nimma-bagge-nimma-patige-maatra-tilidiruva-7-sangatigalu-02

ಮದುವೆ ಅನ್ನು ಸುಲಭವಾಗಿ ಹೇಳುವುದಾದರೆ ಕೇವಲ ಇಬ್ಬರೇ ಕೈಗೊಳ್ಳುವ ಜೀವನ ಪರ್ಯಂತದ ಸಾಹಸಮಯ ಪ್ರವಾಸ. ಅದು ಮನೆಯವರೇ ನೋಡಿ ಮದುವೆ ಮಾಡಿರಲಿ ಅಥವಾ ಅಲ್ಲದೆ ಇರಲಿ, ಮದುವೆ ಆದ ನಂತರ ಇಬ್ಬರು ಪರಸ್ಪರ ಇನ್ನೊಬ್ಬರ ಬಗ್ಗೆ ಯಾರಿಗೂ ತಿಳಿಯದಂತ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ಮದುವೆಯಾದ ಜೋಡಿಯು ಅವರ ಜೀವನದ ಪ್ರತಿದಿನವೂ ಒಟ್ಟಿಗೆ ಕಳೆಯುವರು, ಹಾಗಾಗಿ ನಿತ್ಯವೂ ತಮ್ಮ ಸಂಗಾತಿ ಬಗ್ಗೆ ತಿಳಿದುಕೊಳ್ಳುತ್ತಲೇ ಇರುವರು.

ಇಲ್ಲಿವೆ ನಿಮ್ಮ ಪತಿಯು ಮಾತ್ರ ತಿಳಿದಿರುವಂತ ನಿಮ್ಮ ಬಗೆಗಿನ ೭ ಸಂಗತಿಗಳು :

೧. ನಿಮ್ಮ ನಿಜ ಗುಣ

ನಿಮ್ಮ ಪತಿಯ ಮುಂದೆ ನೀವು ನಟಿಸಿದರೂ, ಎಷ್ಟು ದಿನಗಳವರೆಗೂ ನಟಿಸೀರಿ? ಅಲ್ವ? ಯಾವಾಗಾದರು ನಿಮ್ಮ ಸ್ವಂತ ಸ್ವಭಾವ ಹೊರಗೆ ಬರಲೇ ಬೇಕು. ನಿಮ್ಮ ಪತಿಯು ನಿಮ್ಮನ್ನ ಕೇವಲ ನಿಮ್ಮ ಅಪ್ಪ-ಅಮ್ಮ ಮಾತ್ರ ನೋಡಿರುವ ರೀತಿಯಲ್ಲಿ ನೋಡುವುದುದಕ್ಕೆ ಜಾಸ್ತಿ ಸಮಯ ಬೇಕಿಲ್ಲ. ನೀವು ಎಂದಿನಂತೆ ತಲೆ ಕೆಡಿಸಿಕೊಳ್ಳದ, ನಾಟಕಗಳಿಲ್ಲದ, ಲವಲವಿಕೆಯ ವ್ಯಕ್ತಿಯೆಂದು ಅವರಿಗೆ ತಿಳಿಯುತ್ತದೆ. ನೀವು ನಿಜವಾಗಿ ಹೇಗಿರುತ್ತೀರಿ ಎಂಬುದನ್ನು ನಿಮ್ಮ ಪತಿಯು ರಾತ್ರಿ ೨ ಗಂಟೆಯಲ್ಲೂ ನೋಡಿರುವರು, ಮಧ್ಯಾನ ೨ ಗಂಟೆಯಲ್ಲೂ ನೋಡಿರುವರು.

೨. ನಿಮ್ಮ ಆಕಾಂಕ್ಷೆಗಳು, ನಿಮ್ಮ ಉತ್ಸಾಹಗಳು

ನಿಮ್ಮ ಹೃದಯ ಏನೆಲ್ಲಾ ಬಯಸುವುದೋ, ಅದೆಲ್ಲಾ ಅವರಿಗೆ ತಿಳಿದಿದೆ. ಅದು ಹೇಗೆ ಅಂದರೆ ಹಾಗೆ ಸುಮ್ಮನೆ ಮಾತಾಡುವಾಗ ನೀವೇ ಅವರಿಗೆ ಹೇಳಿರಬಹುದು ಅಥವಾ ಅವರೇ ಅದನ್ನ ಹೇಗೋ ಕಂಡು ಹಿಡಿದಿರಬಹುದು(ಹೌದು ಕಣ್ರೀ, ನಮ್ಮ ಗಂಡಂದಿರು ಒಂದೊಂದ್ ಸಲ ನಾವು ಅಂದುಕೊಂಡಿರುವುದಕ್ಕಿಂತ ಜಾಣರಿರುತ್ತಾರೆ!). ನೀವು ನಿಮ್ಮನ್ನು ಮುಂದಿನ ೫ ವರ್ಷಗಳಲ್ಲಿ ಯಾವ ಸ್ಥಾನದಲ್ಲಿ ನೋಡಲು ಇಷ್ಟ ಪಡುತ್ತಿರಿ ಎಂಬುದು ಅವರಿಗೆ ಗೊತ್ತು ಹಾಗು ನೀವು ಕೆಲಸಕ್ಕೆ ಹೋಗದವರಾಗಿದ್ದರೆ, ನೀವು ಬೇರೇ ಏನು ಮಾಡಬೇಕು ಎಂದಿರುವಿರಿ ಎಂಬುದು ಅವರಿಗೆ ಗೊತ್ತು. ನಿಮ್ಮ ಅಷ್ಟೂ ಆಳವಾಗಿ ಅವರು ತಿಳಿದುಕೊಂಡಿರುತ್ತಾರೆ.

೩. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪರಿ

ನೀವು ಬೇಸರದಲ್ಲಿ ಇದ್ದಾಗಲೂ ಮುಖದ ಮೇಲೆ ನಗು ಬೀರುತ್ತಾ ಎಲ್ಲ ಸರಿಯಾಗಿದೆ ಎಂದರೆ, ಬಹುತೇಕ ಮಂದಿ ನಂಬಿಬಿಡುವರು. ಆದರೆ, ನಿಮ್ಮ ಪತಿ ಮಾತ್ರ ನಂಬುವುದಿಲ್ಲ. ನೀವು ಖುಷಿಯಲ್ಲಿದ್ದಾಗ ಹೇಗೆ ಕುಣಿಯುವಿರಿ ಎಂಬುದು ಅವರಿಗೆ ಗೊತ್ತು ಹಾಗು ನೀವು ಹತಾಶರಾದಾಗ ಏನು ಮಾಡುವಿರಿ ಎಂಬುದು ಕೂಡ ಅವರಿಗೆ ಗೊತ್ತು. ಅವರಿಂದ ನಿಮ್ಮ ಭಾವನೆಗಳನ್ನು ಮುಚ್ಚಿ ಇಡುವುದು ವ್ಯರ್ಥ. ಏಕೆಂದರೆ ಕೇವಲ ನಿಮ್ಮ ಮುಖ ನೋಡಿಯೇ ನಿಮ್ಮ ಮನಸಿನಲ್ಲಿ ಏನು ತುಂಬಿದೆ ಎಂಬುದು ಅವರಿಗೆ ಅರ್ಥ ಆಗುತ್ತದೆ.

೪. ನಿಮ್ಮ ನೋವು ಮಾಸುವ ಅಂಶಗಳು

ನಿಮ್ಮನ್ನು ದುಃಖದಲ್ಲಿ ನೋಡಲು ಅವರಿಗೆ ಒಂದು ಚೂರು ಇಷ್ಟವಾಗುವುದಿಲ್ಲ. ಹೀಗಾಗಿ ನೀವು ಮುಖ ಗಂಟಿಕ್ಕಿ ಕೂತಿರುವುದು ನೋಡಿದೊಡನೆ, ನಿಮ್ಮ ಮುಖ ಅರಳಲು ಏನು ಮಾಡಬೇಕೆಂಬ ಪ್ಲಾನ್ ಅವರ ಬಳಿ ಯಾವಾಗಲು ತಯಾರಾಗಿ ಇರುತ್ತದೆ. ಅವರಿಗೆ ಗೊತ್ತು ನಿಮಗೆ ಯಾವ ಹೋಟೆಲ್ ಇಂದ ಪಾರ್ಸೆಲ್ ತರಬೇಕೆಂದು ಹಾಗು ಯಾವ ಚಾಕಲೇಟ್ ತಂದರೆ ಕೆಲಸ ಆಗುವುದೆಂದು. ನಿಮ್ಮನ್ನು ನೆಮ್ಮದಿಗೊಳಿಸಲು ನಿಮ್ಮೊಂದಿಗೆ ಒಂದು ಕಾರ್ ರೈಡ್ ಹೋಗಬೇಕ ಅಥವಾ ಹಾಗೆಯೇ ಮಾತಾಡುತ್ತಾ ರಾತ್ರಿಯಿಡಿ ಸಮಯ ಕಳೆಯಬೇಕಾ ಎಂಬುದು ಕೂಡ ಅವರಿಗೆ ಗೊತ್ತು.

೫. ಎಲ್ಲಿ ಮೂಗು ತೂರಿಸಬಾರದು ಎಂದು

ಬಹಳಷ್ಟು ಪತಿಯರಿಗೆ ಕಷ್ಟದ ಕೆಲಸವೇ ಇದು! ಆದರೆ ಬಹಳಷ್ಟು ಸಲ ಇದನ್ನು ಮಾಡಿ ತಿದ್ದಿಕೊಳ್ಳುತ್ತಾರೆ (ಕೆಲವೊಮ್ಮೆ ನಿಮ್ಮಿಂದ ಬಯ್ಯಿಸಿಕೊಂಡು ಕೂಡ!) . ನಿಮಗೆ ನಿಮ್ಮದೇ ಆದ ಅಂತರ ಯಾವಾಗ ಕೊಡಬೇಕೆಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ ಹಾಗು ಯಾವ ವಿಷಯಗಳಲ್ಲಿ ತಾವು ಹೆಚ್ಚು ಮೂಗು ತೂರಿಸಬಾರದು ಎಂಬುದು ಕೂಡ ಗೊತ್ತು ಮಾಡಿಕೊಳ್ಳುತ್ತಾರೆ.

೬. ನಿಮ್ಮ ಇತಿ ಮಿತಿಗಳು

ನಿಮ್ಮ ಪತಿಗೆ ನಿಮ್ಮೊಂದಿಗೆ ವಿಷಯಗಳನ್ನು ಎಲ್ಲಿಯವರೆಗೆ ಕೊಂಡೊಯ್ಯಬಹುದು ಎಂಬುದು ತಿಳಿದಿರುತ್ತದೆ. ಅವರಿಗೆ ನಿಮಗೆ ಒತ್ತಡ ಎಲ್ಲಿ ಬೀಳುತ್ತದೆ ಹಾಗು ನಿಮ್ಮ ದುರ್ಬಲ ಅಂಶಗಳು ತಿಳಿದಿರುತ್ತವೆ. ಮೊದಲೇ ಹೇಳಿದ ಹಾಗೆ ಅವರು ನಿಮ್ಮನು ಇಂಚಿಂಚಾಗಿ ಅರಿತಿದ್ದಾರೆ. ಅವರಿಗೆ ನಿಮ್ಮಿಂದ ಏನಾದರು ಬೇಕಿದ್ದರೆ, ಅದನ್ನು ಹೇಗೆ ಕೇಳಬೇಕು ಹಾಗು ಯಾವಾಗ ಕೇಳಬೇಕು ಎಂಬುದು ಗೊತ್ತಿರುತ್ತದೆ.

೭. ನಿಮ್ಮ ಭಯಗಳು

“ನನಗೆ ಜಿರಳೆ ಅಂದರೆ ಭಯ” ಇಂದ ಹಿಡಿದು ನಿಮ್ಮ ಇಡೀ ಅಸ್ತಿತ್ವದ ಬಗೆಗಿನ ಭಯವೇ ಆಗಿರಲಿ, ನಿಮ್ಮ ಪತಿಗೆ ಅವುಗಳೆಲ್ಲವೂ ಗೊತ್ತಿರುತ್ತದೆ. ಅವರಿಗೆ ಕೇವಲ ಅವಷ್ಟೇ ಮಾತ್ರ ಗೊತ್ತು ಅಂದುಕೊಳ್ಳಬೇಡಿ! ನೀವು ಅವುಗಳನ್ನ ಎದುರಿಸಲು ಹೇಗೆ ಸಹಾಯ ಮಾಡಬೇಕೆಂಬುದು ಕೂಡ ಅವರಿಗೆ ತಿಳಿದಿರುತ್ತದೆ. ಅವರು ನಿಮ್ಮ ಆತಂಕಗಳ ಬಗ್ಗೆ ಹೀಯಾಳಿಸುವುದು ಆಗಲಿ ಅಥವಾ ಅಲ್ಲಗಳೆಯುವುದಾಗಲಿ ಮಾಡುವುದಿಲ್ಲ. ಏಕೆಂದರೆ, ಜಗತ್ತಿನ ಅತ್ಯುತ್ತಮ ಪತಿಯೇ ಅವರು !

Leave a Reply

%d bloggers like this: