nimma-raashi-heluttade-neevu-yaava-reetiya-taayi-endu-1

ನಿಮ್ಮ ರಾಶಿಯು ನಿಮ್ಮ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸುತ್ತದೆ. ನೀವು ಯಾವ ಥರದ ತಾಯಿ ಎಂದು ಅಚ್ಚುಕಟ್ಟಾಗಿ ಹೇಳುತ್ತದೆ ನಿಮ್ಮ ರಾಶಿ. ನೀವು ಗದರಿಸುವ ತಾಯಿಯೋ ಅಥವಾ ಎಲ್ಲದಕ್ಕೂ ಮಣಿಯುವ ತಾಯಿಯೋ.

೧೨ ರೀತಿಯ ವಿಭಿನ್ನವಾದರೂ ಶ್ರೇಷ್ಠ ರೀತಿಯ ತಾಯಂದಿರಲ್ಲಿ ನೀವು ಯಾವುದು? ತಿಳಿದುಕೊಳ್ಳಿ

೧. ಮೇಷ (ಮಾರ್ಚ್ ೨೧ – ಏಪ್ರಿಲ್ ೧೯) : ಸ್ವಾವಲಂಬಿ ತಾಯಿ

ನೀವು ಕೇವಲ ಮಕ್ಕಳಿಗೆ ನೀಡಬೇಕಾದ ಸಮಯವಷ್ಟೇ ಅಲ್ಲದೆ ನಿಮಗೆಂದೇ ನೀವು ನೀಡಿಕೊಳ್ಳಬೇಕಾದ “ನಿಮ್ಮ” ಸಮಯದ ಬಗ್ಗೆ ಚೆನ್ನಾಗಿಯೇ ಅರಿವಿರುತ್ತದೆ. ನೀವು ಸದಾಕಾಲ ಮಕ್ಕಳ ಹಿಂದಿಂದೆ ಓಡುತ್ತಾ ಹೋಗ್ವುದಿಲ್ಲ, ಆದರೆ ನಿಮ್ಮ ಕಣ್ಣುಗಳು ಸದಾ ಅವರನ್ನು ಗಮನಿಸುತ್ತಲೇ ಇರುತ್ತವೆ. ನೀವು ಒಮ್ಮೆ ಇಲ್ಲ ಅಂದರೆ ಮುಗಿಯಿತು. ಎಷ್ಟೇ ಬಾರಿ ಅತ್ತರು, ಗೋಗರೆದರು ಮರುಳಾಗುವ ಮಾತೆ ಇಲ್ಲ. ನಿಮ್ಮ ಮನೆಯಲ್ಲಿ, ಪರಿಪಾಲನೆಗೆ ಶ್ರೇಷ್ಠ ಆದ್ಯತೆ. ನಿಮ್ಮ ಮಗುವು ಬೇರೇ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಸಂಭಾವಿತ ಹಾಗು ಸುಸಂಸ್ಕೃತರಾಗಿರುತ್ತಾರೆ ಏಕೆಂದರೆ, ಅವರಿಗೆ ಗೊತ್ತು ಅವರು ಸರಿಯಾಗಿ ನಡೆದುಕೊಂಡಿಲ್ಲ ಎಂದರೆ ಮನೆಯಲ್ಲಿ ನಿಮ್ಮಿಂದ ಸರಿಯಾದದ್ದು ಕಾದಿರುತ್ತದೆ ಎಂದು. ಆದರೆ ನೀವು ಪುರಸ್ಕರಿಸುವ ತಾಯಿ. ನಿಮ್ಮ ಮಕ್ಕಳು ನಿಮ್ಮ ಮಾತು ಪಾಲಿಸಿದರೆ ನೀವು ಅವರಿಗೆ ಉಡುಗೊರೆಗಳು, ಆಟಿಕೆಗಳು ಹೇರಳವಾಗಿ ಕೊಡಿಸುತ್ತೀರಿ.

೨. ವೃಷಭ (ಏಪ್ರಿಲ್ ೨೦ – ಮೇ ೨೦) : ಸ್ಥಿರತೆಯುಳ್ಳ ತಾಯಿ

ನೀವು ನಿತ್ಯಕ್ರಮ ಅಂದರೆ ರೂಟೀನ್ ಪಾಲಿಸುವ ತಾಯಿ. ನಿಮ್ಮ ಕಣ್ಣಲ್ಲಿ ಒಳ್ಳೆಯವರಾಗುವುದಕ್ಕೆ ನಿಮ್ಮ ಮಕ್ಕಳು ಅವರ ನಿತ್ಯಕ್ರಮಗಳನ್ನು ಪಾಲಿಸಲೇಬೇಕು. ಡಿಸ್ಕೌಂಟ್ ಸೇಲ್ ಅಂದರೆ ನಿಮ್ಮ ಕಣ್ಣುಗಳು ಅರಳುತ್ತವೆ, ತಿಂಡಿಗಳು ಹಾಗು ಪಾನೀಯಗಳು ನಿಮ್ಮ ನೆಚ್ಚಿನ ಗೆಳೆಯರು. ನಿಮಗೆ ಯಾರೊಂದಿಗೆ ಬೇಕಾದರೂ ಒಗ್ಗಿಕೊಳ್ಳುವುದು ಗೊತ್ತಿದೆ, ನಿಮಗೆ ಮೋಡಿ ಮಾಡುವ ಗುಣವಿದೆ ಹಾಗು ಈ ಗುಣವು ನಿಮ್ಮಿಂದ ನಿಮ್ಮ ಮಕ್ಕಳು ಕೂಡ ಪಡೆದುಕೊಳ್ಳುವರು. ನೀವು ಎಷ್ಟೇ ಸಾಧನೆ ಮಾಡಿದರು ಸದಾ ವಿನಮ್ರತೆಯಿಂದ ಇರುತ್ತೀರಿ. ಈ ವಿನಮ್ರ ಗುಣವೂ ಕೂಡ ನಿಮ್ಮ ಮಕ್ಕಳಿಗೆ ನಿಮ್ಮಿಂದ ಬಳುವಳಿಯಾಗಿ ಸಿಗುತ್ತದೆ. ನಿಮಗೆ ಸುಂದರವಾಗಿರುವ ವಸ್ತುಗಳೆಂದರೆ ಪಂಚಪ್ರಾಣ, ಅವು ಎಷ್ಟೇ ದುಬಾರಿ ಆದರೂ ನೀವು ಅದನ್ನು ಬಿಡುವುದಿಲ್ಲ. ನಿಮ್ಮ ಮಕ್ಕಳಿಗೆ ಎಲ್ಲದರಲ್ಲೂ ಅತ್ಯುತ್ತಮವಾದುದೇ ದೊರಕುತ್ತದೆ ಆದರೆ ಅವರು ಅದನ್ನು ನಿಮ್ಮ ಮುಂದೆ ಶೈಕ್ಷಣಿಕವಾಗಿ ಪದೇ ಪದೇ ಸಮರ್ಥಿಸಿಕೊಳ್ಳಬೇಕು.

೩. ಮಿಥುನ (ಮೇ ೨೧ – ಜೂನ್ ೨೦) : ಯೌವನದ ತಾಯಿ

ನೀವು ನಿಮ್ಮ ಮಗುವಿಗೆ ತಾಯಿ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬಳು ಸ್ನೇಹಿತೆ ಎನ್ನಬಹುದು. ಅವರ ಗುಟ್ಟುಗಳನ್ನ ಕಾಪಾಡುವ, ಸದಾ ಅವರಿಗೆ ಸಾಂಗತ್ಯ ನೀಡುವ, ನಿಮ್ಮೊಳಗಿರುವ ಸಣ್ಣ ಮಗುವೆ ನೀವು. ನಿಮಗೆ ಬಣ್ಣಗಳು, ಬಟ್ಟೆಗಳು, ಯಂತ್ರಕಗಳ ಬಗ್ಗೆ ಹುಚ್ಚು. ನೀವು ಎಲ್ಲರಿಗಿಂತಲೂ ಬಿಂದಾಸ್ ತಾಯಿ ಹಾಗು ಇದು ನಿಮ್ಮ ಮಗುವಿನ ಸ್ನೇಹಿತರಿಗೂ ಗೊತ್ತು. ಅದಕ್ಕೆ ಅವರು ಶಾಲೆ ಮುಗಿಸಿದ ನಂತರ ನಿಮ್ಮ ಮನೆಗೆ ಬಂದು ಹರಟೆ ಹೊಡೆದು ಹೋಗುವರು. ಸೆಲೆಬ್ರಿಟಿ ಗಾಸಿಪ್ ಗಳ ಬಗ್ಗೆ ನೀವು ಯಾವಾಗಲು ತಿಳಿದುಕೊಂಡಿರುತ್ತೀರ ಹಾಗು ನಿಮ್ಮ ಮಗುವಿಗೆ ನಿಮ್ಮ ಬಟ್ಟೆಗೆ ಮ್ಯಾಚ್ ಆಗುವಂತ ಬಟ್ಟೆ ಹಾಕಿಸುವುದು ನಿಮಗೆ ಇಷ್ಟ. “ನಿಮ್ಮ ಮಗುನಾ ಹಿಡಿಯೋಕೆ ಆಗೋಲ್ಲ ಬಿಡಿ” ಎಂದು ಜನ ಹೇಳಬಹುದು, ಆದರೆ ಅದರ ಬಗ್ಗೆ ನಿಮ್ಮ ತಕರಾರಿಲ್ಲ. ಜನರ ಮುಂದೆ ನೀವು ಸಮರ್ಥನೆ ಮಾಡಿಕೊಳ್ಳುವುದು ಏನಿದೆ ಅಲ್ಲವಾ?

೪. ಕರ್ಕಾಟಕ (ಜೂನ್ ೨೧ – ಜುಲೈ ೨೨) : ಭಾವನಾತ್ಮಕ ತಾಯಿ

ತಾಯ್ತನ ಅನ್ನೋದು ನಿಮಗೆ ಹೇಳಿ ಮಾಡಿಸಿರುವಂತದ್ದು. ನಿಮಗೆ ಮಕ್ಕಳೆಂದರೆ ತುಂಬಾ ಪ್ರೀತಿ ಹಾಗು ಸಣ್ಣ ವಯಸ್ಸಿನಿಂದಲೇ ಮಕ್ಕಳೇ ಇರಲಿ ಅಥವಾ ಸಾಕು ಪ್ರಾಣಿಗಳೇ ಇರಲಿ, ಅವುಗಳನ್ನ ಬಿಟ್ಟು ಇರುತ್ತಿರಲಿಲ್ಲ. ನೀವು ಒಂದು ಸರ್ವೋತ್ಕೃಷ್ಟ ತಾಯಿ ಹಾಗು ನಿಮ್ಮ ಮಕ್ಕಳ ಬಗ್ಗೆ ನಿಮಗೆ ಇಂಚಿಂಚು ಕೂಡ ಗೊತ್ತು. ಅವರಿಗೆ ತಿನಿಸುಗಳು ಮಾಡಿಕೊಡುವುದು, ಅವರಿಗೆ ಉಡುಗೊರೆಗಳನ್ನು ಕೊಡಿಸುವುದು ಹಾಗು ಸದಾಕಾಲ ಅವರನ್ನು ಅರಾಧಿಸುವುದೇ ನಿಮ್ಮ ವಾರಗಳನ್ನು ತುಂಬಿಕೊಂಡಿರುತ್ತದೆ. ನೀವು ತುಂಬಾನೇ ಸೆಂಟಿಮೆಂಟಲ್ ವ್ಯಕ್ತಿ ಆಗಿರುತ್ತೀರಿ ಹಾಗು ಅದನ್ನು ಒಪ್ಪಿಕೊಳ್ಳಲು ನಿಮಗೆ ಯಾವುದೇ ಸಂಕೋಚ ಇರುವುದಿಲ್ಲ. ನಿಮ್ಮ ಮಗು ತಪ್ಪು ಮಾಡಿದಾಗ ನೀವು ಶಿಕ್ಷಿಸಲು ತಾಯರಿರುತ್ತೀರ ಆದರೆ ಅದನ್ನು ತುಂಬಾ ದೂರದವರೆಗೆ ತಗೆದುಕೊಂಡು ಹೋಗುವುದಿಲ್ಲ. ಅವರಿಗೆ ಶಿಕ್ಷೆ ನೀಡುವುದಕ್ಕೆ ನಿಮ್ಮ ಅಪಾರ ಅಪಾರ ಪ್ರೀತಿಯು ಅಡ್ಡ ಬಂದು ಬಿಡುತ್ತದೆ!

೫. ಸಿಂಹ (ಜುಲೈ ೨೩ – ಆಗಸ್ಟ್ ೨೨) : ವಿಶ್ವಾಸವುಳ್ಳ ತಾಯಿ

ನೀವು ಬಾಸ್ ಇದ್ದ ಹಾಗೆ! ನಿಮ್ಮ ಒಂದೇ ಒಂದು ಕಣ್ಣ ಸನ್ನೆ ಸಾಕು ನಿಮ್ಮ ಮಕ್ಕಳು ಯಾವುದರಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಯಲು. ಅವರ ತರಲೆಗಳಿಗೆ ನಿಮ್ಮ ಮುಂದೆ ಅವಕಾಶವಿಲ್ಲ. ನೀವು ತುಂಬಾನೇ ಉತ್ಸಾಹಿ ಹಾಗು ಮಮತಾಮಯಿ. ನಿಮಗೆ ಗೊತ್ತು ಕೇವಲ ಶೈಕ್ಷಣಿಕ ಅಷ್ಟೇ ಅಲ್ಲದೆ ಇತರೆ ಚಟುವಟಿಕೆಗಳು ತುಂಬಾನೇ ಮುಖ್ಯ ಎಂದು. ಹಾಡುವುದಿರಲಿ, ಕುಣಿಯುವುದಿರಲಿ, ಕ್ರೀಡೆಗಳು ಇರಲಿ, ಇವೆಲ್ಲವುದರಲ್ಲೂ ನಿಮ್ಮ ಮಗು ಕೈಯಾಡಿಸಿರುತ್ತದೆ. ಅದಕ್ಕೆ ಕಾರಣ ನಿಮ್ಮ ಮಗುವಿಗೆ ನೀವು ನೀಡುವ ಪ್ರೋತ್ಸಾಹ. ನೀವು ಕೂಡ ಯಾವುದಾದರು ಹೊಸ ಕಲೆ ಕಲಿಯವುದೇ ಇರಲಿ ಅಥವಾ ಹೊಸ ಪ್ರಯತ್ನಗಳು ಮಾಡುವುದರಲ್ಲಾಗಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ನೀವು ನಿಮ್ಮ ಮಕ್ಕಳ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದು, ಅವರ ಮೊದಲ ದಿನದಿಂದ ಈಗಿನವರೆಗಿನ ಎಲ್ಲಾ ಸಾಧನೆಗಳನ್ನು,ಅಂದರೆ ಅವರು ಗೆದ್ದ ಮೊದಲ ಟ್ರೋಫಿ ಇಂದ ಹಿಡಿದು ಅವರು ಡ್ರೈವಿಂಗ್ ಟೆಸ್ಟ್ ಅಲ್ಲಿ ಉತ್ತಿರ್ಣಗೊಂಡಿರುವವರೆಗೂ ನೀವು ಎಲ್ಲವನ್ನೂ ದಾಖಲಿಸಿದ್ದೀರಿ.

೬. ಕನ್ಯಾರಾಶಿ (ಆಗಸ್ಟ್ ೨೩ – ಸೆಪ್ಟೆಂಬರ್ ೨೩) : ಸರ್ವ ನಿಯೋಜಿತ ತಾಯಿ

ನೀವು ಒಂಥರ ಅಮ್ಮಂದಿರ ವಿಕಿಪೀಡಿಯ ಇದ್ದ ಹಾಗೆ. ಎಲ್ಲದರ ಬಗ್ಗೆ ನಿಮಗೆ ಎಲ್ಲವೂ ತಿಳಿದಿರುತ್ತದೆ. ನೀವು ಎಂದಿಗೂ ಒಂದು ಪ್ಲಾನ್ ತಯಾರು ಮಾಡಿಕೊಂಡು ಸರ್ವಸಜ್ಜಿತರಾಗಿ ಇರುವಂತ ತಾಯಿ. ನಿಮ್ಮ ಗರ್ಭಧಾರಣೆಯ ಒಂದು ಕ್ಷಣವಾಗಲಿ ಅಥವಾ ನಿಮ್ಮ ತಾಯ್ತನದ ಒಂದು ಕ್ಷಣವಾಗಲಿ ನೀವು ಹಾಳಾಗಲು ಬಿಡುವುದಿಲ್ಲ. ಸುತ್ತಮುತ್ತಲಿನ ಎಷ್ಟು ಒಳ್ಳೊಳ್ಳೆ ಶಾಲೆಗಳಿವೆಯೋ, ಅಷ್ಟು ಶಾಲೆಗಳ ಹೆಸರು ನಿಮ್ಮ ಬಾಯಿ ತುದಿಯಲ್ಲಿರುತ್ತದೆ ಹಾಗು ಗರ್ಭಧಾರಣೆಯಲ್ಲಿ ಬರುವ ಅಷ್ಟು ಹಂತಗಳು ನಿಮ್ಮ ಅಂಗೈಯಲ್ಲೇ ಬರೆದುಕೊಂಡಿರುವಂತೆ ಹೇಳುತ್ತೀರ. ನಿಮ್ಮ ಈ ಮುಂಚಿತ ಯೋಜನೆಯ ಬುದ್ಧಿಯನ್ನು ನಿಮ್ಮ ಮಕ್ಕಳು ಕೂಡ ಕಲಿಯುತ್ತಾರೆ. ನಿಮಗೆ ಇನ್ನೊಂದು ಹುಚ್ಚಿದೆ! ಅದು ಸ್ವಚ್ಛತೆ. ಮನೆಯ ಇಂಚಿಂಚು ಕೂಡ ಧೂಳಿನಿಂದ ಮುಕ್ತವಾಗಿದೆ ಎಂದಾಗ ಮಾತ್ರ ನಿಮಗೆ ನಿದ್ದೆ ಮಾಡಲು ಸಾಧ್ಯ.

೭. ತುಲಾ (ಸೆಪ್ಟೆಂಬರ್ ೨೩ – ಅಕ್ಟೋಬರ್ ೨೨) : ಸಂಭಾವಿತ ತಾಯಿ

ನಿಮ್ಮ ಮಕ್ಕಳು ಓದುವುದು ಹಾಗು ಆಟ ಆಡುವುದು ಸಮತೋಲಿತವಾಗಿ ಮಾಡುವಂತೆ ಹೇಗೆ ಮಾಡುವುದು ಎಂಬುದು ನಿಮಗೆ ಗೊತ್ತು. ನೀವು ಸ್ವಲ್ಪ ಕಟ್ಟುನಿಟ್ಟಿನ ತಾಯಿಯೇ ಆಗಿರುತ್ತೀರಿ ಆದರೆ ನಿಮ್ಮ ಕ್ರಮಗಳಿಗೆ ಸರಿಯಾದ ಕಾರಣ ಕೊಟ್ಟು ಸಮರ್ಥಿಸಿಕೊಳ್ಳುತ್ತೀರ. ಇದರಿಂದ ಶಿಕ್ಷೆಯ ಹಿಂದಿನ ತಪ್ಪು ನಿಮ್ಮ ಮಕ್ಕಳಿಗೆ ಅರಿವಾಗುವಂತೆ ಮಾಡುತ್ತೀರಿ. ನೀವು ನಿಮ್ಮ ಮನೆಯನ್ನು ತುಂಬಾ ಚೆನ್ನಾಗಿ ಸಿನ್ಗರಿಸುತ್ತೀರಿ ಹಾಗು ನಿಮ್ಮ ಮಕ್ಕಳ ಎಲ್ಲಾ ಬೇಕುಗಳನ್ನು ಪೂರೈಸುತ್ತೀರಿ. ನೀವು ಒಂದು ತುಂಬಾ ಕಲಾತ್ಮಕ ಹಾಗು ಉತ್ಕೃಷ್ಟ ಅಮ್ಮನಾಗಿದ್ದು, ನಿಮ್ಮ ಮಕ್ಕಳು ನಿಮ್ಮಿಂದ ಈ ಗುಣಗಳನ್ನು ಪಡೆದುಕೊಳ್ಳುವರು.

೮. ವೃಶ್ಚಿಕ (ಅಕ್ಟೋಬರ್ ೨೩ – ನವೆಂಬರ್ ೨೧) : ಸದೃಢ ತಾಯಿ

ನಿಮ್ಮ ಇನ್ನೊಂದು ಹೆಸರೇ ಶಕ್ತಿ. ನೀವು ಗೌರವವನ್ನು ನೀಡುವಂತೆ ಆಗ್ರಹಿಸುತ್ತೀರ ಹಾಗು ನಿಮ್ಮ ಮಕ್ಕಳು ಅದನ್ನು ಒಪ್ಪೇ ಒಪ್ಪುವರು. ನೀವು ಯಾವುದಾದರು ವಿಷಯದ ಬಗ್ಗೆ ಒಂದು ನಿರ್ಧಾರ ತಗೆದುಕೊಂಡರೆ, ಭೂಮಿ ಬಾಯಿ ತೆರೆದರು ರಾಜಿ ಆಗುವ ಮಾತೆ ಇಲ್ಲ. ನಿಮಗೆ ಎಲ್ಲವು ನೀವು ಅಪೇಕ್ಷಿಸುವ ರೀತಿಯಲ್ಲಿ ನಡೆಯಬೇಕು ಹಾಗು ಅದಕ್ಕೆ ಪರ್ಯಾಯವಾಗಿ ಯಾವುದೇ ರೀತಿ ಒಪ್ಪುವುದಿಲ್ಲ. ನಿಮಗೆ ನಿಮ್ಮದೇ ಆದ ಸಿದ್ದಾಂತಗಳು ಹಾಗು ಗುರಿಗಳು ಇವೆ ಹಾಗು ನೀವು ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡುತ್ತೀರಿ. ಪ್ರಭಾವ ಬೀರುವಂತ ನಿಮ್ಮ ವ್ಯಕ್ತಿತ್ವವು, ನಿಮ್ಮ ಮಕಳನ್ನು ಮುಂದೆ ಚಾಣಾಕ್ಷ ಹಾಗು ವಿನಯವಂತರಾಗಿ ಮಾಡುತ್ತದೆ.

೯. ಧನುರ್ರಾಶಿ (ನವೆಂಬರ್ ೨೨ – ಡಿಸೆಂಬರ್ ೨೧) : ಸಾಹಸಿ ತಾಯಿ

ನೀವು ಸದಾ ಯಾವುದರಲ್ಲಾದರು ತೊಡಗಿಕೊಂಡೆ ಇರುವಿರಿ. ಪ್ರಯಾಣ ಮಾಡುವುದು ಹಾಗು ಹೊಸತನ್ನು ಶೋಧಿಸುವುದು ನೀವು ನಿಮ್ಮ ಸಮಯವನ್ನು ಕಳೆಯುತ್ತೀರಿ. ನೀವು ಕುತೂಹಲಕಾರಿ ವ್ಯಕ್ತಿ ಹಾಗು ನಿಮ್ಮ ಬಳಿ ಹೇಳಲು ಅನೇಕಾನೇಕ ಅನುಭವಗಳು, ಕಥೆಗಳು ಇರುತ್ತವೆ. ನೀವು ನಿಮ್ಮ ಮಕ್ಕಳನ್ನು ಹಲವು ರೀತಿಯ ಜನರೊಂದಿಗೆ ಬೆಳೆಯಲು ಬಿಡುತ್ತೀರ ಹಾಗು ಅದರಲ್ಲಿ ಸಫಲರಾಗುತ್ತೀರ. ನಿಮ್ಮ ಮಕ್ಕಳು ನಿಮ್ಮನ್ನು ನಿಮ್ಮ ದೃಢ ಮನಸ್ಥಿತಿಗೆ, ಬಿಟ್ಟುಕೊಡದ ಗುಣಕ್ಕೆ ಮೆಚ್ಚುತ್ತಾರೆ ಹಾಗು ಅವರು ಕೂಡ ಅಂತಹ ವ್ಯಕ್ತಿಯಾಗಿ ಬೆಳೆಯುತ್ತಾರೆ. ನೀವು ಜೊತೆಗಿರುವಾಗ, ನಿಮ್ಮ ಮಕ್ಕಳಿಗೆ ಬೋರ್ ಆಗುವ ಮಾತೆ ಇಲ್ಲ.

೧೦ . ಮಕರ (ಡಿಸೆಂಬರ್ ೨೨ – ಜನವರಿ ೧೯) : ಮಹತ್ವಾಕಾಂಕ್ಷಿ ತಾಯಿ

ನೀವು ಮನೆಯಲ್ಲೇ ಕೂತು ಕಾಲ ಕಳೆಯುವಂತ ತಾಯಿ ಅಲ್ಲ. ನೀವು ಸಮಾಜದಲ್ಲಿ ನಿಮ್ಮದೇ ಆದ ಹೆಸರು ಮಾಡಿಕೊಳ್ಳಲು ಹಾಗು ನಿಮ್ಮ ಸಂಸಾರಕ್ಕೆ ನೆರವಾಗಲು ಹೊರಾಡುತ್ತೀರ. ನಿಮ್ಮ ಕರ್ತವ್ಯ ನಿಷ್ಠೆ ಅಸಾಧ್ಯವಾದದು ಹಾಗು ನೀವು ಕಾಯಕವೇ ಕೈಲಾಸ ಎಂದು ನಂಬಿರುವವರು. ನಿಮ್ಮ ಮಕ್ಕಳು ಕೂಡ ನಿಖರ ಗುರಿ ಹೊಂದಿರುವ ಹಾಗು ಅದನ್ನು ಪಡೆಯಲು ಶಿಸ್ತು ಪಾಲಿಸುವ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ನೀವು ಒಳ್ಳೆ ತಂತ್ರಗಳ ಪ್ರವೀಣೆ ಆಗಿದ್ದು, ನಿಮ್ಮ ಮಕ್ಕಳು ಹೆಚ್ಚು ಶ್ರಮ ವಹಿಸಬೇಕು ಎಂದು ಅನಿಸಿದರೆ, ಅವರಿಂದ ಕೆಲಸ ತೆಗೆಯುವುದು ನಿಮಗೆ ಗೊತ್ತು. ಬೇರೇ ತಾಯಂದಿರು ಕೂಡ ನಿಮ್ಮನ್ನು ಎದುರು ನೋಡುವರು. ನೀವು ಒಂದು ಅತ್ಯುತ್ತಮ ಗುರು ಆಗಿದ್ದು, ಅತ್ಯುತ್ತಮ ಸಲಹೆಗಾರರಾಗಿದ್ದು, ಸದಾಕಾಲ ನಿಮ್ಮ ಮಕ್ಕಳಿನ ಬೆಂಬಲಕ್ಕೆ ನಿಂತಿರುತ್ತೀರಿ.

೧೧. ಕುಂಭ (ಜನವರಿ ೨೦ – ಫೆಬ್ರವರಿ ೧೮) : ನವಯುಗದ ತಾಯಿ

ನೀವು ಕಾಲಕ್ಕೆ ಹೊಂದುವಂತೆ ಬದಲಾಗುವ ತಾಯಿ. ಇತ್ತೀಚಿಗೆ ಬಂದಿರುವ ಹೊಸ ಪುಸ್ತಕಗಳು, ಸಿನಿಮಾಗಳು, ಹಾಡುಗಳು ಎಲ್ಲದರ ಬಗ್ಗೆ ನಿಮಗೆ ತಿಳಿದಿರುತ್ತದೆ. ನೀವು ಭವಿಷ್ಯದ ಬಗ್ಗೆ ಯೋಚಿಸುತ್ತೀರಿ ಹಾಗು ಅದಕ್ಕೆ ಆಗಲೇ ಒಂದು ಪ್ಲಾನ್ ಕೂಡ ಸಿದ್ದಪಡಿಸಿಕೊಂಡಿದ್ದೀರಿ. ನೀವು ಇನ್ನು ೧೦-೨೦ ವರ್ಷಗಳಲ್ಲಿ ಯಾವ ಸ್ಥಾನದಲ್ಲಿ ಇರುವಿರೆಂದು ನಿಮಗೆ ಆಗಲೇ ಗೋಚರವಾಗಿದೆ. ನೀವು ಚತುರೆ ಹಾಗು ಟ್ರೆಂಡ್ ನ ಪಾಲಿಸುವ ಬದಲು ನೀವೇ ಟ್ರೆಂಡ್ ಗಳನ್ನ ಹುಟ್ಟು ಹಾಕುತ್ತಿರಿ! ಶಾಲೆಯ ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ನಿಮಗೆ ಅಷ್ಟು ಒಲವಿಲ್ಲ. ನಿಮ್ಮ ಪ್ರಕಾರ ಜಗತ್ತು ಕಲಿಸುವ ಜೀವನದ ಪಾಠಗಳು ಹೆಚ್ಚು ಮುಖ್ಯ. ನೀವು ನಿಮ್ಮ ಮಕ್ಕಳಿಗೆ ಹೇಳಲು ನಿಮ್ಮ ಬಳಿ ಹಲವಾರು ಅನುಭವಗಳು, ಘಟನೆಗಳು ಹಾಗು ನಿಮ್ಮ ಬಂಡಾಯದ ದಿನಗಳ ನೆನಪುಗಳು ಇರುತ್ತವೆ. ನಿಮ್ಮ ಮಕ್ಕಳು ನಿಮ್ಮೊಂದಿಗೆ ತುಂಬಾ ಮುಕ್ತವಾಗಿ ಇರುತ್ತಾರೆ ಹಾಗು ನಿಮ್ಮೊಂದಿಗೆ ಪ್ರತಿಯೊಂದು ವಿಷಯವನ್ನು ಸಂಕೋಚ ಪಟ್ಟುಕೊಳ್ಳದೆ ಹಂಚಿಕೊಳ್ಳುತ್ತಾರೆ. ತಾಯಿಯಾಗಿ ನಿಮಗಿದು ಆನೆಬಲ ತಂದು ಕೊಡುತ್ತದೆ. ನಿಮ್ಮ ಮಕ್ಕಳಿಗೆ ನೀವು ಸ್ವಾಂತತ್ರ್ಯ ನೀಡುತ್ತಿರಿ ಹಾಗು ಇದರಿಂದ ಅವರು ನಿಮ್ಮನ್ನು ಮತ್ತಷ್ಟು ಇಷ್ಟ ಪಡುವಂತೆ ಮಾಡುತ್ತದೆ.

೧೨. ಮೀನ (ಫೆಬ್ರವರಿ ೧೯ – ಮಾರ್ಚ್ ೨೦) : ಸದಾ ಪೋಷಿಸುವ ತಾಯಿ

ನಿಮ್ಮ ಹೃದಯವು ಬಂಗಾರ ಹಾಗು ನಿಮ್ಮ ಸ್ಪರ್ಶವೇ ಒಂದು ಜಾದು. ನಿಮ್ಮ ಮಗುವಿನ ಜೀವನದಲ್ಲಿ ಏನಾದರು ತೊಂದರೆ ಆದರೆ, ಅದನ್ನು ನೀವು ಎಷ್ಟು ಮನಸ್ಸಿಗೆ ತಗೆದುಕೊಳ್ಳುವಿರಿ ಎಂದರೆ, ನೀವೇ ಆ ತೊಂದರೆಯನ್ನು ಬಗೆಹರಿಸಲು ಮುಂದಾಗುವಿರಿ. ನೀವು ನಿಮ್ಮ ಮಕ್ಕಳಿಗಾಗಿ ಉಸಿರಾಡುತ್ತೀರ, ನಿಮ್ಮ ಮಕ್ಕಳಿಗಾಗಿ ಬದುಕುತ್ತೀರ. ನೀವು ನಿಮ್ಮ ಮಕ್ಕಳು ಹೇಗೆ ಇದ್ದರೂ ಸಹಿಸಿಕೊಳ್ಳುವಿರಿ ಹಾಗು ನಿಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರುವುದಿಲ್ಲ. ನೀವು ಅವರಲ್ಲಿರುವ ಪ್ರತಿಭೆಗಳಿಗೆ ನೀರೆರೆದು ಬೆಳೆಸುತ್ತೀರ ಹಾಗು ಕೆಟ್ಟ ಗುಣಗಳನ್ನು ಕೈಬಿಡುವಂತೆ ಮಾಡುತ್ತೀರ. ನಿಮ್ಮ ಮಕ್ಕಳು ನಿಮ್ಮೊಂದಿಗೆ ಒಂದು ಅವಿನಾಭಾವ ಸಂಬಂಧ ಹೊಂದಿರುತ್ತಾರೆ.         

Leave a Reply

%d bloggers like this: