garbhaavastheyalli-khinnate-mattu-adu-nimma-maguvina-mele-hege-parinaama-biruttade

ಮಹಿಳೆಯ ಜೀವನದ ಅತ್ಯಂತ ಸಂತೋಷದಾಯಕ ಮತ್ತು ಖುಷಿಯ ಸಮಯಗಳಲ್ಲಿ ಗರ್ಭಧಾರಣೆಯವು ಒಂದು. ಅದು ಏನೇ ಆದರೂ, ಕೆಲವು ನಿರೀಕ್ಷಿಸುತ್ತಿರುವ ತಾಯಿಯಂದಿರಿಗೆ, ಇದು ಒತ್ತಡ, ಭಯ, ಗೊಂದಲ ಮತ್ತು ಖಿನ್ನತೆಯ ಒಂದು ಅವಧಿಯಾಗಿದೆ. ಸುಮಾರು ೬% ರಷ್ಟು ಮಹಿಳೆಯರು, ತಮ್ಮ ಜೀವಿತಾವಧಿಯಲ್ಲಿ ಶೀಘ್ರವೇ ಅಥವಾ ನಂತರ ಖಿನ್ನತೆಗೆ ಬೇಗ ಒಳಾಗಾಗುತ್ತಾರೆ. ಈ ಸಂಖ್ಯೆಯು ಗರ್ಭಧಾರಣೆಯ ಅವಧಿಯ ಮಧ್ಯೆ ಖಿನ್ನತೆಯ ಕೆಲವು ರೋಗಲಕ್ಷಣಗಳನ್ನು ಎದುರಿಸುವ ಮಹಿಳೆಯರಿಗೆ ಸುಮಾರು ೧೦% (೧೦ ರಲ್ಲಿ ೧) ಗೆ ಏರುತ್ತದೆ

ಖಿನ್ನತೆಯು ಒಂದು ಚಿತ್ತಸ್ಥಿತಿಯ ಮನೋರೋಗವಾಗಿದ್ದು, ಅದು ಅವರ ಜೀವಿತಾವಧಿಯಲ್ಲಿ ಅಂತಿಮವಾಗಿ ೪ ಮಹಿಳೆಯರಲ್ಲಿ ಪ್ರತಿ ೧ ರಲ್ಲಿ ಭಾವನಾತ್ಮಕ ಪ್ರಭಾವ ಬೀರುತ್ತದೆ. ಆದ್ದರಿಂದ ಖಿನ್ನತೆಯು ಗರ್ಭಾವಸ್ಥೆ ಮಹಿಳೆಯರಲ್ಲಿ, ಕಾಣಿಸಿಕೊಳ್ಳುವುದು ಅಚ್ಚರಿಯೇನಲ್ಲ. ಹೀಗಿದ್ದರೂ, ಗರ್ಭಾವಸ್ಥೆಯಲ್ಲಿ ಖಿನ್ನತೆಯ ಬಗ್ಗೆ ಸರಿಯಾಗಿ ವಿಶ್ಲೇಷಿಸಲಾಗಿಲ್ಲ ಏಕೆಂದರೆ ಇದು ಕೇವಲ ಮತ್ತೊಂದು ರೀತಿಯ ಹಾರ್ಮೋನಿನ ಅಸಮತೋಲನ ಎಂದು ಜನರು ಭಾವಿಸುತ್ತಾರೆ. ಈ ಊಹೆಯು ತಾಯಿ ಮತ್ತು ಶಿಶು ಇಬ್ಬರಿಗೂ ಅಪಾಯಕಾರಿ. ಗರ್ಭಾವಸ್ಥೆಯಲ್ಲಿನ ಖಿನ್ನತೆಯು ಸಮಾಲೋಚನೆ ಮತ್ತು ಮೇಲ್ವಿಚಾರಣೆ ಮಾಡಬಹುದಾದ ರೋಗ.

