ವರ್ಷದ-ಟಾಪ್-10-ಶಿಶು-ನಾಮಗಳು

ಹೆಸರು ಎಂಬುವುದು ಪೂರ್ಣ ಜೀವಿತಾವಧಿಗಾಗಿ. ನವಜಾತ ಶಿಶುವಿನ ಹೆಸರಿನ  ಆಯ್ಕೆ ಬಂದಾಗ, ಕೆಲವು ಹೆತ್ತವರಿಗೆ ತಮ್ಮ ಮಗುವಿಗೆ ಸರಿಯಾದ ಹೆಸರನ್ನು ಕಂಡುಕೊಳ್ಳಲು ಕಷ್ಟವಾಗುತ್ತದೆ. ದೂರದ ಸಂಬಂಧಿಗಳಿಂದ ಹಿಡಿದು ನಿಕಟ ಸಂಬಂಧಿಗಳ ವರೆಗೆ; ನೆರೆಯಾಕೆಯಿಂದ ಹಿಡಿದು ಧಾರ್ಮಿಕ ಗುರುಗಳ ವರೆಗೆ-ಅವರು ಎಲ್ಲೆಡೆ ಸಾಧ್ಯವಾದಷ್ಟು ಸಹಾಯ ಪಡೆಯಲು ಪ್ರಯತ್ನಿಸುತ್ತಾರೆ.ಆದರೆ ಇವೆಲ್ಲವೂ ಅವರಿಗೆ ತಮ್ಮ ಆಯ್ಕೆಯ ಬಗ್ಗೆ ಇನ್ನಷ್ಟು ಗೊಂದಲಕ್ಕೊಳಗಾಗುವುದರೊಂದಿಗೆ ಕೊನೆಗೊಳ್ಳುತ್ತದೆ.

ಆದರೂ, ಅವರನ್ನು ಪಾರುಮಾಡಲು ಮತ್ತೊಂದು ಮಹಾನ್ ಮತ್ತು ವಿಶ್ವಾಸಾರ್ಹ ಆಯ್ಕೆ ಕಾಣುತ್ತದೆ- ಅದೇ ಇಂಟರ್‌ನೆಟ್, ಇದು ಸೂಕ್ತ ಶಿಶುವಿನ ಹೆಸರುಗಳನ್ನು ಒದಗಿಸುತ್ತದೆ. ಆದ್ದರಿಂದ,ಈ ವರ್ಷದ ಅತ್ಯುತ್ತಮ 10 ಶಿಶು ನಾಮಗಳ ಪಟ್ಟಿ ಇಲ್ಲಿದೆ, ಇದರಿಂದ ಯಾವುದೇ ಪೋಷಕರು ತಮ್ಮ ಮಗುವಿಗೆ ಸುಲಭವಾಗಿ ಹೆಸರನ್ನುಆಯ್ಕೆ ಮಾಡಬಹುದು:

ಟಾಪ್ 5 ಹೆಣ್ಣು ಶಿಶುಗಳ ಹೆಸರುಗಳು ಅದರ ಅರ್ಥದೊಂದಿಗೆ
  • ಅಭಾ: ತಮ್ಮ ಹೆತ್ತವರು ತಮ್ಮ ರಾಜಕುಮಾರಿಯರಿಗೆ ನೀಡಿದ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಆಭಾ ಎನ್ನುವುದು ಪ್ರಕಾಶಿಸುಎಂಬ ಸಂಸ್ಕೃತ ಪದವಾಗಿದ್ದು, ಇದರಿಂದಾಗಿ ಹೆತ್ತವರಲ್ಲಿ ಬಹಳ ಜನಪ್ರಿಯವಾಗಿದೆ.
  • ಅಕ್ಷಿತ: ಅಕ್ಷಿತ ಯಾವುದು ಎಂದಿಗೂ ಬದಲಾಗದಅಥವಾ ಶಾಶ್ವತಎನ್ನುವ ಅರ್ಥ ಹೊಂದಿದೆ. ಕಳೆದುಹೋಗುವ ಸಮಯ ಮತ್ತು ದಿನಗಳು ಬದಲಾಗುವುದರೊಂದಿಗೆ, ಯಾರೊಬ್ಬರಿಗೂ ಬದಲಾಗದೆ ಉಳಿಯುವ ಒಂದು ವಿಷಯವೆಂದರೆ ಅವರ ಮಗುವಿಗಗಾಗಿ ಅವರ ಪ್ರೀತಿ.
  • ಸಾನ್ವಿ: ಸಾನ್ವಿ ದೇವತೆ ಲಕ್ಷ್ಮಿಯ ಹೆಸರಾಗಿದೆ. ಈ ಹೆಸರು, ಸೌಂದರ್ಯ, ಸೊಬಗು, ಸಂಪತ್ತು ಮುಂತಾದ ಅನೇಕ ಸ್ತ್ರೀಯ ಗುಣಗಳನ್ನು ಸಂಕೇತಿಸುತ್ತದೆ. ಆಧುನಿಕ ಮತ್ತು ಧಾರ್ಮಿಕವಾಗಿ ಪ್ರೇರಿತವಾದ ಹೆಸರನ್ನು ಬಯಸುವವರು ತಮ್ಮ ಮಗುವಿಗೆ ಯಾವಾಗಲೂ ಈ ಹೆಸರನ್ನು ಬಯಸುತ್ತಾರೆ.
  • ಮೈರಾ: ಮೈರಾ ಒಂದು ಇಂಗ್ಲಿಷ್ ಹೆಸರು ಆದರೆ ಅನೇಕ ಭಾರತೀಯ ಪೋಷಕರು ಇದನ್ನು ಬಳಸುತ್ತಿದ್ದಾರೆ. ಇದು ಮೂಲತಃ ಲ್ಯಾಟಿನ್ ಪದ ಮೈರಾದಿಂದ ಹುಟ್ಟಿಕೊಂಡಿದೆ, ಇದು ಮೈರ್ರ್ಹ್ ಎಂದು ಹೇಳುತ್ತದೆ, ಇದು ಮತ್ತಷ್ಟು ಪ್ರಶಂಸನೀಯಮತ್ತು ಅಸಾಮಾನ್ಯ ಎಂಬ ಅರ್ಥ ಕೊಡುತ್ತದೆ.
  • ಕೈರಾ: ಅನೇಕ ಭಾರತೀಯ ಹೆಸರುಗಳಿಗಿಂತ ವೇಗವಾಗಿ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿರುವ ಪಶ್ಚಿಮದ ಹೆಸರು. ಕೈರಾ ಎಂದರೆ ಕಪ್ಪು ಕೂದಲಿನಮತ್ತು ಮೂಲತಃ ಐರಿಷ್ ಹೆಸರು. ಆದ್ದರಿಂದ, ಪ್ರಸ್ತಾಪಿಸಿದ ಹೆಸರುಗಳು ಅತ್ಯಂತ ಜನಪ್ರಿಯವಾದ ಹೆಣ್ಣು ಶಿಶುಗಳ ಹೆಸರುಗಳು, ಇವು ಭಾರತೀಯ ಪೋಷಕರಿಂದ ಮತ ಚಲಾಯಿಸಿ ಮತ್ತು ರೇಟ್ ಮಾಡಲ್ಪಟ್ಟಿವೆ.
ಟಾಪ್ 5 ಗಂಡು ಶಿಶುಗಳ ಹೆಸರುಗಳು ಅದರ ಅರ್ಥದೊಂದಿಗೆ
  • ಆರಾವ್: ಗಂಡು ಶಿಶುಗಳಲ್ಲಿ ಬಹಳ ಜನಪ್ರಿಯ ಹೆಸರು, ಆರವ್ ಶಾಂತಿಯುತ ಮತ್ತು ಬುದ್ಧಿವಂತಿಕೆಎಂದರ್ಥ. ಈ ಹೆಸರು ಆಧುನಿಕ ಮಾತ್ರವಲ್ಲದೆ ಶ್ರೀಮಂತ ಅರ್ಥವನ್ನು ಹೊಂದಿದ್ದು ಭಾರತೀಯ ಪೋಷಕರಲ್ಲಿ ಬಹಳ ಜನಪ್ರಿಯವಾಗಿದೆ.
  • ವಿವಾನ್: ಈ ಹೆಸರು ಸೂರ್ಯನ ಮೊದಲ ಕಿರಣಗಳುಎಂಬ ಅರ್ಥ ಕೊಡುತ್ತದೆ ಮತ್ತು, ಕೃಷ್ಣನ ಹೆಸರುಗಳಲ್ಲಿ ಒಂದು. ವಿವಾನ್ ತನ್ನದೇ ಆದ ಅರ್ಥದಲ್ಲಿ ವಿಶಿಷ್ಟವಾದ ಒಂದು ಸುಂದರವಾದ ಹೆಸರಾಗಿದೆ ಮತ್ತು ಅದರೊಳಗೆ ಒಂದು ಸಂಗೀತದ ಗುಣಮಟ್ಟವನ್ನು ಹೊಂದಿದೆ.
  • ಮುಹಮ್ಮದ್: ಮುಹಮ್ಮದ್ ಎಂಬುದನ್ನುಅನೇಕ ವಿಧಗಳಲ್ಲಿ ಬರೆಯಬಹುದು, ಮತ್ತು ಭಾರತೀಯ ಪೋಷಕರಲ್ಲಿ ಬಹಳ ಜನಪ್ರಿಯವಾದ ಹೆಸರು. ಈ ಹೆಸರಿನ ಅರ್ಥ ಮೆಚ್ಚುಗೆ ಪಡೆದ, ಮುಸ್ಲಿಮ್ ಪೋಷಕರಲ್ಲಿ ಹೆಚ್ಚು ಪ್ರಸಿದ್ಧವಾಗಿದೆ.
  • ಅಥರ್ವಾ:ತಮ್ಮ ಗಂಡು ಶಿಶುವಿಗೆ ಆಧ್ಯಾತ್ಮಿಕ ಮತ್ತು ಆಧುನಿಕ ಹೆಸರನ್ನು ನೀಡಲು ಆದ್ಯತೆ ನೀಡುವ ಪೋಷಕರಿಗೆ-, ಅಥರ್ವಾ ಉತ್ತಮ ಆಯ್ಕೆಯಾಗಬಹುದು.ಅಥರ್ವಾ ಎಂದರೆ ಮೊದಲ ವೇದಮತ್ತು ಇದು ಗಣೇಶನ ಹೆಸರು ಕೂಡ.
  • ರುದ್ರ: ಪೌರಾಣಿಕ ಕಥೆಯಲ್ಲಿ ಶಿವನ ಮತ್ತೊಂದು ಹೆಸರು, ರುದ್ರ ಎಂದರೆ “ನೋವನ್ನು ಹೋಗಲಾಡಿಸುವವನು”ಎಂದರ್ಥ.ಈ ದಿನಗಳಲ್ಲಿ ಭಾರತೀಯ ಪೋಷಕರಲ್ಲಿ ಈ ಹೆಸರು ಜನಪ್ರಿಯವಾಗುತ್ತಿದೆ ಮತ್ತು ಹೀಗಾಗಿ, ಹೆಸರುವಾಸಿಯಾಗಿದೆ ಮತ್ತು ಗಂಡು ಶಿಶುಗಳಿಗೆ ಈ ಹೆಸರನ್ನು ಬಳಸಲಾಗಿದೆ.

Leave a Reply

%d bloggers like this: