nimma-maguvannu-shaalege-kaluhisalu-tayaari-maaduva-9-maargagalu

ಮೊದಲ ಬಾರಿ ಶಾಲೆಗೆ ಹೋಗುವುದು ಮಕ್ಕಳಿಗೆ ಬೇಸರದ ವಿಷಯ. ಹಲವು ಮಕ್ಕಳಿಗೆ, ಶಾಲೆಯ ಮೊದಲ ದಿನ, ಅವರು ಅವರ ಪೋಷಕರಿಂದ ಹೆಚ್ಚು ಸಮಯದವರೆಗೆ ದೂರವಿರುವ ಮೊದಲ ದಿನ ಕೂಡ ಆಗಿರುತ್ತದೆ, ಮತ್ತು ಆ ದಿನ ಅವರ ಸುತ್ತ ಅಪರಿಚಿತರು ಇರುವುದರಿಂದ ಅವರಿಗೆ ಆ ದಿನ ತುಂಬಾ ಕಷ್ಟಕರವಾಗಿರುತ್ತದೆ. ಮಗುವಿನ ಶೈಕ್ಷಣಿಕ ತಯಾರಿಗೆ ಸಮಯವಿದ್ದರೂ, ನಿಮ್ಮ ಮಗುವನ್ನು ಭಾವನಾತ್ಮಕ ಮತ್ತು ಸಮಾಜದ ಜೊತೆಗೆ ಸ್ಪರ್ಧಿಸಲು ಶಾಲೆಗೆ ಕಳುಹಿಸುವ ತಯಾರಿ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಶಾಲೆಗಳು ಸಮಯ, ವಾಡಿಕೆ ಮತ್ತು ನಿಯಮಗಳಿಂದ ಕೂಡಿದ ಸ್ಥಳವಾಗಿದೆ. ಶಿಶುಗಳು ಮನೆಯಲ್ಲಿ ತಮ್ಮ ಇಚ್ಚೆಯಂತೆ ಇರುತ್ತವೆ, ಮತ್ತು ಶಾಲೆಯ ಈ ನಿಯಮಗಳಿಗೆ ತಕ್ಷಣವೇ, ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಮಕ್ಕಳು ಶಾಲೆಯಲ್ಲಿ ತಮ್ಮ ಜಾಗದಿಂದ ಅಲುಗಾಡದೆ, ಹೆಚ್ಚಿನ ಸಮಯ ಕುಳಿತುಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲಾ ಹೊಂದಿಕೊಳ್ಳಲು ಮಕ್ಕಳಿಗೆ ಸಮಯ ಬೇಕಾಗುತ್ತದೆ, ಆದ್ದರಿಂದ ನಿಮ್ಮ ಮಗುವಿನ ದಾರಿಯಲ್ಲಿ ಬರುವ ಎಲ್ಲಾ ವಿಷಯಗಳ ಬಗ್ಗೆ ಮೊದಲೇ ತಯಾರಿ ನೀಡಿ.

ನಿಮ್ಮ ಮಗುವನ್ನು ಶಾಲೆಗಾಗಿ ತಯಾರಿಸಲು ನಿಮಗೆ ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ:

೧.ಇಂದಿನಿಂದ ಹೊಸ ವೇಳಾಪಟ್ಟಿಯನ್ನು ನೀನು ಆರಂಭಿಸುತ್ತಿರುವೆ ಎಂದು ತಿಳಿಸಿ. ಸರಿಯಾದ ಸಮಯಕ್ಕೆ ಮಲಗಿ, ಏಳುವುದನ್ನು ಅಭ್ಯಾಸ ಮಾಡಿಸಿ, ಮತ್ತು ಅವನು/ಅವಳು ನಿರ್ದಿಷ್ಟ ಸಮಯದವರೆಗೆ ಶಾಲೆಯಲ್ಲಿಯೇ ಕುಳಿತರಬೇಕು ಎಂಬುದನ್ನು ಸ್ಪಷ್ಟಪಡಿಸಿ.

೨.ನಿಮ್ಮ ಮಗುವಿನೊಂದಿಗೆ ಶಾಲೆಗೆ ಭೇಟಿ ನೀಡಿ ಮತ್ತು ಅವನು  / ಅವಳನ್ನು ಶಾಲೆಯೊಂದಿಗೆ ಪರಿಚಯ ಮಾಡಿಕೊಡಿ.ಸಾಧ್ಯವಾದರೆ ಶಿಕ್ಷಕರನ್ನು ಭೇಟಿ ಮಾಡಿ.

೩.ನಿಮ್ಮ ಮಗುವಿಗೆ ಹೇಳಿ, ಶಾಲೆಯ ಬಗ್ಗೆ ಹೆದರಬೇಡ, ನೀನು ಹೊಸದಾಗಿ ಕಲಿಯಲು ಹೋಗುತ್ತಿರುವೆ, ಅಲ್ಲಿ ನಿನಗೆ ಹೊಸ ಸ್ನೇಹಿತರು ಸಿಗುತ್ತಾರೆ, ಅವರೊಡನೆ ತಮಾಷೆಯ ಕ್ಷಣಗಳನ್ನು ಕಳೆಯಬಹುದು ಎಂದು ಮಗುವಿನಲ್ಲಿ ಧೈರ್ಯ ತುಂಬಿ.

೪.ಸಾಧ್ಯವಾದರೆ, ನಿಮ್ಮ ಮಗುವಿನ ಶಾಲೆ ಆರಂಭವಾಗುವ ಮುನ್ನ, ಅವನ/ಅವಳ ತರಗತಿಯ ಸಹಪಾಠಿಯನ್ನು ಭೇಟಿ ಮಾಡಿ, ಪರಿಚಯ ಮಾಡಿಕೊಡಿ ಇದರಿಂದ ಅವನು ಶಾಲೆಯ ಒಳಗೋಗುತ್ತಿದ್ದಂತೆ ಅವನಿಗೆ ಬೇಸರವಾಗದಂತೆ ಇರಲು ಒಬ್ಬ ಸ್ನೇಹಿತ/ಸ್ನೇಹಿತೆ ಸಿಗುವರು.

೫.ನಿಮ್ಮ ಮಗುವು ಮೊದಲೇ ಅಂಗನವಾಡಿ, ಶಿಶು ವಿಹಾರ ಕೇಂದ್ರಗಳಿಗೆ ಹೋಗುತ್ತಿದ್ದರೆ, ಮಗುವಿಗೆ ತನ್ನ ಪೋಷಕರನ್ನು ಬಿಟ್ಟು ಹೆಚ್ಚು ಸಮಯದವರೆಗೆ ಶಾಲೆಯಲ್ಲಿ ಇರಲು ಸುಲಭವಾಗುತ್ತದೆ.ಮತ್ತು ನಿಮ್ಮ ಮಗುವಿಗೆ ಸ್ವತಂತ್ರವಾಗಿ, ನೀರು ಕುಡಿಯಲು, ಆಹಾರ ಸೇವಿಸಲು, ಕಲಿಸಿಕೊಡಿ.

೬.ಶಾಲೆಯ ಬಗ್ಗೆ ಮಗುವಿಗೆ ಧನಾತ್ಮಕವಾಗಿ ಹೇಳಿ, ಕಲಿಯಲು ಮತ್ತು ಯೋಚಿಸಲು ಸಹಾಯವಾಗುವಂತೆ ಶಾಲೆಯು ಆರಾಮದಾಯಕ ಎಂದು ಭಾವಿಸುವಂತೆ ಮಾಡಿ, ಮತ್ತು ಮಗುವನ್ನು ಪ್ರೋತ್ಸಾಹಿಸಿ, ಶಾಲೆಯ ಬಗ್ಗೆ ಯಾವದೇ ಪ್ರಶ್ನೆ ಅಥವಾ ಅನುಮಾನಗಳಿದ್ದರೆ ಕೇಳಲು ಹೇಳಿ.

೭.ನಿಮ್ಮ ಮಗುವಿಗೆ ಸ್ವಂತ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿ, ಮತ್ತು ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದನ್ನು ಕಲಿಸುವುದರಿಂದ, ಶಾಲೆಯಲ್ಲಿ ಯಾರ ಸಹಾಯವನ್ನು ನಿರೀಕ್ಷಿಸದೆ, ಮೊದಲ ಸ್ಥಾನ ಪಡೆಯುದರಲ್ಲಿ ಮುಂಚಿತನಾಗುತ್ತಾನೆ.

೮.ನಿಮ್ಮ ಮಗುವಿಗೆ ತನ್ನ ಹೆಸರನ್ನು ಕರೆದಾಗ ಹೇಗೆ ಪ್ರತಿಕ್ರಿಯೆ ಮಾಡಬೇಕು ಎಂಬುದನ್ನು ಹೇಳಿಕೊಡಿ. ಜೊತೆಗೆ ತನ್ನನ್ನು ತಾನು ಶಿಕ್ಷಕರಿಗೆ ಮತ್ತು ಸ್ನೇಹಿತರಿಗೆ ಹೇಗೆ ಪರಿಚಯಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡಿ.

೯.ಕೊನೆಯದಾಗಿ, ಅವರನ್ನು ಪ್ರೇರೇಪಿಸಿ ಮತ್ತು ಹುರಿದುಂಬಿಸಿ. ಶಾಲೆಯಲ್ಲಿ ಏನು ಮಾಡಬೇಕು, ಹೇಗಿರಬೇಕು ಎಂಬುದನ್ನು ಹೇಳಿಕೊಡಿ. ಮತ್ತು ಶಾಲೆಯು ಖಂಡಿತವಾಗಿಯೂ ಅವರಿಗೆ ಮರೆಯಲಾಗದ ಕ್ಷಣಗಳನ್ನು ಕೊಡುತ್ತದೆ.

Leave a Reply

%d bloggers like this: