garbhiniyaru-malabekaada-bhangi-0

ಗರ್ಭಧಾರಣೆಯ ಸಮಯದಲ್ಲಿ ಶರೀರವು ಹಲವಾರು ವ್ಯತಿಯಾನಗಳಿಗೆ ಒಳಗಾಗುವುದರಿ೦ದ, ಎಷ್ಟೇ ಪ್ರಯತ್ನ ಪಟ್ಟರೂ ನಿದ್ರೆ ಹತ್ತಿರ ಸುಳಿಯದು.ನಿದ್ರೆಯಿಲ್ಲದೇ ಕಳೆಯಬೇಕಾದ ಹಲವಾರು ರಾತ್ರಿಗಳು ನಿಮ್ಮ ಪಾಲಿಗೆ ತೆರೆದುಕೊಳ್ಳುವುದು. ದಿನದಿಂದ ದಿನಕ್ಕೆ ಬೆಳೆಯುವ ಹೊಟ್ಟೆಯೊ೦ದಿಗೆಸೊ೦ಟನೋವು,ಎದೆಯುರಿ ಹಾಗೂ ಉಸಿರಾಟದ ತೊ೦ದರೆಯಿ೦ದಲೂ ಸರಿಯಾಗಿ ನಿದ್ರೆ ಬಾರದಿರಬಹುದು. 

ಈ ಎಲ್ಲಾ ತೊ೦ದರೆಗಳಿಗೆ ಪರಿಹಾರವಾಗಿ, “ಎಸ್ ಒ ಎಸ್” ಎನ್ನುವ ನಿದ್ರಾ ಭ೦ಗಿಯನ್ನು ಶಿಫಾರಾಸು ಮಾಡಲಾಗಿದೆ.  

ನಿಮಗೆ ಹಿತಕರವಾದ ಬದಿಯಲ್ಲಿ ಮೊಣಕಾಲನ್ನು ಮಡಚಿ, ಎರಡೂ ಕಾಲುಗಳ ನಡುವೆ ತಲೆದಿ೦ಬನ್ನಿಟ್ಟು ಮಲಗುವ ರೀತಿಯೇ ಎಸ್ ಒ ಎಸ್ ರೀತಿ. ಬಲಭಾಗಕ್ಕಿ೦ತ ಎಡ ಭಾಗಕ್ಕೆ ಮುಖಮಾಡಿ ಮಲಗುವುದರಿ೦ದ ಜರಾಯುವಿನಲ್ಲಿರು ಮಗುವಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಮತ್ತು ಪೋಷಕಾ೦ಶಗಳು ಪ್ರವಹಿಸಿತ್ತದೆಯೆ೦ದು ಹೇಳಲ್ಪಡುತ್ತದೆಯಾದರೂ, ಆ ತರ್ಕದಲ್ಲಿ ಹುರುಳಿಲ್ಲ. ಆದಕಾರಣ ನಿಮಗೆ ಆರಾಮದಾಯಕವೆನಿಸುವ ಯಾವುದೇ ಭ೦ಗಿಯಲ್ಲಿ ಮಲಗುವುದರಲ್ಲಡ್ಡಿಯಿಲ್ಲ.    ಆದರೆ, ಎಸ್ ಒ ಎಸ್ ಭ೦ಗಿ ಸೊ೦ಟನೋವಿಗೆ ರಾಮಬಾಣವಿದ್ದ೦ತೆ. ಹೀಗೆ ಮಲಗುವಾಗ ಹೊಟ್ಟೆಗೆ ಆಸರೆಯಾಗಿ ತಲೆದಿ೦ಬನ್ನು ಇಟ್ಟುಕೊಳ್ಳಬಹುದು. ರಾತ್ರಿಯಲ್ಲಿ ಎದೆಯುರಿ ಅನುಭವಿಸುತ್ತಿದ್ದರೆ, ಬೆನ್ನಿನ ಹಿ೦ಭಾಗದಲ್ಲಿ ತಲೆದಿ೦ಬನ್ನಿಟ್ಟು, ಎದೆಭಾಗವನ್ನು ಸ್ವಲ್ಪ ಮೇಲಕ್ಕೆತ್ತರಿಸಿ ಮಲಗಿಕೊಳ್ಳಬಹುದು. ೮-೯ನೇ ತಿಂಗಳುಗಳಲ್ಲಿ ಉಸಿರಾಟಕ್ಕೇನಾದರೂ ಅಡಚಣೆಯುಂಟಾದರೆ,ನಿಮ್ಮೆರಡೂ ಪಕ್ಕಗಳಲ್ಲಿ ತಲೆದಿಂಬನ್ನು ಆಸರೆಯಾಗಿಟ್ಟುಕೊಳ್ಳಬಹುದು.     ಆದರೆ ಅಂಗಾತ ಮಲಗುವುದನ್ನು ಖಂಡಿತವಾಗಿಯೂ ಉಪೇಕ್ಷಿಸಲೇ ಬೇಕು.ಹಾಗೆ ಮಲಗುವುದು ಸೊಂಟನೋವು, ಉಸಿರಾಟದ ತೊಂದರೆ,ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ,ಮೂಲವ್ಯಾಧಿ, ರಕ್ತದೊತ್ತಡ ಮೊದಲಾದ ತೊಂದರೆಗಳಿಗೆ ಆಹ್ವಾನ ನೀಡಿದಂತೆ. ಮಾತ್ರವಲ್ಲದೆ ನಿಮ್ಮ ಹೊಟ್ಟೆಯು ಕರುಳು ಹಾಗೂ ಪ್ರಧಾನ ರಕ್ತನಾಳಗಳನ್ನು ಆಶ್ರಯಿಸಿ ವಿಶ್ರಮಿಸುವುದರಿ೦ದ ಹೃದಯದಿಂದ ಪ್ರವಹಿಸುವ ರಕ್ತವು ಮಗುವನ್ನು ತಲುಪಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ.  

ಉತ್ತಮ ನಿದ್ರೆಯನ್ನು ಪಡೆಯಲು ಅನುಸರಿಸಬಹುದಾದ ೩ ನಿದ್ರಾಭಂಗಿಗಳು. 

೧.ತಲೆದಿಂಬಿನ ಬಳಕೆ

ನಿಮಗೆ ಒತ್ತಡ ಸಿಗಬೇಕೆಂದು ಅನಿಸುವ ಭಾಗದಲ್ಲಿ ತಲೆದಿಂಬನ್ನಿಟ್ಟು ಮಲಗುವುದರಿಂದ ಸೊಂಟನೋವನ್ನು ಕಡಿಮೆಗೊಳಿಸಬಹುದು. 

೨.ಸೊಂಟ ಪಟ್ಟಿಬೆಲ್ಟ್) 

ಹಗಲಿಡೀ ಮೆಟರ್ನಿಟಿ ಬೆಲ್ಟನ್ನು ಕಟ್ಟಿಕೊಳ್ಳುವುದರಿಂದ , ರಾತ್ರಿಯಲ್ಲಿ ಅಷ್ಟಾಗಿ ಸೊಂಟನೋವು ಮರುಕಳಿಸದು. 

೩.ಸರಿಯಾದ ಆಹಾರ ಕ್ರಮ

ಒಮ್ಮೆಗೇ ಹೊಟ್ಟೆ ಬಿರಿಯುವಂತೆ ತಿನ್ನದೇ,ಸ್ವಲ್ಪ ಸ್ವಲ್ಪವಾಗಿ ೩-೪ ಬಾರಿಗಳಂತೆ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಭಾರದಿಂದುಂಟಾಗುವ ಸೊಂಟನೋವಿಗೆ ತಕ್ಕ ಮಟ್ಟಿನ ಪರಿಹಾರ ಕಂಡುಕೊಳ್ಳಬಹುದು. 

Leave a Reply

%d bloggers like this: