jodihakkigalu-madalebekaada-pranayada-sannegalu-3

ಪ್ರಣಯ ಜೀವ ಕಳೆದುಕೊಂಡಿದೆ ಎಂದು ಯಾರು ಹೇಳಿದ್ದು? ನಿಜ ಹೇಳಬೇಕೆಂದರೆ, ಮದುವೆಯ ಬಂಧ ಗಟ್ಟಿಯಾಗಿ ಉಳಿದುಕೊಂಡು ಸಾಗುವುದೇ ಪ್ರಣಯದಿಂದ. ನಾವೆಲ್ಲರೂ ಯೌವ್ವನದ ಬೇಗೆಯಲ್ಲಿ ಪ್ರೀತಿಯಲ್ಲಿ ಬೀಳುವ ಭಾವನೆ ಇಷ್ಟ ಪಟ್ಟೇ ಪಡುತ್ತೇವೆ ಅಲ್ಲವೇ?! ಎರಡು ಪ್ರಣಯದ ಹಕ್ಕಿಗಳು ಈಗ ತಾನೇ ಮದುವೆಯಾಗಿ ಮಧುಲೋಕಕ್ಕೆ ಹಾರಲು ಸಜ್ಜಾಗುತ್ತಿದ್ದಾರೆಯೇ? ಮದುವೆಯಾಗಿ ತುಂಬಾ ದಿನಗಳ ನಂತರವೂ ನಿಮ್ಮ ಸಂಗಾತಿಗೆ ಅಂಟಿಕೊಂಡೇ ಇರಲು ನೀವು ಪ್ರಣಯದ ಬಗ್ಗೆ ಎಲ್ಲಾ ತಿಳಿದುಕೊಂಡ ಪ್ರಣಯ ರಾಜ ಆಗಬೇಕೆಂದೇನಿಲ್ಲ. ಬೇಕಾಗಿರುವುದು ಸ್ವಲ್ಪವೇ ಪ್ರಣಯ ಅಷ್ಟೇ. ನಿಜ! ಚಿಕ್ಕ ಚಿಕ್ಕ ವಿಷಯಗಳು ತುಂಬಾನೇ ಸೂಚಿಸುತ್ತವೆ.

ಚಿಕ್ಕ ಚಿಕ್ಕ ವಿಷಯಗಳಿಂದಲೇ ನಿಮ್ಮ ಜೀವನದಲ್ಲಿ ಪ್ರಣಯ ಜೀವಂತವಾಗಿರಿಸುವುದು ಹೇಗೆ ಹಾಗು ಆ ೧೦ ವಿಷಯಗಳು ಯಾವುದು ಎಂಬುದು ಕೆಳಗೆ ಓದಿ :

೧. ಚಿಕ್ಕ ಪುಟ್ಟ ಸಹಾಯಗಳು

ಉದಾಹರಣೆಗೆ ನಿಮ್ಮ ಪ್ರೀತಿಪಾತ್ರರು ಮಾರನೆ ದಿನ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೊರಡಬೇಕಿರುತ್ತದೆ ಅಥವಾ ಕೆಲಸದ ಮೇಲೆ ಬೇರೇ ಊರಿಗೆ ಹೋಗಲು ತಡರಾತ್ರಿ ಬಸ್ ಇರುತ್ತದೆ. ಇಂತಹ ಸಮಯದಲ್ಲಿ ನೀವು ಬೆಳಗ್ಗೆ ಸ್ವಲ್ಪ ಬೇಗ ಎದ್ದು ಅಡುಗೆ ಮಾಡಿ ತಿಂಡಿ ಬಡಿಸಿ ಅಥವಾ ಡಬ್ಬಿಗೆ ತುಂಬಿ ಕಳಿಸಿ. ಇದು ನಿಮಗೆ ಪ್ರಾಣ ಹೋಗುವಂತ ಕೆಲಸವೇನಲ್ಲ ಅಲ್ಲವ? ಪತಿಯರು ತಮ್ಮ ಪತ್ನಿಯರು ಪಾರ್ಲರ್ ಗೆ ಹೋಗಿ ಮುಖಕ್ಕೆ ಮಸಾಜ್ ಮಾಡಿಸಲು ಸಮಯ ಆಗಲಿಲ್ಲ ಎಂದು ದೂರಿದರೆ, ಆಕೆಯನ್ನು ಕೂರಿಸಿ ಅದನ್ನು ನೀವೇ ಮಾಡಿ. ಇದು ಚಿಕ್ಕ ವಿಷಯವಾದರೂ, ಅವಳಿಗೆ ಜಗತ್ತೇ ಸಿಕ್ಕಷ್ಟು ಖುಷಿ ಆಗುತ್ತದೆ. ಏಕೆಂದರೆ ಅದನ್ನು ಮಾಡಿದವರು ಆಕೆಯ ಪತಿ ಎಂದು.

೨. ಪ್ರೀತಿಯ ಟಿಪ್ಪಣಿಗಳು

ಉದಾಹರಣೆಗೆ ನಿಮ್ಮ ಸಂಗಾತಿಯು ನೀವು ಕೆಲಸಕ್ಕೆ ಸರಿಯಾದ ಸಮಯಕ್ಕೆ ತೆರಳಲು ಸುಲಭವಾಗಲೆಂದು ತುಂಬಾನೇ ಬೇಗ ಎದ್ದು ಅಡುಗೆ ಮಾಡಿದ್ದರೆ, ಹೊರಡುವ ಮುನ್ನ ನೀವು ಅವರಿಗೆಂದು ಗೋಡೆ ಮೇಲೆ ಎಲ್ಲಿಯಾದರೂ “ಇವತ್ತು ತಿಂಡಿ ಸಕ್ಕತ್ತಾಗಿತ್ತು” ಎಂದು ಒಂದು ಪ್ರೀತಿಯ ಟಿಪ್ಪಣಿ ಬರೆದು ಅಂಟಿಸಿ ಹೋಗಬಹುದು. ಅಥವಾ ಬೇಕಾದರೆ ಇನ್ನೂ ಲವ್ವಿ-ಡವ್ವಿ ಸಂದೇಶಗಳನ್ನು ಬರೆದು ಅಂಟಿಸಬಹುದು. ಅಕಸ್ಮಾತ್ ಅವರಿಗೆ ಹುಷಾರು ತಪ್ಪಿದ್ದು ಮಂಚದಿಂದ ಎದ್ದು ಬರಲು ಆಗದಿದ್ದರೆ ಬೆಡ್ ಪಕ್ಕದಲ್ಲೇ ಒಂದು ಟಿಪ್ಪಣಿ ಬರೆದು ಇಡಿ. ನೀವು ಏನು ಬರೆಯುತ್ತೀರಿ, ಎಷ್ಟು ಬರೆಯುತ್ತೀರಿ ಎಂಬುದು ಮುಖ್ಯವಲ್ಲ. ನಿಮ್ಮ ಟಿಪ್ಪಣಿ ಹಿಂದಿರುವ ನಿಮ್ಮ ಭಾವನೆ ಮುಖ್ಯ ಅಷ್ಟೇ.

೩. ಅಡ್ಡಹೆಸರುಗಳು

ನೀವು ಈಗಾಗಲೇ ನಿಮ್ಮ ನಿಮ್ಮಲ್ಲಿ ಅಡ್ಡ ಹೆಸರಗಳೊಂದಿಗೆ ಮಾತಾಡಿಸುತ್ತಿಲ್ಲ ಎಂದರೆ, ಈಗಲೇ ಮುದ್ದಾದ ಅಡ್ಡಹೆಸರುಗಳನ್ನು ಆಯ್ಕೆ ಮಾಡಿ. ಎರೆಡು ಅಡ್ಡಹೆಸರುಗಳನ್ನ ಆಯ್ದುಕೊಳ್ಳಿ – ಒಂದು ಹೊರಗಡೆ ಕರೆಯಲಿಕ್ಕೆ ಮತ್ತೊಂದು ಮನೆಯಲ್ಲಿ ಅಥವಾ ನೀವಿಬ್ಬರೇ ಇದ್ದಾಗ ಕರೆಯಲಿಕ್ಕೆ.

೪. ಮೆಸೇಜ್ ಕಳಿಸಿ

ಬೆವರು ಸುರಿಸುತ್ತಾ ಕಷ್ಟಪಟ್ಟು ಕಚೇರಿಯಲ್ಲಿ ಕೆಲಸ ಮಾಡುವಾಗ ನಿಮ್ಮ ಸಂಗಾತಿಯ ಸವಿಧ್ವನಿಯಲ್ಲಿ ನಿಮ್ಮ ಕ್ಷೇಮ ಸಮಾಚಾರದ ಮಾತು ಕೇಳುವುದಕ್ಕಿಂತ ಹೆಚ್ಚು ಬೆಚ್ಚನೆ ವಿಷಯ ಯಾವುದಿಲ್ಲ. ನೀವು ನಿಮ್ಮ ಸಂಗಾತಿಗಾಗಿ ವಾಟ್ಸ್ಯಾಪ್ ಅಲ್ಲಿ ಧ್ವನಿ ಸಂದೇಶಗಳನ್ನು ಕಳಿಸಬಹುದು.

೫. ಫೋಟೋಗಳು

ನೀವಿಬ್ಬರೂ ದಿನ ಮಾಡುವ ದೈನಂದಿನ ಕೆಲಸಗಳಾದ ಹಲ್ಲುಜ್ಜುವುದು, ಊಟ ಮಾಡುವುದು ಹಾಗು ಇತರೆ ಕೆಲಸಗಳಲ್ಲಿ ತೊಡಗಿದ್ದಾಗಲೇ ಫೋಟೋಗಳನ್ನು ಕ್ಲಿಕ್ಕಿಸಿ. ಇದು ಕೇಳಲಿಕ್ಕೆ ನಗು ತರಿಸವಂತದ್ದು ಆಗಿರಬಹುದು, ಆದರೆ ಬಹಳ ಪರಿಣಾಮಕಾರಿ. ಅದು ನಿಮ್ಮಿಬ್ಬಿರ ಸೀಕ್ರೆಟ್, ಇದು ನಿಮ್ಮ ಬಳಿ ಮಾತ್ರ ಇರುವ ಫೋಟೋಗಳು. ಪ್ರತಿಯೊಂದು ಫೋಟೋವು ನಿಮ್ಮಿಬ್ಬರನ್ನು ಇನ್ನಷ್ಟು ಹತ್ತಿರ ಮಾಡುತ್ತದೆ. ಅಲ್ಲದೆ, ನೀವು ಒಟ್ಟಿಗೆ ಕೂಡಿ ಮಾಡಿದಾಗ ದೈನಂದಿನದ ನೀರಸ ಕಾರ್ಯಗಳು ಕೂಡ ಮಜವೆನಿಸುತ್ತವೆ.

೬. ಪ್ರಣಯ ಕೂಡಿದ ಊಟ

ಇದನ್ನು ನೀವು ಮನೆಯಲ್ಲೇ ಮಾಡಬಹುದು. ನಿಮ್ಮಿಬ್ಬರ ಕಛೇರಿಗಳು ಅಥವಾ ಕೆಲಸ ಮಾಡುವ ಸ್ಥಳಗಳು ಹತ್ತಿರದಲ್ಲಿ ಇದ್ದರೆ, ನೀವು ಇದನ್ನು ಆಗಾಗ್ಗೆ ಮಾಡುತ್ತಲೇ ಇರಬಹುದು. ಇದು ತುಂಬಾನೇ ಸುಲಭ. ನಿಮಗೆ ಅಡುಗೆ ಮಾಡುವುದು ತೊಂದರೆ ಆದರೆ, ಹೊರಗಿನಿಂದ ತರಿಸಿ ಇಬ್ಬರೇ ಕುಳಿತು ಮಾತನಾಡುತ್ತಾ ಊಟ ಮಾಡಬಹುದು.

೭. ವಿಶಾಲ ಮನಸ್ಸಿನ ವ್ಯಕ್ತಿ ಆಗಿರಿ

ದಂಪತಿಗಳು ಪ್ರತಿದಿನ ಸಣ್ಣ ಸಣ್ಣ ವಿಷಯಗಳಿಗೆ ಜಗಳವಾಡುತ್ತಿರುತ್ತಾರೆ. ಜಗಳದಿಂದ ಒಂದು ನಿಮಿಷ ಹಿಂದೆ ಸರಿದು, ಒಂದು ಧೀರ್ಘ ಉಸಿರು ತೆಗೆದುಕೊಂಡು ಸಮಾಧಾನ ತೆಗೆದುಕೊಂಡರೆ ನೀವು ಚಿಕ್ಕವರಾಗುವುದಿಲ್ಲ. ಬದಲಿಗೆ ನೀವು ತಪ್ಪು ಯಾರದೆಂದು ಹುಡುಕದೆ ಪರಿಹಾರದ ಬಗ್ಗೆ ಯೋಚನೆ ಮಾಡಿದರೆ ದೊಡ್ಡ ವ್ಯಕ್ತಿಯಾಗುತ್ತೀರ ಹಾಗು ಸಂಬಂಧವು ಗಟ್ಟಿಯಾಗುತ್ತದೆ.

೮. ಪರೋಕ್ಷ ಹೊಗಳಿಕೆಗಳು

ಹೌದು, ನೀವು ಮಾಡುವ ಸಣ್ಣ ಸಣ್ಣ ಹೊಗಳಿಕೆಗಳು ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಅಗಾಧ ಸಂತೋಷವನ್ನು ಉಂಟು ಮಾದುತ್ತವೆ. ನಿಮ್ಮ ಸ್ನೇಹಿತರೆಲ್ಲರೂ ಇದ್ದಾಗ ಅವರ ಮುಂದೆ ಹೊಗಳಿದರೆ ಅಂತೂ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದು ಆಕೆಯು ಹೇಗೆ ನಡೆದುಕೊಳ್ಳುವಳು ಎಂಬುದಾಗಲಿ ಅಥವಾ ಅವಳು ಹೇಗೆ ಅಡುಗೆ ಮಾಡುವಳು ಎಂಬುದಾಗಲಿ, ನಿಮ್ಮ ಸ್ನೇಹಿತರ ಮುಂದೆ ಅದರ ಬಗ್ಗೆ ಹೊಗಳಿ ಹಾಗು ಅದನ್ನು ಆಕೆ ಕೇಳಿಸಿಕೊಳ್ಳುತ್ತಿದ್ದಾಳೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

೯. ಕೈ ಕೈ ಹಿಡಿಯಿರಿ

ನಿಮಗೆ ಅವಕಾಶ ಸಿಕ್ಕಿದಾಗಲೆಲ್ಲ ನಿಮ್ಮ ಸಂಗಾತಿಯ ಕೈಯನ್ನು ಹಿಡಿಯಿರಿ. ಅದು ನೀವು ರಸ್ತೆ ದಾಟುವಾಗ ಇರಬಹುದು ಅಥವಾ ಹೋಟೆಲ್ ಅಲ್ಲಿ ಇರಬಹುದು ಅಥವಾ ತಂಗಾಳಿಯಲ್ಲಿ ವಾಯುವಿಹಾರ ಮಾಡುವಾಗ ಇರಲಿ, ಕೈ ಕೈ ಹಿಡಿಯುವುದನ್ನು ಮರೆಯಬೇಡಿ. ಕೈ ಕೈ ಹಿಡಿಯುವುದು ನಿಮ್ಮ ಸಂಗಾತಿಯಲ್ಲಿ ತಟ್ಟನೆ ಪ್ರೀತಿ ಮೂಡಿಸುತ್ತದೆ ಹಾಗು ಬೆಚ್ಚನೆಯ ಭಾವ ನೀಡುತ್ತದೆ.

Leave a Reply

%d bloggers like this: