banjarutana-phalavantike-bagge-yaaradaru-maatadidare-ee-lekhani-hidiyiri-1

ನೀವು ಹಾಗು ನಿಮ್ಮ ಪತಿ ಮಗು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಸಂಬಂಧಿಕರು, ಸ್ನೇಹಿತರು, ಅಕ್ಕ ಪಕ್ಕದವರು ನೀವು ಗರ್ಭತಾಳಲು ಫಲವಂತಿಕೆ ಹೇಗೆ ಹೆಚ್ಚಿಸಿಕೊಳ್ಳುವುದು ಅಥವಾ ನಿಮ್ಮಿಬ್ಬರಲ್ಲಿ ಬಂಜರುತನ ಇದೆಯಾ ಎಂದು ಪರೀಕ್ಷೆ ಹೇಗೆ ಮಾಡಿಸುವುದು ಎಂಬುದಕ್ಕೆ ವಿಚಿತ್ರವಾದ ತರಾವರಿ ಉಪಾಯಗಳನ್ನ ನಿಮಗೆ ನೀಡಿರುತ್ತಾರೆ ಆಲ್ವಾ? ನೀವು ಕೇಳಿರುವ ಕೆಲವೊಂದು ಮಾತುಗಳು ವೈಜ್ಞಾನಿಕವಾಗಿ ನಿಜ ಆಗಿರಬಹುದು ಆದರೆ ಬಹುತೇಕ ಮಾತುಗಳು ಕೇವಲ ಮೂಢನಂಬಿಕೆ ಅಥವಾ ಕಂತೆ ಪುರಾಣಗಳು ಆಗಿರುತ್ತವೆ. ಇಲ್ಲಿ ನಾವು ಬಂಜರುತನದ ಬಗ್ಗೆ ಸಾಮಾನ್ಯವಾಗಿ ಜನರು ಹೇಳುವ ೬ ಬುಡರಹಿತ ಪುರಾಣಗಳಿಗೆ ವೈಜ್ಞಾನಿಕ ಉತ್ತರಗಳೊಂದಿಗೆ ತೆರೆ ಎಳೆದಿದ್ದೇವೆ.

೧. ಕಾಲುಗಳು ಮೇಲೆ ಮಾಡಬೇಕು

 ಬಹಳ ಜನರು ಹೇಳುವುದು ಏನೆಂದರೆ, ನೀವು ಲೈಂಗಿಕ ಕ್ರಿಯೆ ಅಲ್ಲಿ ತೊಡಗಿಕೊಂಡ ಮೇಲೆ ನಿಮ್ಮ ಕಾಲುಗಳನ್ನು ಒಂದು ೨೦-೩೦ ನಿಮಿಷಗಳವರೆಗೆ ಆದರೂ ಎತ್ತಿ ಹಿಡಿಯಬೇಕೆಂದು ಹಾಗು ಇದು ನಿಮ್ಮ ಗರ್ಭತಾಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು. ಇದಕ್ಕೆ ಕಾರಣ ಏನೆಂದರೆ, ಹೀಗೆ ಮಾಡಿದ್ದಲ್ಲಿ ವೀರ್ಯವು ಗುರುತ್ವಾಕರ್ಷಣೆ ಪ್ರಭಾವದಿಂದ ಸುಲಭವಾಗಿ ಅಂಡಾಣು ಸೇರುವುದು ಎಂದು. ವೈಜ್ಞಾನಿಕವಾಗಿ ಹೇಳಬೇಕಂದರೆ, ರೇತಸ್ಸು(semen)ನ ಪ್ರತಿಯೊಂದು ಹನಿಯೂ ಸಾಕಾಗುವಷ್ಟು ವೀರ್ಯಗಳನ್ನು ಹೊಂದಿರುತ್ತದೆ. ಈ ರೇತಸ್ಸಿಗೆ ಅಂಡಾನು ಸೇರಲು ಗುರುತ್ವಾಕರ್ಷಣೆಯ ಸಹಾಯವೂ ಬೇಡ. ಏಕೆಂದರೆ, ಇದು ನೈಸರ್ಗಿಕವಾಗಿಯೇ ಆ ರೀತಿ ಆಗುವಂತೆ ಸೃಷ್ಟಿಸಲ್ಪಟ್ಟಿದೆ. ನಿಮ್ಮ ಕಾಲುಗಳನ್ನು ಮೇಲೆತ್ತುವುದು ನಿಮಗೆ ಏನು ತೊಂದರೆ ಮಾಡುವುದಿಲ್ಲ, ಆದರೆ ಅದರಿಂದ ಉಪಯೋಗವಂತು ಇಲ್ಲ.

೨. ಸಮಸ್ಯೆ ಹುಡುಗಿಯದ್ದು

ಅಪಾರ ಜನಗಳು ತಿಳಿದಿರುವುದು ಏನೆಂದರೆ ಬಂಜರುತನ ಎನ್ನುವುದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಾದ ತೊಂದರೆ ಹಾಗು ಗರ್ಭತಾಳಲು ಸಾಧ್ಯವಾಗಲಿಲ್ಲ ಅಂದರೆ ಅದು ಹೆಣ್ಣಿನಿಂದಲೇ ಆದ ಸಮಸ್ಯೆ ಎಂದು. ಆದರೆ ವಾಸ್ತವತೆ ಅಲ್ಲಿ, ಗಂಡು ಕೂಡ ಹೆಣ್ಣಿನಷ್ಟೇ ಬಂಜರು ಆಗಿರಬಹುದು. ಒಂದು ಹೆಣ್ಣು ತುಂಬಾನೇ ಫಲವತ್ತಾಗಿರಬಹುದು, ಆದರೆ ಗಂಡಿನ ವೀರ್ಯವು ಹಲವಾರು ಕಾರಣಗಳಿಗೆ ಕೆಟ್ಟ ಸ್ಥಿತಿಯಲ್ಲಿ ಇರಬಹುದು. ಗಂಡ ಹೆಂಡತಿ ಇಬ್ಬರು ಉತ್ತಮ ತಮ್ಮ ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಅದು ಆಹಾರ ಪದ್ದತಿಯಲ್ಲೇ ಇರಬಹುದು ಅಥವಾ ವ್ಯಾಯಾಮ ಪದ್ದತಿಯಲ್ಲಿ ಇರಬಹುದು.

೩. ದತ್ತು ತೆಗೆದುಕೊಂಡು ನಂತರ ಪ್ರಯತ್ನಿಸಿ

ಬಹಳಷ್ಟು ಹೆಣ್ಣುಮಕ್ಕಳು ಹೇಳುವುದು ಏನು ಅಂದರೆ, ತಾವು ಮಗುವೊಂದನ್ನು ದತ್ತು ಪಡೆದ ನಂತರ ತಾವು ಗರ್ಭತಾಳಿದರೆಂದು. ಆದರೆ, ಬಹಳಷ್ಟು ಹೆಣ್ಣು ಮಕ್ಕಳು ದತ್ತು ತೆಗೆದುಕೊಂಡಿದ್ದರು ಗರ್ಭತಾಳಲು ಸಾಧ್ಯವಾಗಿಲ್ಲ. ಹಾಗಾಗಿ, ಹೆಣ್ಣುಮಕ್ಕಳು ದತ್ತು ಪಡೆದುಕೊಂಡ ನಂತರ ಗರ್ಭತಾಳಿರುವುದಾಗಿ ಹೇಳಿರುವುದು ಕೇವಲ ಕಾಕತಾಳೀಯ ಅಷ್ಟೇ. ದತ್ತು ಪಡೆಯುವುದಕ್ಕೆ ಹಾಗು ಫಲವಂತಿಕೆ ನಡುವಿನ ಸಂಬಂಧಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ.

 

೪. ಹೆಚ್ಚು ಸಂಭೋಗ = ಎಚ್ಚು ಸಾಧ್ಯತೆ

ಕೇವಲ ಪ್ರತಿದಿನ ಸಂಭೋಗ ನಡೆಸುವುದರಿಂದ ನಿಮ್ಮ ಫಲವಂತಿಕೆ ಹೆಚ್ಚಾಗುವುದಿಲ್ಲ ಅಥವ ನೀವು ಗರ್ಭತಾಳುವುದಿಲ್ಲ. ಹೆಣ್ಣು ತಿಂಗಳಿನ ಕೆಲವು ದಿನಗಳು ಫಲವತ್ತಾಗಿ ಇರುವಳು ಹಾಗು ವೀರ್ಯವು ದಿಂಬನಾಳ (fallopian tube) ಅಲ್ಲಿ ಕೇವಲ ಸ್ವಲ್ಪ ದಿನಗಳವರೆಗೆ ಮಾತ್ರ ಬದುಕುಳಿಯುತ್ತವೆ. ಹಾಗಾಗಿ, ದಿನ ಸಂಭೋಗ ನಡೆಸುವುದರಿಂದ ನಿಮ್ಮ ಫಲವತ್ತತೆ ಅಲ್ಲಾಗಲಿ ಅಥವಾ ಗರ್ಭತಾಳುವಿಕೆ ಅಲ್ಲಾಗಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.

೫. ಕೆಮ್ಮಿನ ಸಿರಪ್

ಜನರಲ್ಲಿರುವ ಇನ್ನೊಂದು ನಂಬಿಕೆ ಅಂದರೆ ಅದು ಕೆಮ್ಮಿನ ಸಿರಪ್ (cough syrup)ಅಲ್ಲಿ ಇರುವ ವಸ್ತುವಾದ ಗುಯಪ್ಫೆನೆಸಿನ್ (guaifenesin) ವೀರ್ಯವು ಅಂಡಾನುವನ್ನು ಬೇಗ ಸೇರುವಂತೆ ಮಾಡಿ ಗರ್ಭತಾಳಲು ಸಹಾಯ ಮಾಡುತ್ತದೆ ಎಂದು. ಇದರ ಹಿಂದಿರುವ ತರ್ಕ ಏನು ಅಂದರೆ ಈ ವಸ್ತುವು ಗರ್ಭಕಂಠದ ಲೋಳೆ (cervical mucus) ಅನ್ನು ತೆಳ್ಳಗೆ ಮಾಡುತ್ತದೆ ಹಾಗು ಇದು ವೀರ್ಯ ಪ್ರಯಾಣ ಮಾಡಲು ಸುಲಭ ಮಾಡುತ್ತದೆ ಎಂದು. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ.

೬. ಎರಡನೇ ಸಲ ಎಲ್ಲಾ ಸುಲಭವಾಗುತ್ತದೆ

ನೀವು ಒಮ್ಮೆ ಮಗುವನ್ನು ಹೆತ್ತ ನಂತರ ನಿಮ್ಮ ಫಲವಂತಿಕೆ ಹೆಚ್ಚಾಗಿದೆಯೆಂದು ಹಾಗಾಗಿ ನೀವು ಇವಾಗ ಗರ್ಭತಾಳುವುದು ಸುಲಭ ಎಂದು ಭಾವಿಸುವುದು ಸ್ವಾಭಾವಿಕ. ದುರದೃಷ್ಟವಶಾತ್, ಇದು ನಿಜವಲ್ಲ. ಬಹಳಷ್ಟು ಪ್ರಕರಣಗಳಲ್ಲಿ ದಂಪತಿಗಳು ಹೇಳಿರುವ ಪ್ರಕಾರ ಮೊದಲನೆ ಬಾರಿಗಿಂತ ಎರಡನೆ ಬಾರಿಯೇ ಗರ್ಭತಾಳುವುದು ಹೆಚ್ಚು ಕಷ್ಟವಾಯಿತು ಎಂದು. ಕೆಲವು ದಂಪತಿಗಳು ಎರಡನೆ ಬಾರಿ ಗರ್ಭತಾಳುವುದು ಸುಲಭವಾಯಿತು ಎಂದಿದ್ದಾರೆ. ಆದರೆ, ಇದಕ್ಕೆ ನಿಖರವಾದ ಯಾವುದೇ ವೈಜ್ಞಾನಿಕ ಸಾಕ್ಷಿಗಳು ಇಲ್ಲ.

ನಮ್ಮೆಲ್ಲರ ದೇಹವು ರಹಸ್ಯವಾಗಿ ಕಾರ್ಯ ನಡೆಸುತ್ತವೆ, ಹೀಗಾಗಿ ನಾವು ಯಾವುದರ ಬಗ್ಗೆಯೂ ಶೇಕಡಾ ೧೦೦ರಷ್ಟು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಅದು ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಹಾಗು ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು. ದೇಹವು ಒಳ್ಳೆಯ ಆಕಾರ ಹಾಗು ಸರಿಯಾದ ತೂಕ ಇರುವುದು ತುಂಬಾನೇ ಮುಖ್ಯ. ಹಲವಾರು ಅಧಿಕ ತೂಕ ಹೊಂದಿದ ಜನರು ತಮ್ಮ ತೂಕವನ್ನು ಇಳಿಸಿಕೊಂಡ ಮೇಲೆ ಗರ್ಭತಾಳುವುದು ಸುಲಭವಾಗಿಸಿಕೊಂಡಿದ್ದಾರೆ. ಇದಲ್ಲದೇ, ನಿಮ್ಮ ಋತುಚಕ್ರದ ಮೇಲೆ ನಿಮ್ಮ ಗಮನವಿರಲಿ. ನೀವು ಹೆಚ್ಚು ಫಲವತ್ತಾದ ದಿನಗಳಲ್ಲೇ ನೀವು ಪ್ರಯತ್ನಿಸುತ್ತಿದ್ದೀರಾ ಎಂಬುದನ್ನು ದೃಢಪಡಿಸಿಕೊಳ್ಳಿ. ಮುಖ್ಯವಾಗಿ ಮಾಡಬೇಕಾಗಿರುವುದು ಏನೆಂದರೆ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗು ಗರ್ಭತಾಳವುದು ಕಷ್ಟವಾದರೆ ವೈದ್ಯರನ್ನು ಭೇಟಿ ಮಾಡುವುದು.

Leave a Reply

%d bloggers like this: