ನಿಮ್ಮ-ಪತಿಯು-ನಿಮ್ಮ-ತಂದೆ-ತಾಯಿಗೆ-ಹತ್ತಿರವಾಗುವಂತೆ-ಮಾಡಲು-೬-ದಾರಿಗಳು

ಆತನು ತಾನು ಮದುವೆಯಾದ ವ್ಯಕ್ತಿಯನ್ನು ಪ್ರೀತಿಸುವನು, ಆದರೆ ಆ ವ್ಯಕ್ತಿಯ ತಂದೆ ತಾಯಿಯನ್ನು? ಆ ವಿಷಯ ಇರಲಿ ಬಿಡಿ. ಪ್ರಶ್ನೆ ಏನು ಅಂದರೆ ಅಲ್ಲಿ ಇರಿಸುಮುರಿಸು ಇದೆಯೋ ಅಥವಾ ಒಂದು ದೊಡ್ಡ ಖುಷಿಯಾದ ಸಂಸಾರ ಇದೆಯೋ ಎಂಬುದು. ನಿಮಗೆ ಎರಡನೆಯದ್ದು ಬೇಕು ಎಂತಾದರೆ, ನಿಮ್ಮ ಪೋಷಕರೊಂದಿಗೆ ನಿಮ್ಮ ಪತಿಯ ಸಂಬಂಧ ಗಟ್ಟಿ ಮಾಡಲು ಇಲ್ಲಿವೆ ೬ ದಾರಿಗಳು :

೧. ಅವರ ಮಗುವನ್ನು ದೂಷಿಸಬೇಡಿ

ಪತಿಯು ಮಾಡಬಾರದಂತ ಕೆಲಸ ಒಂದಿದ್ದರೆ ಅದು ತನ್ನ ಪತ್ನಿಯ ಪೋಷಕರ ಮುಂದೆ ತನ್ನ ಪತ್ನಿಯು ಎಷ್ಟೊಂದು ತೊಂದರೆ ಮಾಡುವಳು ಹಾಗು ಕಿರಿಕಿರಿ ಉಂಟು ಮಾಡುವಳು ಎಂದು ಹೇಳುವುದು. ಪೋಷಕರ ಎದುರಿಗೆ ಅವರ ಮಗುವಿನ ತೇಜೋವಧೆ ಮಾಡುವುದು ಎಂದಿಗೂ ಸರಿಯಲ್ಲ, ಅದು ಇಲ್ಲಿ ಕೂಡ ಅನ್ವಯಿಸುತ್ತದೆ. ಪತಿ ಹಾಗು ಪತ್ನಿ ಇವುಗಳನ್ನು ತಮ್ಮ ತಮ್ಮಲ್ಲೇ ಬಗೆಹರಿಸಿಕೊಳ್ಳಬೇಕು. ಅಲ್ಲದೇ, ನಿಮ್ಮ ಪೋಷಕರೊಂದಿಗೆ ನಿಮ್ಮ ಪತಿಯು ಮಾತಾಡುವಾಗ ನಿಮ್ಮ ಮದುವೆಯ ವಿಷಯ ಪ್ರಸ್ತಾಪವೇ ಮಾಡದಿರಲಿ.

೨. ಗೌರವಯುತವಾಗಿ ನಡೆದುಕೊಳ್ಳುವುದು

ಅತ್ತೆ ಮಾವರು ತನ್ನ “ಇನ್ನೊಂದು” ತಂದೆ ತಾಯಿ ಎಂದು ಪತಿಯು ನೆನಪಲ್ಲಿಟ್ಟುಕೊಂಡು, ತನ್ನ ಸ್ವಂತ ತಾಯಿ ತಂದೆಯರಿಗೆ ನೀಡುವ ಗೌರವವನ್ನು ಅತ್ತೆ ಮಾವರಿಗೂ ನೀಡಿದರೆ, ಅದು ಅವರ ಒಳ್ಳೆ ಗುಣವನ್ನ ಎತ್ತಿ ತೋರಿಸುತ್ತದೆ. ಇದು ಖಂಡಿತವಾಗಿಯೂ ಗುರುತಿಸಲಾಗುತ್ತದೆ ಹಾಗು ತಮ್ಮ ಮಗಳನ್ನು ಇಂತಹ ವ್ಯಕ್ತಿಗೆ ನೀಡಿದ್ದಕ್ಕೆ ಹೆಮ್ಮೆ ಪಡುವರು.

೩. ಅವರೊಂದಿಗೆ ಒಳ್ಳೆ ಸಮಯ ಕಳೆಯುವುದು

ಇದು ಸುಲಭದ ಕೆಲಸವಲ್ಲ. ಅದರಲ್ಲೂ ಪತಿಯು ತನ್ನ ಕಾಯಕದಲ್ಲಿ ಹೆಚ್ಚು ಸಮಯ ನಿರತರಾಗಿದ್ದರೆ ಇನ್ನೂ ಕಷ್ಟ. ಆದರೆ ಇದು ಬಾಂಧವ್ಯ ಬೆಸೆಯಲು ಸಹಾಯ ಮಾಡುತ್ತದೆ ಎಂದರೆ, ಖಂಡಿತವಾಗಿ ಇದಕ್ಕೆ ಆದ್ಯತೆ ನೀಡಬೇಕು. ನೀವು ನಿಮ್ಮ ಪತಿಗೆ ನಿಮ್ಮ ತಂದೆ ತಾಯಿಯರ ಇಷ್ಟಗಳು, ಆಸಕ್ತಿಗಳ ಬಗ್ಗೆ ತಿಳಿಸಿ. ಪತಿಯು ಇವುಗಳನ್ನು ತಿಳಿದು ತನ್ನ ಅತ್ತೆ ಮಾವರೊಡನೆ ಬೆರೆತು ಅವರು ಇಷ್ಟ ಪಡುವಂತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಅದು ಅವರೊಂದಿಗೆ ಯಾವುದೋ ಕ್ರೀಡೆ ಆಡುವುದಾಗಿರಲಿ, ಧ್ಯಾನ ಮಾಡುವುದಾಗಲಿ, ಪಾರ್ಕ್ ಅಲ್ಲಿ ವಾಯುವಿಹಾರ ಮಾಡುವುದಾಗಲಿ ಅಥವಾ ಇನ್ನಯಾವುದೇ ಇರಲಿ. ಜೊತೆಗೆ ಕಾಲ ಕಳೆದರೆ ಬಾಂಧವ್ಯ ಹೆಚ್ಚಾಗುವುದು ಎಂಬುದನ್ನು ನಿಮ್ಮ ಪತಿಗೆ ನೆನಪಿಸುತ್ತಿರಿ.

೪. ಮುಕ್ತವಾಗಿ, ಜಾಗ್ರತೆಯಿಂದ ಮಾತಾಡುವುದು

ಪತಿಯು ತನ್ನ ಅತ್ತೆ ಮಾವರೊಡನೆ ಮಾತಾಡುವಾಗ ಯಾವಾಗಲು ಬಿಚ್ಚುಮನಸ್ಸಿನಿಂದ ಸಹಜವಾಗಿ ಮಾತಾಡಲೇ ಬೇಕು. ನಿಮ್ಮ ಪತಿಯು ಧಾರ್ಮಿಕವಾಗಿ, ರಾಜಕೀಯವಾಗಿ ಅಥವಾ ಇತ್ತೀಚಿಗೆ ನಡೆದ ಯಾವುದೋ ಘಟನೆ ಬಗೆಗಿನ ಅಭಿಪ್ರಾಯ ನಿಮ್ಮ ತಂದೆ ತಾಯಿಯರ ಅಭಿಪ್ರಾಯಕ್ಕೆ ಭಿನ್ನವಾಗಿದ್ದರೆ, ಅಂತಹ ವಿಷಯಗಳನ್ನು ನಿಮ್ಮ ತಂದೆ ತಾಯಿಯರೊಡನೆ ಪ್ರಸ್ತಾಪ ಮಾಡುವುದು ಒಳ್ಳೆಯದಲ್ಲ. ಅದರ ಬದಲು ಬೇರೇ ಸಹಜವಾದ ವಿಷಯಗಳಾದ ತನ್ನ ಸಂಸಾರ, ಮೊದಲನೆಯ ಉದ್ಯೋಗ ಅಥವಾ ಕೆಲಸದ ಬಗ್ಗೆ ಮಾತಾಡುವುದು ಒಳಿತು. ಹಾಗು, ಮಾತಾಡುತ್ತಲೇ ಇರುವ ಬದಲು ಅವರು ಹೇಳುವುದನ್ನ ಕೇವಲ ಕೇಳಿಸಿಕೊಂಡರೆ ಸಾಕು. ಇದು ನಿಮ್ಮ ತಂದೆ ತಾಯಿ ಮನಸ್ಸಿನಲ್ಲಿ ನಿಮ್ಮ ಪತಿಯು ಪರಾನುಭೂತಿ ಉಳ್ಳ ವ್ಯಕ್ತಿ ಎಂಬ ಭಾವನೆ ಮೂಡಿಸುತ್ತದೆ.

೫. ಉಡುಗೊರೆಗಳು

ಸಣ್ಣ ಸಣ್ಣ ಸೂಚನೆಗಳಾದ ತನ್ನ ಅತ್ತೆ ಮಾವರ ಜನ್ಮ ದಿನಾಂಕಗಳನ್ನು ನೆನಪಿಡುವುದು ಅಥವಾ ಇನ್ನೂ ಮುಖ್ಯವಾಗಿ ಅವರ ಸಂಬಂಧಿಕರಿಗೆ ಕೂಡ ನೆನಪಿರದಂತಹ ಮುಖ್ಯ ದಿನಾಂಕಗಳನ್ನು ನೆನಪಿಡುವುದು ನಿಜವಾಗಿಯು ತುಂಬಾನೇ ವ್ಯತ್ಯಾಸ ಮಾಡುತ್ತವೆ. ಇವುಗಳಿಂದ ನಿಮ್ಮ ಪತಿಯು ನಿಮ್ಮ ಪೋಷಕರ ಕಣ್ಣಲ್ಲಿ ಕೇವಲ ಚಿಂತನಶೀಲನಾಗಿ ಕಾಣುವುದಷ್ಟೇ ಅಲ್ಲದೆ ನಿಮ್ಮ ಪೋಷಕರ ಹೃದಯದಲ್ಲಿ ಬೆಚ್ಚನೆ ಬೇರೂರುತ್ತಾರೆ. ತನ್ನ ಮಾವನಿಗೆ ಸಣ್ಣ ಉಡುಗೊರೆಗಳಾದ ಕೈಗಡಿಯಾರ, ಪತ್ನಿಯ ತಮ್ಮನಿಗೆ ಒಂದು ಒಳ್ಳೆಯ ಹೆಲ್ಮೆಟ್ ಅಥವಾ ಕೇಕ್ ಕೊಟ್ಟು ಚಕಿತಗೊಳಿಸಿದರು ಸಾಕು, ಅವರ ಮನ ಗೆಲ್ಲಬಹುದು.

೬. ಇಷ್ಟಪಡುವಂತೆ ಇರುವುದು

ನಿಮ್ಮ ಪತಿಯು ನಿಮ್ಮ ತವರು ಮನೆಗೆ ಬಂದಾಗ, ಆತನು ಇನ್ನಷ್ಟು ಆಕರ್ಷಕವಾಗಿ ನಡೆದುಕೊಳ್ಳಬಹುದು. ಎಲ್ಲರಿಗು ತಮ್ಮ ಕೆಲಸದ ಒತ್ತಡಗಳು ಇರುತ್ತವೆ ಹಾಗು ಅವುಗಳಿಂದ ಹೊರಗಡೆ ಬರುವುದು ಕಷ್ಟವಾಗಬಹುದು. ಆದರೆ ನಿಮ್ಮ ತಂದೆ ತಾಯಿಯೊಡನೆ ತನ್ನ ಕಛೇರಿಯ ವಿಷಯಗಳನ್ನು ಮರೆತು ಕಾಲ ಕಳೆಯುವುದು ಆತನ ಮನಸ್ಸಿಗೂ ಸ್ವಲ್ಪ ಆರಾಮ ನೀಡಬಹುದು. ಸಣ್ಣ ವಿಷಯಗಳಾದಂತಹ ಮುಖದ ಮೇಲೆ ನಗು ಇಟ್ಟುಕೊಳ್ಳುವುದು, ಮಾವನ ಹಾಸ್ಯಕ್ಕೆ ನಗುವುದು ಹಾಗು ಅತ್ತೆಯ ಆರೋಗ್ಯದ ಬಗ್ಗೆ ವಿಚಾರಿಸುವುದು ಅತ್ತೆ ಮಾವರೊಂದಿಗಿನ ಸಂಬಂಧವನ್ನು ಗಟ್ಟಿ ಮಾಡುತ್ತದೆ.

ಕೊನೆಯಲ್ಲಿ ಒಂದು ಸಲಹೆ : ಅತ್ತೆ ಮಾವರೊಂದಿಗೆ ಗಟ್ಟಿಯಾದ ಸಂಬಂಧ ಬೆಸೆಯುವುದು ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಆದರೆ, ಸಮಯ ಹಾಗು ತಾಳ್ಮೆ ಎರೆಡಿದ್ದರೆ ಖಂಡಿತವಾಗಿ ಇದನ್ನು ಸಾಧಿಸಬಹುದು.    

Leave a Reply

%d bloggers like this: