herige-nantara-matte-shape-barisikollalu-parinaamavulla-niyamagala-patti

ನಾನು ಪುನಃ ಹಿಂದಿನಂತೆ ಜೀನ್ಸ್ ತೊಡಲಿಕ್ಕೆ ಸಾಧ್ಯಾನಾ? ಇದು ಮತ್ತೊಮ್ಮೆ ಒಳ್ಳೆಯ ಆಕಾರಕ್ಕೆ ಮರಳುವುದರ ಬಗ್ಗೆ ಹಾಗು ತೂಕ ಇಳಿಸಿಕೊಳ್ಳುವುದರ ಬಗ್ಗೆ ತಲೆ ಕೆಡಿಸಿಕೊಂಡಿರುವ ಹೊಸ ತಾಯಂದಿರಲ್ಲಿ ಮೂಡುವ ಹಲವಾರು ಪ್ರಶ್ನೆಗಳಲ್ಲಿ ಒಂದು. ಗರ್ಭಧಾರಣೆ ವೇಳೆ ಖುಷಿ ಖುಷಿಯಾಗಿ ಗಳಿಸಿಕೊಂಡ ಈ ತೂಕವು ಈಗ ನಿಮಗೆ ಬೇಡವಾಗಿದೆ. ಈಗಿರುವ ಫ್ಯಾಷನ್ ಜಾಗೃತ ಜಗತ್ತಿನಲ್ಲಿ, ತಾಯ್ತನಕ್ಕೆಂದೇ ಹಲವಾರು ಹೊಸ ಬಗೆಯ ವಸ್ತ್ರಗಳು ನಿಮ್ಮ ವಾರ್ಡ್ರೋಬ್ ತುಂಬಿರುತ್ತವೆ. ಆದರೂ, ಮನಸಲ್ಲಿ ಯಾವಾಗಲು ಈ ಪ್ಲಸ್ ಸೈಜ್ ನ ತಾಯ್ತನದ ವಸ್ತ್ರಗಳನ್ನು ಕಳಚಿ ಬಿಸಾಕುವ ತವಕ ಇದ್ದೆ ಇರುತ್ತದೆ. ಅಲ್ಲದೆ, ಇದು ಆಗುವವರೆಗೂ ಬಿಡಲೇಬಾರದು ಎಂಬ ಚಲವು ಮೂಡಿರುತ್ತದೆ.

ಮಗುವಾದ ನಂತರ ನಾವು ಹೆಚ್ಚು ಪ್ರಾತಿನಿಧ್ಯ ಕೊಡುವುದೇ ತೂಕ ಇಳಿಸಿಕೊಳ್ಳುವುದಿಕ್ಕೆ. ಆದರೆ ನಾವು ಈ ಗುರಿಯನ್ನು ಬೇಗನೆ ತಲುಪಬಹುದೇ ? ಖಂಡಿತ ಇಲ್ಲ ! ಆತುರ ಮಾಡಿದ್ದಲ್ಲಿ ನಮಗೆ ಅನುಕೂಲ ಆಗುವಿದಿರಲಿ, ಅನಾನುಕೂಲ ಆಗುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಈ ಪ್ರಕ್ರಿಯೆ ಕ್ರಮೇಣವಾಗಿ ಸಾಗಬೇಕು ಹಾಗು ಈ ನಿಟ್ಟಿನಲ್ಲಿ ಹತಾಶರಾಗದೆ ಪ್ರಯತ್ನವನ್ನು ಸತತವಾಗಿ ಮಾಡುತ್ತಲೇ ಇರಬೇಕು. ಇಲ್ಲಿ ನಾವು ನಿಮಗೆ ಹೇಳುತ್ತೇವೆ ತೂಕ ಇಳಿಸಿಕೊಳ್ಳಲು ಇರುವ ಉಪಾಯಗಳು : 

೧. ಕ್ಯಾಲೊರಿಗಳ ಬಗ್ಗೆ ಜಾಗ್ರತೆ

ನಾವು ಸೇವಿಸುವ ಕ್ಯಾಲೊರಿಗಳ ಬಗ್ಗೆ ನಾವು ನಿಗಾವಹಿಸಬೇಕು. ಎದೆಹಾಲು ನೀಡುತ್ತಿರುವ ತಾಯಿಗೆ ೨೪೦೦ ಕ್ಯಾಲೊರಿಗಳು ಅವಶ್ಯಕವಾಗಿದ್ದು, ಎದೆಹಾಲು ನೀಡದಿರುವ ತಾಯಿಗೆ ೨೨೦೦ ಕ್ಯಾಲೊರಿಗಳ ಅಗತ್ಯವಿದೆ. ಹಾಗಾಗಿ ನೀವು ಸೇವಿಸುವ ಆಹಾರದಲ್ಲಿ ಎಷ್ಟು ಕ್ಯಾಲೊರಿಗಳಿವೆ ಎಂಬುದರ ಲೆಕ್ಕ ಇಡಿ.

೨. ಪೋಷಕಾಂಶಗಳಲ್ಲಿನ ವಿಧಗಳು

ಈಗ ತಾನೇ ತಾಯಿ ಆಗಿರುವವರಿಗೆ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಫೋಲೆಟ್, ವಿಟಮಿನ್ ಸಿ ಹಾಗು ಪ್ರೋಟೀನ್ ಬೇಕಾಗಿರುತ್ತದೆ. ಹಾಗಾಗಿ ನೀವು ಸೇವಿಸುವ ಆಹಾರವು ಇವೆಲ್ಲವನ್ನೂ ಸಮವಾಗಿ ಒಳಗೊಂಡಿರಬೇಕು. ಇವುಗಳು ನಿಮ್ಮ ದೇಹ ಮೊದಲಿನಂತೆ ಆಗಲು ಅತ್ಯವಶ್ಯಕ.

೩. ಊಟದ ಪ್ರಮಾಣ ಬದಲಿಸಿ

ನಿಮ್ಮ ಎಷ್ಟು ಬಡಿಸಿಕೊಳ್ಳುವಿರಿ ಎಂಬುದರ ಮೇಲೆ ಗಮನವಿರಲಿ ಹಾಗು ನಿಮ್ಮ ತಟ್ಟೆ ಪೂರ್ತಿ ಮುಚ್ಚುವಂತೆ ಆಹಾರ ಬಡಿಸಿಕೊಂಡು ತಿನ್ನಬೇಡಿ. ಇದುವೇ ನಿಮ್ಮ ಡಯಟ್ ನ ಮಂತ್ರವಾಗಿರಲಿ. ನಿಮ್ಮ ಆಹಾರವನ್ನು ಒಂದೇ ಊಟದಲ್ಲಿ ಮುಗಿಸುವ ಬದಲು, ಅದನ್ನು ವಿಂಗಡಿಸಿಕೊಳ್ಳಿ ಹಾಗು ಸಣ್ಣ ಸಣ್ಣ ಊಟಗಳನ್ನು ಮಾಡಿ. ಬೆಳಗಿನ ತಿಂಡಿ, ಮಧ್ಯಾನದ ಊಟ ಹಾಗು ರಾತ್ರಿಯ ಊಟದ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಸ್ನ್ಯಾಕ್ಸ್ ಸೇವಿಸಿದರೆ ನಿಮಗೆ ಬೇಕಾದ ಪೋಷಕಾಂಶಗಳು ನಿಮಗೆ ದೊರೆಯುತ್ತವೆ.

೪. ಕುರುಕಲು ತಿಂಡಿಗಳ ಕೈಬಿಡಿ

ನಮ್ಮಲ್ಲಿ ಬಹಳಷ್ಟು ಜನರಿಗೆ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ಓಪನ್ ಮಾಡಿದರೆ ಕೇವಲ ಒಂದೆರೆಡು ತಿಂದು ವಾಪಸ್ ಇಡುವಷ್ಟು ಹಿಡಿತ ಇಲ್ಲ. ಅದರಲ್ಲೂ, ಚಿಪ್ಸ್ ಜೊತೆಗೆ ಕೋಲಾ ಸಿಕ್ಕರೆ ಅಂತೂ ಮುಗಿದೇ ಹೋಯಿತು. ನಿಮಗೆ ಈಗ ಇರುವ ಸವಾಲೇ ಇವುಗಳನ್ನು ತ್ಯಜಿಸುವುದು. ಇದಕ್ಕೆ ಒಳ್ಳೆ ಉಪಾಯ ಎಂದರೆ ನಿಮ್ಮ ಮನೆಯ ತುಂಬಾ ಹಣ್ಣುಗಳು, ತರಕಾರಿಗಳು, ಕಾಳುಗಳೊಂದಿಗೆ ತುಂಬಿಡಿ.

೫. ಜೀವನ ರಸವತ್ತಾಗಿ ಮಾಡಿಕೊಳ್ಳಿ

ನಿಮ್ಮ ದೇಹಕ್ಕೆ ತುಂಬ ಹೆಚ್ಚು ಪ್ರಮಾಣದಲ್ಲಿ ದ್ರವ್ಯಗಳು ಬೇಕಾಗುತ್ತವೆ. ಹೀಗಾಗಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ ಹಾಗು ನಿಮಗೆ ಆಗಾಗ್ಗೆ ನಾರಿನ ಹಣ್ಣಿನರಸಗಳನ್ನ ಸೇವಿಸಿರಿ. ಇದು ನಿಮಗೆ ಹಣ್ಣುಗಳನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ. ನಿಮಗೆ ಹಣ್ಣುಗಳನ್ನು ಹಾಗೆಯೇ ತಿನ್ನಲು ಇಷ್ಟವಿದ್ದರೆ, ಇನ್ನು ಒಳ್ಳೆಯದೇ. ಹಣ್ಣುಗಳನ್ನು ಹಾಗೆಯೇ ತಿಂದರೆ ಇನ್ನೂ ಹೆಚ್ಚಿನ ಪೋಷಕಾಂಶಗಳು ನಿಮಗೆ ದೊರೆಯುತ್ತವೆ.

೬. ತರಕಾರಿಗಳು ಹಾಗು ಹಣ್ಣುಗಳು

ಇವುಗಳನ್ನು ನಿಮ್ಮ ಆಹಾರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದನ್ನು ಮಾತ್ರ ಮರೆಯುವ ಹಾಗೆ ಇಲ್ಲ. ಮೊದಲ ನಿಮ್ಮ ಸುತ್ತಮುತ್ತಾ ಸಿಗುವ ತರಾವರಿ ಹಣ್ಣು-ತರಕಾರಿಗಳನ್ನ ಸೇವಿಸಿ. ನಂತರ, ಬೇರೆ ಪ್ರದೇಶಗಳ ತಳಿಗಳಿಗೆ ಮೊರೆ ಹೋಗಿ.

೭. ಹೊಸ ಪಾಕವಿಧಾನಗಳನ್ನು ಪ್ರಯತ್ನಿಸಿ

ನಿಮಗೆ ಅಡುಗೆ ಮಾಡುವುದು ಇಷ್ಟವೆಂದರೆ, ಇಂಟರ್ನೆಟ್ ಅನ್ನು ನಿಮ್ಮ ಸ್ನೇಹಿತೆ ಮಾಡಿಕೊಳ್ಳಿ. ಅಂತರ್ಜಾಲದಲ್ಲಿ ಕಡಿಮೆ ಕ್ಯಾಲೊರಿಗಳನ್ನುಳ್ಳ ಪಾಕವಿಧಾನಗಳ ಬಗ್ಗೆ ತಿಳಿದುಕೊಂಡು ನಂತರ ನೀವೇ ನಿಮ್ಮ ಮನೆಯಲ್ಲಿ ಅವುಗಳನ್ನ ತಯಾರಿಸಲು ಪ್ರಯತ್ನಿಸಿ.

೮. ವ್ಯಾಯಾಮ

ತೂಕ ಇಳಿಸಿಕೊಳ್ಳುವ ಮಾತು ಬಂದರೆ ಅದರಲ್ಲಿ ವ್ಯಾಯಾಮ ಎಂದಿಗೂ ಹಿಂದೆ ಬೀಳಬಾರದು. ಕಡಿಮೆ ಒತ್ತಡ ಬೀಳುವಂತ ವ್ಯಯಾಮಗಳಾದ ವಾಯುವಿಹಾರ ಅಥವಾ ಸ್ವಲ್ಪ ದೂರದವರೆಗಿನ ಓಟದಿಂದ ಶುರು ಮಾಡಿ. ನಂತರ ಕಾಲಕ್ರಮೇಣ ಬೇರೇ ಬೇರೇ ವ್ಯಾಯಾಮಗಳನ್ನು ಕೂಡಿಸಿಕೊಳ್ಳುತ್ತಾ ಹೋಗಿ.

೯. ಮಾಡುವ ಕೆಲಸದ ಮೇಲೆ ಪ್ರೀತಿಯಿರಲಿ

ಸದಾಕಾಲ ಹಸನ್ಮುಖಿಯಾಗಿ ಖುಷಿಯಾಗಿ ಇರುವುದು ತುಂಬಾನೇ ಅಗತ್ಯ. ನೀವು ನಿಮ್ಮ ಮಗುವಿನೊಂದಿಗೆ ಆಟ ಆಡುವುದೇ ಇರಲಿ, ಪುಸ್ತಕವನ್ನು ಓದುವುದೇ ಆಗಲಿ ಅಥವ ಯಾವುದಾದರು ಹೊಸ ಹವ್ಯಾಸ ರೂಡಿಸಿಕೊಳ್ಳುವುದೇ ಆಗಲಿ, ನೀವು ಇದರ ಬಗ್ಗೆ ಖುಷಿ ಪಡಬೇಕು. ಇದುವೇ ನೀವು ತೂಕ ಇಳಿಸಲು ತಿಳಿದುಕೊಳ್ಳಬೇಕಾದ ಗುಟ್ಟು.

ಈ ಎಲ್ಲಾ ಸಲಹೆಗಳೊಂದಿಗೆ ಹೊಸ ಅಮ್ಮಂದಿರು ಖುಷಿಯಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ನಾನು ಕೂಡ ಇವುಗಳನ್ನು ಬಳಸಿ ಉಪಯೋಗಗಳನ್ನು ಕಂಡಿದ್ದೇನೆ. ನಿಮ್ಮ ತಾಯ್ತನಕ್ಕೆ ಒಳ್ಳೆಯದಾಗಲಿ !

Leave a Reply

%d bloggers like this: