2017-ne-saalina-top-10-gandu-shishu-hesarugalu

ನಿಮ್ಮ ಮನೆಗೆ ಹೊಸ ಪೋರನೊಬ್ಬ ಬಂದಿದ್ದಾನೆ. ನಿಮ್ಮ ಈ ಪೋರನಿಗೆ ಒಂದು ಒಳ್ಳೆಯ ಹೆಸರು ಹುಡುಕಬೇಕು. ಆ ಹೆಸರು ನಿಮ್ಮ ರಾಜಕುಮಾರನಿಗೆ ಹೊಂದುವಂತದ್ದು ಆಗಿರಬೇಕು ಹಾಗು ನವೀನವಾದ ಹೆಸರು ಆಗಿರಬೇಕು. ನಿಮ್ಮ ಮನೆ ಹೆಸರು ನಿಮ್ಮ ಮಗ ಬೆಳಗುವುನು. ಅವನಿಗೆ ಒಂದು ಒಳ್ಳೆಯ ಹೆಸರು ಕೊಡುವುದು ನಿಮ್ಮ ಜವಾಬ್ದಾರಿ. ನಿಮಗೆ ಸಹಾಯವಾಗಲು ನಾವು ಇಲ್ಲಿ ಈ ಸಾಲಿನ ಗಂಡು ಶಿಶುಗಳ ಹೆಸರುಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.

೧. ಅತಿಕ್ಷ್

ಅತಿಕ್ಷ ಎಂದರೆ ಬುದ್ಧಿವಂತ, ಜ್ಞಾನಿ ಎಂದರ್ಥ. ನಿಮ್ಮ ಮಗನು ಮುಂದೆ ಕಲಾಂ ಅಂತ ವಿಜ್ಞಾನಿಯೋ ಅಥವಾ ವಿಶ್ವೇಶ್ವರಯ್ಯರ ಥರದ ಅಭಿಯಂತರ ಆಗಬೇಕು ಎನ್ನುವ ಮಹದಾಸೆ ನಿಮ್ಮದಾಗಿದ್ದರೆ, ಈ ಹೆಸರು ಅವನಿಗೆ ನೀಡಿ.

೨. ದಿವಿತ್

ದಿವಿತ್ ಎಂದರೆ ಸಾವಿಲ್ಲದ್ದು ಎಂದು. ನಿಮ್ಮ ಮಗ ಹಾಗು ನಿಮ್ಮದು ಎಂದಿಗೂ ಅಳಿಯದಂತ ಪ್ರೀತಿ ಆಗಿರುವುದರಿಂದ ನಿಮ್ಮ ಮಗನಿಗೆ ಈ ಹೆಸರು ನೀಡಬಹುದು.

೩. ಮೆಹುಲ್

ಪ್ರತಿಯೊಂದು ಮೋಡದ ಅಂಚಿನಲ್ಲಿ ಒಂದು ಬೆಳ್ಳಿ ಗೆರೆ ಇದ್ದೆ ಇರುತ್ತದೆ. ಮೆಹುಲ್ ಎಂದರೆ ಮೋಡ ಎಂದರ್ಥ. ನೀವು ತುಂಬಾ ಕಷ್ಟ ಪಟ್ಟ ನಂತರ ನಿಮಗೆ ಮಗುವಾಗಿದ್ದರೆ ನಿಮ್ಮ ಮಗನಿಗೆ ಇದು ಸೂಕ್ತವಾದ ಹೆಸರು. ಈ ಮೋಡವು ನಿಮ್ಮ ಬಾಳಲ್ಲಿ ಮಳೆ ಸುರಿದು ಹಸಿರು ತರಲಿ.

೪. ಇಧಾಂತ್

ನಿಮ್ಮ ಮಗನು ನಿಮ್ಮ ಬಾಳಿಗೆ ಹೊಸಬೆಳಕು ತರುತ್ತಾನೆ. ನಿಮ್ಮ ಮನೆಯು ಪ್ರಜ್ವಲಿಸುವಂತೆ ಮಾಡುತ್ತಾನೆ. ಇಧಾಂತ್ ಎಂದರೆ ಬೆಳಕು ಚೆಲ್ಲುವುಂತದ್ದು. ಹಾಗಾಗಿ ಈ ಹೆಸರು ನಿಮ್ಮ ಮಗನಿಗೆ ಸೂಕ್ತವಾಗಿರುತ್ತದೆ.

೫. ನಿನಾದ್

ನೀವು ಸಂಗೀತ ಪ್ರಿಯರಾಗಿದ್ದರೆ, ನಿಮ್ಮ ಜೀವನದ ಸಂಗೀತವು ಕೂಡ ರಸಮಯವಾಗಿರಲು ನಿಮ್ಮ ಮಗನಿಗೆ ಈ ಹೆಸರನ್ನಿಡಬಹುದು. ನಿನಾದ್ ಎಂದರೆ ಶಬ್ದ ಎಂದರ್ಥ.

೬. ಶ್ರೇಣಿಕ್

ನೀವು ಜೀವನದಲ್ಲಿ ಎಲ್ಲವನ್ನೂ ಯೋಜಿತವಾಗಿ ಮಾಡುವವರಾಗಿದ್ದರೆ, ನಿಮ್ಮ ಮಗನು ನಿಮ್ಮ ಹೆಜ್ಜೆಯನ್ನು ಪಾಲಿಸಬೇಕೆಂಬ ಆಸೆ ನಿಮಗಿದ್ದರೆ ಈ ಹೆಸರು ಅವನಿಗೆ ಇಡಬಹುದು. ಶ್ರೇಣಿಕ್ ಅಂದರೆ ಸರ್ವ ನಿಯೋಜಿತ ಎಂದು.

೭. ವಿಜ್ವಲ್

ನಿಮ್ಮ ಮಗನು ತನ್ನ ಚಾತುರ್ಯದಿಂದ ಉಜ್ವಲಿಸುತ್ತಾನೆ ಎಂದೆನಿಸಿದರೆ ಅವನಿಗೆ ಸೂಕ್ತ ಹೆಸರು ವಿಜ್ವಲ್. ವಿಜ್ವಲ್ ಎಂದರೆ ಚತುರ, ಬುದ್ಧಿವಂತ ಎಂದರ್ಥ.

೮. ನೃಪತುಂಗ

ಕನ್ನಡದ ಮೊದಲ ರಾಜನು ನೃಪತುಂಗ. ನೂರಾರು ವರ್ಷಗಳ ನಂತರವೂ ನಾಡಿನಲ್ಲಿ ನಿಮ್ಮ ಮಗನ ಹೆಸರು ಇತಿಹಾಸದಲ್ಲಿ ಉಳಿಯುವಂತ ಕಾರ್ಯ ಮಾಡುತ್ತಾನೆ ಎಂಬ ಆಶಯ ನಿಮ್ಮದಾಗಿದ್ದರೆ ಅವನಿಗೆ ಇಂತಹ ರಾಜಯೋಗ್ಯ ಹೆಸರನ್ನೇ ನೀಡಿ !

೯. ಗಾಂಡೀವ್

ಗಾಂಡೀವ ಎಂದರೆ ಅರ್ಜುನನ ಬಾಣ ಎಂದರ್ಥ. ನಿಮ್ಮ ಮಗನದ್ದು ಇಟ್ಟ ಗುರಿಯನ್ನ ತಲುಪವಂತ ವ್ಯಕ್ತಿತ್ವ ಎನಿಸಿದರೆ ಅವನಿಗೆ ಈ ಹೆಸರು ಸೂಕ್ತ.

೧೦. ಮಯೂರ್

ಮಯೂರ ವರ್ಮ, ಕನ್ನಡದ ಕುಲತಿಲಕ ಯಾರಿಗೆ ಗೊತ್ತಿರುವುದಿಲ್ಲ ಹೇಳಿ. ನಿಮ್ಮ ಮಗನು ನಿಮ್ಮ ಮನೆಯನ್ನು ಹಾಗು ನಾಡನ್ನು ಹೆಮ್ಮೆ ಪಡಿಸುವಂತ ವ್ಯಕ್ತಿಯಾಗಬೇಕು ಎಂಬ ಆಸೆ ನಿಮಗೆ ಇದ್ದರೆ, ನಿಮ್ಮ ಮಗನ ಹೆಸರು ಮಯೂರ ಆಗಿರಲಿ.

Leave a Reply

%d bloggers like this: