ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲೂ ತಾಯಿಗೆ ವಿಶೇಷ ಸ್ಥಾನವೊಂದು ಇರುತ್ತದೆ, ಆದರೆ ನಮ್ಮಂತ ಕೆಲವರು ಅವಳಿಗೆ ಹೃದಯದಲ್ಲಿ ಒಂದು ಮಹಲ್ ಅನ್ನೇ ಕಟ್ಟಿಸಿದ್ದೇವೆ. ಆಕೆಯು ನಿಮ್ಮ ನೆಚ್ಚಿನ ವ್ಯಕ್ತಿ. ಒಂದು ಕೋಣೆಯ ತುಂಬಾ ನಿಮಗೆ ಗೊತ್ತಿರುವ ಸಹಸ್ರ ಜನರಿದ್ದರೂ, ಏನಾದರು ವಿಷಯ ಇದ್ದರೆ ಅದನ್ನು ಹೇಳುವುದಕ್ಕೆ ಮೊದಲು ಹುಡುಕುವುದು ನಿಮ್ಮ ತಾಯಿಯನ್ನು. ಏಕೆಂದರೆ ನಿಮಗೆ ಗೊತ್ತಿರುವ ಅತ್ಯಂತ ಬಿಂದಾಸ್ ವ್ಯಕ್ತಿಯೇ ಅವಳು ಹಾಗು ಅವಳ ಮೇಲೆ ನಿಮಗೆ ಹುಚ್ಚು ಪ್ರೀತಿ! ನೀವು ಕೂಡ ನನ್ನಂತೆ ಅಮ್ಮನ ಮಗಳಾಗಿದ್ದರೆ ಈ ಕೆಳಗಿನ ೫ ಅಂಶಗಳನ್ನು ನಿರೂಪಿಸಿಕೊಳ್ಳಬಹುದು :
೧. ನಿಮ್ಮ ಬಗ್ಗೆ ಆಕೆಗೆ “ಸರ್ವವೂ” ಗೊತ್ತು
ನಿಮ್ಮ ಅಮ್ಮನ ಎದುರು ನೀವು ಬಾಯಿ ಮುಚ್ಚುವುದೇ ಇಲ್ಲ. ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮ್ಮ ಅಮ್ಮನಿಗೆ ಗೊತ್ತಾಗಬೇಕು ಅಷ್ಟೇ! ನಿಮ್ಮ ಸ್ನೇಹಿತೆಯ ಬಾಯ್ ಫ್ರೆಂಡ್ ಬಗ್ಗೆ ಇರಲಿ, ನಿಮ್ಮ ದೊಡ್ಡಪ್ಪನ ಮಗಳ ಪ್ರವಾಸದ ಬಗ್ಗೆ ಆಗಿರಬಹುದು ಅಥವಾ ಪಕ್ಕದ ಮನೆಯವಳು ಯಾವ ರೀತಿಯ ಬಟ್ಟೆ ಧರಿಸುವಳು ಎಂಬುದಾಗಬಹುದು. ಒಟ್ಟಿನಲ್ಲಿ ನೀವು ಕೇಳಿದ್ದು, ನೋಡಿದ್ದು ಎಲ್ಲವನ್ನೂ ನಿಮ್ಮ ಅಮ್ಮನಿಗೆ ವರದಿ ಒಪ್ಪಿಸುತ್ತೀರ.
೨. ನೀವು ಪ್ರತಿದಿನ ತಪ್ಪದೇ ಅಮ್ಮನಿಗೆ ಕರೆ ಮಾಡೇ ಮಾಡುತ್ತೀರ
ನಿವ್ವು ಆಕೆಯೊಂದಿಗೆ ಮಾತಾಡುವವರೆಗೆ ದಿನ ಮುಗಿದಂತೆ ಆಗುವುದಿಲ್ಲ, ತಿಂದದ್ದು ಅರಗುವುದಿಲ್ಲ. ನೀವು ಆಕೆಯ ಧ್ವನಿಯನ್ನು ಆಲಿಸಲೇ ಬೇಕು ಹಾಗು ಆಕೆಯು ಬೆಳಗ್ಗೆಯಿಂದ ಏನು ಮಾಡಿದಳೆಂದು, ರಾತ್ರಿ ಅಡುಗೆ ಏನು ಮಾಡಿದಳೆಂದು ನೀವು ತಿಳಿದುಕೊಳ್ಳಲೇಬೇಕು. ನೀವು ಆಕೆಗೆ ಕರೆ ಮಾಡಲು ಯಾವತ್ತು ಬ್ಯುಸಿ ಆಗಿ ಇರುವುದಿಲ್ಲ, ನೀವು ಪ್ರವಾಸದಲ್ಲೇ ಇರಲಿ ಅಥವಾ ಇನ್ನ್ಯಾವುದೇ ಕೆಲಸದಲ್ಲಿ ಇರಲಿ, ಸಮಯ ಮಾಡಿಕೊಂಡು ಕರೆ ಮಾಡೇ ಮಾಡುತ್ತೀರ.
೩. ಯಾವುದು ಕೂಡ ತುಂಬಾ ವಯಕ್ತಿಕವಲ್ಲ
ಅದು ಯಾವುದೇ ವಿಷಯವಾಗಲಿ, ನೀವು ಅದರ ಬಗ್ಗೆ ನಿಮ್ಮ ಅಮ್ಮನೊಡನೆ ಮಾತಾಡಬಹುದೆಂದು ಗೊತ್ತು. ನಿಮ್ಮನ್ನು ಈ ಭೂಮಿಗೆ ತಂದವರೇ ನಿಮ್ಮ ತಾಯಿ, ಹಾಗಾಗಿ ಅವಳೊಂದಿಗೆ ಮಾತಾಡುವಾಗ ಯಾವುದೇ ಇತಿಮಿತಿಗಳು ಬರುವುದೇ ಇಲ್ಲ.
೪. ನಿಮ್ಮ ಪತಿಯು ಕೂಡ ನಿಮ್ಮ ಅಮ್ಮನನ್ನು ನೀವು ಇಷ್ಟಪಡುವಷ್ಟೇ ಇಷ್ಟಪಡಬೇಕೆಂದು ಬಯಸುವಿರಿ
ನಿಮ್ಮ ಅಮ್ಮನೇ ಎಲ್ಲರಿಗಿಂತ ಅದ್ಭುತವಾದ ಅಮ್ಮ ಹಾಗು ಇದನ್ನ ಪತಿಯು ಒಪ್ಪದಿದ್ದರೆ….ಪರಿಸ್ತಿಥಿ ನೆಟ್ಟಗೆ ಇರುವುದಿಲ್ಲ. ನಿಮ್ಮ ಜೀವನದ ಅತ್ಯಂತ ಮುಖ್ಯ ವ್ಯಕ್ತಿಯೇ ನಿಮ್ಮ ಅಮ್ಮ ಹಾಗು ನಿಮ್ಮ ಅಮ್ಮನೊಂದಿಗೆ ಯಾರು ಬಂಧ ಬೆಸೆಯಲು ಸಾಧ್ಯವಿಲ್ಲವೋ, ಅಂತಹವರೊಡನೆ ನೀವು ಕೂಡ ಬಂಧ ಬೆಸೆಯಲು ಸಾಧ್ಯವಿಲ್ಲ.
೫. ಅಮ್ಮ ಹೇಳುವವರೆಗೆ ಯಾವುದು ಅಂತಿಮವಲ್ಲ
ಅಮ್ಮನ ಬಳಿ ಸಮ್ಮತಿ ಪಡೆಯುವುದಕ್ಕೆ ಹೋಗುವುದು ಕೇಳುವುದಕ್ಕೆ ತುಂಬಾ ಬಾಲಿಶ ಎನ್ನಿಸಬಹುದು. ಆದರೆ ನಿಮ್ಮ ಬಗ್ಗೆ ನಿಮಗೆ ಜನ್ಮ ನೀಡಿದವಳಿಗಿಂತ ಮತ್ತ್ಯಾರಿಗೆ ಚೆನ್ನಾಗಿ ಗೊತ್ತು? ಆಕೆಯು ನಿಮ್ಮ ಬಗ್ಗೆ ಇಂಚಿಂಚು ತಿಳಿದಿದ್ದಾಳೆ ಹಾಗು ನೀವು ಆಕೆಯ ಮಾತಿಗೆ ಬೆಲೆ ಕೊಡುತ್ತೀರ ! ನಿಮ್ಮ ಅಮ್ಮ ಬೇಡ ಎಂದ ವ್ಯಕ್ತಿಯೊಡನೆ ನೀವು ಆಚೆ ಹೋಗುವುದಿಲ್ಲ. ನೀವು ನಿಮ್ಮ ಅಮ್ಮನ ಬಲೆ ಸೀಕ್ರೆಟ್ ಕೈರುಚಿ ಬಗ್ಗೆ ಕೇಳಿಕೊಂಡು ತಿಳಿದುಕೊಳ್ಳದೆ ವಿಶೇಷ ತಿಂಡಿಗಳನ್ನು ಮಾಡುವುದಿಲ್ಲ. ಅಲ್ಲದೆ, ನಿಮ್ಮ ಅಮ್ಮ ಒಪ್ಪದ ಕೆಲಸಗಳನ್ನಂತು ನೀವು ಮಾಡುವುದೇ ಇಲ್ಲ. ಇದಕ್ಕೆ ಕಾರಣ ನಿಮ್ಮ ಅಮ್ಮನಿಗೆ ನಿಮಗೆ ಯಾವುದು ಒಳ್ಳೆಯದು ಎಂಬುದು ಗೊತ್ತಿದೆ ಹಾಗು ಆಕೆಯು ಸದಾಕಾಲ ನಿಮಗೆ ಅತ್ಯುತ್ತಮವಾದುದನ್ನೇ ಬಯಸುತ್ತಾಳೆ ಎಂದು ನಿಮಗೆ ತಿಳಿದಿದೆ.