ಗರ್ಭಾವಸ್ಥೆಯಲ್ಲಿ-ಮೊಡವೆಯ-ನಿವಾರಣೆಗಾಗಿ-೬-ಮನೆ-ಮದ್ದು-ಪರಿಹಾರಗಳು

ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮೊಡವೆಯ ನೋವನ್ನು ಅನುಭವಿಸುತ್ತಾರೆ, ಅದು ಅವರ ಮೊದಲ ಅಥವಾ ಎರಡನೆಯ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಹಾರ್ಮೋನ್ ಆಂಡ್ರೊಜೆನ್ ಹೆಚ್ಚಳದಿಂದ ಉಂಟಾಗುತ್ತದೆ, ಇದು ನಿಮ್ಮ ಚರ್ಮದಲ್ಲಿ ಮೇಣದಂಥ ಮತ್ತು ಎಣ್ಣೆಯಂತಹ ಪದರವನ್ನು ಉಂಟುಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಬರುವ ಮೊಡವೆಯನ್ನು ತಡೆಯಲು ಇಲ್ಲಿ ಕೆಲವು ಮನೆ ಮದ್ದು ಪರಿಹಾರಗಳಿವೆ.

೧. ಸೇಬಿನ ರಸವುಳ್ಳ ವಿನೆಗರ್ (Apple Cider Vinegar)

ಇವು ಎಣ್ಣೆಯುಕ್ತ ಪದರಗಳನ್ನು ಹೀರಿಕೊಳ್ಳುವ ಮತ್ತು ಒಣಗಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಶೋಧಿಸದ ಸೇಬಿನ ರಸವುಳ್ಳ ವಿನೆಗರ್ ನಲ್ಲಿ ಹತ್ತಿಯನ್ನು ಅದ್ದಿ, ಅದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿರಿ. ಒಂದು ಭಾಗ ಆಪಲ್ ಸೈಡರ್ ವಿನೆಗರ್ ಅನ್ನು ಮೂರು ಬಟ್ಟಿ ಇಳಿಸಿದ ನೀರಿನ ಜೊತೆಗೆ ಸೇರಿಸಿ ನೈಸರ್ಗಿಕ ಟೋನರನ್ನು ಸಹ ನೀವು ಸಿದ್ದಪಡಿಸಿಕೊಂಡು ಉಪಯೋಗಿಸಬಹುದು.

೨. ಸಿಟ್ರಸ್ ಹಣ್ಣುಗಳು

ನಿಂಬೆ ಹಣ್ಣು, ಕಿತ್ತಳೆ ಮುಂತಾದ ಸಿಟ್ರಸ್ ಆಮ್ಲವನ್ನು ಹೊಂದಿರುವ ಹಣ್ಣುಗಳು ಸಂಕೊಚಕ ಗುಣಗಳನ್ನು ಹೊಂದಿರುವುದರಿಂದ ಮೊಡವೆ ಮೇಲೆ ಅತ್ಯದ್ಭುತವಾಗಿ ಕೆಲಸಮಾಡುತ್ತವೆ. ಇದನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿದಾಗ ಒಣ ಮತ್ತು ಬೇಡವಾದ ಚರ್ಮವನ್ನು ತೆಗೆದು ಹಾಕುವುದರ ಜೊತೆಗೆ ಚರ್ಮ ರಂದ್ರಗಳನ್ನು ನಿವಾರಿಸುತ್ತದೆ. ಇದು ಬ್ಯಾಕ್ಟಿರಿಯಾ ವಿರುದ್ದ ಹೋರಾಡುವುದರಿಂದ ನೈಸರ್ಗಿಕವಾಗಿ ಬೇಡವಾದ ಒಣ ಚರ್ಮವನ್ನು ತೆಗೆದು ಹಾಕುತ್ತದೆ. ನಿಂಬೆ ರಸವನ್ನು ನೇರವಾಗಿ ಮೊಡವೆ ಮೇಲೆ ಹಾಕಿ ನಿಮಗೆ ಬೇಗನೆ ಪಲಿತಾಂಶ ಸಿಗುತ್ತದೆ.

೩. ಅಡುಗೆ ಸೋಡಾ

ಇದನ್ನು ನೀರಿನ ಜೊತೆ ಮಿಶ್ರಿಸಿದಾಗ, ಮೊಡವೆಗೆ ಇದನ್ನು ಪೇಸ್ಟ್ ತರಹ ಬಳಸಬಹುದು. ಇದು ಮುಖದ ಮೇಲಿರುವ ಹೆಚ್ಚುವರಿ ಎಣ್ಣೆ ಅಂಶವನ್ನು ಕಡಿಮೆಮಾಡುತ್ತದೆ ಮತ್ತು ಮೊಡವೆ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ. ನೀರು ಮತ್ತು ಸೋಡಾ ಎರಡನ್ನು ಸಮ ಪ್ರಮಾಣದಲ್ಲಿ ಮಿಶ್ರಿಸಿ ಮೊಡವೆ ಇರುವ ಜಾಗದಲ್ಲಿ ಹಚ್ಚಿ.

೪. ತೆಂಗಿನ ಎಣ್ಣೆ

ನಿಮ್ಮ ತ್ವಚೆಯು ಎಣ್ಣೆಯ ಅಂಶವನ್ನು ಹೊಂದಿದ್ದರೆ, ಅಥವಾ ನಿಮ್ಮದು ಎಣ್ಣೆ ಚರ್ಮವಾಗಿದ್ದರೆ, ಬೇರೆ ಯಾವುದೇ ಎಣ್ಣೆ ಅಥವಾ ಎಣ್ಣೆಯುಕ್ತ ಪದರ್ಥಾಗಳನ್ನು ಬಳಸಬೇಡಿ. ಆದರೆ ತೆಂಗಿನ/ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಇದು ಚರ್ಮವನ್ನು ಮೃದುವಾಗಿಸುತ್ತದೆ ಮತ್ತು ಯಾವುದೇ ಚರ್ಮದ ಪ್ರಕಾರದಿಂದ ಸುಲಭವಾಗಿ ಹೀರಲ್ಪಡುತ್ತದೆ/ಹೊಂದಿಕೊಳ್ಳುತ್ತದೆ. ಇದು ನೈಸರ್ಗಿಕವಾಗಿ ರೋಗ ನಿರೋಧಕ ಮತ್ತು ಬ್ಯಾಕ್ಟಿರಿಯಾ ವಿರುದ್ದ ಕೆಲಸ ಮಾಡುವ ಗುಣ ಹೊಂದಿದೆ.

೫. ಓಟ್ಸ್ ಪದಾರ್ಥ(oatmeal) ಮತ್ತು ಸೌತೆಕಾಯಿ

ಇವೆರಡೂ ತಮ್ಮ ತಂಪು ಗುಣಗಳಿಂದ ಹೆಸರುವಾಸಿ ಮತ್ತು ಇದನ್ನು ಮುಖವಾಡದ ರೀತಿ ಬಳಸಿದರೆ ಅದ್ಭುತ ಪರಿಣಾಮವನ್ನು ಕಾಣಬಹುದು. ಸೌತೆಕಾಯಿಯಿಂದ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಓಟ್ಸ್ ಒಣಚರ್ಮವನ್ನು ತೆಗೆದುಹಾಕಲು ಸಹಾಯಕಾರಿ. ಇವೆರಡನ್ನೂ ಚೆನ್ನಾಗಿ ಪೇಸ್ಟ್ ತರ ರುಬ್ಬಿಕೊಂಡು ೧೫ ರಿಂದ ೨೦ ನಿಮಿಷ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಪಲಿತಾಂಶವನ್ನು ನೋಡಿ.

೬. ಜೇನುತುಪ್ಪ

ಇದು ತ್ವಚೆಯ ತೇವಾಂಶ ಕಾಪಾಡಲು ಮತ್ತು ಕಾಂತಿಯನ್ನು ಹೆಚ್ಚಿಸಲು ಅತ್ಯಂತ ಸಹಕಾರಿ ವಸ್ತು. ಇದು ಬ್ಯಾಕ್ಟಿರಿಯಾ ವಿರುದ್ದ ಮತ್ತು ನಂಜು ನಿರೋಧಕ, ಆದ್ದರಿಂದ ಇದನ್ನು ಅನೇಕ ರೀತಿಯಲ್ಲಿ ಉಪಯೋಗಿಸಬಹುದು. ಮುಖವನ್ನು ಚೆನ್ನಾಗಿ ತೊಳೆದ ನಂತರ ಇದನ್ನು ಮೊಡವೆ ಇರುವ ಜಾಗಕ್ಕೆ ಹಾಕಿ,೧೫-೨೦ ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ತ್ವಚೆಯು ಕಾಂತಿಯನ್ನು ಪಡೆದುಕೊಳ್ಳುತ್ತದೆ ಮತ್ತು ಮೊಡವೆಯು ಮಂಕಾಗುತ್ತದೆ.

Leave a Reply

%d bloggers like this: