neevu-nimma-ammanaagi-badalaguttiruvdu-ariyuvanta-7-sandarbhagalu

ನೀವು ಇದು ಆಗದಂತೆ ತಡೆಯಲು ಬಹಳ ಪ್ರಯತ್ನ ಪಟ್ಟಿರುತ್ತೀರ. ನಿಮಗೆ ಕೈಲಾದಷ್ಟು ನೀವು ತಡೆಯುವಿರಿ, ಆದರೆ ರಕ್ತದಲ್ಲೇ ಬಂದಿರುವ ಗುಣಗಳು ಇದು ಹೆಚ್ಚು ದಿನ ಅಡಗಿ ಕೂರುವುದಕ್ಕೆ ಬಿಡುವುದಿಲ್ಲ. ಆ ಕ್ಷಣ ನಿಮ್ಮ ಮುಂದೆ ಒಂದು ಸತ್ಯ ತೆರೆದಿಡುತ್ತದೆ, ಅದು ಏನೆಂದರೆ ನೀವು ಥೇಟ್ ನಿಮ್ಮ ಅಮ್ಮನ ಥರವೇ ಆಗಿದ್ದೀರಿ ಎಂದು. ಇದು ನಿಮ್ಮಲ್ಲಿ ಕೆಲವರಿಗೆ ಖುಷಿ ಕೊಡುವುದಿಲ್ಲ ಏಕೆಂದರೆ ಇದು ನಿಮಗೆ ವಯಸ್ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ! ನೀವು “ಅಯ್ಯೋ ನಾನ್ಯಾಕೆ ನಮ್ಮಮ್ಮನ ಥರ ಆಡ್ತಿದಿನಿ” ಅಂದುಕೊಳ್ಳುವಂತ ೭ ಸಂದರ್ಭಗಳು ಇಲ್ಲಿವೆ :

೧. ಮನೆಯಲ್ಲೇ ಕೂತು ನಿಮ್ಮ ನೆಚ್ಚಿನ ಧಾರವಾಹಿ ನೋಡುವುದೇ ನಿಮ್ಮ ನೆಚ್ಚಿನ ಕೆಲಸ

ಹೌದು ಇನ್ನು ಮುಂದೆ ಹೊರಗಡೆ ಸುತ್ತಾಡಿ, ತೋಚಿದಂತೆ ಖರ್ಚು ಮಾಡಿ ಬರುವುದು, ಸ್ನೇಹಿತರ ಮನೆಯಲ್ಲಿ ಓದಿಕೊಳ್ಳುವುದಾಗಿ ಹೋಗಿ ನಂತರ ರಾತ್ರಿಯೆಲ್ಲ ಹರಟೆ ಹೊಡೆಯುವುದು ಇವಾಗ ಸಾಧ್ಯವಿಲ್ಲ. ಏಕೆಂದರೆ ನಿಮಗೆ ಗೊತ್ತು ನಿವ್ವು ಬೆಳಗ್ಗೆ ಬೇಗ ಎದ್ದು ಮತ್ತೆ ಎಂದಿನಂತೆ ಕೆಲಸಗಳಲ್ಲಿ ತೊಡಗಿಸಿಕೊಳ್ಳ ಬೇಕೆಂದು. ಇವಾಗ ನಿಮಗೆ ನಿಮ್ಮ ಸ್ನೇಹಿತೆಯ ಮನೆಯಲ್ಲಿರುವ ಪಾರ್ಟಿ ಮಿಸ್ ಆದರೂ ಬೇಸರ ಆಗುವುದಿಲ್ಲ. ವಾಸ್ತವತೆ ಈಗ ನೆಲೆಯೂರುತ್ತಿದ್ದು, ಅದು ನಿಮಗೆ ಇವಾಗ ಭಾಸವಾಗುತ್ತಿದೆ.

೨. ನೀವು ಎಲ್ಲರಿಗು “ಇರು ಒಂದ್ ನಿಮಿಷ, ನನ್ ಕನ್ನಡಕ ಹಾಕಿಕೊಳ್ತೀನಿ”

ನೀವು ಯಾವತ್ತು ಊಹಿಸಿರಲಿಲ್ಲ ನಿಮ್ಮ ವ್ಯಾನಿಟಿ ಬ್ಯಾಗ್ ಅಲ್ಲೂ ಪ್ರತಿದಿನ ಓದುವ ಕನ್ನಡಕ ಇಟ್ಟುಕೊಳ್ಳ ಬೇಕೆಂದು. ಆದರೆ, ಈಗ ನೀವು ಅದಿಲ್ಲದೆ ಏನು ಓದಲು ಆಗುವುದಿಲ್ಲ.

೩. ಚಳಿ ಇದ್ದಾಗ ನೀವು ಸರ್ವರಿಗೂ ಜಾಕೆಟ್ ತೆಗೆದುಕೊಂಡು ಹೋಗಲು ಹೇಳುತ್ತಲೇ ಇರುತ್ತೀರ

ನಿಮ್ಮ ಅಮ್ಮ ನಿಮಗೆ ಇದನ್ನ ಪದೇ ಪದೇ ಹೇಳುತ್ತಲೇ ಇದ್ದರು, ಆದರೆ ಅವರ ಕಾಳಜಿ ನಿಮಗೆ ಇವಾಗ ತಿಳಿಯುತ್ತಿದೆ. “ಯಾಕೆ ನೆಗಡಿ ಮಾಡ್ಕೊಬೇಕು ಅಂತ ಆಸೆನಾ ನಿಂಗೆ?” ಅಂತ ಅವಾಗವಾಗ ಹೇಳಲು ನೀವು ಕೂಡ ಶುರು ಮಾಡುತ್ತೀರ. ಈ ಮಾತು ನಿಮ್ಮ ಬಾಯಿಂದ ಪ್ರತಿಸಲ ಹೊರಬಂದಾಗಲು, ನಿಮ್ಮ ತಲೆಯಲ್ಲಿ ನಿಮ್ಮ ಅಮ್ಮನ ಧ್ವನಿಯಲ್ಲಿ ಈ ಮಾತುಗಳು ಪ್ರತಿಧ್ವನಿಸುತ್ತವೆ.

೪. ಈಗ ನಿಮ್ಮ ಪರ್ಸ್ ಒಂದು ಔಷಧಿ ಅಂಗಡಿ ಆಗಿರುತ್ತದೆ

ಎಲ್ಲಾ ಸಮಯದಲ್ಲೂ ಸಕಲಕ್ಕೂ ಸಿದ್ದರಾಗಿರುವುದು ನಿಮ್ಮ ಅಮ್ಮನನ್ನು ನೋಡಿ ನೀವು ಕಲಿತಿರುತ್ತೀರಿ. ಇದು ನಿಮ್ಮಲ್ಲಿ ಎಷ್ಟರ ಮಟ್ಟಿಗೆ ಬೇರೂರಿರುತ್ತದೆ ಅಂದರೆ ನೀವು ಕೂಡ ನಿಮ್ಮ ಅಮ್ಮನಂತೆಯೇ ಯೋಚನೆ ಮಾಡಲು ಶುರು ಮಾಡುತ್ತೀರಿ. ಯಾವಾಗ ಆದರು ಅಪಘಾತ ಆಗಬಹುದು, ಯಾವಾಗ ಆದರೂ ಮಗು ಹುಷಾರು ತಪ್ಪಬಹುದು. ಹೀಗಾಗಿ ನೀವು ನಿಮ್ಮ ಪರ್ಸಲ್ಲಿ ಯಾವಾಗಲು ಗಾಯವಾದರೆ ಎಂದು ಬ್ಯಾಂಡೇಜ್ ಅಥವಾ ಹುಷಾರು ತಪ್ಪಿದರೆ ಎಂದು ಪ್ಯಾರಾಸಿಟಮಾಲ್ ಗುಳಿಗೆ ಇಟ್ಟುಕೊಂಡೇ ಇರುತ್ತೀರ. ಸುಲಭವಾಗಿ ಹೇಳಬೇಕೆಂದರೆ ನಿಮ್ಮ ಪರ್ಸಲ್ಲಿ ಸದಾಕಾಲ ಒಂದು ಸಣ್ಣ ಮೆಡಿಕಲ್ ಶಾಪ್ ಇದ್ದೆ ಇರುತ್ತದೆ

೫. ನಿಮಗೆ ಈಗ ರಾತ್ರಿ ಹೊತ್ತು ಶಬ್ದ ಎಂದರೆ ಆಗುವುದಿಲ್ಲ

“ನಿಜವಾಗಲು? ಇಷ್ಟೊತ್ತಲ್ಲಿ ಯಾರಾದ್ರೂ ಪಾರ್ಟಿ ಮಾಡ್ತಾರ? ಬೇರೆಯವರಿಗೆ ತೊಂದರೆ ಆಗುತ್ತೆ ಅನ್ನೋ ಅರಿವು ಇಲ್ವಾ ಇವರಿಗೆ? ಈಗಿನ ಕಾಲದ ಮಕ್ಕಳಿಗೆ ಸ್ವಲ್ಪವೂ ಸಭ್ಯತೆ ಇರುವುದಿಲ್ಲ” ಇವುಗಳನ್ನು ನೀವು ಹಿಂದೆಂದಿಗಿಂತ ಹೆಚ್ಚಾಗಿ ಹೇಳುವುದಾಗಲಿ ಅಥವಾ ಯೋಚಿಸುವುದಾಗಲಿ ಮಾಡುವಿರಿ.

೬. ವಸ್ತುಗಳು ವೇಸ್ಟ್ ಆಗುವುದು ನೋಡಿದರೆ ನಿಮಗೆ ಸಿಟ್ಟು ನೆತ್ತಿಗೇರುತ್ತದೆ

ನೀವು ಪ್ರತಿಯೊಂದು ರೂಮಿನಿಂದ ರೂಮಿಗೆ ಹೋಗಿ ಎಷ್ಟು ಕರೆಂಟ್ ವ್ಯರ್ಥ ಮಾಡ್ತಿದೀರ ಎಂದು ಬೈದುಕೊಳ್ಳುತ್ತಾ ಲೈಟ್ ಆಫ್ ಮಾಡಿ ಬರುವುದನ್ನು ಕಾಣುತ್ತೀರ. ನೀವು ಇವಾಗ ಉಳಿದ ಊಟವನ್ನು ಬಿಸಾಕುವುದಿಲ್ಲ. “ಅದು ಹೆಂಗೆ ಬಿಸಾಕುತ್ತೀರಿ? ಜಗತ್ತಲ್ಲಿ ಎಷ್ಟೊಂದ್ ಜನಕ್ಕೆ ತಿನ್ನೋಕೆ ಸಿಗೋಲ್ಲ ಗೊತ್ತ? ನಿಮಗೆ ಇದೆ ಅಂತ ದುರಹಂಕಾರ” ಎಂದು ನಿಮ್ಮ ಅಮ್ಮ ನಿಮಗೆ ಬೈಯ್ಯುತ್ತಿದ್ದನ್ನು, ನೀವು ಇವಾಗ ನಿಮ್ಮ ಮಕ್ಕಳಿಗೆ ಬಯ್ಯುತ್ತೀರಿ. ರಾತ್ರಿ ಉಳಿದ ಅನ್ನ ಬೆಳಗ್ಗೆ ಚಿತ್ರಾನ್ನ ಆಗಿ ಖಾಲಿ ಆಗುವಂತೆ ಮಾಡುತ್ತೀರಿ.

೭. ನೀವು ಬೆಳೆಯುವಾಗ ಕೇಳಿಸಿಕೊಳ್ಳಲು ಇಷ್ಟಪಡದೇ ಇದ್ದಂತ ಬೈಗುಳಗಳೇ ಇವಾಗ ನಿಮ್ಮ ಬಾಯಲ್ಲಿ ಬರುತ್ತವೆ

“ನಿನಿಗು ಒಂದು ಮಗು ಆಗುತ್ತಲ ಅವಾಗ ಗೊತ್ತಾಗುತ್ತೆ ”, “ಮುಂದೊಂದ್ ದಿನ ನಾನ್ ಹೇಳಿದ್ದು ಸರಿ ಅಂತ ನಿನಗೆ ಗೊತ್ತಾಗುತ್ತೆ”, “ನನ್ ಮನೇಲಿ ಇರ್ಬೇಕು ಅಂದ್ರೆ, ನಾನ್ ಹೇಳಿದ್ದು ಕೇಳಬೇಕು ಗೊತ್ತಾಯ್ತ?”, ಈ ಮಾತುಗಳು ಕೇಳಿಸಿಕೊಳ್ಳುವುದಕ್ಕೆ ನಿಮಗೆ ಎಷ್ಟೊಂದು ಸಿಟ್ಟು ಬರುತಿತ್ತು. ಆದರೆ ಈಗ ನೀವು ಅವುಗಳನ್ನು ಕೇವಲ ಉಪಯೋಗಿಸುವುದು ಅಷ್ಟೇ ಅಲ್ಲದೆ ಇವಾಗ ಅರ್ಥವೂ ಆಗುತ್ತದೆ. ಹೌದು ಅಮ್ಮ, ನೀನು ಹೇಳಿದ್ದು ನಿಜ. ಇವಾಗ ನಾನು ಒಂದು ಅಮ್ಮನಾದ ಮೇಲೆ ಇವೆಲ್ಲಾ ಗೊತ್ತಾಗುತ್ತಿದೆ.

Leave a Reply

%d bloggers like this: