taaynadirige-misalaada-5-sarala-haagu-sogasaada-keshavinyaasagalu-1

ತಾಯ೦ದಿರಿಗೆ ಮನಸ್ಪೂರ್ತಿಯಾಗಿ ಸ್ನಾನಮಾಡಲೂ ಪುರುಸೊತ್ತಿರುವುದಿಲ್ಲ, ಅ೦ತಾದ್ದರಲ್ಲಿ ಗಂಟೆಗಟ್ಟಲೆ ಕನ್ನಡಿಯ ಮುಂದೆ ಕುಳಿತು ಕೂದಲು ಹೆಣೆಯುವುದು ಹೇಗೆ ಎಂದು ಹಲುಬುವವರಿಗಾಗಿ ಶುಭ ಸುದ್ದಿ. ನಿಮ್ಮ ಬಿಡುವು ರಹಿತ ವೇಳೆಯಲ್ಲೂ ನಿಮ್ಮನ್ನು ಸುಂದರಿಯನ್ನಾಗಿಸುವ ೫ ಸರಳ ಕೇಶವಿನ್ಯಾಸಗಳ ಬಗ್ಗೆ ತಿಳಿಯೋಣ.

೧. ತುರುಬು

ಯಾವುದೇ ಹಿಂಜರಿಕೆಯಿಲ್ಲದೇ ನೀವು ತುರುಬು ಕಟ್ಟಿಕೊಳ್ಳಬಹುದು. ನೀವು ದುಡಿಯುವವರಾಗಿದ್ದರೆ, ನಿಮ್ಮ ಕಛೇರಿಯಲ್ಲೂ ಈ ಕೇಶವಿನ್ಯಾಸದಿಂದ ನಿಮ್ಮ ಘನತೆ ಹಾಗೂ ಗೌರವ ಹೆಚ್ಚಾಗುವುದು.ಆದರೆ, ತುರುಬು ಕಟ್ಟಿಕೊಳ್ಳುವಾಗ ಉತ್ತಮ ಗುಣಮಟ್ಟದ ಬೋಬಿ ಪಿನ್ಗಳನ್ನು ಬಳಸುವುದು ಉತ್ತಮ. ಇಲ್ಲದಿದ್ದರೆ, ಕೂದಲಿಗೆ ಹಾನಿಯುಂಟಾಗುತ್ತದೆ.

ಈ ಕೇಶವಿನ್ಯಸಾದ ಮಾಹಿತಿಗಾಗಿ ಇಲ್ಲಿ ಒತ್ತಿರಿ.

೨. ನಯಗೊಳಿಸಿದ ವಿಕ್ಸೆನ್ ಕೂದಲು

ದುಡಿಯುವ ಮಹಿಳೆಯರಿಗೆ ನೀಟ್ ಲುಕನ್ನು ನೀಡುವ ಈ ವಿನ್ಯಾಸ ಕಟ್ಟಿಕೊಳ್ಳಲು ಸ್ವಲ್ಪ ತಾಲೀಮು ಮಾಡಬೇಕಾಗುತ್ತದೆ. ಕೂದಲು ಅಸ್ತವ್ಯಸ್ತವಾಗಿ ಹರಡಿಕೊಂಡಿದ್ದರೆ, ಈ ಕೇಶವಿನ್ಯಸವು ಇನ್ನೂ ಚೆನ್ನಾಗಿ ಮೂಡಿಬರುತ್ತದೆ. ಆದಕಾರಣ ಯಾವುದೇ ಹಿಂಜರಿಕೆಯಿಲ್ಲದೆ ಕೂದಲನ್ನು ಗಾಳಿಗೆ ಹಾರಬಿಡಿ.

ಈ ಕೇಶವಿನ್ಯಸಾದ ಮಾಹಿತಿಗಾಗಿ ಇಲ್ಲಿ ಒತ್ತಿರಿ.

೩. ಮುದ್ದಾದ ಟ್ವೆಸ್ ಪಾಸ್ಸ್ಡ್ ತುರುಬು

ಯಾವ ವಯಸ್ಸಿನ ಸ್ತ್ರೀಯರು ಕೂಡಾ ಕಟ್ಟಿಕೊಳ್ಳಬಹುದಾದಂತಹ ಆದರೆ, ಸ್ವಲ್ಪ ಕೆಳ ಜಾರಿದಂತೆ ಈ ತುರುಬನ್ನು ಹಾಕಿಕೊಳ್ಳಬಹುದು. ಬಹಳ ವೇಗವಾಗಿ ಕಟ್ಟಿಕೊಳ್ಳಬಹುದಾದಂತಹ ಈ ವಿನ್ಯಾಸವು ನಿಮಗೆ ನೀಟ್ ಲುಕ್ಕನ್ನು ನೀಡುತ್ತದೆ. ಸಮಯದ ಅಭಾವವಿರುವಾಗ ಧೈರ್ಯವಾಗಿ ಈ ಕೇಶಾಲಂಕಾರಕ್ಕೆ ಆದ್ಯತೆ ನೀಡಬಹುದು.  

ಈ ಕೇಶವಿನ್ಯಸಾದ ಮಾಹಿತಿಗಾಗಿ ಇಲ್ಲಿ ಒತ್ತಿರಿ.

೪. ದ ಬ್ರೈಡ್ ರಾಪ್ಡ್ ಪೋನಿ ಟೈಲ್

ಮದುಮಗಳಿಗೂ ಕುದುರೆಗೂ ಎತ್ತಣ ಸಂಬಂಧವೆಂದು ತಲೆಕೆರೆದು ಕೊಳ್ಳುತ್ತಿದ್ದೀರಾ..?ಅದರ ಯಾವುದೇ ಅಗತ್ಯವಿಲ್ಲ. ಒಮ್ಮೆ ಪರೀಕ್ಷಿಸಿಕೊಂಡರೆ ಮತ್ತೆ ಇದು ನಿಮ್ಮ ಅಚ್ಚುಮೆಚ್ಚಿನ ಕೇಶಾಲಂಕಾರವಾಗುವುದರಲ್ಲಿ ಎರಡು ಮಾತಿಲ್ಲ.ಮಕ್ಕಳೊಂದಿಗೆ ಮಾಲ್ ಗಳಲ್ಲಿ ಸುತ್ತಾಡುವಾಗ ಅಥವಾ ಕಿಟಿ ಪಾರ್ಟಿಗೆಂದು ಹೊರಡುವ ಸಂದರ್ಭಗಳಲ್ಲಿ ನಿಮ್ಮ ಕೂದಲನ್ನು ಈ ವಿನ್ಯಾಸದಿಂದ ಸಿಂಗರಿಸಿಕೊಂಡರೆ, ಎಲ್ಲರ ಕಣ್ಣು ನಿಮ್ಮ ಕೂದಲ ಮೇಲೆಯೇ ಎನ್ನುವುದರಲ್ಲಂತೂ ಯಾವುದೇ ಸಂಶಯವಿಲ್ಲ.

ಈ ಕೇಶವಿನ್ಯಸಾದ ಮಾಹಿತಿಗಾಗಿ ಇಲ್ಲಿ ಒತ್ತಿರಿ.

೫. ತಿರುಚಿದ ಸೈಡ್ ಪೋನಿ

ನಿಮ್ಮ ತಲೆಯ ಯಾವುದಾದರೊಂದು ಬದಿಗೆ ಕುದುರೆಬಾಲ ಕಟ್ಟಿಕೊಳ್ಳಿ.ಅದನ್ನು ಬೊಗಮೈನ್ ರೀತಿಯಲ್ಲಿ ಕಟ್ಟಿಕೊಂಡು ಸಾಸ್ ಅನ್ನು ಅಳವಡಿಸಿಕೊಂಡರೆ, ನಿಮ್ಮನ್ನು ಆಧುನಿಕ ಯುವತಿಯಂತೆ ಮಾಡುವ ಕೇಶವಿನ್ಯಾಸವು ನಿಮ್ಮದಾಯಿತು. ಹಗಲು ರಾತ್ರಿಯೆನ್ನುವ ವ್ಯತ್ಯಾಸವಿಲ್ಲದೆ ಯಾವುದೇ ಸಂದರ್ಭದಲ್ಲೂ ಹಾಕಿಕೊಳ್ಳಬಹುದಾದಂತಹ ಈ ವಿನ್ಯಾಸವು ನಿಮ್ಮನ್ನು ಆಕರ್ಷಣೀಯವಾಗಿರಿಸುತ್ತದೆ.

ಈ ಕೇಶವಿನ್ಯಸಾದ ಮಾಹಿತಿಗಾಗಿ ಇಲ್ಲಿ ಒತ್ತಿರಿ.

Leave a Reply

%d bloggers like this: