6-12-tingala-shishugalige-6-gojjugalu-01

ಶಿಶುಗಳು ಘನ ಆಹಾರ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಬೇಕಾಗುವ ಕಿಣ್ವಗಳನ್ನು ತಮ್ಮ ಮೂರನೇ ಅಥವಾ ನಾಲ್ಕನೇ ತಿಂಗಳ ಕೊನೆಯಲ್ಲಿ ಉತ್ಪತ್ತಿ ಮಾಡಿಕೊಳ್ಳಲು ಶುರುಮಾಡುತ್ತವೆ. ಈ ಕಿಣ್ವಗಳು ಸಂಪೂರ್ಣವಾಗಿ ಅಭಿವೃದ್ದಿ ಹೊಂದುವುದು ಶಿಶುವಿಗೆ ೬ ತಿಂಗಳು ತುಂಬಿದ ನಂತರ. ಆದ್ದರಿಂದ ೬ ತಿಂಗಳ ನಂತರ ಮಕ್ಕಳಿಗೆ ಗೊಜ್ಜುಗಳನ್ನು ನೀಡುವುದು ಉತ್ತಮ.

ಯಾವ ಗೊಜ್ಜಿನಿಂದ ನಿಮ್ಮ ಮಗುವಿಗೆ ಘನ ಆಹಾರವನ್ನು ಕೊಡಬಹುದೆಂದು ತಿಳಿಯಲು ಓದುವುದನ್ನು ಮುಂದುವರೆಸಿ.

೧. ಹಿಸುಕಿದ(ಜಜ್ಜಿದ/ಕಿವುಚಿದ) ಹಣ್ಣು

ನಿಮ್ಮ ಮಗುವಿನ ಮೊದಲ ಘನ ಪದಾರ್ಥ ಆಹಾರವು ಒಂದು ಹಿಸುಕಿದ ಹಣ್ಣು ಆಗಿರಬೇಕು. ಮಗುವಿಗೆ ಯಾವುದಾದರೂ ಹಣ್ಣಿನ ಅಲರ್ಜಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಜೀರ್ಣಗೊಳಿಸುವ ಕಿಣ್ವಗಳು ಇರುವುದರಿಂದ, ಹಿಸುಕಿದ ಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ. ಮಕ್ಕಳಿಗೆ ಹೆಚ್ಚು ಸಂಕೀರ್ಣವಾದ ಆಹಾರ ಏನನ್ನಾದರೂ ನೀಡುವ ಮೊದಲು, ಒಂದು ವಾರದವರೆಗೆ ನೀವು ಹಿಸುಕಿದ ಹಣ್ಣಿನ ಗೊಜ್ಜನ್ನು ಆಹಾರವಾಗಿ ಮುಂದುವರಿಸಬಹುದು. ಮಕ್ಕಳಿಗೆ ೮ ತಿಂಗಳು ತುಂಬಿದ ನಂತರ ಅವರಿಗೆ ಹಣ್ಣುಗಳನ್ನು ಕತ್ತರಿಸಿ ನೇರವಾಗಿ ತಿನ್ನಿಸಬಹುದು.

೨. ಗಂಜಿ

ಹಿಸುಕಿದ ಹಣ್ಣನ್ನು ನೀಡಿದ ಒಂದು ವಾರದ ನಂತರ, ಮಕ್ಕಳಿಗೆ ಗಂಜಿಯನ್ನು ನೀಡಬಹುದು. ಗಂಜಿಯನ್ನು ತಯಾರಿಸುವುದು ಸುಲಭ. ಸ್ವಲ್ಪ ಹೆಚ್ಚು ನೀರಿನಲ್ಲಿ ಅಕ್ಕಿಯನ್ನು ಬೇಯಿಸಿ, ಅನ್ನವನ್ನು ಚೆನ್ನಾಗಿ ಕಿವುಚುವುದು. ಮಗುವಿಗೆ ನಿಡುವ ಮುನ್ನ ಅದನ್ನು ಸ್ವಲ್ಪ ಸಮಯ ಆರಲು ಬಿಡಿ. ಇದನ್ನು ಸೇವಿಸಿದಾಗ ಅಲರ್ಜಿಯ ಲಕ್ಷಣಗಳು ಕಂಡರೆ ಇದರ ನೀಡುವಿಕೆಯನ್ನು ನಿಲ್ಲಿಸಿ.

೩. ತರಕಾರಿಗಳು

ತರಕಾರಿಗಳು ಮೃದುವಾಗುವವರೆಗೆ ಬೇಯಿಸಿದರೆ ಅದು ಗೊಜ್ಜಿನಾಗೆ ಆಗುತ್ತದೆ. ಅದನ್ನು ಆರಲು ಬಿಡಿ. ಹಣ್ಣಿನ ಹಾಗೆ ಒಂದು ಸಮಯಕ್ಕೆ ಒಂದು ತರಕಾರಿಯನ್ನು ಮಾತ್ರ ನೀಡಿ. ಯಾವುದೇ ತರಕಾರಿಗಳಿಂದ ಅಲರ್ಜಿ ಇದೆಯಾ ಎಂಬುದನ್ನು ಖಾತರಿಮಾಡಿಕೊಳ್ಳಿ. ನಿಮ್ಮ ಮಗುವಿಗೆ ೮ ತಿಂಗಳು ತುಂಬಿದ ನಂತರ ಬೇಯಿಸಿದ ತರಕಾರಿಗಳನ್ನು ಹಿಸುಕದೆ, ನೇರವಾಗಿ ಕೊಡಬಹುದು.

೪. ಕಾಳುಗಳು ಮತ್ತು ದ್ವಿಧಳ ಧಾನ್ಯಗಳು

ನಿಧಾನವಾಗಿ ಒಂದು ಬಗೆಯ ಕಾಳುಗಳನ್ನು ಅಥವಾ ದ್ವಿಧಳ ಧಾನ್ಯಗಳನ್ನು ನೀರಿನಲ್ಲಿ ಬೇಯಿಸಿ ಚೆನ್ನಾಗಿ ಕಿವುಚಿ. ಆರಿದ ಮೇಲೆ ಮಗುವಿಗೆ ನೀಡಿ ಏನಾದರೂ ಪ್ರತಿಕ್ರಿಯೆಯಾಗಿತೆ ಎಂಬುದನ್ನು ಗಮನಿಸಿ. ಮಗುವಿಗೆ ೮ ತಿಂಗಳು ತುಂಬಿದ ನಂತರ ಇದರ ಜೊತೆಗೆ ತರಕಾರಿ ಅಥವಾ ಹಣ್ಣುಗಳನ್ನು ಸೇರಿಸಿ ನೀಡಬಹುದು.

೫. ಪ್ರೋಟಿನ್

ಮಾಂಸದ ರೂಪದಲ್ಲಿ ನಾವು ಪ್ರೋಟಿನ್ ಅನ್ನು ಸೇವಿಸಬಹುದು. ಅದನ್ನು ಮೃದು ಮತ್ತು ನವಿರಾಗುವವರೆಗೆ ಚೆನ್ನಾಗಿ ಬೇಯಿಸಬೇಕು. ಇದನ್ನು ಮಗುವಿಗೆ ನೀಡುವ ಮುನ್ನ ಇದನ್ನು ಗಂಜಿಯಂತೆ ಮಾಡಿಕೊಳ್ಳಬೇಕು. ಇದು ಕಬ್ಬಿಣಾಂಶವನ್ನು ಹೊಂದಿದೆ. ನಿಮ್ಮ ಮಗುವಿಗೆ ಮಾಂಸ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

೬. ಹಾಲು

ನಿಮ್ಮ ಮಗುವಿಗೆ ೮ ತಿಂಗಳು ತುಂಬಿದ ನಂತರ, ಹಾಲು, ಮೊಸರನ್ನು ಕೊಡಲು ಪ್ರಾರಂಭಿಸಬಹುದು. ನಿಮ್ಮ ಮಗುವಿಗೆ ಹಾಲು ಅಥವಾ ಮೊಸರಿನ ಜೊತೆ ಹಣ್ಣಿನ ಗೊಜ್ಜನ್ನು ಸೇರಿಸಿ ಕೊಡಬಹುದು.

ಇದರಿಂದ ನಿಮ್ಮ ಮಗುವಿಗೆ ಯಾವ ತರಹದ ಘನ ಆಹಾರವನ್ನು ಕೊಡಬಹುದು ಎಂದು ತಿಳಿದುಕೊಂಡಿರುವಿರಿ ಎಂದು ಭಾವಿಸುತ್ತೇನೆ. ಇದನ್ನು ಹೊಸ ತಾಯಿಯರೊಂದಿಗೆ ಹಂಚಿಕೊಳ್ಳಿ.

Leave a Reply

%d bloggers like this: