ಗರ್ಭಾವಸ್ತೆಯಲ್ಲಿನ-೪-ಸಾಮಾನ್ಯ-ತೊಂದರೆಗಳಿಗೆ-ಮನೆ-ಮದ್ದುಗಳು

ಗರ್ಭಧಾರಣೆಯು ಖುಷಿಯ ಹಾಗು ಉಲ್ಲಾಸದ ಸಮಯ. ನಿಮಗೆ ಏನು ಬೇಕೋ ಅದನ್ನು ಕೇಳಿ ಮಾಡಿಸಿಕೊಂಡು ತಿನ್ನಬಹುದು, ೨೪ ಗಂಟೆಗಳು ಯಾವುದೋ ಒಂದು ಲೂಸ್ ಪ್ಯಾಂಟ್ ಹಾಕಿಕೊಂಡಿರಬಹುದು, ಆಮೇಲೆ ನಿದ್ದೆ ಮತ್ತು ವಿಶ್ರಾಂತಿ. ಈ ಸಮಯ ನಿಜವಾಗಿಯೂ ಆನಂದಮಯ ಸಮಯ, ಆದರೆ ಕೆಲವೊಮ್ಮೆ ಕೆಲವೊಂದು ವಿಷಯಗಳು ಈ ಆನಂದಕ್ಕೆ ಕುತ್ತು ತರುತ್ತವೆ. ನಾವು ನಿಮ್ಮ ಈ ಸಮಯಕ್ಕೆ ಬೆಲೆ ಕೊಡುವುದರಿಂದ ನಿಮಗೆ ಈ ಸಮಯದಲ್ಲಿ ಎದುರಾಗುವ ೪ ಸಾಮಾನ್ಯ ತೊಂದರೆಗಳು ಹಾಗು ಅವುಗಳನ್ನು ಹೇಗೆ ತಜ್ಞರ ರೀತಿ ನೀವೇ ಬಗೆಹರಿಸಬಹುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

೧. ಬೆಳಗಿನ ಬೇನೆ (ಮಾರ್ನಿಂಗ್ ಸಿಕ್ಕ್ನೆಸ್ಸ್)

ಇದು ಗರ್ಭಿಣಿ ಹೆಂಗಸರಲ್ಲಿ ತೀರಾ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ. ನೀವು ವಾಂತಿ ಹಾಗು ವಾಕರಿಕೆ ಇಂದ ಬಳಲುತ್ತಿದ್ದರೆ, ಅದಕ್ಕೆ ಏನು ಮಾಡಬೇಕೆಂಬುದು ನಾವು ಹೇಳುತ್ತೇವೆ.

 1. ಭೋಜನದ ವೇಳೆ ಅಥವಾ ಭೋಜನದ ನಂತರವೂ ದ್ರವ್ಯಗಳಿಂದ ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಿ, ನೀರು ಕುಡಿಯಿರಿ, ಹುಳಿ ಹಣ್ಣುಗಳ ರಸ ಕುಡಿಯಿರಿ, ನೈಸರ್ಗಿಕ ಚಹಾ (ಶುಂಠಿ) ಸೇವಿಸಿ.
 2. ಅರಗಿಸಿಕೊಳ್ಳಲು ಸುಲಭವಾಗುವಂತ ಆಹಾರಗಳನ್ನ ಸೇವಿಸಿ ಹಾಗು ತುಂಬಾ ಉಪ್ಪು ಅಥವ ಮಸಾಲೆ ಇಂದ ಕೂಡಿದ ಆಹಾರವನ್ನು ದೂರವಿಡಿ.
 3. ಹುಳಿ ಹುಳಿಯಾಗಿ ಇರುವ ಹಣ್ಣುಗಳು ಅಥವಾ ಪದಾರ್ಥಗಳನ್ನು ಚೀಪಿ, ಇದು ವಾಕರಿಕೆಯನ್ನು ಕಮ್ಮಿ ಮಾಡುತ್ತದೆ.
೨. ಮಲಬದ್ಧತೆ

ಊದಿಕೊಂಡಿರುವ ನಾಡಿಗಳು (veins), ಪಕ್ಕೆಯ ಮೇಲೆ ಹೆಚ್ಚಿದ ಒತ್ತಡ, ಪ್ರೊಜೆಸ್ಟರಾನ್ ಉತ್ಪತ್ತಿಯಲ್ಲಿ ಏರಿಕೆ ಆಗುವುದು ಇವೆಲ್ಲವೂ ತಾಯಿ ಆಗುತ್ತಿರುವವರಲ್ಲಿ ಮಲಬದ್ಧತೆ ಕಾಣಿಸಿಕೊಳ್ಳಲು ಕಾರಣ. ಇಲ್ಲಿ ಕೆಳಗೆ ನಾವು ಸೂಚಿಸಿರುವ ಪರಿಹಾರಗಳು ಮಲಬದ್ಧತೆಯನ್ನು ಸಂಪೂರ್ಣವಾಗಿ ವಾಸಿ ಮಾಡದೆ ಇದ್ದರು, ನಿಮ್ಮ ಮೇಲೆ ಆಗುವ ಒತ್ತಡವನ್ನು ಶಮನ ಮಾದುತ್ತವೆ.

 1. ನಾರಿನಿಂದ ಕೂಡಿದ ಪದಾರ್ಥಗಳನ್ನೇ ಹೆಚ್ಚಾಗಿ ಸೇವಿಸಿ, ಇದು ನಿಮ್ಮ ಕರುಳಿನ ಚಲನವಲನಕ್ಕೆ ಸಹಾಯಕಾರಿ ಆಗುತ್ತದೆ.
 2. ಮಲಬದ್ಧತೆ ಕಮ್ಮಿ ಮಾಡಲು ಹೆಚ್ಚು ಹೆಚ್ಚು ನೀರು ಕುಡಿಯುವುದು ಯಾವಾಗಲು ಒಳ್ಳೆಯ ಉಪಾಯ.
 3. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ನಿಮಗೆ ನಿರಾಳ ಹಾಗು ಆರಾಮ ಎನಿಸುತ್ತದೆ. ಇದು ನಿಮ್ಮ ಚಲನೆಗಳನ್ನು ಸಲೀಸಾಗುವಂತೆ ಮಾಡುತ್ತದೆ.
೩. ತಲೆನೋವುಗಳು

ಬೇರೇ ಸಮಸ್ಯೆಗಳ ರೀತಿಯಲ್ಲೇ ತಲೆನೋವು ಕೂಡ ಹಾರ್ಮೋನ್ ಗಳ ಗತಿಯಲ್ಲಿನ ಏರುಪೇರುಗಳಿಂದ ಸಂಭವಿಸುವಂತದ್ದು. ಹಸಿವು ಮತ್ತು ಕೋಪ ಎರಡು ಒಟ್ಟೊಟ್ಟಿಗೆ ನೀವು ಅನುಭವಿಸುವ ಕ್ಷಣಗಳು ಗರ್ಭಾವಸ್ತೆಯಲ್ಲಿ ಸಹಜ. ತಲೆನೋವು ಶಮನ ಮಾಡಲಿಕ್ಕೆ ಇರುವ ಕೆಲವೊಂದು ದಾರಿಗಳೆಂದರೆ :

 1. ರೂಮಿನ ತಾಪಮಾನ ಇಳಿಸಿ, ಇದು ನೋವನ್ನು ಸ್ವಲ್ಪ ಮಟ್ಟಿಗೆ ಕಮ್ಮಿ ಮಾಡುತ್ತದೆ.
 2. ತಲೆಗೆ ಒಂದು ಮಸಾಜ್ ಮಾಡಿಸಿಕೊಂಡು, ವಿಶ್ರಾಂತಿ ಪಡೆದುಕೊಳ್ಳಿ.
 3. ಧ್ಯಾನದ ನೆರವಿನೊಂದಿಗೆ ನಿಮ್ಮ ಮನಸ್ಸನ್ನು ಸ್ವಲ್ಪ ನಿರಾಳ ಮಾಡಿಕೊಳ್ಳಿ. ಇದು ನಿಮಗೆ ಎಷ್ಟೋ ಸಮಾಧಾನ ನೀಡುತ್ತದೆ.
೪. ಎದೆ ಉರಿ

ಬಹಳಷ್ಟು ಮಹಿಳೆಯರು ಈ ಉರಿಯನ್ನು ಹಾಗು ಗಂಟಲಿನಲ್ಲಿ ಮತ್ತು ಎದೆಯಲ್ಲಿ ಬೆಂಕಿ ಇಟ್ಟಂತೆ ಭಾಸವಾಗುವಂತೆ ಆಗುವುದನ್ನು ಅನುಭವಿಸುತ್ತಾರೆ. ಇವುಗಳು ತುಂಬಾ ನೋವು ಉಂಟು ಮಾಡುವುದಲ್ಲದೆ ಗರ್ಭಿಣಿಯರಿಗೆ ತುಂಬಾ ಅಹಿತಕರ ಅನಿಸುವುದು. ಇದಕ್ಕೆ ಕೆಲವು ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ :

 1. ಚೂಯಿಂಗ್ ಗಮ್ ಅಗಿಯುವುದರಿಂದ ಹೆಚ್ಚು ಎಂಜಲು ಉತ್ಪತ್ತಿಯಾಗುತ್ತದೆ ಹಾಗು ಅದರಿಂದ ಎದೆ ಉರಿ ಕಮ್ಮಿ ಆಗುತ್ತದೆ.
 2. ಚೂಯಿಂಗ್ ಗಮ್ ಇಲ್ಲವಾ? ತೊಂದರೆ ಇಲ್ಲ. ಏನಾದರು ತಣ್ಣನೆಯದ್ದು ಕುಡಿಯಿರಿ.
 3. ನೀವು ನಿದ್ದೆ ಮಾಡುವ ರೀತಿಯು ಇಲ್ಲಿ ಮುಖ್ಯವಾಗುತ್ತದೆ. ನೀವು ಊಟ ಮಾಡಿದೊಡನೆ ಮಲಗಿದರೆ ನಿಮಗೆ ಎದೆ ಉರಿ ಉಂಟಾಗುವ ಸಾಧ್ಯತೆಗಳು ಹೆಚ್ಚು.ಹಾಗಾಗಿ, ನೀವು ಮಲಗುವ ಮುನ್ನ ಸ್ವಲ್ಪ ಬಿಡುವು ನೀಡಿ.

ನಾವು ನೀಡಿದ ಈ ಪರಿಹಾರಗಳು ನಿಮ್ಮ ೯ ತಿಂಗಳನ್ನು ಆದಷ್ಟು ಸುಖಮಯ ಮಾಡಲಿ ಎಂಬ ಆಶಯ ನಮ್ಮದು. ಇದು ನಿಮ್ಮ ಜೀವನದ ಅತ್ಯಂತ ಪ್ರಮುಖ, ನಿರ್ಣಾಯಕ ಸಮಯ. ಏಕೆಂದರೆ, ಇವಾಗ ನಿಮ್ಮ ಉದರದಲ್ಲಿ ಇನ್ನೊಂದು ಪವಾಡವೇ ಆಗುತ್ತಿದೆ. ಆರೋಗ್ಯವಾಗಿರಿ, ಖುಷಿಯಾಗಿರಿ!

Leave a Reply

%d bloggers like this: