ajja-ajjiyaru-mattu-mommakkalu

ನಿಮ್ಮ ಅಜ್ಜ ಅಜ್ಜಿಯರನ್ನು ಕೇಳಿ ನಿಮಗೆ ಖುಷಿಯ ಪ್ರಪಂಚವಾಗಿ ಕಾಣುವ ಒಂದು ವಿಷಯ ಯಾವುದೆಂದು ಅಥವಾ ನಿಮ್ಮ ಪಾಲಿನ ಪ್ರಪಂಚ ಯಾವುದೆಂದು, ಅವರಿಂದ ಬರುವ ಉತ್ತರ ನಮ್ಮ ಪಾಲಿನ ಪ್ರಪಂಚ ನಮ್ಮ ಮೊಮ್ಮಕಳು.

ಮಗುವನ್ನು ಕೇಳಿ ನಿಮ್ಮನ್ನು ಹೆಚ್ಚು ಪ್ರೀತಿಸುವವರು ಯಾರು ಎಂದು ಅವರಿಂದ ಬರುವ ಉತ್ತರ ಒಂದೇ ಅವರ ಅಜ್ಜ ಅಥವಾ ಅಜ್ಜಿ.

ತಾತ ಅಜ್ಜಿ ಮತ್ತು ಮೊಮ್ಮಕಳ ನಡುವಿನ  ಸಂಬಂಧ ಒಂದು ಸುಂದರ ಅತ್ಯಂತ ಅದ್ಭುತವಾದದ್ದು ಮತ್ತು ಅದರಂತೆ ಬೇರೆ ಯಾವುದೇ ಸಂಬಂಧಗಳು ಇದನ್ನು ಮೀರಿಸಲಾರವು. ಇದು ಕೊನೆಯಿಲ್ಲದ ಪ್ರೀತಿಯ ಜೊತೆಗೆ ತುಂಟ ತಮಾಷೆಗಳಿಂದ ಕೂಡಿದ್ದು. ಒಬ್ಬರಿಗೆ ಇದು ತಮ್ಮ ಜೀವನದ ಕಡೆಯ ದಿನಗಳು, ಮತ್ತು ಇನ್ನೊಬ್ಬರಿಗೆ ತಮ್ಮ ಜೀವನದ ಆರಂಭದ ಕ್ಷಣಗಳು. ಅವರು ತಮ್ಮ ಅನುಭವವನ್ನು ಕಿರಿಯರ ಜೊತೆ ಹಂಚಿಕೊಂಡು ಅರ್ಥಪೂರ್ಣ ಜೀವನ ನಡೆಸಲು ಮಾರ್ಗ ನೀಡುತ್ತಾರೆ, ಮತ್ತು ತಮ್ಮಿಬ್ಬರ ನಡುವಿನ ಸಂಬಂಧವನ್ನು ಅರ್ಥಪೂರ್ಣವಾಗಿ ಮುಂದುವರೆಸುತ್ತಾರೆ.

ಇಲ್ಲಿ ಅವರ ಅರ್ಥಪೂರ್ಣ ಸಂಬಂಧದ ಕೆಲವು ಪ್ರಾಮುಖ್ಯತೆಗಳನ್ನು ವಿವರಿಸಲಾಗಿದೆ

೧.ಮೊಮ್ಮಕಳು ಅಜ್ಜ ಅಜ್ಜಿಯರ ಭವಿಷ್ಯವನ್ನು ಪ್ರತಿನಿಧಿಸುತ್ತಾರೆ, ಮತ್ತು ಇದಕ್ಕೆ ಸಂಬಂದಿಸಿದ ಗೌರವವು ಅಪಾರವಾಗಿರುತ್ತದೆ. ಅವರಿಗೆ ಬೇಕಾಗಿರುವುದು ಅವರ ಕುಟುಂಬದ  ಮುಂದಿನ ಪೀಳಿಗೆಯು ಎಲ್ಲದರಲ್ಲೂ ಅತ್ಯುತ್ತಮವಾಗಿ ಇರುವುದು, ಮತ್ತು ಅತ್ಯುತ್ತಮರಾಗಲು ಬೆಳೆಯುದನ್ನು ನೋಡಲು ಮತ್ತು ಅದರ ಭಾಗವಾಗಿರುವುದು ಮಾತ್ರ.

೨.ಅಜ್ಜ ಅಜ್ಜಿಯಂದಿರು ತಮ್ಮ ಮೊಮ್ಮಕಳ ಮೇಲಿನ ಅತಿಯಾದ ಪ್ರೀತಿಯಿಂದ ಕೆಲವು ವಿಷಯಗಳಲ್ಲಿ ಮೊಮ್ಮಕಳು ಮೊಂಡುತನ ಅಥವಾ ಹಾನಿಯಾಗುವಂತಹ ಸಂದರ್ಭ ಉಂಟಾಗಬಹುದು, ಅದು ಅವರ ಮಕ್ಕಳ ಮೇಲು ಆ ತರಹ ಭಾವಿಸಿರದಂತಹ ವಾತ್ಸಲ್ಯ.

೩.ಮೊಮ್ಮಕ್ಕಳು ತಮ್ಮ ಪೋಷಕರು ಚಿಕ್ಕವರಾಗಿದ್ದ ದಿನಗಳ ಬಗ್ಗೆ ಹೇಳುವಾಗ ತುಂಬಾ ಸಂತೋಷದಿಂದ ಅದನ್ನು ಆಲಿಸುತ್ತಾರೆ, ಮತ್ತು ಆ ದಿನಗಳನ್ನು ಅವರು ಕಲ್ಪಿಸಿಕೊಂಡು ಖುಷಿ ಪಡುತ್ತಾರೆ, ಆದರೆ ಇವುಗಳನ್ನು ಅಜ್ಜ ಅಜ್ಜಿಯರು ಮಾತ್ರ ಹೇಳಲು ಸಾಧ್ಯ.

೪.ಮೊಮ್ಮಕ್ಕಳು ತಮ್ಮ ಅಜ್ಜ ಅಜ್ಜಿಯರ ಜೊತೆ ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತಾರೆ, ಏಕೆಂದರೆ, ಅವರು ಮಕ್ಕಳಲ್ಲಿ ನಾವೇ ಇಲ್ಲಿ ಕೇಂದ್ರ ಬಿಂದು ಎನ್ನುವ ಭಾವನೆಯನ್ನು ಮೂಡಿಸುವಂತೆ ಮಾಡುತ್ತಾರೆ, ಮತ್ತು ಅವರನ್ನು ಬಿಟ್ಟು ಬೇರೆ ಯಾವುದೇ ವಸ್ತು, ವಿಷಯ ಅಥವಾ ಮನುಷ್ಯರು ಅವರಿಗೆ ಪ್ರಮುಖರಲ್ಲ.

೫.ಈ ಸಂಬಂಧದಿಂದ ಮಕ್ಕಳು, ಅವರಿಂಗಿಂತ ದೊಡ್ಡವರ ಜೊತೆ ಹೇಗೆ ನಡೆದುಕೊಳ್ಳಬೇಕು, ಗೌರವಿಸಬೇಕು ಮತ್ತು ವಿನಯವನ್ನು ಕಲಿಯುತ್ತಾರೆ.

೬.ನಿಮ್ಮ ಅಜ್ಜಿ ಮನೆಯಲ್ಲಿರುವ ಆಹಾರದ ರುಚಿ ಬೇರೆಯಲ್ಲೂ ಸಿಗುವುದಿಲ್ಲ, ಅಲ್ಲಿನ ತಿನಿಸುಗಳು ಎಂದರೆ ಮಕ್ಕಳಲ್ಲಿ ಆಸೆ, ಮೊದಲು ನಾನು ಅದನ್ನು ನೋಡಬೇಕು/ಸೇವಿಸಬೇಕು ಎನ್ನುವಷ್ಟು ಅದನ್ನು ಇಷ್ಟಪಡುತ್ತಾರೆ. ಅವರ ದೃಷ್ಟಿಯಲ್ಲಿ ಅವರ ಅಜ್ಜಿಯೇ ಮೊದಲ ಅಡುಗೆ ಗುರು.

೭.ಕ್ರಮೇಣ, ಮಕ್ಕಳು ದೊಡ್ಡವರಾದಂತೆ, ತಮ್ಮ ಕರ್ತವ್ಯವನ್ನು ಬದಲಿಸಿ, ಅವರ ಬೆನ್ನೆಲುಬಾಗಿ ಬೆಂಬಲ ನೀಡುತ್ತಾರೆ, ಅವರ ಬಗ್ಗೆ ಕಾಳಜಿ ವಹಿಸುತ್ತಾರೆ.

Leave a Reply

%d bloggers like this: