makkalalli-hotte-novu-shamanakke-7-naisargika-mane-maddugalu-1

ಮಕ್ಕಳಲ್ಲಿ ಹೊಟ್ಟೆ ನೋವು ಬರುವುದು ಅಸಾಮಾನ್ಯ ಸಂಗತಿಯೇನಲ್ಲಾ. ಹಲವು ಕಾರಣಗಳಿಂದ ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ, ಅದಕ್ಕೆ ಕೆಲವು ಕಾರಣಗಳೆಂದರೆ, ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಕೆಟ್ಟಿರುವ ಆಹಾರ ಸೇವನೆ, ಒತ್ತಡ ಮತ್ತು ಸರಿಯಿಲ್ಲದ ಆಹಾರ ಕ್ರಮ ಇತ್ಯಾದಿಗಳು. ಪ್ರತಿಸಲ ವೈದ್ಯರ ಬಳಿ ಹೋಗುವ ಬದಲು ಕೆಲವು ಮನೆ ಮದ್ದು ಔಷದಿಗಳಿಂದ ಇದನ್ನು ಗುಣಪಡಿಸಬಹುದು.

೧. ನೀರು

ದಿನಕ್ಕೆ ಕನಿಷ್ಟ ಪಕ್ಷ ೮ ಲೋಟ ನೀರು ಕುಡಿಯುವುದು, ಇದು ಒಂದು ಒಳ್ಳೆಯ ಕಾರಣಕ್ಕಾಗಿ ಆಗಿನ ಕಾಲದಿಂದಲೂ ಬಂದಿರುವ ಪರಿಹಾರ. ದೇಹಕ್ಕೆ ಅಗತ್ಯವಿರುವ ನೀರನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ನೀರು ಸಿಗುವುದರ ಜೊತೆಗೆ ಇದು ಕರುಳಿನಲ್ಲಿನ ಚಲನೆಯನ್ನು ಸುಲಭವಾಗಿಸುತ್ತದೆ, ಹಲವು ಮಕ್ಕಳಲ್ಲಿ ಹೊಟ್ಟೆ ನೋವು ಬರಲು ಇದು ಪ್ರಮುಖ ಕಾರಣ. ನಿಮ್ಮ ಮಕ್ಕಳಿಗೆ ನೀರು ಕುಡಿಯಲು ಪ್ರೋತ್ಸಾಹಿಸಿ ಮತ್ತು ಇತರೆ ತಂಪು ಪಾನೀಯಗಳನ್ನು ಕಡಿಮೆ ಮಾಡಿ ಹಣ್ಣಿನ ರಸ ಕುಡಿಯಲು ಹೇಳಿ.

೨. ಹೊರಾಂಗಣ ಚಟುವಟಿಕೆಗಳು

ನಿಮ್ಮ ಮಗುವು ಹೊಟ್ಟೆ ನೋವಿದೆ ಎಂದು ಕಾರಣ ಕೊಡಬಹುದು, ಆದರೆ ಅವನನ್ನು ಹೊರಗೆ ಹೋಗಿ ಸ್ವಲ್ಪ ಸಮಯ ಆಟವಾಡಿ ಬರಲು ಹೇಳಿ, ಇದರಿಂದ ಅವನಿಗೆ ವ್ಯಾಯಾಮ ಮಾಡಿದಂತಾಗುತ್ತದೆ. ಅದನ್ನು ಮಾಡಲು ಅಭ್ಯಾಸ ಮಾಡಿರಿ, ಪ್ರತಿದಿನ ಸ್ವಲ್ಪ ದೂರ ನಡೆಯಲು ಅಥವಾ ಓಡಲು ಹೇಳಿರಿ ಇದರಿಂದ ಅವನ ದೈಹಿಕ ಶಕ್ತಿಯು ಹೆಚ್ಚುತ್ತದೆ, ಮತ್ತು ರೋಗ ನಿರೋಧಕ ಶಕ್ತಿಯು ಸಿಗುತ್ತದೆ. ಮತ್ತು ಸೂರ್ಯನಿಂದ ವಿಟಮಿನ್ ಡಿ ಕೂಡ ದೊರೆಯುತ್ತದೆ. ಜೊತೆಗೆ ರಕ್ತ ಸಂಚಲನವು ಸರಾಗವಾಗಿ ಆಗುತ್ತದೆ ಮತ್ತು ಜೀರ್ಣಕ್ರಿಯೆಗೆ ನೆರವಾಗುತ್ತದೆ.

೩. ಮೊಸರು

ಯಾವುದೇ ತರಹದ ಹೊಟ್ಟೆ ನೋವಿಗೆ ಮೊಸರು ಪರಿಹಾರ. ಇದು ಹೊಟ್ಟೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಭೇದಿಯ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವ ಉತ್ತಮ ಬ್ಯಾಕ್ಟೀರಿಯಾವನ್ನು ಇದು ಒಳಗೊಂಡಿದೆ ಮತ್ತು ಬೇಧಿಯಾಗುವುದನ್ನು ತಡೆಯುತ್ತದೆ. ಕರುಳಿನ ಜೀರ್ಣಕ್ರಿಯೆಗೆ ಬೇಕಿರುವ ಬ್ಯಾಕ್ಟಿರಿಯಾವನ್ನು ಉತ್ಪತ್ತಿ ಮಾಡಲು ಸಹಾಯ ಮಾಡಿ ಜೀರ್ಣಶಕ್ತಿಯನ್ನು ವೃದ್ದಿಸುತ್ತದೆ.

೪. ಮಸಾಲೆ ಪದಾರ್ಥಗಳಿಂದ ದೂರವಿರಿ

ನಿಮಗೆ ಹೊಟ್ಟೆ ನೋವಿನ ಬಗ್ಗೆ ಯಾವುದೇ ಗೊಂದಲ ಅಥವಾ ಚಿಂತೆ ಇದ್ದರೆ ಮಸಾಲೆ ಪದಾರ್ಥಗಳನ್ನು ಮತ್ತು ಸಾಸ್ ಗಳನ್ನು ನಿಷೆದಿಸಿ. ಇದರ ಬದಲು ಮೃದುವಾದ ಆಹಾರಗಳಿಗೆ ಮೊರೆಹೋಗಿ ಇದು ಕಡಿಮೆ ಕಿರಿಕಿರಿಯನ್ನು ಮಾಡುತ್ತದೆ. ಮತ್ತು ಇವು ಸುಲಭವಾಗಿ ಜೀರ್ಣವಾಗುತ್ತವೆ. ಹೆಚ್ಚು ಮೃದುವಾದ ಆಹಾರ ಪದಾರ್ಥಗಳನ್ನು ಬಳಸುವುದರಿಂದ ವಾಂತಿಯನ್ನು ನಿವಾರಿಸಬಹುದು ಮತ್ತು ಜೀರ್ಣಕ್ರಿಯೆ ಸುಲಭವಾಗುತ್ತದೆ.

೫. ಬೆಚ್ಚಗಿರಿಸಿ

ನಿಮ್ಮ ಮಗುವನ್ನಲ್ಲ. ಬಿಸಿ ನೀರು ಸಿಸೆಯನ್ನು ತೆಗೆದುಕೊಳ್ಳಿ ಮತ್ತು ಬಿಸಿ ನೀರನ್ನು ಅದರಲ್ಲಿ ತುಂಬಿರಿ. ಅದನ್ನು ಬಟ್ಟೆಗೆ ಕಟ್ಟಿಕೊಂಡು ಹೊಟ್ಟೆಯ ಪ್ರದೇಶದ ಮೇಲೆ ಇರಿಸಿ ಅದು ನಿಮ್ಮ ಮಗುವಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನೋವಿನಿಂದ ಸ್ವಲ್ಪ ಮುಕ್ತಿ ಸಿಗುತ್ತದೆ. ಬಿಸಿಯಾದ ತಾಪವನ್ನು ಹೊಟ್ಟೆ ಪಡೆಯುದರಿಂದ ರಕ್ತ ಸಂಚಲನವು ಸರಾಗವಾಗಿ ಆಗಿ ರಕ್ತ ಚರ್ಮಕ್ಕೆ ಬರುವುದರಿಂದ ಬಿಸಿ ನೀರು ಇರಿಸಿದ ಜಾಗದಲ್ಲಿ ಕೆಂಪಾಗುತ್ತದೆ, ಅದರ ಬಗ್ಗೆ ಚಿಂತಿಸಬೇಡಿ. ಒಳಗಡೆ ಅದು ನಿಮ್ಮ ಮಗುವಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

೬. ಶುಂಟಿ

ಈ ಪದಾರ್ಥವಂತು ನಮ್ಮ ದೇಶದ ಪ್ರತಿಯೊಂದು ಮನೆಯಲ್ಲೂ ಇದ್ದೇ ಇರುತ್ತದೆ. ಹಾಗಾಗಿ ಇದು ನಿಮಗೆ ಕೈಗೆಟಕುವ ಸುಲಭ ದಾರಿ. ಶುಂಟಿಯಲ್ಲಿ ಜಿಂಜೆರಾಲ್ ಎಂಬ ಉತ್ಕರ್ಷಣ ನಿರೋಧಕ (ಆಂಟಿಆಕ್ಸಿಡೆಂಟ್) ಇರುತ್ತದೆ. ಇದು ಹೊಟ್ಟೆಯಲ್ಲಿನ ಸಂಕಟ ಹಾಗು ವಾಕರಿಕೆಯನ್ನು ಕಮ್ಮಿ ಮಾಡುತ್ತದೆ. ಅದು ಶುಂಟಿ ಪೇಸ್ಟ್ ಆಗಿರಬಹುದು, ಶುಂಟಿ ಟೀ ಆಗಿರಬಹುದು ಯಾವ ರೂಪದಲ್ಲಿ ಸೇವಿಸಿದರು ಪರಿಣಾಮಕಾರಿ. ಇದಕ್ಕೆ ಉರಿತವನ್ನು ಸಹ ಶಮನ ಮಾಡುವ ಗುಣಗಳಿದ್ದು ಪಚನದ ಕಾರ್ಯಗಳಿಗೆ ಬೇಕಾದ ದ್ರವ್ಯಗಳ ಉತ್ಪನ್ನದಲ್ಲಿ ಸಹಾಯ ಮಾಡುತ್ತದೆ.

೭. ಕ್ಯಾಮೊಮೈಲ್ ಟೀ

ಇದು ಕೂಡ ಉರಿತ ಶಮನ ಮಾಡುವಂತ ಗುಣ ಹೊಂದಿದ್ದು, ಹೊಟ್ಟೆ ಮುರಿಯುವಂತೆ ಆಗುವುದನ್ನು ತಡೆಯುತ್ತದೆ. ಇದು ಉದರದಲ್ಲಿನ ಸ್ನಾಯುಗಳಿಗೆ ಆರಾಮ ನೀಡುತ್ತದೆ, ಇದು ಉದರದ ಸಂಕೊಚನಗಳು ಸಲೀಸಾಗಿ ಆಗಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಮುರಿದಂತೆ ಆಗುವುದು ಹಾಗು ಉದರದ ಅಸ್ವಸ್ತತೆಯನ್ನು ನಿಲ್ಲಿಸುತ್ತದೆ.

Leave a Reply

%d bloggers like this: