rajaadinagalu-nimma-maguvina-belavanigege-hege-sahaaya-maaduttave

ಮಗುವಿನ ಒಂಟಿತನ ಅವರಲ್ಲಿ ಬೇಸರವನ್ನುಂಟುಮಾಡಬಹುದು. ಶೇಕಡಾ ೭೦%ರಷ್ಟು, ಪೋಷಕರ ಮತ್ತು ಮಕ್ಕಳ ನಡುವಿನ  ಸಂಭಾಷಣೆ ಶಾಲೆಯ ಬಗ್ಗೆ ಅಥವಾ ಶಾಲೆಗೆ ಸಂಬಂಧಿಸಿದ ವಿಷಯವಾಗಿರುತ್ತದೆ. ನಿಮ್ಮ ಮಗುವು ತನ್ನ ಹೆಚ್ಚು ಸಮಯವನ್ನು ಶಾಲೆಯಲ್ಲಿ ಕಳೆದಿರುತ್ತದೆ, ಮತ್ತು ಅಲ್ಲಿನ ಆಟ, ಪಾಠಗಳಿಂದ ಸ್ವಲ್ಪ ಆಯಾಸಗೊಂಡಿರುತ್ತದೆ, ಇದರಿಂದ ವಿರಾಮ ಪಡೆಯಲು ಮಕ್ಕಳಿಗೆ ರಜಾದಿನಗಳ ಅವಶ್ಯಕವಾಗಿರುತ್ತದೆ.

ಹೊಸ ಜಾಗದಲ್ಲಿ, ಸ್ವಚ್ಛ ಗಾಳಿಯ ವಾತಾವರಣದಲ್ಲಿ, ಆ ಪರಿಸರಕ್ಕೆ ತಕ್ಕಂತೆ ಹೊಂದಾಣಿಕೊಳ್ಳುವುದನ್ನು ಕಲಿಯಲು ರಜಾದಿನಗಳು ಸಹಾಯ ಮಾಡುತ್ತವೆ. ವಿನೋದದಿಂದ ಕೂಡಿರುವ ಪ್ರಕ್ರಿಯೆಯಲ್ಲಿ ನಿಮ್ಮ ಮಗುವಿನ ಒಟ್ಟಾರೆ ಅಭಿವೃದ್ಧಿಗೆ ಸಹಾಯ ಮಾಡಲು ರಜಾದಿನಗಳು ಅತ್ಯುತ್ತಮ ವಿಧಾನವಾಗಿದೆ.ಇಲ್ಲಿರುವ ಕೆಲವು ವಿಷಯಗಳನ್ನು ಮಗುವು ತನ್ನ ರಜಾದಿನಗಳಲ್ಲಿ ಕಲಿಯುತ್ತದೆ.

೧.ಸಂಸ್ಕೃತಿ

ರಜೆಯಲ್ಲಿ ವಿಹಾರವು ನಿಮ್ಮ ಮಗುವಿಗೆ ಅವರ ಸುತ್ತಲಿನ ಪ್ರದೇಶದ ವಿವಿಧ ಬಗೆಯ ಸಂಸ್ಕೃತಿಗಳನ್ನು ಮತ್ತು ಅದರ ಒಳ ಅರ್ಥವನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಅವನ ಮೊದಲ ಅನುಭವ ಒಂದು ಪುಸ್ತಕದಲ್ಲಿ ಬರುವಂತಹ ಅಷ್ಟು ಅನುಭವಗಳನ್ನು ಪ್ರಾಯೋಗಿಕವಾಗಿ ಅನುಭವಿಸುತ್ತಾನೆ.

೨.ಜನರು

ರಜಾದಿನಗಳಲ್ಲಿ, ನೀವು ಪ್ರಯಾಣಕ್ಕೆ ಅಥವಾ ಹೊರಗಡೆ ಎಲ್ಲಾದರೂ ಹೋದಾಗ ನಿಮ್ಮ ಮಗುವು ಹಲವು ಗುಣಗಳುಳ್ಳ  ಮನುಷ್ಯರನ್ನು ನೋಡುತ್ತಾರೆ, ಹೊರ ಪ್ರಪಂಚದ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾರೆ, ಮತ್ತು ಅವರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಜೊತೆಗೆ, ಸಂಭಂದಿಗಳ ಜೊತೆ ಬಂಧ ಹೆಚ್ಚುತ್ತದೆ. ಹಲವು ಗುಣಗಳುಳ್ಳ ಜನರ ಜೊತೆ ಬೆರೆಯುದರಿಂದ/ನೋಡುವುದರಿಂದ ಸಮಾಜದಲ್ಲಿ ಹೇಗಿರಬೇಕು, ಮತ್ತು ಸಮಾಜಮುಖಿ ಕೆಲಸಗಳನ್ನು ಕಲಿಯಲು ಸಹಾಯವಾಗುತ್ತದೆ.

೩.ಕುಟುಂಬ ಬಂಧ

ಕುಟುಂಬದವರನ್ನು/ ಸಂಬಂಧಿಗಳನ್ನು ಮತ್ತಷ್ಟು ಹತ್ತಿರವಾಗಿಸುವದಕ್ಕೆ ರಜಾದಿನಗಳು ಹೆಸರುವಾಸಿ. ನಿಮ್ಮ ಮಗುವನ್ನು ಅರ್ಥ ಮಾಡಿಕೊಳ್ಳಲು ಇದು ಒಳ್ಳೆಯ ಸಮಯ. ಇದು ನಿಮ್ಮ ಮತ್ತೆ ಮಗುವಿನ ಜೊತೆಗೆ ಸಂಬಂಧಗಳನ್ನು ಹೆಚ್ಚಿಸುತ್ತದೆ.

೪.ಸೃಜನಶೀಲತೆ

ಹೊಸ ಸ್ಥಳಗಳಿಗೆ ತೆರೆದುಕೊಳ್ಳುವುದರೊಂದಿಗೆ ನಿಮ್ಮ ಮಗುವಿನ ಒಟ್ಟಾರೆ ಸೃಜನಶೀಲತೆಯು  ಹೆಚ್ಚಾಗುತ್ತದೆ. ಹೊಸ ಸ್ಥಳಗಳಿಗೆ ಹೊಂದಿಕೊಂಡು ಅವರು ತಮ್ಮ ಸ್ವಂತ ಯೋಜನೆ ಮತ್ತು ತಮ್ಮಲ್ಲಿನ ಅತ್ಯುತ್ತಮವನ್ನು ಬೆಳೆಸಿಕೊಳ್ಳುವಲ್ಲಿ ಸಫಲರಾಗುತ್ತಾರೆ.

೫.ಒತ್ತಡ ಕಡಿಮೆಯಾಗುತ್ತದೆ

ಸಾಮಾನ್ಯವಾಗಿ ಶಾಲಾ ದಿನಗಳು ನಿಮ್ಮ ಮಗುವಿನಲ್ಲಿ ಬೇಸರವನ್ನುಂಟು ಮಾಡಿರಬಹುದು. ರಜಾದಿನಗಳಲ್ಲಿ ನಿಮ್ಮೊಂದಿಗೆ ವಿಹರಿಸುವುದರಿಂದ ಅವರ ಮನಸ್ಸು ತಿಳಿಯಾಗಿ ಅವರ ಎಲ್ಲಾ ಯೋಚನೆಗಳನ್ನು ಬದಿಗಿರಿಸಿ ನಿಮ್ಮೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯುದರಿಂದ ಅವರ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು.

Leave a Reply

%d bloggers like this: