paalisabekaada-12-niyamagalu

ಪ್ರಸವ ನಂತರದ ಹಂತವು ಸಾಕಷ್ಟು ಸವಾಲುಗಳನ್ನು ಮತ್ತು ಹೊಸ ರೀತಿಯ ಸಮಸ್ಯೆಗಳನ್ನು ನಿಭಾಯಿಸಲು ಬರುತ್ತದೆ. ಮಗುವಿನ ರಕ್ಷಣೆ ಮಾಡುವುದು ಇದರಲ್ಲಿ ಬರುವ ಒಂದು ದೊಡ್ಡ ಕೆಲಸ. ಅದರಲ್ಲೂ ಪ್ರಮುಖ ಕೆಲಸವೆಂದರೆ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವುದು/ ನಿಮ್ಮ ಬಗ್ಗೆ ಜಾಗೃತವಾಗಿರುವುದು. ಕೂದಲು ಉದುರುವಿಕೆ, ಸ್ಟ್ರೆಚ್ ಮಾರ್ಕ್ಸ್(ಕಲೆಗಳು), ಮತ್ತು ತ್ವಚೆಯ ಸಮಸ್ಯೆಗಳು ಸಾಕು ಯಾರನ್ನಾದರೂ ಒತ್ತಡಕ್ಕೆ ಸಿಲುಕಿಸಲು. ಆದರೆ ಚಿಂತಿಸಬೇಡಿ, ಗರ್ಭಾವಸ್ಥೆಯ ನಂತರದ ಹಂತದ ನಿಮ್ಮ  ಸೌಂದರ್ಯದ ಸಮಸ್ಯೆಯನ್ನು ನಿವಾರಿಸಲು ಈ ಲೇಖನ ನಿಮಗೆ ಮಾರ್ಗದರ್ಶಿಯಾಗಿದೆ.

೧. ಚೆಲುವಿನ ನಿದಿರೆ

ನಿಮ್ಮ ಹಗಲುಗಳು ಮತ್ತು ರಾತ್ರಿಯು ಎಷ್ಟು ಆಯಾಸದಿಂದ ಕೂಡಿದೆ ಎಂದು ನಮಗೆ ತಿಳಿದಿದೆ. ಬಹುಪಾಲು ಮಗುವಿನ ವೇಳಾಪಟ್ಟಿ, ನಿಮ್ಮ ಸಾಮಾನ್ಯ ವೇಳಾಪಟ್ಟಿಯೊಂದಿಗೆ ಹೊಂದಿಕೆಯಾಗುವುದಿಲ್ಲ ಮತ್ತು ನಿಮ್ಮ ಪುಟ್ಟ ಕಂದನನ್ನು ಆಡಿಸಲು ಅಥವಾ ಅವನು/ಅವಳು ಎಚ್ಚರಗೊಂಡಾಗ ಜೋಪಾನ ಮಾಡಲು/ನೋಡಿಕೊಳ್ಳಲು ನೀವು ಎಚ್ಚರವಾಗಿ ಕುಳಿತುಕೊಳ್ಳಬೇಕು. ಇದು ಹತಾಶೆಯ ಮತ್ತು ಆಯಾಸದಿಂದ ಕೂಡಿದೆ. ನಿಮ್ಮ ನಿದ್ರೆಯ ಸಮಯವನ್ನು ಕಡಿತಗೊಳಿಸುವುದರಿಂದ ಏನು ಸಹಾಯವಾಗುವುದಿಲ್ಲ. ನಿಮ್ಮ ಕುಟುಂಬದವರ ಅಥವಾ ನಿಮ್ಮ ಪತಿಯ ಸಹಾಯ ಪಡೆದುಕೊಂಡು ದಿನಕ್ಕೆ ಕನಿಷ್ಟ ೬-೭ ತಾಸು/ಗಂಟೆ ನಿದ್ರೆ ಮಾಡಿ. ಇದರಿಂದ ಒತ್ತಡ ಕಡಿಮೆಯಾಗಿ ನಿಮ್ಮ ತ್ವಚೆಯ ಕಾಂತಿಯನ್ನು ಮರಳಿ ಪಡೆಯಬಹುದು, ಮತ್ತು ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

೨. ಪವಾಡ ಪಾನೀಯ(ನೀರು)

ಭೂಮಿಯ ಮೇಲಿನ ಅತ್ಯುತ್ತಮ ಪಾನೀಯವು ನಿಸ್ಸಂದೇಹವಾಗಿ ನೀರು ಆಗಿದೆ. ಇದು ಚಮತ್ಕಾರಿ ದ್ರವ ಮತ್ತು ಮಾಂತ್ರಿಕ ಶಕ್ತಿ ಹೊಂದಿದೆ. ಇದು ನಿಮ್ಮ ತ್ವಚೆಯನ್ನು ತೆವಾಂಶದಿಂದ ಇರಿಸಿ ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ, ನಿಮ್ಮ ತ್ವಚೆ ಒಣಗುವುದರಿಂದ ತಪ್ಪಿಸಿ, ಹೊಳಪನ್ನು ಹೆಚ್ಚಿಸುತ್ತದೆ. ಮುಖದಲ್ಲಿ ಬರುವ ಗೆರೆಗಳನ್ನು ನಿವಾರಿಸುತ್ತದೆ. ಮತ್ತು ಒತ್ತಡವನ್ನು ಕಡಿಮೆಮಾಡುತ್ತದೆ.

೩. ನೀವು ತಿನ್ನುವುದನ್ನು ಪರಿಶೀಲಿಸಿ

ಮಗುವಿಗೆ ಜನ್ಮ ನೀಡಿದ ನಂತರ, ನಿಮ್ಮ ದೇಹವು ಕೆಲವು ಅವಧಿಯವರೆಗೆ ಪುನರುತ್ಪಾದನೆ ಮತ್ತು ಹೊಸರೂಪದ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಇದಕ್ಕಾಗಿ ನೀವು ಹಿಚ್ಚು ಮತ್ತು ಒಳ್ಳೆ ಪೌಷ್ಟಿಕಾಂಶವುಳ್ಳ ಆಹಾರವನ್ನು ತೆಗೆದುಕೊಳ್ಳಬೇಕು. ಅದರಲ್ಲೂ ಪ್ರಮುಖವಾಗಿ ಎದೆಹಾಲುಣಿಸಲು, ನಿಮಗೆ ಬಹಳ ಹೆಚ್ಚು ವಿಟಮಿನ್ಸ್, ಖನಿಜಾಂಶಗಳು, ಫೈಬರ್, ಕಾರ್ಬೋಹೈಡ್ರೇಟ್ಸ್, ಮತ್ತು ದ್ರವಗಳ ಅವಶ್ಯಕವಿದೆ. ನಿಮಗೆ ತಿನ್ನಬೇಕು ಎನಿಸಿದಾಗಲೆಲ್ಲಾ ಆಹಾರ ತೆಗೆದುಕೊಳ್ಳಿ, ಮತ್ತು ಕುರುಕಲು ತಿಂಡಿ, ಮತ್ತು ಹೊರಗಿನ ಆಹಾರ ಪದಾರ್ಥಗಳಿಂದ ದೂರವಿರಿ, ಅಂಗಡಿಗಳಲ್ಲಿ ಸಿಗುವ ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ.

೪. ನೈರ್ಮಲ್ಯವನ್ನು ಬರಮಾಡಿಕೊಳ್ಳಿ

ನಿಮ್ಮ ವೈಯಕ್ತಿಕ ನೈರ್ಮಲ್ಯ ಮತ್ತು ನಿಮ್ಮ ಸುತ್ತಮುತ್ತಲಿನ ನೈರ್ಮಲ್ಯವನ್ನು ನೋಡಿಕೊಂಡು ಯಾವಾಗಲೂ ಶುಚಿತ್ವ ಕಾಪಾಡಿಕೊಂಡು ಇರುವುದು ಒಳ್ಳೆಯದು. ಅಶುಚಿಯಿಂದ ಸೋಂಕು ತಗುಲಬಹುದು, ಮತ್ತು ನಿಮ್ಮ ಸುತ್ತಮುತ್ತಲಿನ ವಾತಾವರಣ ಶುಚಿಯಾಗಿರುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಇದರಿಂದ ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ಒತ್ತಡ ಕಡಿಮೆಯಾದರೆ ತ್ವಚೆಯ ಹೊಳಪು ಹೆಚ್ಚುತ್ತದೆ ಮತ್ತು ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

೫. ಮೂಲ ಚರ್ಮ ರಕ್ಷಣಾ-ಪದ್ಧತಿ

ನಿಮ್ಮ ಚರ್ಮದ ಆರೈಕೆಯಲ್ಲಿ ಬರುವ ಮೂಲ ಹಂತಗಳ ಬಗ್ಗೆ ನಿರ್ದಿಷ್ಟವಾಗಿ ತಿಳಿಯಿರಿ, ಮತ್ತು ಪಾಲಿಸಿ. ಸೌಂದರ್ಯ ವರ್ಧಕಗಳ ಬಳಸುವಿಕೆಯನ್ನು ಕಡಿಮೆಮಾಡಿ, ಮತ್ತು ಯಾವುದೇ ಕಾರಣಕ್ಕೂ ಅದನ್ನು ಬಳಸಿರುವಾಗ ಮಲಗಬೇಡಿ. ನಿಮ್ಮ ತ್ವಚೆಯನ್ನು ತೆವಾಂಶದಿಂದ ಇರಿಸಿ, ಶುಚಿಯಾಗಿರಿಸಿ, ಉಗುರು ಬೆಚ್ಚಗಿನ ನೀರಲ್ಲಿ ತ್ವಚೆಯನ್ನು ತೊಳೆಯುತ್ತಿರಿ, ಇದರಿಂದ ತ್ವಚೆಯು ಆರೋಗ್ಯವಾಗಿ ಕಾಂತಿಯನ್ನು ಪಡೆಯುತ್ತದೆ.

೬. ಕೂದಲು ಉದುರುವಿಕೆಗೆ ವಿದಾಯ ಹೇಳಿ

ಈ ಹಂತದಲ್ಲಿ ಕೂದಲು ಉದುರುವುದು ಸಾಮಾನ್ಯ. ಇದರಿಂದ ಒತ್ತಡಕ್ಕೆ ಒಳಗಾಗದಿರಿ, ಏಕೆಂದರೆ ಕೂದಲು ಉದುರಲು ಪ್ರಮುಖ ಕಾರಣ ಒತ್ತಡದ ಜೀವನ ಶೈಲಿ, ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಮೃದುವಾದ ಶಾಂಪೂವಿನಿಂದ ಸ್ನಾನ ಮಾಡಿ, ಮತ್ತು ಆಸ್ತಿಕವಾಗಿ ನಿಮ್ಮ ಕೂದಲಿಗೆ ತೆಂಗಿನ ಎಣ್ಣೆ, ಕ್ಯಾಸ್ಟರ್ ಎಣ್ಣೆ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಆಗಾಗ್ಗೆ ಹಚ್ಚಿರಿ. ನೈಸರ್ಗಿಕ ತೆಂಗಿನ ಎಣ್ಣೆ ಬಳಸುವುದು ಉತ್ತಮ.

೭. ಭೀಕರವಾದ ಮೊಡವೆಯನ್ನು ಎದುರಿಸಿ

ಮೊಡವೆಯನ್ನು ತಡೆಗಟ್ಟಲು ಅಥವಾ ತೆರವುಗೊಳಿಸಲು ನೀವು ನೆನಪಿಡಲು ಅಗತ್ಯವಿರುವ ಪ್ರಮುಖ ವಿಷಯವೆಂದರೆ ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸಿಕೊಳ್ಳುವುದು. ನಿಮ್ಮ ತ್ವಚೆಯನ್ನು ದಿನಕ್ಕೆ ಕನಿಷ್ಟ ಪಕ್ಷ ಎರಡು ಬಾರಿಯಾದರೂ ಸ್ವಚ್ಚಗೊಳಿಸಿ. ನಿಮ್ಮ ತ್ವಚೆಯು ತೆವಾಂಶದಿಂದ ಇರುವಂತೆ ನೋಡಿಕೊಳ್ಳಿ. ಮೊಡವೆ ಬಂದಿರುವ ಜಾಗಕ್ಕೆ ಲೋಗಸರವನ್ನು ಹಚ್ಚಬಹುದು. ನಿಮ್ಮ ತ್ವಚೆಯನ್ನು ಒಣಗಲು ಬಿಡಬೇಡಿ, ಹೆಚ್ಚು ನೀರು ಕುಡಿಯಿರಿ.

೮. ಸಣ್ಣ ವರ್ಣದ್ರವ್ಯಗಳನ್ನು ತೆರವುಗೊಳಿಸಿ

ಮನೆಯಿಂದ ಹೊರಗೆ ಹೋಗುವ ಮುನ್ನ ಬಿಸಿಲಿಗೆ ತೆರೆದಿರುವ ನಿಮ್ಮ ಚರ್ಮಕ್ಕೆ ಸನ್ ಕ್ರೀಂ ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ನಿಮ್ಮ ತ್ವಚೆಗೆ ಪಪ್ಪಾಯ ಅಥವಾ ಜೇನು ಮತ್ತು ನಿಂಬೆ ಹಣ್ಣಿನ ಮಿಶ್ರಣವನ್ನು ಹಚ್ಚಬಹುದು.

೯. ನಿಮ್ಮ ತ್ವಚೆಯಲ್ಲಿರುವ ಕಲೆಗಳನ್ನು ನೋಡಿ

ಕಲೆಗಳು ತ್ವಚೆಯ ಮೇಲೆ ಶಾಶ್ವತವಾಗಿ ಉಳಿದುಕೊಳ್ಳಬಹುದು, ಆದರೆ ಸರಿಯಾದ ತ್ವಚೆಯ ಆರೈಕೆಯಿಂದ ಅದನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಕೆಲವು ಕ್ರೀಂ ಗಳು ಅಂಗಡಿಗಳಲ್ಲಿ(ಔಷದಿ) ದೊರೆಯುತ್ತವೆ ಅದನ್ನು ಬಳಸುವುದರಿಂದ ಇದನ್ನು ತಡೆಯಬಹುದು, ಅಥವಾ ಸಂಪೂರ್ಣವಾಗಿ ಮುಕ್ತಹೊಂದಬಹುದು. ವ್ಯಾಯಾಮ ಮಾಡುವುದು, ತ್ವಚೆಯನ್ನು ತೆವಾಂಶದಿಂದ ಇರಿಸುವುದು, ಆಗಾಗ್ಗೆ ಸ್ವಚ್ಚಗೊಳಿಸುವುದರಿಂದ ಇದನ್ನು ತಪ್ಪಿಸಬಹುದು.

೧೦. ಕಣ್ಣಿನ ಕೆಳಗೆ ಬರುವ ಕಪ್ಪು ಕಲೆಯನ್ನು ಪ್ರಕಾಶಿಸುವಂತೆ ಮಾಡಿ

ಕಣ್ಣಿನ ಕೆಳಗಡೆ ಇರುವ ತ್ವಚೆಯು/ಚರ್ಮವು ತುಂಬಾ ಸೂಕ್ಷ್ಮವಾಗಿದ್ದು, ಅದು ತುಂಬಾ ಬೇಗನೆ ಮತ್ತು ಸುಲಭವಾಗಿ ಕಿರಿಕಿರಿಗೆ ಹಾಗೂ ಒತ್ತಡಕ್ಕೆ ಒಳಗಾಗುತ್ತದೆ. ಇದರ ಪರಿಣಾಮವಾಗಿ ಕಪ್ಪು ಕಲೆಗಳು ಬರುತ್ತವೆ. ಪ್ರತಿ ದಿನ ತ್ವಚೆಯನ್ನು ಮಲಗುವ ಮುನ್ನ ಸ್ವಚ್ಚಗೊಳಿಸಿ, ಅಂಗಮರ್ಧನ ಮಾಡಿ ಅಥವಾ ಬಾದಾಮಿ ಎಣ್ಣೆಯನ್ನು ಹಚ್ಚಿಕೊಂಡು ಮಲಗಿ. ಚೆನ್ನಾಗಿ ನಿದ್ರೆ ಮಾಡುವುದರಿಂದ ಒತ್ತಡ ಸ್ವಲ್ಪ ಕಡಿಮೆಯಾಗುತ್ತದೆ.

೧೧. ರಾಸಾಯನಿಕಗಳ ಬಗ್ಗೆ ಎಚ್ಚರವಿರಲಿ

ಕ್ರೀಂ, ಸೌಂದರ್ಯ ವರ್ಧಕಗಳಿಂದ ಅಥವಾ ಕೇಶ ವರ್ಣದಿಂದ ದೂರವಿರಿ, ಅವುಗಳು ರಾಸಾಯನಿಕಗಳಿಂದ ತಯಾರಿಸಲ್ಪಡುತ್ತವೆ. ಇವುಗಳಿಂದ ನಿಮ್ಮ ತ್ವಚೆಯ ಕಾಂತಿ ಕಡಿಮೆಯಾಗಬಹುದು ಮತ್ತು ಕಿರಿಕಿರಿ ಉಂಟಾಗಬಹುದು.

೧೨. ನಿಮ್ಮ ವೈದ್ಯರನ್ನು ಬೇಟಿ ಮಾಡಿ

ಮುಖದಲ್ಲಿ ಕಾಂತಿ ಕಡಿಮೆಯಾಗುವುದು, ಮಂದತೆ ಹೊಂದುವುದು ಮತ್ತು ಕೂದಲು ಉದುರುವುದಕ್ಕೆ ಪ್ರಮುಖ ಕಾರಣ ನಿಮ್ಮ ದೇಹದಲ್ಲಿ ಪೌಷ್ಠಿಕಾಂಶಗಳ ಕೊರತೆಯಿಂದ ಮತ್ತು ನಿಮ್ಮ ದೈಹಿಕ ಶ್ರಮದಿಂದ. ನಿಮ್ಮ ವೈದ್ಯರನ್ನು ಬೇಟಿ ಮಾಡಿ ಸೂಕ್ತ ಸಲಹೆಯನ್ನು ಪಡೆಯಿರಿ.

Leave a Reply

%d bloggers like this: