ammandiru-maaduva-5-adbhuta-vishayagalu-1

ಅವರು ಮಾಡುವ ಎಲ್ಲಾ/ಪ್ರತಿ ವಿಷಯದಲ್ಲೂ ಅಮ್ಮಂದಿರೇ ಅತ್ಯುತ್ತಮರು. ನೀವು ಇದನ್ನು ಒಪ್ಪುವುದಿಲ್ಲವೇ? ಯಾರಿಗೂ ಇಲ್ಲದ ವಿಶೇಷ ಕೌಶಲ್ಯಗಳು ಅವರಿಗೆ ಮಾತ್ರ ಉಡುಗೊರೆಯಾಗಿ ಬಂದಿದೆ. ಅವರ ಆ ತ್ಯಾಗ ಮತ್ತು ಕಾಳಜಿಗೆ ನೀವು ಕೊನೆಯದಾಗಿ ಯಾವಾಗ ಧನ್ಯವಾದ ತಿಳಿಸಿದ್ದೀರಿ?, ಅವರು ಹೇಗೆ ಅದ್ಭುತ ಎಂಬುದನ್ನು ಮತ್ತೊಮ್ಮೆ ನಿಮಗೆ ನೆನಪಿಸುತ್ತಿದ್ದೇವೆ.

೧.ಸ್ವಚ್ಛತೆಯ ಮಾಂತ್ರಿಕರು

ನೆಲದ ಮೇಲಿರುವುದು ಏನು?ಚಹಾ!, ನಿಮ್ಮ ಹಾಸಿಗೆ ಮೇಲೆ ತಿನಿಸುಗಳು ಚೆಲ್ಲಿವಿಯೇ? ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ನಿಮ್ಮ ತಾಯಿ ಅದನ್ನು ಸರಿ ಮಾಡಿ ನಿಮ್ಮದಿನವನ್ನು ಖುಷಿಯಾಗಿಸಲು ಯಾವಾಗಲು ಇರುತ್ತಾರೆ. ನಿಮ್ಮ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸದೆ, ನಿಮ್ಮ ಅಮ್ಮ ಇರುವ ದಿನವನ್ನು ಊಹಿಸಿಕೊಳ್ಳಿ? ಅಡುಗೆ ಮನೆಯಲ್ಲಿ ತೊಳೆಯುವ ಪಾತ್ರೆಗಳು, ಬುಟ್ಟಿಯಲ್ಲಿ ಒಗೆಯುವ ಬಟ್ಟೆಗಳು, ಮತ್ತು ಮನೆ ನೋಡಲು ಕೆಟ್ಟದಾಗಿ ವಸ್ತುಗಳು ಎಲ್ಲಂದರಲ್ಲಿ ಬಿದ್ದಿರುತ್ತವೆ, ಇದು ನಿಮಗೆ ಇಷ್ಟವಾಗುತ್ತದೆಯೇ? ನಿಜವಾಗಿಯೂ ಇಲ್ಲ, ಆದ್ದರಿಂದಲೇ ಅಮ್ಮ ಮನೆಯನ್ನು ಅದ್ಭುತವಾಗಿ ಕಾಣುವಂತೆ ಮಾಡುವ ಆಶೀರ್ವಾದವನ್ನು ಪಡೆದುಕೊಂಡು ಬಂದಿರುತ್ತಾರೆ ಮತ್ತು ಅದಕ್ಕೆ ತಕ್ಕ ನ್ಯಾಯವನ್ನು ಒದಗಿಸುತ್ತಾರೆ.

೨.ತಾಳ್ಮೆಯ ಕೇಳುಗರು

ಅವನ ಬಟ್ಟೆ ಚೆನ್ನಾಗಿದೆ, ನನಗೆ ಅದು ಬೇಕು! ಪದೆಪದೇ ಅವಳನ್ನು ಒಂದೇ ವಿಷಯದ ಬಗ್ಗೆ ಕೇಳುತ್ತೀರಾ? ನೀವು ಅದನ್ನು ಮೂರುಸಲ ಅಲ್ಲ ನೂರುಸಲ ಕೇಳಿದರು, ಅವಳು ಅದೇ ರೀತಿ ಪ್ರತಿಕ್ರಿಯಿಸುತ್ತಾಳೆ(ಆದರೂ, ಅವಳ ತಾಳ್ಮೆಯನ್ನು ಪರೀಕ್ಷಿಸ ಬೇಡಿ). ಅವರು ಯಾವಾಗಲು ನಿಮ್ಮ ಮಾತುಗಳನ್ನೇ ಕೇಳುತ್ತಿರುತ್ತಾರೆ, ಅವರ ಅನಿಸಿಕೆಯನ್ನು ವ್ಯಕ್ತಪಡಿಸಲು ಬಿಡಿ. ನೀವು ಒಂದು ವೇಳೆ ಎಲ್ಲಾದರೂ ತಪ್ಪು ಮಾಡಲು ಅಥವಾ ಗೊಂದಲದ ದಾರಿ ಇದ್ದರೆ, ಅವರೇ ಮೊದಲು ನಿಮಗೆ ಸಲಹೆ ನೀಡುವುದು, ಮತ್ತು ನೀವು ಒಳ್ಳೆಯ ಕೆಲಸ ಮಾಡಿದಾಗ ಅವರೇ ಮೊದಲು ಪ್ರಶಂಸಿಸುವುದು. ನೀವು ದೊಡ್ಡವರಾಗಿ ಬೆಳೆದು ಮನೆಯಿಂದ ಹೊರಗಿದ್ದರೂ ತಾಯಿ ನಿಮಗೆ ಕರೆಮಾಡಿ ವಿಚಾರಿಸಿಕೊಳ್ಳುತ್ತಾರೆ.

೩.ಏನಾದರೂ ಕಳೆದುಕೊಂಡಿದ್ದೀರಾ? ಅಮ್ಮನನ್ನು ಕೇಳಿ!

ನೀವು ಹೊರಗಿನಿಂದ ಬಂದು ನಿಮ್ಮ ವಸ್ತುಗಳನ್ನು ಇಟ್ಟಿರುವ ಜಾಗವನ್ನು ಮರೆಯುವುದು ಸಹಜ, ಮತ್ತು ಮಾರನೇ ಅದು ಬೇಕಾದಾಗ ನೀವು ಕೇಳುವುದು, ಅಮ್ಮ ನಾನು ಈ ವಸ್ತುವನ್ನು ಇಲ್ಲಿ ಇಟ್ಟಿದ್ದೆ ನೀನು ನೋಡಿದೀಯಾ? ಅಥವಾ ತೆಗೆದುಕೊಂಡಿರುವೆಯಾ? ಎಂದು ಉದಾಹರಣೆಗೆ: ಅಮ್ಮ ನನ್ನ ಕಾಲುಚೀಲ ಎಲ್ಲಿ? ನಿನ್ನೆ ಇಲ್ಲಿಯೇ ಇಟ್ಟಿದ್ದೆ!, ಅದು ಕಾಣಿಸುತ್ತಿಲ್ಲ. ನಿಮ್ಮ ಎಲ್ಲಾ ವಿಷಯಗಳ ಮೇಲು ಕಾಳಜಿ ಇರಿಸುವವರು.

೪.ಲೇಟಾಗಿ ಮಲಗಿ, ಬೇಗ  ಏಳುವವರು!

ಮಗು ನನಗೆ ಇವತ್ತು ಊಟದ ಡಬ್ಬಿಗೆ ಮ್ಯಾಗಿ ಹಾಕು ನನಗೆ ಅದು ಇಷ್ಟ ಅದನ್ನು ಸೇವಿಸಬೇಕು ಹೇಳುವುದು ಸಹಜ, ಆದರೆ ಮಗುವಿನ ಸೋದರ/ಸೋದರಿ ರಾತ್ರಿ ಪುರ ನಿದ್ದೆ ಮಾಡಲು ಬಿಟ್ಟಿರುವುದಿಲ್ಲ, ಆದರೂ ಬೆಳಗ್ಗೆ ಎದ್ದು ನಿಮ್ಮ ಮತ್ತು ಮಗುವಿಗೆ ಬೆಳಗಿನ ತಿಂಡಿ ಮಧ್ಯಾಹ್ನದ ಊಟ ತಯಾರಿಸಿ ಡಬ್ಬಿಯಲ್ಲಿ ಹಾಕಿ ಕಳುಹಿಸಿ, ತನ್ನ ಇಡೀ ದಿನದ ಕೆಲಸಕ್ಕೆ ಮತ್ತೆ  ಸಜ್ಜಾಗುವಳು. ಹತ್ತು ಹಲವು ಕೆಲಸಗಳನ್ನು ಒಬ್ಬರೇ ಮಾಡುವುದು? ಕಂಪ್ಯೂಟರ್? ಅಲ್ಲ ಅಮ್ಮ ಮಾತ್ರ!. ಅವಳಿಗೆ ಒಂದು ಪ್ರಶಸ್ತಿಯನ್ನು ನೀಡಿ, ಮತ್ತು ಅವಳನ್ನು ಖುಷಿಯಾಗಿ ನೋಡಿಕೊಳ್ಳಿ.

೫.ನಿಮ್ಮ ಮುಖ ನೋಡಿ, ಮನಸ್ಸನ್ನು ಓದುವವರು

ನಿಮಗೆ ಹಸಿವಾಗಿದೆಯೇ, ಇಲ್ಲವೇ? ನೀವು ಆಲೋಚಿಸುತ್ತಿದ್ದಾ ವಿಷಯದ ಬಗ್ಗೆ, ನಿಖರವಾಗಿ ನಿಮ್ಮನ್ನು ಕೇಳಿದ ಪರಿಸ್ಥಿತಿ ನೆನಪಿದೆಯೇ? ನೀವು ಏಕೆ ಬೇಸರವಾಗಿರುವಿರಿ ಎಂಬುದಕ್ಕೆ ಕಾರಣ ಅವರಿಗೆ ತಿಳಿಯುತ್ತದೆ. ನಿಮಗೆ ಹಸಿವಾಗುತ್ತಿದೆಯೇ ಎಂಬುದನ್ನು ನಿಖರವಾಗಿ ಹೇಳಬಲ್ಲರು. ತನ್ನ ಮಗು ಏಕೆ ಅಳುತ್ತಿದೆ ಎಂಬುದಕ್ಕೆ ಸರಿಯಾದ ಕಾರಣ ತಿಳಿಯುವುದು ಅವಳಿಗೆ ಮಾತ್ರ. ನೀವು ಅಮ್ಮನ ಬಳಿ ಹೇಳುವ ಮೊದಲೇ, ಅವಳು ನೀನು ಏನು ಹೇಳಬೇಕೆಂದಿರುವೆ ಎಂಬುದನ್ನು ತಿಳಿಯುತ್ತಾಳೆ.ಅಮ್ಮನೇ ಅತ್ಯತ್ತಮಳು.

Leave a Reply

%d bloggers like this: