hosa-taayiyandirige-eduraaguva-5samanya-savaalugalu-mattu-adannu-bageharisuvudu-hege-1

ಮಕ್ಕಳು ದೇವರ ಸಮಾನ ಎಂದು ಹೇಳುತ್ತಾರೆ, ಅದು ನಿಜ. ವಾಸ್ತವವಾಗಿ, ಮೊದಲ ದಿನ, ಹೊಸ ತಾಯಿಯಂದಿರು ತಮ್ಮ ಮುದ್ದು ಕಂದಮ್ಮನಿಗೆ ಜನ್ಮ ನೀಡುವಾಗ ಭಯಭೀತರಾಗಿದ್ದರೂ, ತಮ್ಮ ಮುಂದಿನ ಸವಾಲುಗಳನ್ನು ಆ ಪುಟ್ಟ ಪ್ರೀತಿಯ ಕಂದನನ್ನು ನೋಡಿ ಆನಂದದಿಂದ ಮರೆತುಹೋಗಿರುತ್ತಾರೆ. ಮಗುವನ್ನು ಬೆಳೆಸುವುದರ ಬಗ್ಗೆ ನಿಜವಾಗಿಯೂ ಅವರಿಗೆ ತಿಳಿದುಬಂದಾಗ, ತಮ್ಮ ಕರ್ತವ್ಯ ಮತ್ತು ಕಾಳಜಿಯೊಂದಿಗೆ ತಾಯಿಯಾಗಿ ಅವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

ತಾಯಿಯಂದಿರಿಗೆ ಎದುರಾಗುವ ಸಾಮಾನ್ಯ ಸವಾಲುಗಳು ಮತ್ತು ಅದನ್ನು ಹೇಗೆ ಎದುರಿಸಬಹುದು ಎಂಬುದರ ಪಟ್ಟಿ

ಸವಾಲು ೧: ಪತಿಯೋಡನೆ ಭಿನ್ನಾಭಿಪ್ರಾಯಗಳು

ಹೌದು, ಇದು ನಿಜ. ಪ್ರತಿ ತಾಯಿಯೂ ಕೂಡ ತನ್ನ ಪತಿಯೋಡನೆ ಕನಿಷ್ಟ ಪಕ್ಷ ಒಂದು ಸಲವಾದರೂ ವಾದಗಳನ್ನು ಮಾಡುತ್ತಾರೆ, ಅದು ಮಗುವಿನ ಜನನದ ನಂತರ ನನ್ನ ಮೇಲೆ ನೀವು ಹೆಚ್ಚು ಕಾಳಜಿಯನ್ನು ವಹಿಸುತ್ತಿಲ್ಲ ಅಥವಾ ಮಗುವಿನ ಪಾಲನೆ ಮತ್ತು ಪೋಷಣೆಯಲ್ಲಿ ಯಾವುದೇ ಸಹಾಯ ಮಾಡುತ್ತಿಲ್ಲವೆಂಬ ಕಾರಣಕ್ಕೆ ಇರಬಹುದು. ನೀವು ಕೆಲವು ಗಂಟೆಗಳ ನಿರಂತರ ನಿದ್ರೆಯನ್ನು ಮಾತ್ರ ಮಾಡುತ್ತಿರಿ, ಆದರೆ ನಿಮ್ಮ ಸೋಮಾರಿ ಪತಿ(ಹಾಗೂ ಪೂಜ್ಯ ಪತಿ) ಕೆಲಸ ಮಾಡಿ ಮತ್ತು ಕೇವಲ ಮಗುವಿನ ಬಟ್ಟೆಯನ್ನು ಬದಲಿಸಿ ಸುಸ್ತಾಗಿರುವುದರಿಂದ ಹೆಚ್ಚು ನಿದ್ರೆಯನ್ನು ಮಾಡುತ್ತಾರೆ. ಇದು ಸರಿಯಲ್ಲ.

ನೀವು ಇದರ ಬಗ್ಗೆ ನಿಮ್ಮ ಪತಿಯೋಡನೆ ಎಂದು ಮಾತನಾಡದಿದ್ದರೆ, ನೀವು ಕೆಲಸದಿಂದ ಮನೆಗೆ ಬಂದ ನಿಮ್ಮ ಪತಿಗೆ ಹೆಚ್ಚು ಶ್ರಮ ಕೊಡಲು ಬಯಸದ ಪತ್ನಿಯರಲ್ಲಿ ಒಬ್ಬರು, ಮತ್ತು ನಿಮ್ಮ ಪತಿಯ ಮೇಲೆ ನಿಮಗೆ ಹೆಚ್ಚು ಕಾಳಜಿ ಹೊಂದಿರುವ ಮುದ್ದು ಪತ್ನಿ. ಅದು ಏನೇ ಇದ್ದರೂ, ನಮ್ಮ ಸಲಹೆ ಏನೆಂದರೆ, ನಿಮ್ಮ ಪತಿಯ ಸಹಾಯ ಮಗುವಿನ ಜನನದ ನಂತರ ಎಷ್ಟು ಮುಖ್ಯ ಎಂಬುದನ್ನು ಅವರಿಗೆ ತಿಳಿಸಿ.

ಪರಿಹಾರ:

ಅವರೊಂದಿಗೆ ನಿಮ್ಮ ಭಾವನೆಗಳನ್ನು ಹೃದಯದಿಂದ ಹಂಚಿಕೊಳ್ಳಿರಿ, ಮುಂದಿನ ಒಂದು ತಿಂಗಳ ನಂತರ ಎಲ್ಲಾ ಕೆಲಸವನ್ನು ನೀವೇ ಮಾಡಬೇಕಾಗಬಹುದು.  ಇದು ಎಲ್ಲವನ್ನು ಒಳಗೊಂಡಿದೆ, ಅದು, ದಿನಸಿಯನ್ನು ತರುವುದು, ಕೆಲಸಕ್ಕೆ ಹೋಗುವುದು, ನಿಮ್ಮ ಅತ್ತೆಗೆ ಸಂದೇಶ ಕಳುಹಿಸುವುದು, ನಿಮ್ಮ ಮಗುವಿನ ನೈರ್ಮಲ್ಯ ಬಟ್ಟೆಯನ್ನು ಆಗಾಗ್ಗೆ ಬದಲಿಸುವುದು, ಮತ್ತು ಮನೆಗೆಲಸ ಮಾಡುವುದು. ಒಬ್ಬರನ್ನು ಒಬ್ಬರು ಅರಿತುಕೊಂಡು, ಒಬ್ಬರು ಮಾಡಿದ ಕೆಲಸವನ್ನು ಇನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಹೋಗುವುದು.

ಸವಾಲು ೨: ಸ್ತನ್ಯಪಾನ(ಎದೆಹಾಲುಣಿಸುವುದು)

ನಿಮ್ಮ ಮಗುವು ಅತಿ ಚಿಕ್ಕದಾದ ಹೊಟ್ಟೆಯನ್ನು ಹೊಂದಿದೆ. ಮಗುವು ಹುಟ್ಟಿದಾಗ ಅದರ ಉದರ(ಜಠರ) ದ್ರಾಕ್ಷಿ ಹಣ್ಣಿನ ಗಾತ್ರವಿರಬಹುದು, ಮತ್ತು ೫ ವಾರಗಳು ಕಳೆದಂತೆ ಅದು ಬಾಲಿನ ದಪ್ಪ ಆಗುತ್ತದೆ. ಇದರ ಅರ್ಥ ಮಗುವು ಹೆಚ್ಚು ಆಹಾರ ಸೇವಿಸುವುದಿಲ್ಲ ಮತ್ತು ಮಗುವಿಗೆ ಆಗಾಗ್ಗೆ ಹಸಿವು ಉಂಟಾಗುತ್ತದೆ.

ಎದೆಹಾಲುಣಿಸಲು ಯಾವಾಗ ಪ್ರಾರಂಭಿಸುವಿರಿ? ಎಷ್ಟು ಬಾರಿ ಮಗುವಿಗೆ ಹಾಲುಣಿಸುವಿರಿ? ಎದೆಹಾಲುಣಿಸುವುದರಿಂದ ಈಗಾಗಲೇ ಉದಿಕೊಂಡಿರುವ ಅಥವಾ ನೋವು ಇರುವ ಮೊಲೆಗೆ ಹಾನಿಯಾಗುವುದಿಲ್ಲ ಎಂದು ಹೇಗೆ ಖಚಿತಪಡಿಸಿಕೊಳ್ಳುವಿರಿ?

ಪರಿಹಾರ:

ನೀವು ಮಗುವಿಗೆ ಎದೆಹಾಲುಣಿಸಲು ಎಷ್ಟು ಸಾಧ್ಯವೋ ಅಷ್ಟು ಬೇಗ ಹಾಲುಣಿಸಲು ಪ್ರಾರಂಭಿಸಬೇಕು- ಅದರಲ್ಲೂ ಮಗು ಜನಿಸಿದ ಸ್ವಲ್ಪ ಸಮಯದ ನಂತರದಿಂದ ಹಾಲುಣಿಸುವುದು ಉತ್ತಮ. ಮೊದಲ ವಾರದಲ್ಲಿ, ನಿಮ್ಮ ಸ್ತನಗಳು ಮುಖ್ಯವಾಗಿ ಕೊಲೊಸ್ಟ್ರಮ್ ಅನ್ನು ಉತ್ಪತ್ತಿ ಮಾಡುತ್ತವೆ. ಮೊದಲಿಗೆ ಕೆಲವು ಹನಿಗಳು ಮಾತ್ರ ಹಾಲು ಬರುತ್ತದೆ, ನಂತರ ನಿಮ್ಮ ಮೊಲೆಯಿಂದ ಹೆಚ್ಚು ಹಾಲು ಬರಲು ಶುರುವಾಗುತ್ತದೆ. ನಿಮ್ಮ ಮಗುವಿಗೆ ಹಾಲುಣಿಸುವ ಸಮಯದಲ್ಲಿ ೨-೪ ಗಂಟೆ ಮಾತ್ರ ಅಂತರವಿರಲಿ. ಸಾಮಾನ್ಯವಾಗಿ ಹಸಿವಾದ ತಕ್ಷಣ ಮಕ್ಕಳು ಎದ್ದು ಅಳಲು ಪ್ರಾರಭಿಸುತ್ತಾರೆ. ನಿಮ್ಮ ಮಗುವನ್ನು ಸರಿಯಾದ ರೀತಿಯಲ್ಲಿ ಇರಿಸಿಕೊಂಡು ಹಾಲುಣಿಸಿ, ಮಗುವು ಸರಿಯಾಗಿ ಚೀಪುತ್ತಿಲ್ಲದಿದ್ದರೆ, ಬಾಯಿಯನ್ನು ಬಿಡಿಸಿ ನಿಮ್ಮ ಬೆರಳನ್ನು ಚಿಪಿಸಿ ನಂತರ ಪುನಃ ಮೊಲೆಯನ್ನು ಚಿಪಿಸಿ ಇದರಿಂದ ನಿಮ್ಮ ಮೊಲೆಯ ನೋವನ್ನು ಕಡಿಮೆಮಾಡಬಹುದು.

ಸವಾಲು ೩: ಡೈಪರ್ ಬದಲಿಸುವುದು

ಇದು ತಾಯಿಯಂದಿರು ಎದುರಿಸುವ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಶಿಶುಗಳು ತಮ್ಮ ಡೈಪರ್ ಅನ್ನು ಬಹು ಬೇಗ ಒದ್ದೆ ಮಾಡಿಕೊಳ್ಳುತ್ತವೆ, ಮತ್ತು ಅದನ್ನು ಸರಿಯಾದ ಸಮಯಕ್ಕೆ ಬದಲಿಸದಿದ್ದರೆ, ಮಗುವು ಅಳುವುದು ಮಾತ್ರವಲ್ಲ, ಅದರ ಜೊತೆಗೆ ಮಗುವಿಗೆ ಸೋಂಕು ತಗುಲುವ ಅಪಾಯ ಹೆಚ್ಚು ಮತ್ತು ಇದರಿಂದ ಅಲರ್ಜಿಯಾಗಬಹುದು ಅಥವಾ ಚರ್ಮ ಕಾಯಿಲೆ ಬರಬಹುದು.ಎಷ್ಟು ಡೈಪರ್ ಬದಲಾವಣೆಗಳು ಸಾಮಾನ್ಯ? ಇದು ಏನನ್ನು ಸೂಚಿಸುತ್ತದೆ?

ಪರಿಹಾರ:

ನಿಮ್ಮ ಮಗುವಿಗೆ ಕನಿಷ್ಟ ೧೦ ಬಾರಿಯಾದರೂ ಡೈಪರ್ ಅನ್ನು ಬದಲಿಸಬೇಕು. ಒಂದು ವೇಳೆ ನಿಮ್ಮ ಮಗುವಿನ ಡೈಪರ್ ಅನ್ನು ೧೩ ಕ್ಕಿಂತ ಹೆಚ್ಚು ಬಾರಿ ಬದಲಿಸಿದರೆ, ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು ಉತ್ತಮ. ಅಥವಾ ೮ಕ್ಕಿಂತ ಕಡಿಮೆ ಬಾರಿ ಅದನ್ನು ಬದಲಿಸಿದರೆ, ನಿಮ್ಮ ಮಗುವಿನ ಅಗತ್ಯಕ್ಕೆ ಹಾಲು ನೀಡುತ್ತಿಲ್ಲ ಅಥವಾ ತನ್ನ ಅಗತ್ಯಕ್ಕೆ ಬೇಕಾದ ಹಾಲು ಸೇವಿಸುತ್ತಿಲ್ಲ ಎಂದು ಅರ್ಥ. ನಿಮ್ಮ ಮಗುವಿಗೆ ಸೋಂಕು ತಪ್ಪಿಸಲು ಪ್ರತಿ ಬದಲಾವಣೆ ನಂತರ ಅಥವಾ ಒದ್ದೆಯಾದಾಗ ಮಗುವನ್ನು ಸ್ವಚ್ಚಗೊಳಿಸಿ.

ಸವಾಲು ೪: ನಿದ್ರಿಸುವುದು

ಮಕ್ಕಳು ನಿರಂತರ ೩ ಗಂಟೆಗಳ ಕಾಲ ಮಲಗುವುದಿಲ್ಲ, ಅವು ಎದ್ದು ಕುರುತ್ತವೆ ಮತ್ತು ಅಳುತ್ತವೆ. ತಾಯಿಯು ರಾತ್ರಿ ಎದ್ದು ಮಗುವಿಗೆ ಹಾಲುಣಿಸಬೇಕು ಅಥವಾ ಮಗುವಿನ ಡೈಪರ್ ಅನ್ನು ಬದಲಾಯಿಸಬೇಕು, ಅಥವಾ ಮಗುವು ಪುನಃ ಮಲಗುವ ತನಕ ಮುದ್ದಾಡ ಬೇಕು. ಈ ನಿದ್ರೆಯ ಅಭಾವದಿಂದ ತಾಯಿಯರಿಗೆ ಶಕ್ತಿ ಕಡಿಮೆಯಾಗುತ್ತದೆ, ಇದರ ಅರ್ಥ ಅವರ ನಾಳಿನ ದಿನದ ಕೆಲಸವನ್ನು ಅಷ್ಟು ಶ್ರದ್ದೆಯಿಂದ ಅಥವಾ ಆಸಕ್ತಿಯಿಂದ ಮಾಡಲು ಸಾಧ್ಯವಿಲ್ಲ.

ಪರಿಹಾರ:

ಮಗುವು ಹಗಲಲ್ಲಿ ಮಲಗಿರುವಾಗ, ತಾಯಿಯು ಈ ಸಮಯದಲ್ಲಿ ತನ್ನ ಸ್ವಲ್ಪ ನಿದ್ರೆಯನ್ನು ಮಾಡುವುದು ರಾತ್ರಿಯ ನಿದ್ರೆಯ ಅಭಾವವನ್ನು ಕಡಿಮೆ ಮಾಡಬಹುದು. ಅಥವಾ ನೀವು ನಿಮ್ಮ ಮಗುವನ್ನು ಸ್ವಲ್ಪ ಸಮಯ ನೋಡಿಕೊಳ್ಳಲು ನಿಮ್ಮ ಪತಿಗೆ, ಸ್ನೇಹಿತರಿಗೆ, ಅಥವಾ ಕುಟುಂಬದಲ್ಲಿರುವವರಿಗೆ ಹೇಳುವುದರಿಂದ ಆ ಸಮಯದಲ್ಲಿ ನಿಮಗೆ ಅವಶ್ಯಕವಿರುವ ಕಿರು ನಿದ್ರೆಯನ್ನು ಮಾಡಬಹುದು.

ಸವಾಲು ೫: ಮನೆಗೆಲಸ

ಮಗುವಿನ ಡೈಪರ್ ಬದಲಿಸುವುದು, ಹಾಲುಣಿಸುವುದು ಮುಂತಾದ ಕೆಲಸಗಳೊಂದಿಗೆ ತಾಯಿಯು ತನ್ನ ಶಕಿಯನ್ನು ಕಡಿಮೆಮಾಡಿಕೊಂಡು ಸುಸ್ತಾಗಿರುತ್ತಾಳೆ. ಇದರ ಮದ್ಯೆ ಅವಳು ರಾತ್ರಿಯ ನಿದ್ರೆಯ ಅಭಾವವನ್ನು ಪೂರ್ಣಗೊಳಿಸಬೇಕು. ಆದರೆ ಅವಳು ಮನೆಗೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ,-ಅದು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆ ಶುಚಿಗೋಳಿಸುವುದು, ಮತ್ತು ಅಡುಗೆ ಮಾಡುವುದು.

ಪರಿಹಾರ:

ನಿಮ್ಮ ಮೇಲೆ ತುಂಬಾ ಕಷ್ಟ ಹೇರಿಕೊಳ್ಳಬೇಡಿ. ನೆನಪಿರಲಿ ಕೆಲವು ಕೆಲಸಗಳನ್ನು ನಿಧಾನವಾಗಿ ಮಾಡಿಕೊಳ್ಳಬಹುದು. ಮನೆಯನ್ನು ಒಂದು ದಿನ ಶುಚಿಗೊಳಿಸದಿದ್ದರೆ ಏನು ಆಗುವುದಿಲ್ಲ, ಇಂತಹ ಕೆಲಸಗಳಿಗೆ ನಿಮ್ಮ ಪತಿಯ ಸಹಾಯ ತೆಗೆದುಕೊಳ್ಳಿ. ನಿಮ್ಮ ತಾಯಿಯನ್ನು ಅಥವಾ ನಿಮಗೆ ಅತ್ತಿರವಾದವರನ್ನು ಅಡುಗೆ ಮಾಡಲು ಕರೆಸಿಕೊಳ್ಳಿ. ನಿಮ್ಮ ಕುಟುಂಬದವರ ಸಹಾಯ ಪಡೆದುಕೊಳ್ಳಿ.

ಆಶಾದಾಯಕವಾಗಿ, ಈ ಹೊಸ ತಾಯಿಯರು ಮಗುವಿನ ಜೊತೆ ತಮ್ಮ ನಿರತ ಜೀವನವನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ. ನೀವು ಕಾಳಜಿವಹಿಸುವ ಅಥವಾ ಹೆಚ್ಚು ಪ್ರೀತಿಸುವ ಇತರರೊಂದಿಗೆ ಇದನ್ನು ಹಂಚಿಕೊಳ್ಳಿ.

Leave a Reply

%d bloggers like this: