ನೀವು ಅಂದುಕೊಂಡಿರಬಹುದು ನಿಮ್ಮ ಮಗುವು ಮಾತನಾಡುವ ತನಕ ಅದು ನಿಮ್ಮ ಜೊತೆ ಸಂಭಾಷಣೆ ಮಾಡುವುದಿಲ್ಲವೆಂದು, ಆದರೆ ಅದು ಸುಳ್ಳು. ಮಗುವು ಹುಟ್ಟಿದಾಗಿನಿಂದ ಎಲ್ಲಾ ಸಮಯದಲ್ಲೂ ನಿಮ್ಮ ಜೊತೆ ಸಂಭಾಷಣೆ ಮಾಡುತ್ತದೆ. ಅದು ಅಳುವುದರ ಮೂಲಕ. ಮಗುವು ತನಗೆ ಅನ್ನಿಸಿದ್ದನ್ನು ಮತ್ತು ತನಗೆ ಬೇಕಾಗಿರುವುದನ್ನು ಅಳುವುದರ ಮೂಲಕ ನಿಮ್ಮ ಜೊತೆ ಹೇಳಿಕೊಳ್ಳುತ್ತದೆ. ಮಗುವು ಅಳುವುದು, ಏಕೆಂದರೆ ಮಗುವಿಗೆ ಹಸಿವಾಗಿದೆ, ಬಾಯಾರಿಕೆಯಾಗಿದೆ, ಮುಂತಾದ ಕಾರಣಗಳಿಗಿರಬಹುದು. ಯಾವುದೇ ಕಾರಣ ಇಲ್ಲದೆ ಯಾವ ಮಗುವು ಅಳುವುದಿಲ್ಲ.
ಮಗುವು ತನ್ನ ದೇಹದ ಭಾಗಗಳನ್ನು ಉಪಯೋಗಿಸಿ ಕೂಡ ನಿಮ್ಮ ಜೊತೆ ಮಾತನಾಡುತ್ತದೆ. ಮಗುವಿಗೆ ಹೊಟ್ಟೆ ತುಂಬಿದಾಗ ತನ್ನ ಕೈಯಿಂದ ತಟ್ಟೆಯನ್ನು ದೂರ ತಳ್ಳುವುದು ಇದಕ್ಕೆ ಉದಾಹರಣೆ. ನಿಮ್ಮನ್ನು ಅಪ್ಪಿಕೊಳ್ಳುವುದು ನಿಮ್ಮ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.
ಮಗುವು ತನ್ನ ದೇಹ ಭಾಷೆಯಿಂದ ಸಾಮಾನ್ಯವಾಗಿ ಹೇಳುವ ಕೆಲವು ಸುಳಿವುಗಳು:
ಅ.ಆಕಳಿಕೆ, ನೇರ ನೋಟ, ಅರೆ ನೋಟ, ನಿದ್ರಾ ಕಣ್ಣು ಮಿಟುಕಿಸುವುದು: ನನಗೆ ನಿದ್ದೆ ಬರುತ್ತಿದೆ ಎಂದು ಹೇಳುತ್ತಿದೆ.
ಬ.ಬಾಯಿ ತೆರೆಯುವುದು: ನನಗೆ ಹಸಿವಾಗಿದೆ
ಕ.ಎಚ್ಚರಿಕೆಯ ದೇಹ ಚಲನೆಗಳೊಂದಿಗೆ ಕಣ್ಣುಗಳು ಅಗಲವಾಗಿ ಬಿಡುವುದು: ನಾನು ಆಟವಾಡಲು ಮತ್ತು ಕಲಿಯಲು ಸಿದ್ದ
ಗ.ತನ್ನ ತಲೆಯನ್ನು ಹಿಂದೆ ಸರಿಸುವುದು ಅಥವಾ ಬೆನ್ನು ತೋರಿಸುವುದು: ನನಗೆ ಇದು ಬೇಡ
ಬಹಳಷ್ಟು ಪೋಷಕರು ನಾವು ಮಗುವಿನೊಂದಿಗೆ ಮಾತನಾಡುವುದು ತಮಾಷೆ ಅಷ್ಟೇ ಅಂದು ಭಾವಿಸುತ್ತಾರೆ,ಆದರೆ ಮಗುವು ನಿಮ್ಮ ಮಾತುಗಳನ್ನು ನಿಧಾನವಾಗಿ ಅರ್ಥ ಮಾಡಿಕೊಳ್ಳುತ್ತದೆ. ಹಾಗೂ ನೀವು ನೋಡುತ್ತಿರುವ ಮತ್ತು ಮಾಡುತ್ತಿರುವ ಬಗ್ಗೆ ನಿಮ್ಮ ಚಿಕ್ಕ ಮಾತನ್ನು ಮಾತನಾಡುವುದು ನಿಜವಾಗಿಯೂ ನಿಮ್ಮ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ನೀವು ಮಾಡಬಹುದಾದ ಕೆಲವು ವಿಷಯಗಳು:
೧.ಚಲನೆಗಳು
ನಿಮ್ಮ ಮಗುವು ನಿಮ್ಮ ಕಣ್ಣಿನ ಚಲನೆ ಮತ್ತು ನೀವು ಮಾತನಾಡುವಾಗ ನಿಮ್ಮ ತುಟಿಯ ಚಲನೆಯನ್ನು ಮಾತಿಗೆ ಅನುಗುಣವಾಗಿ ಗಮನಿಸುತ್ತದೆ.
೨.ನೀವು ಮಾಡುತ್ತಿರುವ ಕೆಲಸದ ಬಗ್ಗೆ ಮಾತನಾಡಿ
ಉದಾಹರಣೆಗೆ, ನಾವು ನಿನಗೆ ಈಗ ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತೇವೆ. ನಿನಗೆ ಇದು ಇಷ್ಟವೇ? ಇಲ್ಲವೇ? ನೀವು ಯಾವ ಭಾಷೆಯಲ್ಲಿ ಮಾತನಾಡಿಸುತ್ತಿರಿ ಆ ಭಾಷೆಯನ್ನು ಅದು ಮಾತನಾಡಲು ಶುರು ಮಾಡುತ್ತದೆ. ಇಗೆ ಮಾತನಾಡಿಸುವುದು ಮಗುವು ಮಾತನಾಡಲು ಮತ್ತು ಪದ ಪುಂಜಣೆ ಮಾಡಲು ಕಲಿಯುತ್ತದೆ.
೩.ಹಾಡು ಮತ್ತು ಪ್ರಾಸಗಳನ್ನು ಹಾಡಿ
ನಿಮ್ಮ ಮಗುವು ನಿಮ್ಮ ಪದಗಳ ಲಯವನ್ನು ಪ್ರೀತಿಸುತ್ತೇವೆ ಮತ್ತು ನಿಮ್ಮ ಧ್ವನಿಯನ್ನು ಕೇಳಿ ಶಾಂತವಾಗುತ್ತವೆ ಮತ್ತು ಖುಷಿ ಪಡುತ್ತವೆ.
೪.ಪುಸ್ತಕ ಓದಿ ಮತ್ತು ಕಥೆಯನ್ನು ಹೇಳಿ
ಕೆಲವು ದಿನಗಳು ಕಳೆದಂತೆ ನಿಮ್ಮ ಮಗುವು ಸಂಪೂರ್ಣವಾಗಿ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತವೆ. ನೀವು ಏನನ್ನಾದರೂ ಹೇಳಿದಾಗ ಅದಕ್ಕೆ ಶಬ್ದ ಮಾಡುವ ಮೂಲಕ ನಾನು ಆಲಿಸುತ್ತಿರುವೆ ಎಂದು ಹೇಳುತ್ತವೆ. ಇದು ನಿಮಗೆ ಖುಷಿ ನಿಡುವ ವಿಷಯ.
೫.ನಿಮ್ಮ ಮಗುವಿನ ಮೊದಲ ತೊದಲ ಮಾತುಗಳನ್ನು ಕೇಳಿ
ನಿಮ್ಮ ಮಗುವು ಮಾತನಾಡಲು ಪ್ರಯತ್ನಿಸಿದಾಗ ನೀವು ಸುಮ್ಮನೆ ಕೇಳಿಸಿಕೊಂಡು ಮಗುವು ಮಾತನಾಡಲು ಸಮಯ ಕೊಡಿ. ಮತ್ತು ತೊದಲು ಮಾತನ್ನು ಆಡಿದ ನಂತರ ಅದರ ಬಗ್ಗೆ ಕೆಲವು ಮಾತುಗಳನ್ನಾಡಿ, ಇದರಿಂದ ಸರಿಯಾಗಿ ಸಂಭಾಷಣೆ ಮಾಡುವ ವಿಧವನ್ನು ಬೇಗನೆ ಕಲಿಯುತ್ತದೆ.
೬.ಆಟಿಕೆಗಳು ಮತ್ತು ಮಗುವಿನ ಸುತ್ತವಿರುವ ವಸ್ತುಗಳ ಹೆಸರನ್ನು ತಿಳಿಸಿ
ಉದಾಹರಣೆಗೆ, ಇದು ಲೋಟ, ಇದರಲ್ಲಿ ನೀರು ಮುಂತಾದ ದ್ರವ್ಯಗಳನ್ನು ಕುಡಿಯುತ್ತೇವೆ. ನೀನು ಕುಡಿ, ಎಂದು ವಸ್ತುವಿನ ಹೆಸರು ಮತ್ತು ಅದರ ಉಪಯೋಗವನ್ನು ತಿಳಿಸುವುದು.
ಎಲ್ಲಾ ಮಕ್ಕಳು ತಮ್ಮ ತೊದಲು ಮಾತನ್ನು ಆಡಲು ತಮ್ಮದೇ ಸಮಯವನ್ನು ತೆಗೆದುಕೊಳ್ಳುತ್ತವೆ, ಅದರ ಬಗ್ಗೆ ಚಿಂತಿಸಬೇಡಿ. ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ, ಒಮ್ಮೆ ನಿಮ್ಮ ಮಗು ಮಾತನಾಡಲು ಪ್ರಾರಂಭಿಸಿದಾಗ, ಅವರು ನಿರಂತರವಾಗಿ ಯಾವುದಾದರೂ ವಿಷಯದ ಬಗ್ಗೆ ಅಥವಾ ತಮಗೆ ತೋಚಿದನ್ನು ಮಾತನಾಡುತ್ತಲೇ ಇರುತ್ತಾರೆ ಅವರ ಮುದ್ದು ಮಾತುಗಳನ್ನು ಕೇಳುವುದೇ ಒಂದು ಅಂದದ ಕೆಲಸ. ನಿಮಗೆ ಮಗುವಿನಲ್ಲಿ ಏನೋ ತೊಂದರೆ ಇದೆ ಎಂದು ಭಾವಿಸಿದರೆ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.