ಯಾವುದೇ ಸಂದರ್ಭದಲ್ಲಿ ಇದನ್ನು, ಸಹಾಯವನ್ನು ಮಾಡುವುದು, ಮತ್ತು ಆರೈಕೆಯನ್ನು ಮಾಡುವುದು ಅತ್ಯಗತ್ಯ. ಗರ್ಭಧಾರಣೆಯ ಸಮಯದಲ್ಲಿ ಖಿನ್ನತೆಯನ್ನು ಎದುರಿಸುವ ಮಹಿಳೆಯರ ಮಕ್ಕಳು, ಹದಿಹರೆಯದವರಾದಾಗ ತಮ್ಮನ್ನು ಖಿನ್ನತೆಗೆ ಒಳಗಾಗಲು ೧.೫ ಪಟ್ಟು ಹೆಚ್ಚು ಇಷ್ಟಪಡುತ್ತಾರೆ ಎಂದು ಅಧ್ಯಯನಗಳು ತೋರಿಸಿವೆ.

ಗರ್ಭಾವಸ್ಥೆಯಲ್ಲಿ ಖಿನ್ನತೆ

ಗರ್ಭಾವಸ್ಥೆಯಲ್ಲಿ ಖಿನ್ನತೆಯು ಮಾನಸಿಕ ಖಿನ್ನತೆಯಂತೆ ಮನಸ್ಸಿನ ಅಸ್ವಸ್ಥತೆಯ ಸ್ಥಿತಿಯಾಗಿದೆ. ಮನಸ್ಥಿತಿ ಅಸ್ವಸ್ಥತೆಗಳು ಜೈವಿಕ ಅನಾರೋಗ್ಯಗಳಾಗಿದ್ದು, ಅದು ಮೆದುಳಿನ ರಸಾಯನಿಕ ಕ್ರಿಯೆಗಳ ಬದಲಾವಣೆಗಳನ್ನು ಒಳಗೊಂಡಿರುತ್ತದೆ. ಗರ್ಭಾವಸ್ಥೆಯ ಮಧ್ಯ ಅವಧಿಯಲ್ಲಿ ಹಾರ್ಮೊನುಗಳಲ್ಲಾಗುವ ಬದಲಾವಣೆಗಳು ಮಿದುಳಿನ ರಾಸಾಯನಿಕ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತವೆ, ಖಿನ್ನತೆ ಮತ್ತು ಒತ್ತಡದಿಂದ ಇದನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ನಿಮ್ಮ ಜೀವನದಲ್ಲಿ ಆಗಿರುವ ಕೆಟ್ಟ ಸ್ಥಿತಿಗಳು, ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಖಿನ್ನತೆಗೆ ಒಳಗಾಗಲು ಉದ್ರೇಕಿಸಬಹುದು.

ಗರ್ಭಾವಸ್ಥೆಯಲ್ಲಿ ಖಿನ್ನತೆಯ ಕುರುಹುಗಳು

ಪ್ರಸವದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಖಿನ್ನತೆಯ ಕೆಲವು ಗುಣಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅದು ಅವರೊಡನೆ ೨ ವಾರ ಅಥವಾ ಅದಕ್ಕಿಂತಲೂ ಹೆಚ್ಚಿಗೆ ಇರಬಹುದು.

೧.ಆತಂಕ

೨.ನಿರಂತರ ಹತಾಶೆ

೩.ನೀವು ಸಾಮಾನ್ಯವಾಗಿ ಆನಂದಿಸುವ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವುದು

೪.ಕಡಿಮೆ ನಿದ್ರೆ ಅಥವಾ ಅತೀ ಹೆಚ್ಚು ನಿದ್ರೆ ಮಾಡುವುದು

೫.ಆಹಾರ ಕ್ರಮದಲ್ಲಿ ಬದಲಾವಣೆ

೬.ತಪ್ಪಿತಸ್ಥ ಮನೋಭಾವ ಅಥವಾ ಅನುಪಯುಕ್ತತೆ ಭಾವನೆಗಳು

೭.ಏಕಾಗ್ರತೆ ವಹಿಸುವುದು ಕಷ್ಟ

೮.ಮರಣ, ಆತ್ಮಹತ್ಯೆ, ಅಥವಾ ನಿರಾಶಾದಾಯಕತೆಯ ಪುನರಾವರ್ತಿತ ಆಲೋಚನೆಗಳು

ಗರ್ಭಾವಸ್ಥೆಯಲ್ಲಿ ಖಿನ್ನತೆಯನ್ನು ಯಾವುದು ಪ್ರಚೋದಿಸಬಹುದು?

೧.ಒತ್ತಡದ ಜೀವನ ಶೈಲಿ

೨.ನಿಂದನೆ ಅಥವಾ ಆಘಾತದ ಇತಿಹಾಸ

೩.ಘಟನೆಗಳಲ್ಲಿ ಗೊಂದಲ

೪.ಹಿಂದಿನ ಗರ್ಭಪಾತ

೫.ಕುಟುಂಬದ ಅಥವಾ ವೈಯಕ್ತಿಕದ ಖಿನ್ನತೆಯ ಇತಿಹಾಸ

೬.ಸಂಬಂದಗಳಲ್ಲಿ ತೊಂದರೆಗಳು

೭.ಬಂಜೆತನದ ಔಷದಗಳು

ಮಗುವಿನ ಹತಾಶೆ ಮತ್ತು ಪ್ರಸವನಂತರದ ಖಿನ್ನತೆಯ ವ್ಯತ್ಯಾಸ ತಿಳಿಯಿರಿ

“ಪ್ರಸವಪೂರ್ವ ಆತಂಕ” ಎಂದೂ ಕರೆಯಲ್ಪಡುವ “ಮಗುವಿನ ಹತಾಶೆ(ಬೇಬಿ ಬ್ಲೂಸ್)” ಅನೇಕ ಹೊಸ ತಾಯಂದಿರು ಅನುಭವಿಸುವ ಗರ್ಭಧಾರಣೆಯ ಆತಂಕದ ಸೌಮ್ಯ ರೂಪವಾಗಿದೆ. ಇದು ಸಾಮಾನ್ಯವಾಗಿ, ಜನನದ ನಂತರ ೧ ರಿಂದ ೩ ದಿನಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ೧೦ ರಿಂದ ೧೪ ದಿನಗಳವರೆಗೆ ಮುಂದುವರೆಯಬಹುದು.

ಪ್ರಸವಾನಂತರದ ಖಿನ್ನತೆಯಲ್ಲಿ, ಹಲವು ಮಹಿಳೆಯರಿಗೆ ತಮ್ಮ ಮನಸ್ಥಿತಿ ಬದಲಾಗುತ್ತಿರುತ್ತದೆ. ಅವರು ನನಗೆ ಏನೋ ಆಗಿದೆ ಎಂದು ತುಂಬಾ ಯೋಚಿಸುತ್ತಾರೆ, ಅಥವಾ ಗೊಂದಲಕ್ಕೆ ಒಳಗಾಗುತ್ತಾರೆ ಮತ್ತು ಊಟ ಅಥವಾ ನಿದ್ರೆ ಮಾಡಲು ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಶೇಕಡ ೮೦%ರ ತನಕ ಹೊಸ ಅಮ್ಮಂದಿರು ತಾಯ್ತನದ ಹತಾಶೆಯನ್ನು ಅನುಭವಿಸುತ್ತಾರೆ. ಅದು ಸಾಮಾನ್ಯ ಮತ್ತು ಅದು ತನ್ನಾಗಿ ತಾನೇ ಹೋಗುತ್ತದೆ. ಸುಮಾರು ೧೩%ರಷ್ಟು ತಾಯಿಯಂದಿರು ಪ್ರಸವಾನಂತರದ ಖಿನ್ನತೆಯನ್ನು ಅನುಭವಿಸುತ್ತಾರೆ, ಇದು ಹೆಚ್ಚು ಗಂಭೀರವಾಗಿದೆ ಮತ್ತು ದಿರ್ಘಕಾಲದವರೆಗೆ ನಿಮ್ಮಲ್ಲಿ ಉಳಿಯಬಹುದು. ನೀವು ಮೊದಲು ಖಿನ್ನತೆಯನ್ನು ಅನುಭವಿಸಿದ್ದರೆ ಅಥವಾ ಖಿನ್ನತೆಯ ಕುಟುಂಬದ ಇತಿಹಾಸವನ್ನು ಹೊಂದಿದ್ದರೆ, ನೀವು ಹೆಚ್ಚು ಗಂಭೀರವಾದ ಅಪಾಯದಲ್ಲಿ ಇರುವಿರಿ.

ಇದು ಕೆಲ ಗುಣಲಕ್ಷಣಗಳನ್ನು ಒಳಗೊಂಡಿದೆ: ನಿಮ್ಮ ಮುದ್ದು ಕಂದಮ್ಮನನ್ನು ನಾನು ನೋಡಿಕೊಳ್ಳಲು ಆಗುವುದಿಲ್ಲ ಎಂದು ಅನಿಸುವುದು, ಗಾಬರಿಯಾಗುವುದು ಅಥವಾ ಹೆಚ್ಚು ಭಯ, ಸ್ಪಷ್ಟ ನಿರ್ದಾರ ತೆಗೆದುಕೊಳ್ಳಲು ಆಗುವುದಿಲ್ಲ, ನಿಯಂತ್ರಣ ತಪ್ಪಿರುವೆ ಎಂಬ ಭಾವನೆ, ಹೆಚ್ಚು ವೇದನೆ, ಭರವಸೆ ಕಳೆದುಕೊಳ್ಳುವಿರಿ, ಪ್ರಸವಾನಂತರದ ಖಿನ್ನತೆಗೆ ಕಾರಣವು ಯಾರಿಗೂ ತಿಳಿದಿಲ್ಲ, ಆದರೆ ಈ ಮೇಲಿನ ಗುಣಲಕ್ಷಣಗಳನ್ನು ನೀವು ಕಂಡರೆ ಕೂಡಲೇ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಆಪ್ತವೈದ್ಯರೊಡನೆ ಸಮಾಲೋಚಿಸಿ ಅಥವಾ ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಯನ್ನು ಬೇಟಿ ಮಾಡಿ.

ಇದರ ಕೆಲವು ಗುಣಲಕ್ಷಣಗಳೆಂದರೆ,

೧.ನಿಮ್ಮ ಮಗುವಿನ ಮೇಲೆ ಕಾಳಜಿ ಇಲ್ಲ ಎಂದು ಭಾವಿಸುತ್ತಿರಿ

೨.ಗಾಬರಿಯಾಗುವುದು ಅಥಾವ ತೀವ್ರಭಯ

೩.ಸ್ಪಷ್ಟವಾಗಿ ನಿರ್ದರಿಸುವಲ್ಲಿ ತೊಂದರೆ

೪.ನಿಯಂತ್ರಣ ತಪ್ಪಿರುವೆ ಎಂಬ ಭಾವನೆ

೫.ತೀವ್ರ ದುಃಖ

೬.ವಿಶ್ವಾಸ ಕಳೆದುಕೊಳ್ಳಬಹುದು

ಖಿನ್ನತೆಯಿಂದ ನಿಮ್ಮ ಮಗುವಿಗೆ ಹೇಗೆ ಹಾನಿಯಾಗುತ್ತದೆ?

ಖಿನ್ನತೆಯನ್ನು ಸರಿಯಾದ ಸಮಯಕ್ಕೆ ತೋರಿಸಿಕೊಳ್ಳದಿದ್ದರೆ, ಇದು ತಾಯಿ ಮತ್ತು ಮಗುವಿಗೆ ಸಂಭವನೀಯ ಅಪಾಯವನ್ನುಂಟುಮಾಡುತ್ತದೆ. ಸರಿಯಾಗಿ ತೋರಿಸಿಕೊಳ್ಳದ ಖಿನ್ನತೆಯು ಕುಡಿಯುವ, ಧೂಮಪಾನ ಮಾಡುವ ಮತ್ತು ಆತ್ಮಹತ್ಯಾ ನಡವಳಿಕೆಯನ್ನು ಪ್ರೇರೇಪಿಸುತ್ತದೆ, ಇದರಿಂದ ಕಡಿಮೆ ಜನನ ತೂಕವನ್ನು ಉಂಟುಮಾಡಬಹುದು, ಅಕಾಲಿಕ ಜನನ, ಬೆಳವಣಿಗೆಯ ಸಮಸ್ಯೆಗಳು, ಮತ್ತು ಗರ್ಭಪಾತ ಸಹ ಆಗಬಹುದು. ಗರ್ಭಿಣಿಯು ನಿರಂತರವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಅವಳಿಗೆ ಅಥವಾ ಅವಳ ಮಗುವಿಗೆ ಅಗತ್ಯವಿರುವುದನ್ನು ಪರಿಪೂರ್ಣಗೊಳಿಸಲು ಅವಳಿಂದ ಸಾಧ್ಯವಿಲ್ಲ ಮತ್ತು ಅವಳ ಶಕ್ತಿ ಕುಂದುತ್ತದೆ.

ಖಿನ್ನತೆಗೆ ಒಳಗಾಗಿರುವ ಮಹಿಳೆಯ ಮಗುವು ಸಾಮಾನ್ಯ ಮಹಿಳೆಯ ಮಗುವಿಗಿಂತ ಕಡಿಮೆ ಚಟುವಟಿಕೆಯನ್ನು ಮಾಡುತ್ತದೆ, ಚುರುಕು ಇರುವುದಿಲ್ಲ, ಯಾವುದೇ ವಿಷಯದ ಮೇಲೆ ಹೆಚ್ಚು ಗಮನಕೊಡುವುದಿಲ್ಲ.

ನಿಮ್ಮ ಮಗುವಿನ ಬೆಳವಣಿಗೆಗೆ ಅಗತ್ಯವಿರುವ ನಿಮ್ಮ ಆಸರೆ, ಬೆಂಬಲ ಅಥವಾ ಸಂಭದಗಳು ಖಿನ್ನತೆಯಿಂದ ಅದರ ಮೇಲೆ ಪ್ರಭಾವ ಬೀರುತ್ತವೆ. ನೈಸರ್ಗಿಕವಾಗಿ ನಿಮ್ಮ ಪ್ರೀತಿಯು ಮಗುವಿಗೆ ಅತ್ಯವಶ್ಯಕವಾಗಿರುತ್ತದೆ. ಮಗುವು ಅಳಲು ಶುರುಮಾಡಿದಾಗ ತಾಯಿಯು ಅದರ ಅಗತ್ಯಗಳನ್ನು ಅರಿತು, ಹಾಲುಣಿಸುವುದು, ಬಟ್ಟೆ ಬದಲಿಸುವುದು ಮುಂತಾದ ಕೆಲಸಗಳನ್ನು ಮಾಡುವುದರಿಂದ ಮಗುವು ಭಾವನಾತ್ಮಕವಾಗಿ ಅವರನ್ನು ನಂಬುತ್ತದೆ, ಮತ್ತು ನಾನು ಸುರಕ್ಷಿತ ಎಂದು ಭಾವಿಸುತ್ತದೆ. ಇದು ಮಗುವಿನ ಮತ್ತು ತಾಯಿಯ ಆರೋಗ್ಯಕ್ಕೂ ಒಳ್ಳೆಯದು.

ಒಂದು ವೇಳೆ ನೀವು ಖಿನ್ನತೆಗೆ ಒಳಗಾಗಿ, ಇದೆನ್ನೆಲ್ಲಾ ಮಾಡುವುದು ಕಷ್ಟವಾದರೆ, ಅದು ನಿಮ್ಮ ಮಗುವಿಗೆ ಅಸುರಕ್ಷಿತ ಭಾವನೆ ಬರುವುದರ ಜೊತೆಗೆ ಮಗುವಿನ ಮನಸ್ಥಿತಿಯಲ್ಲಿ ಏರುಪೇರಾಗಬಹುದು.

ವಯಸ್ಸಿನ ಆಧಾರದ ಮೇಲೆ ತಾಯಿಯ ಖಿನ್ನತೆಯು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ಶಿಶುಗಳು

ಮಕ್ಕಳು ತಮ್ಮ ತಾಯಿಯೊಂದಿಗೆ ಬಾಂಧವ್ಯ ಹೊಂದಲು ಕಷ್ಟ ಪಡುತ್ತವೆ. ಅವರು ತಮ್ಮ ತಾಯಿಯೊಂದಿಗೆ ಇರಬೇಕೆಂಬ ಆಶಯವನ್ನು ಹೊಂದಿರಬಹುದು ಅಥವಾ ಮಗುವು ಅಸಮಾಧಾನಗೊಳ್ಳಬಹುದು.

ಇದರ ಕೆಲವು ಕುರುಹುಗಳು:

೧.ಬೆಳವಣಿಗೆ ನಿಧಾನವಾಗುವುದು

೨.ನಿದ್ರೆಯಲ್ಲಿ ಸಮಸ್ಯೆ

೩.ಹೆಚ್ಚು ಹೊಟ್ಟೆ ನೋವು

೪.ಅವರು ಸ್ತಬ್ದವಾಗುವರು ಅಥವಾ ನಿಷ್ಕ್ರಿಯರಾಗುವರು

೫.ಇತರ ಶಿಶುಗಳಿಗಿಂತ ನಿಧಾನವಾಗಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಅಥವಾ ಅಭಿವೃದ್ಧಿಯ ಮೈಲಿಗಲ್ಲುಗಳನ್ನು ತಲುಪುವುದು

ಅಂಬೆಗಾಲಿಡುವ ಮಕ್ಕಳು ಅಂಗನವಾಡಿ ಶಿಶುಗಳು

೧.ಕಡಿಮೆ ಚಟುವಟಿಕೆ

೨.ಹೆಚ್ಚು ಆಕ್ರಮಣಕಾರಿ ಮತ್ತು ವಿನಾಶಕಾರಿ

೩.ಶಿಸ್ತು ಸ್ವೀಕರಿಸಲು ಹೆಚ್ಚು ತೊಂದರೆಯನ್ನು ಅನುಭವಿಸುತ್ತಾರೆ

೪.ಸ್ನೇಹಿತರ ಜೊತೆ ಹೆಚ್ಚು ಬೇರೆಯುದಿಲ್ಲ

೫.ಕಡಿಮೆ ಸ್ವಾತಂತ್ರವಂದಿರುವಂತೆ ಇರುತ್ತಾರೆ

ಶಾಲಾ ವಯಸ್ಸಿನ ಮಕ್ಕಳು

೧.ಹೆಚ್ಚು ಆತಂಕದ ಅಪಾಯ, ಖಿನ್ನತೆ ಮತ್ತು ಮಾನಸಿಕ ತೊಂದರೆ

೨.ಶಾಲೆಯಲ್ಲಿ ಕಡಿಮೆ ಚಟುವಟಿಕೆ

೩.ಹೆಚ್ಚು ಗಮನವಹಿಸುವುದಿಲ್ಲ

೪.ಕಲಿಯುದರಲ್ಲಿ ನಿರಾಸಕ್ತಿ

೫.ವರ್ತನೆಯ ಸಮಸ್ಯೆಗಳು

ವಯಸ್ಕರು

ಖಿನ್ನತೆಯಿಂದ ಬಳಲುತ್ತಿರುವ ತಾಯಂದಿರೊಂದಿಗಿನ ಹದಿಹರೆಯದ ಮಕ್ಕಳು ಹಲವಾರು ಸಮಸ್ಯೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಅವುಗಳು:

೧.ಖಿನ್ನತೆ ಮನೋರೋಗ, ಆತಂಕ, ವ್ಯಾಕುಲತೆ

೨.ಹೆಚ್ಚು ಖಿನ್ನತೆ

೩.ಮಾದಕವಸ್ತುಗಳ ಆಕರ್ಷಣೆಯಾಗುವುದು

೪.ಅಸ್ವಸ್ಥತೆ

೫.ಕಲಿಯುದರಲ್ಲಿ ನಿರಾಸಕ್ತಿ

೬.ಎಡಿಎಚ್ಡಿ(ADHD)

ನೀವು ಏನು ಮಾಡಬಹುದು?

ನಿಮ್ಮ ಖಿನ್ನತೆಯ ಭಾವನೆ ಬಗ್ಗೆ ಹೇಗಾದರೂ ನಿಮ್ಮ ವೈದ್ಯರೊಂದಿಗೆ ನೀವು ಹಿತಕರವಾಗದಿದ್ದರೆ, ನೀವು ಯಾರೊಂದಿಗೆ ಹಂಚಿಕೊಳ್ಳಬಹುದು ಮತ್ತು ಮುಕ್ತವಾಗಿ ಮಾತನಾಡಬಹುದು ಎಂದು ಭಾವಿಸುತ್ತಿರಾ ಅವರೊಡನೆ ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಯಾರಾದರೂ ನಿಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತುಕೊಂಡು ನಿಮಗೆ ಸಹಾಯ ಮಾಡಬೇಕು ಅಥವಾ ಸಹಾಯವನ್ನು ಮಾಡಿ ಎಂದು ನಿಮ್ಮ ಆಪ್ತರಲ್ಲಿ ಹೇಳಿ. ಖಿನ್ನತೆಯನ್ನು ಒಬ್ಬರೇ ಎದುರಿಸಬೇಡಿ.

Leave a Reply

%d bloggers like this: