ನೀವು ಅವರೊಡನೆ ಏನು ಬೇಕಾದರೂ, ಎಲ್ಲವನ್ನು ಬೇಕಾದರೂ ಮಾತಾಡಬಹುದ? ಹಾಗಿದ್ರೆ ನೀವು ನಮ್ಮ “ಕೂಲೆಸ್ಟ್” ದಂಪತಿಗಳ ವರ್ಗದಡಿ ಬರುತ್ತೀರ! ನಿಮ್ಮಿಬ್ಬರ ವ್ಯಕ್ತಿತ್ವಗಳು ಹೊಂದುತ್ತವೆ ಹಾಗು ಒಬ್ಬರು ಇಷ್ಟಪಡದ ಕೆಲಸಗಳನ್ನು ಮಾಡುವಂತೆ ಇನ್ನೊಬ್ಬರು ಹೇಳುವುದಿಲ್ಲ ಹಾಗು ಒಬ್ಬರು ಇನ್ನೊಬ್ಬರನ್ನು ಮೆಚ್ಚಿಸಲು ಬೇರೆಯವರ ರೀತಿ ವರ್ತಿಸಬೇಕಿಲ್ಲ. ನೀವು ನಮ್ಮ ಕೂಲ್ ದಂಪತಿಗಳ ವರ್ಗದಡಿ ಬರುವಿರ ಎಂದು ತಿಳಿದುಕೊಳ್ಳಲು ಈ ಕೆಳಗಿರುವ ೧೦ ಸೂಚನೆಗಳ ಬಗ್ಗೆ ಓದಿ.
೧. ಜಾಸ್ತಿ ತಲೆ ಕೆಡಿಸಿಕೊಳ್ಳೋದಿಲ್ಲ
ನೀವು ಕೆಲವೊಂದು ವಿಷಯಗಳಿಗೆ ಭಾವುಕರಾಗಬಹುದು, ಆದರೆ ಯಾವುದೇ ವಿಷಯವನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಂಡು ಭಾವೋದ್ವೇಗಕ್ಕೆ ಒಳಗಾಗುವುದು ನಿಮ್ಮ ಗುಣವಲ್ಲ. ನಿಮ್ಮ ನಡುವೆ ಏನಾದರು ವಾದ ವಿವಾದ ಇದ್ದರೂ, ನೀವು ಕೂತುಕೊಂಡು ಯೋಚಿಸಿ, ಅದನ್ನು ಬಗೆಹರಿಸಿಕೊಂಡು ಮತ್ತೆ ಎಂದಿನ ದಾರಿಯಲ್ಲಿ ಸಾಗುವಿರಿ. ಗಲಾಟೆ ಇಲ್ಲ, ಸೆಂಟಿಮೆಂಟಲ್ ಮಾತುಗಳು ಇಲ್ಲ!
೨. ಹೊರಗಡೆ ಮಾತಾಡಲು ಆಗದ ವಿಷಯಗಳ ಬಗ್ಗೆ ನೀವು ಹಾಸ್ಯ ಮಾಡುತ್ತಿರಿ
ನೀವಿಬ್ಬರು ಮಾತಾಡುವುದು ತಲೆಹರಟೆ, ಹುಚ್ಚುಚ್ಚು, ಗಲೀಜು ಮಾತುಗಳು ಇದ್ದರೂ ಅಥವ ಜೋಕ್ ಗಳು ಇದ್ದರೂ, ಅದರ ಬಗ್ಗೆ ಬೇರೆಯವರು ಏನೆಂದುಕೊಳ್ಳುತ್ತಾರೆ ಎಂಬ ಯೋಚನೆ ನಿಮಗಿಲ್ಲ. ನಿಮ್ಮ ಸಂಗಾತಿಗೆ ನಿಮ್ಮ ಬಾಳಲ್ಲಿ ಅತಿಹೆಚ್ಚು ಬೆಲೆ ಕೊಡುವುದರಲ್ಲಿ ತಪ್ಪೇನಿಲ್ಲ ಬಿಡಿ, ಏಕೆಂದರೆ ಈ ಮಾತುಗಳನ್ನೆಲ್ಲ ಅವರ ಜೊತೆ ಅಲ್ಲದೆ ಬೇರೇ ಯಾವ ವ್ಯಕ್ತಿಯೊಡನೆ ಆಡಲು ಸಾಧ್ಯ? ಆಲ್ವಾ!
೩. ತೋರಿಕೆಯ ಪ್ರೀತಿ ಇಲ್ಲ
ಕೈ ಕೈ ಹಿಡಿದು ನಡೆಯೋಕೆ, ಆಲಿಂಗನ ಮಾಡಲಿಕ್ಕೆ ನಿಮಗೂ ಇಷ್ಟ. ಆದರೆ, ಸದಾಕಾಲ ಅವುಗಳನ್ನೇ ಮಾಡವುದು ನಿಮಗೆ ಇಷ್ಟವಾಗುವುದಿಲ್ಲ. ನಿಮಗೆ ಸಿಗಬೇಕಾದ ಪ್ರೀತಿ ಸಿಗುತ್ತಿರುವವರೆಗು, ಈ ತೋರಿಕೆಯ ಪ್ರೀತಿಯ ಬಗ್ಗೆ ನಿಮಗೆ ಆಸಕ್ತಿ ಇಲ್ಲ.
೪. ಸಂಬಂಧಗಳ ಗುರು!
ನಿಮ್ಮ ಸ್ನೇಹಿತರು ಸಂಬಂಧಗಳ ಬಗ್ಗೆ ನಿಮ್ಮ ಸಲಹೆ ಪಡೆಯಲು ನಿಮ್ಮ ಕಡೆ ಬರುವರು ಎಂದರೆ, ಅಲ್ಲಿಗೆ ನೀವು ಕೂಲ್ ದಂಪತಿಯೇ ಸರಿ! ಇದು ಸಹಜ, ಏಕೆಂದರೆ ನಿಮ್ಮಿಬ್ಬರ ಸುಂದರವಾದ ಬೆಸುಗೆ ನೋಡಿ, ಯಾವುದೇ ವಾದ ಅಥವಾ ಚರ್ಚೆಗಳು ಇಲ್ಲದೆ ಅವರ ಗೊಂದಲಗಳು ಹಾಗು ತೊಂದರೆಗಳನ್ನು ನೀವು ಬಗೆಹರಿಸುವಿರಿ ಎಂಬ ಅವರ ಭಾವನೆ. ಎಲ್ಲದಕ್ಕಿಂತ, ನಿಮ್ಮ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತಿರುವುದೆ ನಿಮ್ಮ ಸ್ನೇಹಿತರಿಗಲ್ಲವೇ.
೫. ನಿರ್ಬಂಧಗಳು ಇಲ್ಲ, ಒತ್ತಡ ಇಲ್ಲ
ನೀವು ಒಬ್ಬರ ಮೇಲೊಬ್ಬರು ನಿರ್ಬಂಧ ಹೇರುವುದು ಅನವಶ್ಯಕ ಎಂದು ಭಾವಿಸುತ್ತೀರಿ ಹಾಗು ಒಬ್ಬರು ತಕ್ಷಣ ಮೆಸೇಜ್ ಮಾಡುವುದು ಅರ್ಧದಲ್ಲಿಯೇ ನಿಲ್ಲಿಸಿದರೆ ಇನ್ನೊಬ್ಬರು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ನೀವು ಒಬ್ಬರನ್ನೊಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಕಾರಣ, ಮತ್ತೊಬ್ಬರಿಗೆ ಬೇಕಾದ ವೈಯಕ್ತಿಕ ಜಾಗವನ್ನು ನೀವು ಆವರಿಸುವುದಿಲ್ಲ. ಇದಲ್ಲದೇ ಮತ್ತೇನು ಬೇಕು ನಿಮಗೆ?!
೬. ರೇಗಿಸುತ್ತೀರ ಆದರೆ ಬೇಸರವಿಲ್ಲ
ನೀವು ಒಬ್ಬರೊಡನೆ ಇನ್ನೊಬ್ಬರು ರೇಗಿಸುತ್ತೀರ. ಆದರೆ ಅವುಗಳಿಂದ ಬೇಸರ ಮಾತ್ರ ಆಗುವುದಿಲ್ಲ. ನೀವು ಆಟ ಆಡುತ್ತೀರ, ಕಚ್ಚಾಡುತ್ತೀರ, ಆದರೆ ಕೊನೆಯಲ್ಲಿ ನಿಮ್ಮ ಪ್ರೀತಿ ಇವೆಲ್ಲವನ್ನ ಸಮನಾಗಿಸುತ್ತದೆ. ನೀವು ಕೂಡ ರೇಗಿಸುವುದರಲ್ಲಿ ಸಮನಾಗಿ ಭಾಗವಹಿಸಿದರೆ, ಇದು ತಲೆ ನೋವಾಗದೆ ಮಜವಾಗಿರುತ್ತದೆ.
೭. ಅಹಿತಕರ ಮೌನ? ಹಾಗೆಂದರೆ ?
ನೀವಿಬ್ಬರು ಒಬ್ಬರೊಡನೆ ಒಬ್ಬರು ಆರಾಮಾಗಿ, ಹಿತವಾಗಿ ಇದ್ದಾಗ ಅಲ್ಲಿ ಅಹಿತಕರ ಮೌನದ ಪ್ರಶ್ನೆಯೇ ಬರುವುದಿಲ್ಲ. ನೀವು ಒಂದೇ ಸಮನೆ ಮಾತಾಡುತ್ತಲೇ ಇರುತ್ತೀರ ಇಲ್ಲವಾದಲ್ಲಿ ಆರಾಮಾಗಿ ಶಾಂತಿಯಿಂದ ಕಾಲ ಕಳೆಯುವಿರಿ. ಇದರಲ್ಲಿ ಅಹಿತಕರವಾಗಿದ್ದು ಏನು ಇಲ್ಲ.
೮. ಜೊತೆಯಿದ್ದಾಗ ಎಲ್ಲಾ ಸರಿಯಿದೆ ಎಂದು ಅನಿಸುತ್ತದೆ
ನೀವಿಬ್ಬರು ಜೊತೆಗೂಡಿ ಒಗ್ಗಟ್ಟಾಗಿ ಇದ್ದಾಗ, ಜೀವನ ನಿಮ್ಮ ಮುಂದೆ ಎಸೆಯುವ ಯಾವುದೇ ಸವಾಲನ್ನು ಸಮರ್ಥವಾಗಿ ಎದುರಿಸಬಲ್ಲಿರಿ ಎಂಬುದು ನಿಮಗೆ ಗೊತ್ತು. ನಿಮ್ಮಲ್ಲಿ ಒಬ್ಬರಿಗೆ ಮತ್ತೊಬ್ಬರು ಒಡೆಯರು ಹಾಗು ಒಬ್ಬರು ಮತ್ತೊಬ್ಬರಿಂದ ಅತ್ಯುತ್ತಮವಾದುದನ್ನೇ ಹೊರ ತೆಗಿಯುತ್ತೀರ. ನೀವೇ ಅವನ ಬಾನಿನ ಸೂರ್ಯ, ನೀವೇ ಅವನ ಬಾಳೆಂಬ ಕೇಕ್ ನ ಮೇಲಿರುವ ಚೆರ್ರಿ, ನೀವೇ ಅವನ ಕೇಸರಿ ಬಾತಿನ ದ್ರಾಕ್ಷಿ ! ನೀವು ಯಾವುದರ ಬಗೆಯೂ ಯೋಚನೆ ಮಾಡುವುದೇ ಬೇಡ. ಏಕೆಂದರೆ, ನೀವಿಬ್ಬರು ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಲ್ಲುತ್ತೀರಿ.
೯. ಸೋಫಾ ಮೇಲೆ ಸಿನಿಮಾ, ಮುದ್ದಾಟ
ಇಲ್ಲ ಇಲ್ಲ ನಾವೇನು ನೀವಿಬ್ಬರು ಅಲ್ಲೇ ಆ ಕಾರ್ಯದಲ್ಲಿ ತೊಡಗಿಕೊಳ್ಳುತ್ತೀರ ಎಂದು ಹೇಳುತ್ತಿಲ್ಲ. ಅದು ಕೂಡ ಮುಖ್ಯವಾದುದೆ. ಆದರೆ ಯಾವುದೋ ಕೈಗೆ ಸಿಕ್ಕ ಬಟ್ಟೆ ಹಾಕಿಕೊಂಡು, ಆರಾಮಾಗಿ ಸೋಫಾ ಮೇಲೆ ಟಿವಿ ನೋಡಿಕೊಂಡು ಕುಳಿತುಕೊಳ್ಳುವುದರಲ್ಲಿ ಏನೋ ಖುಷಿ. ಕುರುಕಲು ತಿಂಡಿ ಜೊತೆಗೆ ಟಿವಿ – ಇದುವೇ ನಿಮ್ಮ ನೆಚ್ಚಿನ ಟೈಮ್ ಪಾಸ್ ಕೆಲಸ.
೧೦. ನೀವಿಬ್ಬರು ಊರು ಸುತ್ತುತ್ತೀರ
ನೀವು ಸದಾಕಾಲ ಮನೆಯಲ್ಲೇ ಕುಳಿತು ಕಾಲ ಕಳೆಯುವುದಿಲ್ಲ. ನೀವು ಇನ್ನೊಬ್ಬರಿಗೆ ಇಷ್ಟ ಆಗುವಂತ ಸುತ್ತಾಟಗಳನ್ನು ಪ್ಲಾನ್ ಮಾಡುತ್ತಲೇ ಇರುತ್ತೀರ. ನೀವು ಸದಾಕಾಲ ಹೊಸ ಜಾಗಗಳನ್ನು ಹುಡುಕುತ್ತಲೇ ಇರುತ್ತೀರ. ಏಕೆಂದರೆ, ನಿಮಗೆ ಗೊತ್ತು ಜೊತೆಗೂಡಿ ಹೊಸ ಜಾಗದಲ್ಲಿ ಸಮಯ ಕಳೆಯುವ ಅನುಭವ ಎಷ್ಟು ಅದ್ಭುತ ಅಂತ. ನೀವು ಯಾವಾಗಲು ಒಬ್ಬರ ಬೆನ್ನಿಗೆ ಇನ್ನೊಬ್ಬರು ನಿಂತಿರುತ್ತೀರ ಹಾಗು ಅದನ್ನು ತೋರಿಸಿ ಕೊಡುತ್ತೀರ ಕೂಡ. ಈ ಮೇಲಿನ ೧೦ ಅಂಶಗಳು ನಿಮ್ಮ ಸಂಬಂಧಗಳಲ್ಲೂ ಕಂಡು ಬರುತ್ತಿವೆ ಅಂದಲ್ಲಿ ನೀವು ಒಬ್ಬರನ್ನು ಒಬ್ಬರು ಸದಾ ಪ್ರೋತ್ಸಾಹಿಸುತ್ತೀರ ಹಾಗು ಅವರು ಅವರಾಗಿಯೇ ಇರಲು ಅವಕಾಶ ಮಾಡಿಕೊಡುತ್ತೀರ ಎಂದು. ಅದಲ್ಲದೆ, ಇದರಿಂದ ಒಬ್ಬರಿಂದ ಇನ್ನೊಬ್ಬರು ಅತ್ಯುತ್ತಮವಾದುದನ್ನೇ ಹೊರ ತೆಗೆಯುತ್ತೀರಿ. ನಿಮ್ಮ ಸಂಬಂಧವು ಆರೋಗ್ಯಕರವಾಗಿದ್ದು, ಇದು ಮತ್ತಷ್ಟು ಸುಂದರವಾಗುತ್ತಲೇ ಹೋಗುತ್ತದೆ. ಹಾಗಾದ್ರೆ, ನಿಮ್ಮ ಸಂಬಂಧವು ಇದೆ ರೀತಿ ಇದೆಯೇ ಎಂದು ನೀವು ತಿಳಿದುಕೊಂಡಿರ?