಂದರೆ ಅದು ಕೆಟ್ಟ ಆಹಾರ ಪದ್ಧತಿ. ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರದ ಆಹಾರ ಸೇವಿಸುವುದರಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ, ಇದು ನಿಮ್ಮನ್ನು ದುರ್ಬಲ ಹಾಗು ತಾಮಸ ಮಾಡುತ್ತದೆ. ಕೆಟ್ಟ ಆಹಾರ ಪದ್ದತಿಯು ಹೊರ್ಮೊನ್ ಮಟ್ಟಗಳಲ್ಲಿ ಏರುಪೇರು ಉಂಟು ಮಾಡುತ್ತವೆ ಹಾಗು ಇದರಿಂದ ನರಪ್ರೇಕ್ಷಕ (neurotransmitter)ಗಳ ಕಾರ್ಯಕ್ಕೆ ಅಡ್ಡಿ ಮಾಡುತ್ತದೆ. ಇದರಿಂದ ನಿಮಗೆ ಖಿನ್ನತೆ ಹಾಗು ಆತಂಕ ಉಂಟಾಗುತ್ತದೆ. ಅನಾರೋಗ್ಯಕರ ಆಹಾರ ಪದ್ದತಿಗಳು ನಿಮ್ಮ ನಿದ್ರಾ ಚಕ್ರವನ್ನು ಸಹ ಏರುಪೇರು ಮಾಡಬಹುದು, ಇದರಿಂದ ನೀವು ಬೇಗ ಇರಿಸುಮುರಿಸು ಆಗುವುದು ಹಾಗು ನಿಮಗೆ ವಿಶ್ರಾಂತಿ ಇಲ್ಲದ ಹಾಗೆ ಆಗುವುದು ಆಗುತ್ತವೆ. ಸಮತೋಲನ ಇಲ್ಲದ ಆಹಾರ ಪದ್ದತಿಯು ನಿಮ್ಮ ಜೀವನಶೈಲಿಯನ್ನ ಬದಲಿಸಬಹುದು. ಇದರಿಂದ ನೀವು ಉತ್ಸಾಹ ಕಳೆದುಕೊಳ್ಳುವಂತೆ ಆಗುತ್ತದೆ.

ಆರೋಗ್ಯಕರ ಜೀವನಶೈಲಿ, ಮದ್ಯಪಾನ ಸೇವಿಸುವುದನ್ನು ನಿಲ್ಲಿಸುವುದು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗು ದೈಹಿಕ ವ್ಯಾಯಾಮ ನಿಮ್ಮ ಶಾರೀರಿಕ ಹಾಗು ಮಾನಸಿಕ ಆರೋಗ್ಯ ಚೆನ್ನಗಿದಳು ತುಂಬಾ ಅವಶ್ಯಕ. ನೀವು ಶಾರೀರಿಕ ಹಾಗು ಮಾನಸಿಕವಾಗಿ ಆರೋಗ್ಯಕರವಾಗಿ ಇದ್ದಾರೆ ಮಾತ್ರ ಆಯಾಸಕ್ಕೆ ವಿದಾಯ ಹೇಳಬಹುದು.   

Leave a Reply

%d bloggers like this: